ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026 ಸಮಗ್ರ ಮತ್ತು ವಿಶ್ವಾಸಾರ್ಹ AI ಅನ್ನು ಚಾಲನೆ ಮಾಡುವಲ್ಲಿ ಜಾಗತಿಕ ದಕ್ಷಿಣ ನಾಯಕತ್ವವನ್ನು ಪ್ರದರ್ಶಿಸುತ್ತದೆ
ಒಳಗೊಳ್ಳುವಿಕೆ, ಮೂಲಸೌಕರ್ಯ, ಸಾಂಸ್ಥಿಕ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಟೋಗೋ, ಇಂಡೋನೇಷ್ಯಾ ಮತ್ತು ಈಜಿಪ್ಟ್ ನ ಸಚಿವರು AI ಪ್ರಭಾವದ ಮೂಲಾಧಾರಗಳೆಂದು ದೃಢಪಡಿಸಿದರು
AI ಯಶಸ್ಸನ್ನು ಮಾದರಿಗಳ ಗಾತ್ರದಿಂದಲ್ಲ, ರೂಪಾಂತರಗೊಂಡ ಜೀವನದಿಂದ ಅಳೆಯಬೇಕೆಂದು ಸಮಿತಿ ಕರೆ ನೀಡಿತು
ಪ್ರಕಟಣಾ ದಿನಾಂಕ:
19 FEB 2026 7:45PM by PIB Bengaluru
ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಉನ್ನತ ಮಟ್ಟದ ಸಮಿತಿಯು ಟೋಗೋ, ಇಂಡೋನೇಷ್ಯಾ ಮತ್ತು ಈಜಿಪ್ಟ್ ನ ಜಾಗತಿಕ ನಾಯಕರನ್ನು ಒಳಗೊಂಡಿದ್ದು, ಅದು ಕೃತಕ ಬುದ್ಧಿಮತ್ತೆಯ (AI) ಆಯಾಮವು ಮೂಲಸೌಕರ್ಯ-ನಿರ್ಮಾಣದಿಂದ ಅಳೆಯಬಹುದಾದ ಸಾಮಾಜಿಕ ಪರಿಣಾಮಕ್ಕೆ ಹೇಗೆ ಪರಿವರ್ತನೆಗೊಳ್ಳಬಹುದು ಎಂಬುದರ ಕುರಿತು ಚರ್ಚಿಸಿತು. ಈ ಚರ್ಚೆಯನ್ನು ಹೊಂದಾಣಿಕೆಯಲ್ಲಿನ ಅಂತರಗಳು, ಸಾರ್ವಜನಿಕ ಹಿತಾಸಕ್ತಿಯ ಅನ್ವಯಿಕೆಗಳು, ನಿಯಂತ್ರಕ ಸಮತೋಲನ ಮತ್ತು ಮುಂದಿನ ಐದು ವರ್ಷಗಳಲ್ಲಿ AI ಯಶಸ್ಸನ್ನು ವ್ಯಾಖ್ಯಾನಿಸುವ ಆಧಾರಗಳ ಮೇಲೆ ಕೇಂದ್ರೀಕರಿಸಲಾಗಿತ್ತು.

ಇಂಡೋನೇಷ್ಯಾದ ಸಂವಹನ ಮತ್ತು ಡಿಜಿಟಲ್ ವ್ಯವಹಾರಗಳ ಉಪಮಂತ್ರಿಯವರಾದ ಶ್ರೀ ನೆಜರ್ ಪಟ್ರಿಯಾ, AI ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದ್ದು, ದೈನಂದಿನ ಜೀವನದಲ್ಲಿ ಅದರ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಜಾಗತಿಕ ದಕ್ಷಿಣದಾದ್ಯಂತ ಹೊಂದಾಣಿಕೆಯು ಅಸಮಾನವಾಗಿ ಉಳಿದಿದೆ ಎಂದು ಗಮನಿಸಿದರು. ಜಾಗತಿಕ AI ಪ್ರಭಾವವನ್ನು "ಹತ್ತಕ್ಕೆ ಆರು" ಎಂದು ರೇಟಿಂಗ್ ಮಾಡಿದ ಅವರು, AI ಲಭ್ಯತೆಯು ಕೇವಲ ಮೂಲಸೌಕರ್ಯವಲ್ಲ, ಅರ್ಥಪೂರ್ಣವಾಗಿರಬೇಕು ಎಂದು ಒತ್ತಿ ಹೇಳಿದರು. ಇಂಡೋನೇಷ್ಯಾದ ವಿಶಾಲ ದ್ವೀಪಸಮೂಹ ಭೌಗೋಳಿಕತೆಯಾದ್ಯಂತ ಇಂಟರ್ನೆಟ್ ಲಭ್ಯತೆಯನ್ನು ವಿಸ್ತರಿಸುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು, ಈಗ ಇಂಡೋನೇಷ್ಯಾ ದೇಶದ ಜನಸಂಖ್ಯೆಯ ಸುಮಾರು 80 ಪ್ರತಿಶತ ಈ ಸೌಲಭ್ಯವನ್ನು ಹೊಂದಿದ್ದಾರೆ. ಸಾರ್ವಜನಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಡಿಜಿಟಲ್ ಮೂಲಸೌಕರ್ಯದ ಮೇಲೆ AI ಅನ್ನು ಸಂಯೋಜಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಅವರು ಕ್ಷಯರೋಗವನ್ನು ಪತ್ತೆಹಚ್ಚುವಲ್ಲಿ ದೂರದ ಪ್ರದೇಶಗಳಲ್ಲಿನ ವೈದ್ಯರಿಗೆ ಸಹಾಯ ಮಾಡಲು AI-ಚಾಲಿತ ರೋಗನಿರ್ಣಯ ಸಾಧನಗಳ ಬಳಕೆಯನ್ನು ಉಲ್ಲೇಖಿಸಿದರು. ನಾವೀನ್ಯತೆಯನ್ನು ಹತ್ತಿಕ್ಕದೆ ನಾಗರಿಕರನ್ನು ರಕ್ಷಿಸುವ ಸಮತೋಲಿತ ನಿಯಂತ್ರಣ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆಗಳು, ಡಿಜಿಟಲ್ ಪ್ರತಿಭೆಯನ್ನು ಬಲಪಡಿಸುವುದು ಮತ್ತು AI ವ್ಯವಸ್ಥೆಗಳ ಪಾರದರ್ಶಕತೆ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹವೆಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಮುಂದಿನ ದಿನಗಳಲ್ಲಿ, AI ಲಭ್ಯತೆಯು ಸಮಸ್ಯೆ-ಪರಿಹರಿಸುವ ದೃಷ್ಟಿಕೋನ ಮತ್ತು ಸಮಾಜದ ವಿಶ್ವಾಸಾರ್ಹತೆಯನ್ನು ಪಡೆಯಬೇಕು ಎಂದು ಅವರು ಹೇಳಿದರು.
ಟೋಗೋ ದೇಶದ ಸಾರ್ವಜನಿಕ ವಲಯದ ದಕ್ಷತೆ ಮತ್ತು ಡಿಜಿಟಲ್ ರೂಪಾಂತರ ಸಚಿವೆಯಾದ ಶ್ರೀಮತಿ ಸಿನಾ ಲಾಸನ್, ಆಫ್ರಿಕಾಗೆ AI ತಂತ್ರಜ್ಞಾನ ಮಾತ್ರವಲ್ಲ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಆಡಳಿತದಂತಹ ಆದ್ಯತೆಯ ವಲಯಗಳಲ್ಲಿನ ನೈಜ-ಜೀವನದ ಸಮಸ್ಯೆಗಳನ್ನು ಪರಿಹರಿಸುವ ಸಾಧನ ಎಂದು ಹೇಳಿದರು. ಜಾಗತಿಕ AI ಪ್ರತಿಭೆಗಳಲ್ಲಿ ಆಫ್ರಿಕಾವು ಶೇಕಡಾ ಒಂದಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದು, ಮೂಲಸೌಕರ್ಯ ಮತ್ತು ಸಂಪರ್ಕ ಅಂತರವನ್ನು ಅದು ಎದುರಿಸುತ್ತಲೇ ಇದೆ ಎಂದು ಅವರು ಗಮನಿಸಿದರು. ಟೋಗೋ ದೇಶದ ಸಾಂಕ್ರಾಮಿಕ ರೋಗದ ಅನುಭವವನ್ನು ಹಂಚಿಕೊಂಡ ಅವರು, ಉಪಗ್ರಹ ಚಿತ್ರಣ ಮತ್ತು ಟೆಲಿಕಾಂ ಮೆಟಾಡೇಟಾಗೆ ಅನ್ವಯಿಸಲಾದ AI ಅಲ್ಗಾರಿದಮ್‌ಗಳನ್ನು ಹಣಕಾಸಿನ ಸಹಾಯಕ್ಕಾಗಿ ಫಲಾನುಭವಿಗಳಿಗೆ ಆದ್ಯತೆ ನೀಡಲು ಹೇಗೆ ಬಳಸಲಾಗಿದೆ ಎಂಬುದನ್ನು ಎತ್ತಿ ತೋರಿಸಿ, ಪರಿಣಾಮಕಾರಿ ಮತ್ತು ಉದ್ದೇಶಿತ ಬೆಂಬಲವನ್ನು ಖಚಿತಪಡಿಸಿಕೊಂಡರು. ಸರ್ಕಾರಿ ಇಲಾಖೆಗಳಲ್ಲಿ ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಬೆಂಬಲಿಸಲು ಟೋಗೋ ತನ್ನ ಸಚಿವಾಲಯದಲ್ಲಿ ಆಂತರಿಕ ಡೇಟಾ ವಿಜ್ಞಾನ ತಂಡವನ್ನು ಸ್ಥಾಪಿಸಿದೆ ಎಂದು ಅವರು ಮಾಹಿತಿ ನೀಡಿದರು. ಮೂಲಸೌಕರ್ಯ ಅಂತರಗಳು, ಸೀಮಿತ ಸಾಂಸ್ಥಿಕ ಸಾಮರ್ಥ್ಯ ಮತ್ತು ಸ್ಥಳೀಯ ಭಾಷೆಯ AI ಮಾದರಿಗಳ ಅಗತ್ಯವನ್ನು ಸ್ಕೇಲಿಂಗ್ ಪ್ರಭಾವಕ್ಕೆ ಪ್ರಮುಖ ಅಡೆತಡೆಗಳಾಗಿ ಅವರು ಗುರುತಿಸಿದರು. ಐದು ವರ್ಷಗಳ ನಂತರದ AI ನ ಯಶಸ್ಸನ್ನು ಕಲ್ಪಿಸಿಕೊಂಡ ಅವರು, AI ಪ್ರತಿಯೊಬ್ಬ ನಾಗರಿಕನಿಗೂ ವಿಶ್ವಾಸಾರ್ಹ ಮತ್ತು ಅಂತರ್ಗತ AI ವ್ಯವಸ್ಥೆಗಳಿಂದ ಬೆಂಬಲಿತವಾದ ಸ್ಥಳೀಯ ಭಾಷೆಗಳಲ್ಲಿ ಸಂವಾದಾತ್ಮಕ ಇಂಟರ್ಫೇಸ್‌ಗಳ ಮೂಲಕ ಸಂಭಾವ್ಯವಾಗಿ ಸಾರ್ವಜನಿಕ ಸೇವೆಗಳನ್ನು ಮನಬಂದಂತೆ ಪಡೆಯಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಈಜಿಪ್ಟ್ ನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ರಫತ್ ಹಿಂದೀ ಅವರು, AI ಯಶಸ್ಸನ್ನು ಉತ್ತಮ ಗುಣಮಟ್ಟದ AI-ಸಕ್ರಿಯಗೊಳಿತ ಸೇವೆಗಳಿಂದ, ವಿಶೇಷವಾಗಿ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪ್ರಯೋಜನ ಪಡೆಯುವ ನಾಗರಿಕರ ಶೇಕಡಾವಾರು ಪ್ರಮಾಣದಿಂದ ಅಳೆಯಬೇಕು ಎಂದು ಒತ್ತಿ ಹೇಳಿದರು. AI ಅನ್ನು ಸದುಪಯೋಗಪಡಿಸಿಕೊಳ್ಳುವ ಈಜಿಪ್ಟ್ ನ ವಿಧಾನವನ್ನು ಅವರು ಒತ್ತಿ ಹೇಳಿದರು, ಇದು ಕಡಿಮೆ ಸೇವೆ ಸಲ್ಲಿಸಿದ ಸಮುದಾಯಗಳಿಗೆ ವೈದ್ಯಕೀಯ ತಪಾಸಣೆ ಮತ್ತು ಕಲಿಕೆಯ ಬೆಂಬಲಕ್ಕೆ ಅವಕಾಶವನ್ನು ನೀಡುವುದಲ್ಲದೆ, AI ಗಣ್ಯ ಸಂಸ್ಥೆಗಳು ಮತ್ತು ಪ್ರಮುಖ ನಗರಗಳನ್ನು ಮೀರಿ ತಲುಪುತ್ತದೆ ಎಂದು ಅವರು ಗಮನಿದರು. AI ಅನ್ನು ಪ್ರಾಬಲ್ಯದ ಸಾಧನಕ್ಕಿಂತ ಹೆಚ್ಚಾಗಿ ಅಭಿವೃದ್ಧಿಯ ಸಾಧನವಾಗಿ ರೂಪಿಸಬೇಕು ಎಂದು ಅವರು ಒತ್ತಿ ಹೇಳಿದರು, ಹಂಚಿಕೆಯ ಕಂಪ್ಯೂಟ್ ಸಂಪನ್ಮೂಲಗಳಿಗೆ, ಸಾರ್ವಜನಿಕ ಸೇವೆಗಳಿಗೆ ಆದ್ಯತೆ ನೀಡಲು ಪ್ರಬಲ ರಾಷ್ಟ್ರೀಯ AI ಸಂಸ್ಥೆಗಳಿಗೆ ಕರೆ ನೀಡಿದರು. ಸಮಾನ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಮೂಲಸೌಕರ್ಯ, ಕಂಪ್ಯೂಟ್ ಸಾಮರ್ಥ್ಯ ಮತ್ತು ಸ್ಥಳೀಯ ಭಾಷಾ ಮಾದರಿಗಳಲ್ಲಿನ ಅಂತರವನ್ನು ಪರಿಹರಿಸುವ ಮಹತ್ವವನ್ನು ಅವರು ಮತ್ತಷ್ಟು ಎತ್ತಿ ತೋರಿಸಿದರು.
ದೇಬ್ಜಾನಿ ಘೋಷ್ ತಮ್ಮ ಹೇಳಿಕೆಯಲ್ಲಿ, "ಇಂದಿನ ಸರ್ಕಾರಗಳು ಕೃತಕ ಬುದ್ಧಿಮತ್ತೆಯ ಬಗ್ಗೆ ಒಂದೇ ರೀತಿಯಾಗಿ ಯೋಚಿಸುತ್ತಿವೆ ಎಂದು ನಾನು ಭಾವಿಸುತ್ತೇನೆ. ಇದರ ಯಶಸ್ಸು, ನಿಮ್ಮ ಮೂಲಸೌಕರ್ಯದ ಗಾತ್ರದ ಬಗ್ಗೆ ಅಲ್ಲದೆ ಎಷ್ಟು ಜೀವನಗಳು ಅದರಿಂದ ಬದಲಾಗಿವೆ ಎಂಬುದರ ಬಗ್ಗೆಯಾಗಿರಬಾಕು, ಮತ್ತು ಜೀವನದ ರೂಪಾಂತರವನ್ನು ಅಳೆಯಲು, ನಿಮ್ಮ ತಂತ್ರಜ್ಞಾನವು ವಿಶ್ವಾಸಾರ್ಹವಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವಿನ್ಯಾಸದ ಮೂಲಕ ಅದು ಎಲ್ಲರನ್ನೂ ಒಳಗೊಳ್ಳುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ನೀವು ಸಾಮರ್ಥ್ಯ ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡಿ ಎಲ್ಲರೂ ಒಂದೇ ದಿಕ್ಕಿನಲ್ಲಿ ಯೋಚಿಸುವುದನ್ನು ನೋಡಲು ಅದ್ಭುತವಾಗಿದೆ, ಏಕೆಂದರೆ ಇದು ನಿಜವಾಗಿಯೂ ಸಾಮೂಹಿಕ ಕ್ರಿಯೆ ಮತ್ತು ಸಹಯೋಗದ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಈ ಅದ್ಬುತ ವಿಷಯವು ಈ ಶೃಂಗಸಭೆಯಿಂದ ಹೊರಬಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
AI ಪ್ರಗತಿಯ ನಿಜವಾದ ಅಳತೆಯು ಮಾದರಿಗಳ ಗಾತ್ರ ಅಥವಾ ಕಂಪ್ಯೂಟಿಂಗ್ ಮೂಲಸೌಕರ್ಯದ ಪ್ರಮಾಣದಲ್ಲಿಲ್ಲದೆ, ಬದಲಾಗಿ ರೂಪಾಂತರಗೊಂಡ ಜೀವನಗಳ ಸಂಖ್ಯೆಯಲ್ಲಿದೆ ಎಂದು ಸಮಿತಿಯು ತೀರ್ಮಾನಿಸಿದೆ. AI ಮಾನವೀಯತೆಗೆ ಸಮಾನವಾಗಿ ಮತ್ತು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಅಂತರ್ಗತ ವಿನ್ಯಾಸ, ನಂಬಿಕೆ, ಸಾಂಸ್ಥಿಕ ಸಾಮರ್ಥ್ಯ ನಿರ್ಮಾಣ, ನಾವೀನ್ಯತಾ-ಸ್ನೇಹಿ ನಿಯಂತ್ರಣ ಮತ್ತು ಜಾಗತಿಕ ಸಹಯೋಗದ ಮಹತ್ವವನ್ನು ಈ ಚರ್ಚೆಯಲ್ಲಿ ಒತ್ತು ನೀಡಲಾಯಿತು.
*****
(ಪ್ರಕಟಣೆ ಐ.ಡಿ.: 2230571)
ವಿಸಿಟರ್ ಕೌಂಟರ್ : 6