ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಪ್ರಯೋಗಾಲಯಗಳಿಂದ ಜೀವನದತ್ತ ಎಐ: ವಿವಿಧ ವಲಯಗಳಲ್ಲಿ ಎಐ ನಿಯೋಜನೆಯ ನೈಜ ಪ್ರಪಂಚದ ವಸ್ತುನಿಷ್ಠ ವಿವರಗಳನ್ನು ಒದಗಿಸಿದೆ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ ಎಕ್ಸ್ ಪೋ 


ಅಪಾರ ಸಂಖ್ಯೆಯಲ್ಲಿ ಉದ್ಯಮ ಮಿತ್ರರು ಮತ್ತು ಸಾರ್ವಜನಿಕರ ಭಾಗವಹಿಸುವಿಕೆ 

ಹ್ಯುಮನಾಯ್ಡ್ ರೊಬೊಟಿಕ್ಸ್, ಬಹುಭಾಷಾ ಎಐ ಮತ್ತು ಫಿನ್ಟೆಕ್ ಭದ್ರತೆ ಶೃಂಗಸಭೆಯ ಪ್ರಮುಖಾಂಶಗಳು

ಪ್ರಕಟಣಾ ದಿನಾಂಕ: 17 FEB 2026 8:21PM by PIB Bengaluru

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಪ್ರದರ್ಶನವು ಪ್ರಮುಖ ತಂತ್ರಜ್ಞಾನ ಕಂಪನಿಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು, ಉದ್ಯಮ ಸಂಸ್ಥೆಗಳು ಮತ್ತು ಜಾಗತಿಕ ಪಾಲುದಾರರನ್ನು ಒಟ್ಟುಗೂಡಿಸಿ, ವಿವಿಧ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಪರಿಹಾರಗಳನ್ನು ಪ್ರದರ್ಶಿಸಿದೆ. ಭಾರತ ಮತ್ತು 30ಕ್ಕೂ ಹೆಚ್ಚು ದೇಶಗಳ 300ಕ್ಕೂ ಅಧಿಕ ಪ್ರದರ್ಶಕರನ್ನು ಒಳಗೊಂಡಿರುವ 10 ವಿಷಯಾಧಾರಿತ ಮಂಟಪಗಳು ವೈಜ್ಞಾನಿಕ ಪ್ರಗತಿ, ಕೈಗಾರಿಕಾ ಸ್ಥಿರ ಚೇತರಿಕೆ, ನಾವಿನ್ಯತೆ ಮತ್ತು ಡಿಜಿಟಲ್ ಸಂಪನ್ಮೂಲಗಳು ಎಲ್ಲರಿಗೂ ಲಭ್ಯವಾಗುವಲ್ಲಿ ಎಐ ಪಾತ್ರವನ್ನು ವಿವರಿಸಿದೆ. 

ಈ ಶೃಂಗಸಭೆಯು ಎಐ ಮೂಲಸೌಕರ್ಯ, ಸಾವರಿನ್ ಮಾಡೆಲ್ (ಸ್ಥಳೀಯ ಸಂಸ್ಕೃತಿ, ಪದ್ಧತಿ ಆಧರಿತ ದತ್ತಾಂಶ ಮೂಲಸೌಕರ್ಯ), ರೊಬೊಟಿಕ್ಸ್, ಸೂಪರ್ ಕಂಪ್ಯೂಟಿಂಗ್, ಶಿಕ್ಷಣ ತಂತ್ರಜ್ಞಾನ, ಆರೋಗ್ಯ ರಕ್ಷಣೆ ನಾವಿನ್ಯತೆ ಮತ್ತು ಫಿನ್‌ಟೆಕ್ ಭದ್ರತೆ ವಲಯಗಳಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ರೊಬೊಟಿಕ್ಸ್ ಮತ್ತು ಜಾಣ್ಮೆಯ ತಯಾರಿಕೆ

ಸಾಗಣೆ, ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತ್ತು ಚತುರ ಕೃಷಿಗಾಗಿ ಸುಧಾರಿತ ರೊಬೊಟಿಕ್ಸ್ ವೇದಿಕೆಗಳನ್ನು ಸಹ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿದೆ. ಉತ್ಪಾದಕತೆ ಹೆಚ್ಚಿಸಲು, ಕಾರ್ಯಾಚರಣೆಯ ವೆಚ್ಚ ಕಡಿಮೆ ಮಾಡಲು ಮತ್ತು ಹೆಚ್ಚಿನ ಬೇಡಿಕೆಯ ವಲಯಗಳಲ್ಲಿ ಕಾರ್ಯಪಡೆಯ ಸವಾಲುಗಳನ್ನು ಪರಿಹರಿಸಲು ಈ ನಾವಿನ್ಯತೆಗಳನ್ನು ವಿನ್ಯಾಸಗೊಳಿಸಲಾಗಿದೆ.

ವಿಜ್ಞಾನ ಮತ್ತು ಸಂಶೋಧನೆಗಾಗಿ ಎಐ

ಸಂಶೋಧನೆ ಮತ್ತು ನಾವಿನ್ಯತೆಯನ್ನು ಎಐ ಹೇಗೆ ವೇಗಗೊಳಿಸುತ್ತಿದೆ ಎಂಬುದನ್ನು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರದರ್ಶಿಸುತ್ತಿವೆ.

ಪ್ರದರ್ಶಿಸಿರುವ ಪ್ರಮುಖ ಕ್ಷೇತ್ರಗಳು:

  • AI-ಚಾಲಿತ ಪ್ರೋಟೀನ್ ಎಂಜಿನಿಯರಿಂಗ್ ಮತ್ತು ಔಷಧ ಅನ್ವೇಷಣೆ
  • ನರವಿಜ್ಞಾನ ಮತ್ತು ಅರಿವಿನ ಸಂರಚನಾ ಸಂಶೋಧನೆ
  • ದೊಡ್ಡ ಪ್ರಮಾಣದ ಜೈವಿಕ ಮತ್ತು ವೈದ್ಯಕೀಯ ದತ್ತಾಂಶದ ಪ್ರಕ್ರಿಯೆಗಾಗಿ ಮುಂದುವರಿದ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್-ಕೇಂದ್ರಿತ ವಿಧಾನಗಳ ಬಳಕೆ
  • ಬಹುಭಾಷಾ ಮತ್ತು ಸುರಕ್ಷಿತ ಬಳಕೆಗಾಗಿ ಜನರೇಟಿವ್ ಎಐ ಮತ್ತು ಲಾರ್ಜ್ ಲ್ಯಾಂಜ್ವೇಜ್ ಮಾಡೆಲ್ (LLM ಗಳು) 

ಈ ಪ್ರಯತ್ನಗಳು ಜೈವಿಕ ವೈದ್ಯಕೀಯ ಸಂಶೋಧನೆಯನ್ನು ಮುನ್ನಡೆಸುವಲ್ಲಿ, ರೋಗನಿರ್ಣಯವನ್ನು ಸುಧಾರಿಸುವಲ್ಲಿ ಮತ್ತು ದತ್ತಾಂಶ-ಚಾಲಿತ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವನ್ನು ಒತ್ತಿಹೇಳುತ್ತವೆ.

ಎಐ ಮೂಲಸೌಕರ್ಯ ಮತ್ತು ದೃಢ ಸ್ಥಿರತೆ

ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಮತ್ತು ದತ್ತಾಂಶ-ತೀವ್ರ ಕೆಲಸದ ಹೊರೆಗಳಿಗೆ ಬೆಂಬಲ ನೀಡಲು ವಿನ್ಯಾಸಗೊಳಿಸಲಾಗಿರುವ ಮುಂದಿನ ಪೀಳಿಗೆಯ ಎಐ-ಸಿದ್ಧ ಮೂಲಸೌಕರ್ಯವನ್ನು ಪ್ರದರ್ಶಕರು ಶೃಂಗಸಭೆಯಲ್ಲಿ ಪ್ರಮುಖವಾಗಿ ಪ್ರದರ್ಶಿಸಿದ್ದಾರೆ. ಭೌತಿಕ ಎಐ ಸಂಶೋಧನಾ ಪ್ರಯೋಗಾಲಯಗಳಿಂದ ನೈಜ-ಪ್ರಪಂಚದ ಕೈಗಾರಿಕಾ ಬಳಕೆಗಳಿಗೆ ಹೇಗೆ ಸಾಗುತ್ತಿದೆ ಎಂಬುದನ್ನು ರೊಬೊಟಿಕ್ಸ್ ಪ್ರೊಸೆಸರ್ ಗಳು ಮತ್ತು ನಿಯೋಜನೆ-ಸಿದ್ಧ ಹ್ಯುಮನಾಯ್ಡ್ ವ್ಯವಸ್ಥೆಗಳು ಪ್ರದರ್ಶಿಸಿದ್ದು, ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸಿವೆ.
 
ಶಿಕ್ಷಣ ಮತ್ತು ಕೌಶಲ್ಯವರ್ಧನೆಯಲ್ಲಿ AI

ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರತ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಎಐ-ಸಕ್ರಿಯ ಶಿಕ್ಷಣ ಚೌಕಟ್ಟುಗಳನ್ನು ಪ್ರಸ್ತುತಪಡಿಸಿವೆ.

ಎಐ ಮತ್ತು ಮಷಿನ್ ಲರ್ನಿಂಗ್ ಕಾರ್ಯಕ್ರಮಗಳಲ್ಲಿ ಹತ್ತಾರು ಸಾವಿರ ಕಲಿಕಾರ್ಥಿಗಳು ದಾಖಲಾಗಿದ್ದು ಶೃಂಗಸಭೆಯು ಎಐ ಶಿಕ್ಷಣಕ್ಕೆ ಅವಕಾಶ ಒದಗಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸಿದೆ.
 
ಹಣಕಾಸು, ಲೆಕ್ಕಪತ್ರ ನಿರ್ವಹಣೆ ಮತ್ತು ವಂಚನೆ ಪತ್ತೆಯಲ್ಲಿ ಎಐ

ಎಕ್ಸ್ ಪೋ ದಲ್ಲಿ ಪ್ರದರ್ಶಿಸಲಾದ ಎಐ ಸಾಧನಗಳ ಪೈಕಿ ವೇಗವಾದ ಲೆಕ್ಕಪರಿಶೋಧನೆ, ಸುಧಾರಿತ ವಂಚನೆ ಪತ್ತೆ, ವರ್ಧಿತ ಅನುಸರಣೆ ಮತ್ತು ಹೆಚ್ಚಿದ ದಕ್ಷತೆಯನ್ನು ಸಕ್ರಿಯಗೊಳಿಸುವ ಎಐ ಪರಿಕರಗಳು ಫಿನ್ಟೆಕ್ ಮತ್ತು ಸೈಬರ್ ಭದ್ರತೆಯಲ್ಲಿ ಎಐ ನ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ.

ಸರ್ವರಿಗೆ ಲಭ್ಯವಾಗಲು ಮತ್ತು ಸರ್ವರನ್ನೂ ಒಳಗೊಳ್ಳಲು ಎಐ

ಬಹುಭಾಷಾ AI ವಿಷಯ ನಿರೂಪಣೆ, ಸಣ್ಣ ವ್ಯವಹಾರಗಳು ಮತ್ತು ವೃತ್ತಿಪರ ಸಂಸ್ಥೆಗಳಿಗೆ ಪರಿಕರಗಳು, ನಗರ ಮತ್ತು ದೂರದ ಪರಿಸರಗಳಿಗೆ ಸೂಕ್ತವಾದ ಮಾಡ್ಯುಲರ್ ಎಐ ಮೂಲಸೌಕರ್ಯ, ಸ್ಮಾರ್ಟ್ ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ರೊಬೊಟಿಕ್ಸ್ ನಂತಹ AI-ಚಾಲಿತ ಸಾರ್ವಜನಿಕ ಸೇವಾ ಬಳಕೆಗಳು ಕೃತಕ ಬುದ್ಧಿಮತ್ತೆ ಸಂಪನ್ಮೂಲಗಳನ್ನು ಎಲ್ಲರಿಗೂ ಲಭ್ಯವಾಗಿಸಲಾಗುತ್ತಿದೆ ಎಂಬುದನ್ನು ತೋರಿಸಿದೆ.

ಸಹಯೋಗ ಮತ್ತು ನಾವಿನ್ಯತೆಗೆ ಒಂದು ವೇದಿಕೆ

ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಪ್ರದರ್ಶನ ಸ್ಥಳಗಳು ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದು, ಉದ್ಯಮದ ಮುಖಂಡರು, ನವೋದ್ಯಮಗಳು, ವಿದ್ಯಾರ್ಥಿಗಳು, ಸಂಶೋಧಕರು, ನೀತಿ ನಿರೂಪಕರು ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಬಹುಸಂಖ್ಯೆಯಲ್ಲಿ ಆಕರ್ಷಿಸಿದೆ. ಇನ್ನು ಎಐ ಕೇವಲ ಸಂಶೋಧನಾ ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ, ಬದಲಾಗಿ ಎಲ್ಲಾ ವಲಯಗಳಲ್ಲಿ ಹೇಗೆ ನಿಯೋಜಿಸಲ್ಪಟ್ಟಿದೆ ಎಂಬುದನ್ನು ಈ ಎಕ್ಸ್ ಪೋ ಪ್ರದರ್ಶಿಸಿದೆ. ವಿಜ್ಞಾನ, ಆರ್ಥಿಕ ಸ್ಥಿರತೆ, ನಾವಿನ್ಯತೆ ಮತ್ತು ಅಂತರ್ಗತ ಬೆಳವಣಿಗೆಗೆ ಎಐ ಕಾರ್ಯತಂತ್ರದ ಸಕ್ರಿಯಗೊಳಿಸುವಿಕೆಯಾಗಿದೆ ಎಂದು ಪ್ರದರ್ಶನ ಒತ್ತಿಹೇಳಿದೆ.

 

*****


(ಪ್ರಕಟಣೆ ಐ.ಡಿ.: 2229414) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी