ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಎಕ್ಸ್ ಪೋದ 5 ನೇ ದಿನದಂದು ಅಮಿತೋತ್ಸಾಹ
ಯುವ ಸಮೂಹ ಮತ್ತು ನಾವೀನ್ಯಕಾರರೊಂದಿಗೆ ತುಂಬಿದ ಮಂಟಪ
ಪ್ರಕಟಣಾ ದಿನಾಂಕ:
20 FEB 2026 8:36PM by PIB Bengaluru
ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಎಕ್ಸ್ ಪೋದ ಐದನೇ ದಿನದಂದು 10 ಪೆವಿಲಿಯನ್ ಗಳಾದ್ಯಂತ ನೂರಾರು ಜನರ ಆಗಮನದೊಂದಿಗೆ ನಿರಂತರ ಜನಸಾಗರ ಕಂಡುಬಂದಿತು. ಜನರು, ವಿಶೇಷವಾಗಿ ಯುವಜನರು ವಿವಿಧ ಮಳಿಗೆಗಳಲ್ಲಿ ಉತ್ಸಾಹದಿಂದ ಸಂವಹನ ನಡೆಸಿದ್ದು ಕಂಡುಬಂದಿತು. ಪ್ರದರ್ಶಕರು ಕ್ಲಿಕ್ಕಿಸಿರುವ ಕೆಲವು ಚಿತ್ರಗಳು ಇಲ್ಲಿವೆ.
ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ನಾವೀನ್ಯತಾ ನೀತಿಗಳನ್ನು ಜಾರಿಗೆ ತರುವಲ್ಲಿ ತನ್ನ ಪಾತ್ರವನ್ನು ವಿವರಿಸುವ ಸಂವಾದಾತ್ಮಕ ಪ್ರದರ್ಶನಗಳೊಂದಿಗೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸಾರ್ವಜನಿಕರ ಆಸಕ್ತಿಯನ್ನು ಸತತವಾಗಿ ಸೆಳೆಯಿತು.

ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಸದೃಢ ಡಿಜಿಟಲ್ ಭಂಡಾರದ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ರಕ್ಷಿಸುವ ತನ್ನ ಧ್ಯೇಯವನ್ನು ಪ್ರದರ್ಶಿಸುವ ಮೂಲಕ ಜ್ಞಾನ ಭಾರತಂ ಅಪಾರ ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.

ಸ್ಥಳೀಯ ಭಾಷೆಗಳು, ಉದ್ಯಮಗಳು ಮತ್ತು ಸಾರ್ವಜನಿಕ ವಲಯದ ಬಳಕೆಗಾಗಿ ರೂಪಿಸಲಾದ ಭಾರತ-ಕೇಂದ್ರಿತ ಮೂಲಭೂತ ಎಐ ಮಾದರಿಗಳ ನೇರ ಪ್ರಾತ್ಯಕ್ಷಿಕೆ ಮೂಲಕ ಸರ್ವಂ ಎಐ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತು.

ಭಾರತದ ವೈವಿಧ್ಯಮಯ ಭಾಷಾ ಮತ್ತು ಡಿಜಿಟಲ್ ಭೂದೃಶ್ಯಕ್ಕೆ ಅನುಗುಣವಾಗಿ ಬಹುಭಾಷಾ ಎಐ ಮಾದರಿಗಳನ್ನು ಪ್ರಸ್ತುತಪಡಿಸುವ ಮೂಲಕ *ಭಾರತ್‌ಜಿಪಿಟಿ* ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಸೃಜಿಸಿತು.

AVGC-XR (ಅನಿಮೇಷನ್, VFX, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ವಲಯದಲ್ಲಿ ಎಐ ಗಾಗಿ ಸಂವಾದಾತ್ಮಕ ನಾವೀನ್ಯತಾ ಕೇಂದ್ರವಾಗಿ *ವೇವ್ಸ್ ಕ್ರಿಯೇಟರ್ಸ್ ಕಾರ್ನರ್* ಕಾರ್ಯನಿರ್ವಹಿಸಿದ್ದು, 51 ಸ್ಟಾರ್ಟ್ ಅಪ್‌ಗಳು ಹಾಗೂ ಮಾಧ್ಯಮ, ಸೃಜನಶೀಲ ತಂತ್ರಜ್ಞಾನಗಳು ಮತ್ತು ಮಂತ್ರಮುಗ್ಧಗೊಳಿಸುವ ಮನರಂಜನೆಯಲ್ಲಿ ನೈಜ-ಸಮಯದ ಎಐ ಬಳಕೆ ಪ್ರದರ್ಶಿಸಿದೆ.

ಶೃಂಗಸಭೆಯಲ್ಲಿ ಇನ್ಯಾ ವಾಯ್ಸ್ ಓಎಸ್ ಅನ್ನು Gnani.ai ಪರಿಚಯಿಸಿದ್ದು, ಬಹುಭಾಷಾ ಭಾಷಣಕ್ಕಾಗಿ ವಿನ್ಯಾಸಗೊಳಿಸಲಾದ 5 ಶತಕೋಟಿ-ಪ್ಯಾರಾಮೀಟರ್, ವಾಯ್ಸ್ ಫಸ್ಟ್ ಎಐ ಮಾದರಿಯಾಗಿದ್ದು, ಸರ್ಕಾರ, ಉದ್ಯಮ ಮತ್ತು ಸಾರ್ವಜನಿಕ ವಲಯದ ಬಳಕೆಗಾಗಿ ಸುಗಮ ಮತ್ತು ನೈಸರ್ಗಿಕ ಧ್ವನಿ-ಧ್ವನಿ ಸಂವಹನ ಸಾಧ್ಯವಾಗಿಸಿದೆ.

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಎಕ್ಸ್‌ಪೋದ ಐದನೇ ದಿನದಂದು ಸಭಾಂಗಣವು ಹೊಸ ಹೊಸ ವಿಚಾರಗಳಿಂದ ಗುನುಗುನಿಸುತ್ತಾ ಯುವ ಶಕ್ತಿ ಮತ್ತು ಉತ್ಸಾಹದಿಂದ ತುಂಬಿತ್ತು. ಎಐ ಜಗತ್ತಿನ ಮೋಡಿಗೆ ತೆರೆ ಬೀಳುವ ಒಂದು ದಿನ ಮುನ್ನವೇ, ಉದ್ಯಮದ ನಾಯಕರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಎಕ್ಸ್‌ಪೋದ ಪ್ರತಿ ಒಳನೋಟ ಸೆರೆಹಿಡಿಯುವ ಓಟದಲ್ಲಿದ್ದಾರೆ.
*****
(ಪ್ರಕಟಣೆ ಐ.ಡಿ.: 2231111)
ವಿಸಿಟರ್ ಕೌಂಟರ್ : 2