ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026 ಎಐ ಫಾರ್ ಅಲ್ (ಸರ್ವರಿಗೂ AI)ಅನ್ನು ಪ್ರಮುಖವಾಗಿ ಪ್ರತಿಪಾದನೆ: ಸಮಗ್ರ, ದೊಡ್ಡ ಪ್ರಮಾಣದ AI ಪರಿಹಾರಗಳನ್ನು ಸಬಲೀಕರಣಗೊಳಿಸಲು ಜಾಗತಿಕ ಪರಿಣಾಮ ಸವಾಲು


ಕೃತಕ ಬುದ್ಧಿಮತ್ತೆ ಬಳಸಿಕೊಂಡು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸಲು ವಿಶ್ವದಾದ್ಯಂತದ ನಾವೀನ್ಯಕಾರರ ಸ್ಪರ್ಧೆ

ಶೃಂಗಸಭೆಯ ಅಂತಿಮ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪೂರಕ ಬೆಂಬಲದೊಂದಿಗೆ ವಿಜೇತ ತಂಡಗಳ ಗುರುತು

ಪ್ರಕಟಣಾ ದಿನಾಂಕ: 17 FEB 2026 10:08PM by PIB Bengaluru

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026ರ ಎರಡನೇ ದಿನವು, ಸಾಮಾಜಿಕ ಅಭಿವೃದ್ಧಿಗೆ ನಿರ್ಣಾಯಕವಾದ ವಲಯಗಳಲ್ಲಿ ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಮರ್ಥ್ಯದೊಂದಿಗೆ ಕೃತಕ ಬುದ್ಧಿಮತ್ತೆ ಪರಿಹಾರಗಳನ್ನು ಗುರುತಿಸಲು ಮತ್ತು ವೇಗಗೊಳಿಸಲು ವಿನ್ಯಾಸಗೊಳಿಸಲಾದ ಇಂಡಿಯಾAI ಮಿಷನ್‌ನ ಪ್ರಮುಖ ಉಪಕ್ರಮವಾದ AI ಫಾರ್ ಆಲ್(ಸರ್ವರಿಗೂ ಕೃತಕ ಬುದ್ಧಿಮತ್ತೆ) : ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್ ಅನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಶೃಂಗಸಭೆಯ ಸಮಗ್ರ ಕಾರ್ಯಸೂಚಿಯ ಭಾಗವಾಗಿರುವ ಈ ಸವಾಲು, ಜನರು, ಭೂಮಿ ಮತ್ತು ಪ್ರಗತಿಯ ಮೂಲ ತತ್ವಗಳನ್ನು ಬಲಪಡಿಸುವ ಮೂಲಕ, ಎಲ್ಲರನ್ನೂ ಒಳಗೊಂಡ, ಸುಸ್ಥಿರ ಮತ್ತು ಜನ-ಕೇಂದ್ರಿತ ಫಲಿತಾಂಶಗಳಿಗಾಗಿ AI ಅನ್ನು ಬಳಸಿಕೊಳ್ಳುವ ಭಾರತ ಸರ್ಕಾರದ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸಿತು.

AI ಮಹತ್ವಾಕಾಂಕ್ಷೆಯನ್ನು ನೈಜ-ಪ್ರಪಂಚದ ಫಲಿತಾಂಶಗಳಾಗಿ ಪರಿವರ್ತನೆಗೊಳಿಸಲು ರೂಪಿಸಲಾದ AI ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್, ನಗರ ಮೂಲಸೌಕರ್ಯ ಮತ್ತು ಸರಕು ಸಾಗಾಣೆ,  ಕೃಷಿ,  ಹವಾಮಾನ ಮತ್ತು ಸುಸ್ಥಿರತೆ,  ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಆರ್ಥಿಕ ಸೇರ್ಪಡೆ ಸೇರಿದಂತೆ ಆದ್ಯತೆಯ ವಲಯಗಳಲ್ಲಿ ಪರಿವರ್ತನಾತ್ಮಕ ಮೌಲ್ಯದೊಂದಿಗೆ ಪರಿಹಾರಗಳನ್ನು ಪ್ರಸ್ತಾಪಿಸಲು ಜಗತ್ತಿನಾದ್ಯಂತದ ವಿದ್ಯಾರ್ಥಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು, ಉದ್ಯಮಗಳು ಮತ್ತು ಕೆಲಸ ಮಾಡುವ ವೃತ್ತಿಪರರನ್ನು ಆಹ್ವಾನಿಸಿತು. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಮತ್ತು ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗದ ಅಡಿಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾದೊಂದಿಗೆ ಸಹಭಾಗಿತ್ವದಲ್ಲಿ ಅಳವಡಿಸಲಾದ ಈ ಸ್ಪರ್ಧೆ,  ನಿಯೋಜನೆಗೆ ಸಿದ್ಧವಾಗಿರುವ ಮತ್ತು ಪ್ರಮಾಣದಲ್ಲಿ ಪರಿಣಾಮ ಬೀರುವ ಸಾಮರ್ಥ್ಯವಿರುವ ನಾವೀನ್ಯತೆಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

ಈ ಉಪಕ್ರಮವು ಸದೃಢವಾದ ಜಾಗತಿಕ ಸ್ಪಂದನೆಯನ್ನು ಕಂಡಿದ್ದು, ವಿಷಯ ತಜ್ಞರು, ನೀತಿ ನಿರೂಪಕರು ಮತ್ತು ಉದ್ಯಮ ನಾಯಕರಿಂದ ಕಠಿಣ ಬಹು-ಹಂತದ ಮೌಲ್ಯಮಾಪನ ಪ್ರಕ್ರಿಯೆಯ ಮೂಲಕ ನೂರಾರು ಪ್ರಸ್ತುತಿಗಳನ್ನು ಮೌಲ್ಯಮಾಪನ ಮಾಡಲಾಯಿತು. ಆಯ್ಕೆ ಮಾಡಲಾದ ಟಾಪ್ 10 ಪರಿಹಾರಗಳು ಸಾಮಾಜಿಕ ಅಗತ್ಯಗಳನ್ನು ಪೂರೈಸುವ AI ಅಪ್ಲಿಕೇಶನ್‌ಗಳ ವಿಸ್ತಾರವನ್ನು ಪ್ರತಿಬಿಂಬಿಸುತ್ತವೆ. ಅವುಗಳಲ್ಲಿ ಇನ್ಫಿಹೀಲ್ ಹೆಲ್ತ್‌ಟೆಕ್ ಪ್ರೈವೇಟ್ ಲಿಮಿಟೆಡ್; ಇನ್ಫಿಯಸ್ ಹೆಲ್ತ್‌ನಿಂದ ಇಕ್ವಿಟ್ವಿನ್; ಒನ್ ಗ್ಲೋಬಲ್ ಮೆಡಿಕಲ್ ಟೆಕ್ನಾಲಜಿ ಲಿಮಿಟೆಡ್ (ಡಿಬಿಎ ಹೀಲಿಯಂ ಹೆಲ್ತ್); ರೆಸಿಲಿಯನ್ಸ್ 360; ಕ್ಲೈಮೇಟ್-ಸ್ಮಾರ್ಟ್ ಲೆಂಡಿಂಗ್‌ಗಾಗಿ ಸ್ಯಾಟ್‌ಸೂರ್‌ನ ಫಾರ್ಮ್ ಸ್ಕೋರ್; ಸುಧಾರಿತ ಮಾನಸಿಕ ಆರೋಗ್ಯಕ್ಕಾಗಿ ವೈಸಾದ ಸಂವಾದಾತ್ಮಕ AI; ಕಿಡೌರಾ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್; ಡಯಾಬಿಟಿಕ್ ರೆಟಿನೋಪತಿ ಸ್ಕ್ರೀನಿಂಗ್‌ಗಾಗಿ ಮಧುನೇತ್ರಎಐ; ಕಾರ್ಬ್‌ಜಿಇಎಂ ಇಂಕ್.; ಮತ್ತು ಬಯೋಮ್ ಮೇಕರ್ಸ್ ಇಂಕ್‌ನ ಬಿಕ್ರಾಪ್® ಸಾಯಿಲ್ ಇಂಟಲಿಜೆನ್ಸ್‌ ಪ್ಲಾಟ್‌ ಫಾರಂ ಸೇರಿವೆ.

”ಜಾಗತಿಕ ದಕ್ಷಿಣದಲ್ಲಿ ಅಭಿವೃದ್ಧಿ ಉದ್ದೇಶಗಳನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಬಳಸಿಕೊಳ್ಳುವ’’ ಕುರಿತ ಸಂವಾದ

ಸವಾಲಿಗೆ ಪೂರಕವಾಗಿ, ಸಮಗ್ರ AI ನಾವೀನ್ಯತೆ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು ”ಜಾಗತಿಕ ದಕ್ಷಿಣದಲ್ಲಿ ಅಭಿವೃದ್ಧಿ ಉದ್ದೇಶಗಳನ್ನು ಹೆಚ್ಚಿಸಲು ಎಐ ಅನ್ನು ಬಳಸಿಕೊಳ್ಳುವ’’ ಕುರಿತು ಉನ್ನತ  ಮಟ್ಟದ ಸಂವಾದವು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ಯೋಜನಾ ನಾಯಕ ಶ್ರೀ ಗೌರವ್ ಝಾ; ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಯಲ್ಲಿ ಎಸ್ ಟಿಐ  ಮತ್ತು ಡಿಎಕ್ಸ್ ಕಚೇರಿಯ ಹಿರಿಯ ನಿರ್ದೇಶಕ ಶ್ರೀ ಟೊಮೊಯುಕಿ ಯಮಡಾ; ಐಡಿಯಾಬಾಜ್‌ನ ಸಹ-ಸಂಸ್ಥಾಪಕ ಮತ್ತು ಸಿಒಒ ಶ್ರೀ ಮುದಿತ್ ಕುಮಾರ್; ಆಂಥ್ರೊಪಿಕ್‌ನಲ್ಲಿ ಗ್ಲೋಬಲ್ ಇಂಪ್ಯಾಕ್ಟ್ ಲೀಡ್ ಶ್ರೀಮತಿ ಕರ್ಟ್ನಿ ಒ'ಡೊನೆಲ್; ಬಿ ಕ್ಯಾಪಿಟಲ್‌ನಲ್ಲಿ ಸಾಮಾನ್ಯ ಪಾಲುದಾರ ಶ್ರೀ ಕರಣ್ ಮೊಹ್ಲಾ; ಮತ್ತು ಇಂಡಿಯಾಎಐನ ಮಿಷನ್ ಆಡಳಿತ ಮಂಡಳಿ ಶ್ರೀ ರಮಣನ್ ರಾಮನಾಥನ್ ಅವರನ್ನು ಒಗ್ಗೂಡಿಸಿತು, ಆರಂಭಿಕ ಹಂತದ AI ಸ್ಟಾರ್ಟ್‌ಅಪ್‌ಗಳು ವಿನ್ಯಾಸ ಪಾಲುದಾರರನ್ನು ಸುರಕ್ಷಿತಗೊಳಿಸುವುದು, ವಾಣಿಜ್ಯ ಬೇಡಿಕೆಯನ್ನು ಮೌಲ್ಯೀಕರಿಸುವುದು ಮತ್ತು ಉತ್ತಮ-ಗುಣಮಟ್ಟದ ಡೇಟಾಸೆಟ್‌ಗಳನ್ನು ಲಭ್ಯತೆಯ ಮಹತ್ವವನ್ನು ಈ ಚರ್ಚೆಯು ಒತ್ತಿಹೇಳಿತು. ಭಾಷಣಕಾರರು ನಾವೀನ್ಯಕಾರರು ಮತ್ತು ಮಾರುಕಟ್ಟೆಗಳ ನಡುವೆ ನಿರ್ಣಾಯಕ ಸೇತುವೆಯಾಗಿ ಸರ್ಕಾರದ ಪಾತ್ರವನ್ನು ಎತ್ತಿ ತೋರಿಸಿದರು ಮತ್ತು ಸಮಗ್ರ ಬೆಳವಣಿಗೆಗೆ ಜವಾಬ್ದಾರಿಯುತ AI ಅನ್ನು ಬಳಕೆ ಮಾಡಲು ಮುಕ್ತ ವೇದಿಕೆಗಳು, ಸಹಯೋಗದ ಪೂರಕ ವ್ಯವಸ್ಥೆಗಳು ಮತ್ತು ಟ್ರಸ್ಟ್ ಫ್ರೇಮ್‌ವರ್ಕ್‌ಗಳ ಅಗತ್ಯವನ್ನು ಒತ್ತಿ ಹೇಳಿದರು.

ಈ ಚಾಲೆಂಜ್ ತನ್ನ ಅಂತಿಮ ಸ್ಪರ್ಧಿಗಳ ಘೋಷಣೆಯೊಂದಿಗೆ ಮುಕ್ತಾಯಗೊಂಡಿತು, ಅವರು ಶೃಂಗಸಭೆಯ ಗ್ರ್ಯಾಂಡ್ ಫಿನಾಲೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪರಿಹಾರಗಳನ್ನು ಪ್ರಸ್ತುತಪಡಿಸುತ್ತಾರೆ. ವಿಜೇತ ತಂಡಗಳು 2.50 ಕೋಟಿ ರೂಪಾಯಿಗಳವರೆಗೆ ಆರ್ಥಿಕ ಪ್ರೋತ್ಸಾಹವನ್ನು ಪಡೆಯುತ್ತವೆ, ಜೊತೆಗೆ ಮಾರ್ಗದರ್ಶನ, ಪೈಲಟ್ ಅವಕಾಶಗಳು ಮತ್ತು ರಾಷ್ಟ್ರೀಯ ಮತ್ತು ಜಾಗತಿಕ ಸ್ಕೇಲ್-ಅಪ್ ಅನ್ನು ಸಕ್ರಿಯಗೊಳಿಸಲು ಕಾರ್ಯತಂತ್ರದ ಪಾಲುದಾರಿಕೆಗಳು ಸೇರಿ ರಚನಾತ್ಮಕ ಪೂರಕ ವ್ಯವಸ್ಥೆಯ ಬೆಂಬಲವನ್ನು ಪಡೆಯುತ್ತವೆ.

ಎಐ ಫಾರ್ ಆಲ್: ಗ್ಲೋಬಲ್ ಇಂಪ್ಯಾಕ್ಟ್ ಚಾಲೆಂಜ್‌ನಂತಹ ಉಪಕ್ರಮಗಳ ಮೂಲಕ, ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಸಂವಾದ ಮತ್ತು  ಸೇತುವೆಯಾಗಿ ಕಾರ್ಯನಿರ್ವಹಣೆ ಮಾಡುವುದನ್ನು ಮುಂದುವರೆಸಿದೆ, ಎಲ್ಲರನ್ನೂ ಒಳಗೊಳ್ಳುವ ರೂಪುರೇಶೆ, ಸುಸ್ಥಿರ ಪರಿಣಾಮ ಮತ್ತು ದೀರ್ಘಕಾಲೀನ ಸಾರ್ವಜನಿಕ ಒಳಿತಿಗೆ ಹೊಂದಿಕೆಯಾಗುವ ಎಐ ಪರಿಹಾರಗಳನ್ನು ಮುನ್ನಡೆಸುತ್ತಿದೆ.

 

*****


(ಪ್ರಕಟಣೆ ಐ.ಡಿ.: 2229483) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu