ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಫೆಬ್ರವರಿ 20ರ ಸಾಮಾನ್ಯ ಸಲಹೆ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026
ಭಾರತ ಮಂಟಪ ಎಕ್ಸ್‌ಪೋ ಅರೆನಾ ಬೆಳಗ್ಗೆ 9:30 ರಿಂದ ರಾತ್ರಿ 8:00 ರವರೆಗೆ ತೆರೆದಿರುತ್ತದೆ ಹಾಗೆಯೇ ಫೆಬ್ರವರಿ 21ರಂದು ಮುಕ್ತವಾಗಿರುತ್ತದೆ
ಪ್ರಕಟಣಾ ದಿನಾಂಕ:
19 FEB 2026 5:49PM by PIB Bengaluru
ಈ ಕೆಳಗಿನ ಸಮಯಗಳು 2026 ರ ಫೆಬ್ರವರಿ 20ರಂದು ಶೃಂಗಸಭೆಯ ಸ್ಥಳಗಳಲ್ಲಿಅನ್ವಯವಾಗುತ್ತವೆ:
- ಭಾರತ ಮಂಟಪ ಕನ್ವೆನ್ಷನ್ ಸೆಂಟರ್: ಬೆಳಗ್ಗೆ 9:30 ರಿಂದ ಸಂಜೆ 6:00
- ಭಾರತ ಮಂಟಪ ಎಕ್ಸ್‌ಪೋ ಅರೆನಾ: ಬೆಳಗ್ಗೆ 9:30 ರಿಂದ ರಾತ್ರಿ 8:00 ರವರೆಗೆ ಫೆಬ್ರವರಿ 21ರಂದು ಬೆಳಗ್ಗೆ 9:30 ರಿಂದ ರಾತ್ರಿ 8:00 ರವರೆಗೆ ತೆರೆದಿರುತ್ತದೆ.
- ಸುಷ್ಮಾ ಸ್ವರಾಜ್ ಭವನ: ಬೆಳಗ್ಗೆ 9:30 ರಿಂದ ಸಂಜೆ 6:00
1. ಭಾರತ ಮಂಟಪ
ಸೀಮಿತ ಪಾರ್ಕಿಂಗ್ ಸ್ಥಳದ ಲಭ್ಯತೆಯಿಂದಾಗಿ ಸ್ಥಳವನ್ನು ತಲುಪಲು ಸಾರ್ವಜನಿಕ ಸಾರಿಗೆ, ಮೆಟ್ರೋ ಸೇವೆಗಳು ಅಥವಾ ಕ್ಯಾಬ್‌ಗಳನ್ನು ಬಳಸಲು ನೋಂದಾಯಿತ ಪ್ರತಿನಿಧಿಗಳಿಗೆ ಬಲವಾಗಿ ಸಲಹೆ ನೀಡಲಾಗುತ್ತದೆ.
- ಗೇಟ್ ಸಂಖ್ಯೆ 4: ಬೆಳಗ್ಗೆ 8:00 ರಿಂದ ಪ್ರವೇಶಕ್ಕೆ ಕಾರ್ಯನಿರ್ವಹಿಸುತ್ತದೆ; ಕಾರುಗಳು / ಕ್ಯಾಬ್‌ಗಳ ಮೂಲಕ ಡ್ರಾಪ್ ಆಫ್ ಆಗುತ್ತದೆ.
- ಗೇಟ್ ನಂ. 7: ಬೆಳಗ್ಗೆ 8:00 ರಿಂದ ಪ್ರವೇಶಕ್ಕೆ ಕಾರ್ಯನಿರ್ವಹಿಸುತ್ತದೆ; ಕಾರುಗಳು / ಕ್ಯಾಬ್‌ಗಳಿಂದ ಡ್ರಾಪ್ ಆಫ್ ಆಗುತ್ತದೆ.
- ಗೇಟ್ ನಂ. 10: ಮೆಟ್ರೋದಲ್ಲಿಆಗಮಿಸುವ ಪ್ರತಿನಿಧಿಗಳಿಗೆ ಬೆಳಿಗ್ಗೆ 8:00 ರಿಂದ ಪ್ರವೇಶಕ್ಕೆ ಕಾರ್ಯಾರಂಭವಿದೆ.
- ಗೇಟ್ ನಂ. 5ಎ: ಬೆಳಗ್ಗೆ 8:00 ರಿಂದ ಪ್ರವೇಶಕ್ಕೆ ಕಾರ್ಯಾರಂಭ; ಮಾಧ್ಯಮಗಳಿಗೆ.
- ಇತರ ಗೊತ್ತುಪಡಿಸಿದ ಗೇಟ್‌ಗಳ ಮೂಲಕ ಪ್ರವೇಶವು ಶಿಷ್ಟಾಚಾರದ ಪ್ರಕಾರ ಭದ್ರತಾ ಅನುಮತಿ ಮತ್ತು ಚಲನೆಯ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.
- ಸ್ವಯಂ ಚಾಲನಾ ವಾಹನಗಳು: ಈ ಕೆಳಗಿನ ಸ್ಥಳಗಳಲ್ಲಿ ಸೀಮಿತ ಪಾರ್ಕಿಂಗ್ ಸೌಲಭ್ಯ ಲಭ್ಯವಿರುತ್ತದೆ:
(i) ಪುರಾನಾ ಕಿಲಾ ಪಾರ್ಕಿಂಗ…-1.6 ಕಿ.ಮೀ
(ii) ಮೃಗಾಲಯದ ಪಾರ್ಕಿಂಗ್ ಸ್ಥಳ - 3 ಕಿ.ಮೀ
(iii) ಜೆಎಲ್‌ಎನ್ ಕ್ರೀಡಾಂಗಣ ಪಾರ್ಕಿಂಗ್ 4.8 ಕಿ.ಮೀ
ಈ ಸ್ಥಳಗಳಿಂದ ಭಾರತ ಮಂಟಪ ಗೇಟ್ ಸಂಖ್ಯೆ 04ಕ್ಕೆ ಶಟಲ್ ಸೇವೆಗಳು ಸಂಚರಿಸುತ್ತವೆ.
- ಕ್ಯಾಂಪಸ್ ಒಳಗೆ: ಸ್ಥಳದೊಳಗಿನ ಚಲನೆಗಾಗಿ ಗೊತ್ತುಪಡಿಸಿದ ಗಾಲ್‌ಧಿ ಬಂಡಿಗಳು ಲಭ್ಯವಿರುತ್ತವೆ.
- ಕ್ಯಾಂಪಸ್‌ನ ಹೊರಗೆ: ಶಟಲ್ ಸೇವೆಗಳು ಗೇಟ್ಸ್ 4, 7 ಮತ್ತು 10 ನಡುವೆ ಕಾರ್ಯನಿರ್ವಹಿಸುತ್ತವೆ.
2. ಸುಷ್ಮಾ ಸ್ವರಾಜ್ ಭವನ
ಸೀಮಿತ ಪಾರ್ಕಿಂಗ್ ಸ್ಥಳದ ಲಭ್ಯತೆಯಿಂದಾಗಿ ಸ್ಥಳವನ್ನು ತಲುಪಲು ಸಾರ್ವಜನಿಕ ಸಾರಿಗೆ, ಮೆಟ್ರೋ ಸೇವೆಗಳು ಅಥವಾ ಕ್ಯಾಬ್ ಗಳನ್ನು ಬಳಸಲು ನೋಂದಾಯಿತ ಪ್ರತಿನಿಧಿಗಳಿಗೆ ಬಲವಾಗಿ ಸಲಹೆ ನೀಡಲಾಗುತ್ತದೆ.
- ಪಾದಚಾರಿಗಳು, ಮೆಟ್ರೋ ಬಳಕೆದಾರರು, ಡ್ರಾಪ್ ಆಫ್ ಮತ್ತು ಸ್ವಯಂ ಚಾಲಿತ ವಾಹನಗಳಿಗೆ ಸುಷ್ಮಾ ಸ್ವರಾಜ್ ಭವನದ ಗೇಟ್ ನಂ. 2 ರಿಂದ ಪ್ರವೇಶ ಇರಬೇಕು.
ಆಹ್ವಾನಿತರು, ಭಾಷಣಕಾರರು, ಭಾಗವಹಿಸುವವರು ಮತ್ತು ಇತರ ಮಧ್ಯಸ್ಥಗಾರರು ಸೇರಿದಂತೆ ಎಲ್ಲಾ ನೋಂದಾಯಿತ ಪ್ರತಿನಿಧಿಗಳು ಈ ಪರಿಷ್ಕೃತ ಪ್ರವೇಶ ಶಿಷ್ಟಾಚಾರವನ್ನು ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ಅವರ ಆಗಮನವನ್ನು ಯೋಜಿಸಲು ವಿನಂತಿಸಲಾಗಿದೆ.
ಸಂಬಂಧಪಟ್ಟವರೆಲ್ಲರೂ ಭದ್ರತಾ ಮತ್ತು ಸಂಚಾರ ಸಿಬ್ಬಂದಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಮತ್ತು ಕಾರ್ಯಕ್ರಮವನ್ನು ಸುಗಮ ಮತ್ತು ಸುರಕ್ಷಿತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳದಲ್ಲಿನೀಡಲಾದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಹೊರಡಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2230499)
ವಿಸಿಟರ್ ಕೌಂಟರ್ : 2