ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಕೃತಕ ಬುದ್ಧಿಮತ್ತೆಯು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಶಿಕ್ಷಣವು ಪ್ರಮುಖವಾಗಿದೆ ಎಂದು ಭಾರತ ಎಐ ಪ್ರಭಾವ ಶೃಂಗಸಭೆ 2026 ರಲ್ಲಿ ಎಸ್ಟೋನಿಯಾ ಗಣರಾಜ್ಯದ ಅಧ್ಯಕ್ಷ ಅಲರ್ ಕರಿಸ್ ಹೇಳಿದರು


ಎಐ ನ ಉದಯೋನ್ಮುಖ  ತಾಂತ್ರಿಕ ಆವಿಷ್ಕಾರಗಳು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಸಹಾಯ ಮಾಡಬೇಕು

ತರಗತಿಗಳಲ್ಲಿ ಎಐ ನ ಜವಾಬ್ದಾರಿಯುತ ಮತ್ತು ಸಮಾನ ನಿಯೋಜನೆಯು ಪ್ರಮುಖ ಆದ್ಯತೆಯಾಗಿ ಹೊರಹೊಮ್ಮುತ್ತಿದೆ
 
ನೈತಿಕ ಕಲಿಕೆಯ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಎಐ ನಲ್ಲಿ ಶಿಕ್ಷಕರನ್ನು ಸಬಲೀಕರಣಗೊಳಿಸುವುದು ನಿರ್ಣಾಯಕವೆಂದು ಪರಿಗಣಿಸಲಾಗಿದೆ 

ಪ್ರಕಟಣಾ ದಿನಾಂಕ: 18 FEB 2026 5:33PM by PIB Bengaluru

ಭಾರತ ಎಐ ಪ್ರಭಾವ ಶೃಂಗಸಭೆ 2026ರ ಮೂರನೇ ದಿನವಾದ ಇಂದು, ಫೆಬ್ರವರಿ 18, 2026 ರಂದು, "ಎಐ ಮತ್ತು ಶಿಕ್ಷಣ: ನಾವೀನ್ಯತೆಯಿಂದ ಪ್ರಭಾವದೆಡೆಗೆ" ಎನ್ನುವ ಅಧಿವೇಶನವು ನವದೆಹಲಿಯಲ್ಲಿರುವ ಎಸ್ಟೋನಿಯಾ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ದೇಶಗಳು ಪ್ರಾಯೋಗಿಕ ಯೋಜನೆಗಳನ್ನು ಮೀರಿ ಸಾರ್ವಜನಿಕ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವತ್ತ ಹೇಗೆ ಸಾಗಬಹುದು ಎನ್ನುವುದನ್ನು ಚರ್ಚಿಸಲಾಯಿತು.  ಎಐ  ಈಗಾಗಲೇ ತರಗತಿಗಳಲ್ಲಿ ಇದೆ ಮತ್ತು ಮುಖ್ಯ ಸವಾಲು ಅದನ್ನು ಜವಾಬ್ದಾರಿಯುತ, ಸಮಾನ ಮತ್ತು ಕಲಿಕೆ-ಕೇಂದ್ರಿತ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸುವುದು ಎಂದು ಚರ್ಚೆಯು ಉಲ್ಲೇಖಿಸಿತು.

ಕೇವಲ ತಂತ್ರಜ್ಞಾನವೊಂದೇ ಶಿಕ್ಷಣವನ್ನು ಪರಿವರ್ತಿಸಲು ಸಾಧ್ಯವಿಲ್ಲ ಎಂದು ಭಾಷಣಕಾರರು ಹೇಳಿದರು; ಎಐ ಬಳಕೆಯ ಮೂಲಕ ಅಳೆಯಬಹುದಾದ ಕಲಿಕಾ ಫಲಿತಾಂಶಗಳನ್ನು ನೀಡಲು ಶಿಕ್ಷಕರು, ಬೋಧನಾ ಶಾಸ್ತ್ರ, ಆಡಳಿತ ಮತ್ತು ಸಾಕ್ಷ್ಯ ಆಧಾರಿತ ಅನುಷ್ಠಾನಗಳಲ್ಲಿನ ಹೂಡಿಕೆಗಳು ಅತ್ಯಗತ್ಯವಾಗಿವೆ. ಎಐ ತಂತ್ರಜ್ಞಾನವು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು, ಶಿಕ್ಷಕರ ಆಡಳಿತಾತ್ಮಕ ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕು, ಬಹುಭಾಷಾ ಮತ್ತು ಸಮಗ್ರ ಕಲಿಕೆಯನ್ನು ಉತ್ತೇಜಿಸಬೇಕು ಹಾಗೂ ಡಿಜಿಟಲ್ ಅಸಮಾನತೆಯನ್ನು ಹೆಚ್ಚಿಸದಂತೆ ನೋಡಿಕೊಳ್ಳಬೇಕು, ವಿಶೇಷವಾಗಿ ಕಡಿಮೆ ಸಂಪನ್ಮೂಲ ಮತ್ತು ಕಡಿಮೆ ಇಂಟರ್ನೆಟ್ ಸೌಲಭ್ಯವಿರುವ ಪ್ರದೇಶಗಳಲ್ಲಿ ಇದು ಪೂರಕವಾಗಿರಬೇಕು ಎಂಬ ಒಮ್ಮತದ ಅಭಿಪ್ರಾಯ ಈ ಅಧಿವೇಶನದಲ್ಲಿ ವ್ಯಕ್ತವಾಯಿತು

ಎಸ್ಟೋನಿಯಾ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಅಲರ್ ಕರಿಸ್, “ನಮ್ಮ ಶಾಲೆಗಳಿಗೆ ಈಗಾಗಲೇ ಎಐ ಬಂದಿದೆ, ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದನ್ನು ಪ್ರತಿದಿನ ಬಳಸುತ್ತಿದ್ದಾರೆ. ಆದ್ದರಿಂದ, ಪ್ರಶ್ನೆ ಎಐ ಅನ್ನು ಬಳಸಬೇಕೇ ಬೇಡವೇ ಎನ್ನವುದಲ್ಲ, ಆದರೆ ಅದನ್ನು ಎಲ್ಲರೂ ಪ್ರಜ್ಞಾಪೂರ್ವಕವಾಗಿ, ವಿಮರ್ಶಾತ್ಮಕವಾಗಿ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಬಳಸುತ್ತಿದ್ದಾರೆಯೇ ಎನ್ನುವುದಾಗಿದೆ. ಈ ಎಐ  ಯುಗದಲ್ಲಿ, ಯಂತ್ರಗಳು ಎಷ್ಟು ಸ್ಮಾರ್ಟ್ ಆಗಿವೆ ಎಂಬುದು ಮುಖ್ಯವಲ್ಲ, ಆದರೆ ಅವುಗಳನ್ನು ಬಳಸುವ ಜನರು ಎಷ್ಟು ಸ್ಮಾರ್ಟ್ ಆಗಿದ್ದಾರೆ ಎಂಬುದು ಮುಖ್ಯ. ಶಿಕ್ಷಣವು ಮುಖ್ಯ, ಮತ್ತು ಎಸ್ಟೋನಿಯಾದಲ್ಲಿ, ಮೀಸಲಾದ ನೀತಿಯೊಂದಿಗೆ, ನಾವು ಶಾಲೆಗಳು ಮತ್ತು ಶಿಕ್ಷಣದಲ್ಲಿ ಎಐ ಅನ್ನು ವೇಗವಾಗಿ ಮತ್ತು ವ್ಯಾಪಕವಾಗಿ ಕಾರ್ಯಗತಗೊಳಿಸುತ್ತಿದ್ದೇವೆ” ಎಂದು ಹೇಳಿದರು.

ದತ್ತಾಂಶ ಮತ್ತು ತಂತ್ರಜ್ಞಾನದ ಅರಿವು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಅಧ್ಯಕ್ಷರು ಹೇಳಿದರು. ಎಸ್ಟೋನಿಯಾದ ಬಹುಪಾಲು ಜನಸಂಖ್ಯೆಯು ಮೂಲಭೂತ ಎಐ ಪರಿಕರಗಳ ಜ್ಞಾನವನ್ನು ಮತ್ತು ಅರ್ಧದಷ್ಟು ಕನಿಷ್ಠ ಮಧ್ಯಂತರದಿಂದ ಅಂತಾರಾಷ್ಟ್ರೀಯ ಮಟ್ಟದ ಎಐ ಕೌಶಲ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನೀತಿಯ ಪ್ರಕಾರ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣದಲ್ಲಿ ನಮ್ಮ ಎಐ ಉತ್ತೇಜನವು ಆಡಳಿತದಲ್ಲಿ ನಮ್ಮ ಡಿಜಿಟಲ್ ಎಐ ಜನರಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುವಂತೆಯೇ ಕಲಿಕೆಯನ್ನು ಪೂರೈಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಐ ಶಿಕ್ಷಣವು ಪಾರದರ್ಶಕ ಮತ್ತು ನೈತಿಕವಾಗಿರಬೇಕು, ಇದು ವಿಶ್ವಾಸವನ್ನು ಸೃಷ್ಟಿಸುತ್ತದೆ, ಇದು ಕಲಿಯುವ ಇಚ್ಛೆಗೆ ಕಾರಣವಾಗುತ್ತದೆ.

ಕೀನ್ಯಾ ಗಣರಾಜ್ಯದ ಇ-ಸರ್ಕಾರ ಮತ್ತು ಡಿಜಿಟಲ್ ಆರ್ಥಿಕತೆಯ ಐಸಿಟಿಯ ಒಜಿಡಬ್ಲ್ಯೂ ಕಾರ್ಯದರ್ಶಿ ಮೇರಿ ಎನ್. ಕೆರೆಮಾ, "ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದಿದ್ದರೆ ನಾವು ಹಿಂದೆ ಉಳಿಯುತ್ತೇವೆ ಎಂದು ನಾವು ಅರಿತುಕೊಂಡಿದ್ದೇವೆ. ಆದರೆ ಶಿಕ್ಷಣದಲ್ಲಿ ಅತ್ಯಂತ ಸ್ಥಿರ ಮತ್ತು ಸಮರ್ಥ ಮೂಲಸೌಕರ್ಯವೆಂದರೆ ಶಿಕ್ಷಕರು. ನೀವು ಸೀಮಿತ ಸಂಪರ್ಕ ಮತ್ತು ಸೀಮಿತ ಸಾಧನಗಳನ್ನು ಹೊಂದಿರಬಹುದು, ಆದರೆ ನೀವು ಯಾವಾಗಲೂ ತರಗತಿಯಲ್ಲಿ ಶಿಕ್ಷಕರನ್ನು ಕಾಣಬಹುದು. ಅದಕ್ಕಾಗಿಯೇ ಶಿಕ್ಷಕರಿಗೆ ಎಐ ತರಬೇತಿ ಮೊದಲು ಆಗಬೇಕು. ನಾವು ಶಿಕ್ಷಕರನ್ನು ಸಬಲೀಕರಣಗೊಳಿಸಿದರೆ, ಸ್ಪಷ್ಟವಾದ ನೈತಿಕ ಎಐ  ಬಳಕೆ ಇರುತ್ತದೆ, ಏಕೆಂದರೆ ಎಲ್ಲವೂ ತರಗತಿಯಲ್ಲಿ ಪ್ರಾರಂಭವಾಗುತ್ತದೆ."

ಯುನಿಸೆಫ್ನ ಶಿಕ್ಷಣ ವಿಭಾಗದ ಜಾಗತಿಕ ನಿರ್ದೇಶಕಿ ಡಾ. ಪಿಯಾ ರೆಬೆಲ್ಲೊ ಬ್ರಿಟ್ಟೊ ತಮ್ಮ ಭಾಷಣದಲ್ಲಿ, “ನಾವು ನಾವೀನ್ಯತೆ, ವಿಶೇಷವಾಗಿ ಎಐ ನಂತಹ ತಾಂತ್ರಿಕ ಜ್ಞಾನವು ಸಾರ್ವಜನಿಕ ಶಿಕ್ಷಣವನ್ನು  ಬಲಪಡಿಸಬೇಕೆಂದು ಬಯಸುತ್ತೇವೆ. ಒಂದೆಡೆ ಎಐ ಗಳಿಂದಾಗಿ  ನಾವು ಉತ್ತಮವಾದ ಸಮಯಗಳನ್ನು ನೋಡುತ್ತೇವೆ, ಆದರೆ ಈ ಪ್ರಮುಖ ಸವಾಲುಗಳು ಉಳಿದಿವೆ: ಹೆಚ್ಚಿನ ಕಡಿಮೆ/ಮಧ್ಯಮ ಆದಾಯದ ದೇಶಗಳಲ್ಲಿ ಪ್ರಪಂಚದಾದ್ಯಂತದ ಬಹುತೇಕ 70% 10 ವರ್ಷ ವಯಸ್ಸಿನ ಮಕ್ಕಳು ಸರಳ ಪಠ್ಯವನ್ನು ಓದಲು ಅಥವಾ ಅರಿಯಲು ಸಾಧ್ಯವಿಲ್ಲ. ಹೀಗಾಗಿ ಎಐ ನಂತಹ ತಂತ್ರಜ್ಞಾನಗಳಲ್ಲಿ ಅಗಾಧ ಪ್ರಗತಿಯ ಹೊರಹೊಮ್ಮುವಿಕೆಯಿಂದಾಗಿ ಲಕ್ಷಾಂತರ ಮಕ್ಕಳು ಹಿಂದುಳಿಯುವ ಅಪಾಯದಲ್ಲಿದ್ದಾರೆ. ನಾವು ಎಐ ಮತ್ತು ಶಿಕ್ಷಣದ ಬಗ್ಗೆ ಮಾತನಾಡುವಾಗ, ನಾವು  ಲಾಭಗಳ ಬಗ್ಗೆ ಮಾತನಾಡಬಾರದು. ನಾವೀನ್ಯತೆ ರಚನಾತ್ಮಕ ಅಸಮಾನತೆಯನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂಬುದರ ಕುರಿತು ನಾವು ಮಾತನಾಡಬೇಕು. ಸಮಾನತೆಯನ್ನು ಸೃಷ್ಟಿಸುವುದು ಶಿಕ್ಷಕರನ್ನು ಬೆಂಬಲಿಸುವ, ಮಕ್ಕಳನ್ನು ರಕ್ಷಿಸುವ ಮತ್ತು ಸಾರ್ವಜನಿಕ ವ್ಯವಸ್ಥೆಗಳಿಗೆ ಜವಾಬ್ದಾರರಾಗಿರುವ ಪರಿಸರ ವ್ಯವಸ್ಥೆಯಾಗಿದೆ.”

ಫಿನ್ನಿಷ್ ಸೆಂಟರ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಪ್ರೊಫೆಸರ್ ಪೆಟ್ರಿ ಮೈಲಿಮಾಕಿ, “ಚಾಟ್ ಜಿಪಿಟಿ ಪ್ರಾರಂಭವಾದಾಗ, ಭಯವಿತ್ತು. ಎಐ  ಎಲ್ಲಾ ಪ್ರಬಂಧಗಳನ್ನು ಬರೆಯುತ್ತದೆ ಮತ್ತು ವಿದ್ಯಾರ್ಥಿಗಳು ಏನನ್ನೂ ಕಲಿಯುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು.’ ಆದರೆ ಪ್ರಬಂಧಗಳನ್ನು ಹೊರಗುತ್ತಿಗೆ ನೀಡುವುದು ಯಾವಾಗಲೂ ಸಾಧ್ಯ ಎಂದು ನಾವು ಅರಿತುಕೊಂಡೆವು, ನಂತರ ಅದು ಸುಲಭವಾಯಿತು. ಶಿಕ್ಷಣದ ಉದ್ದೇಶವು ಜಗತ್ತಿನಲ್ಲಿ ಮತ್ತೊಂದು ಪ್ರಬಂಧವನ್ನು ರಚಿಸುವುದಲ್ಲ, ಪ್ರಕ್ರಿಯೆಯಲ್ಲಿ ಏನನ್ನಾದರೂ ಕಲಿಯುವುದು. ಎಲ್ಲಾ ರೀತಿಯಿಂದಲೂ, ಎಐ ಪರಿಕರಗಳನ್ನು ಬಳಸಿ, ಆದರೆ ಕಲಿಕೆ ನಡೆಯುವಂತೆ ನೋಡಿಕೊಳ್ಳಿ.”

ಎಐ ಲೀಪ್   (ಎಸ್ಟೋನಿಯಾ) ನ ಸಿಇಒ ಇವೊ ವಿಸಾಕ್, “ಇದು ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯದ ಕಾಳಜಿ ಮಾತ್ರವಲ್ಲ, ಇದು ಇಡೀ ರಾಷ್ಟ್ರದ ಪ್ರಶ್ನೆಯಾಗಿದೆ. ಈ ಉಪಕ್ರಮವನ್ನು ಬೆಂಬಲಿಸುವ ಎಸ್ಟೋನಿಯನ್ ಕಂಪನಿಗಳು ನಮ್ಮಲ್ಲಿವೆ ಮತ್ತು ಅಂತಹ ಕಾರ್ಯಕ್ರಮಗಳ ಬಗ್ಗೆ ಸಾಮಾನ್ಯ ಸಾರ್ವಜನಿಕ ನಂಬಿಕೆಯೂ ಇದೆ. ನಿಮಗೆ ನಂಬಿಕೆ ಇದ್ದರೆ, ಜನರು ಅನುಸರಿಸುತ್ತಾರೆ. ಆದರೆ ನೀವು ನೀಡಬೇಕಾದ ಆ ನಂಬಿಕೆಯನ್ನು ನೀವು ಮುರಿಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಅದರ ಹಿಂದೆ ಬಲವಾದ ಶಿಕ್ಷಣ ಯೋಜನೆಯನ್ನು ಹೊಂದಿದ್ದೇವೆ, ಅದು ತಂತ್ರಜ್ಞಾನದಿಂದ ಬೆಂಬಲಿತವಾಗಿದೆ, ಶಿಕ್ಷಣಶಾಸ್ತ್ರದಿಂದ ಬೆಂಬಲಿತವಾದ ತಾಂತ್ರಿಕ ಕಾರ್ಯಕ್ರಮವಲ್ಲ.”

ಈ ಅಧಿವೇಶನವು 2026 ಅನ್ನು ಅನುಷ್ಠಾನ ವರ್ಷವೆಂದು ನಿಗದಿಪಡಿಸಿತು, ಎಐ ಕಲಿಕಾ ವ್ಯವಸ್ಥೆಗಳನ್ನು ಬಲಪಡಿಸುತ್ತದೆ ಮತ್ತು ಎಲ್ಲಾ ಕಲಿಯುವವರಿಗೆ ಸಮಾನ ಫಲಿತಾಂಶಗಳನ್ನು ನೀಡುತ್ತದೆ ಎನ್ನುವುದನ್ನು  ಖಚಿತಪಡಿಸಿಕೊಳ್ಳಲು ಸಂಘಟಿತ ರಾಷ್ಟ್ರೀಯ ಕಾರ್ಯತಂತ್ರಗಳು, ಶಿಕ್ಷಕ-ಕೇಂದ್ರಿತ ಸಾಮರ್ಥ್ಯ ವೃದ್ಧಿ, ಪರಸ್ಪರ ಕಾರ್ಯನಿರ್ವಹಿಸಬಹುದಾದ ಡಿಜಿಟಲ್ ಮೂಲಸೌಕರ್ಯ ಮತ್ತು ಬಲವಾದ ಸಾರ್ವಜನಿಕ ಆಡಳಿತ ಚೌಕಟ್ಟುಗಳ ಅಗತ್ಯವನ್ನು ಉಲ್ಲೇಖಿಸಿತು.


******


(ಪ್ರಕಟಣೆ ಐ.ಡಿ.: 2230143) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी