ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ನಾಳೆ 'ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತ ರಾಷ್ಟ್ರೀಯ ಸಮ್ಮೇಳನ (SHe-Box)' ಆಯೋಜನೆ
ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಸುರಕ್ಷಿತ, ಘನತೆಯ ಮತ್ತು ಕಿರುಕುಳ-ಮುಕ್ತ ದುಡಿಯುವ ಸ್ಥಳಗಳನ್ನು ಸೃಷ್ಟಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರದ ಬದ್ಧತೆ ಪುನರುಚ್ಚರಿಸುವ ಪ್ರಯತ್ನ ಈ ಸಮ್ಮೇಳನ
ಪ್ರಾಸ್ತಾವಿಕ ಭಾಷಣ ಮತ್ತು ರಾಷ್ಟ್ರೀಯ ಕೆಲಸದ ಸ್ಥಳ ಸುರಕ್ಷತಾ ಪ್ರತಿಜ್ಞಾ ವಿಧಿ ಬೋಧಿಸಲಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ
ಪ್ರಕಟಣಾ ದಿನಾಂಕ:
13 FEB 2026 10:04AM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ನಾಳೆ (2026ರ ಫೆಬ್ರವರಿ 14) ದೆಹಲಿಯ ವಿಜ್ಞಾನ ಭವನದಲ್ಲಿ ‘ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತ ರಾಷ್ಟ್ರೀಯ ಸಮ್ಮೇಳನ (SHe-Box)' ಅನ್ನು ಆಯೋಜಿದೆ.
ಈ ಸಮ್ಮೇಳನವು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಘನ ಉಪಸ್ಥಿತಿಯಲ್ಲಿ ನಡೆಯಲಿದ್ದು, ಅದರಲ್ಲಿ ಕೇಂದ್ರ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು. ಆಂತರಿಕ ಸಮಿತಿ(ಐಸಿ)/(ಸ್ಥಳೀಯ ಸಮಿತಿ)ಎಲ್‌ಸಿಗಳ ಅಧ್ಯಕ್ಷರು ಮತ್ತು ಸದಸ್ಯರು, ನೋಡಲ್ ಅಧಿಕಾರಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯಮ ಮುಖಂಡರು, ನಾಗರಿಕ ಸಮಾಜ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತಿತರರು ಭಾವಗಹಿಸಲಿದ್ದಾರೆ.
ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಸುರಕ್ಷಿತ, ಘನತೆ ಮತ್ತು ಕಿರುಕುಳ-ಮುಕ್ತ ದುಡಿಯುವ ಸ್ಥಳಗಳ ಸೃಷ್ಟಿಯನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013ರ ಅನುಷ್ಠಾನವನ್ನು ಬಲಪಡಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲು ಈ ಸಮ್ಮೇಳನವು ಒಂದು ಪ್ರಯತ್ನವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2024ರ ಆಗಸ್ಟ್ 29 ರಂದು ಸುರಕ್ಷಿತ, ಬಳಕೆದಾರ ಸ್ನೇಹಿ, ಬಹುಭಾಷಾ ಏಕ ಗವಾಕ್ಷಿ ವೇದಿಕೆಯಾಗಿ ಕಟ್ಟುನಿಟ್ಟಾದ ಗೌಪ್ಯತೆಯನ್ನು ಹೊಂದಿರುವ ಶೀ-ಬಾಕ್ಸ್ ಪೋರ್ಟಲ್ ಅನ್ನು ಆರಂಭಿಸಿತು, ಇದು ಆನ್‌ಲೈನ್ ದೂರು ಸಲ್ಲಿಕೆ, ಸಂಬಂಧಪಟ್ಟ ಆಂತರಿಕ ಅಥವಾ ಸ್ಥಳೀಯ ಸಮಿತಿಗೆ ಸ್ವಯಂಚಾಲಿತ ಫಾರ್ವರ್ಡ್ ಮತ್ತು ರಿಯಲ್ ಟೈಮ್ ಟ್ರ್ಯಾಕಿಂಗ್ ಅನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಪೋಶ್ (POSH) ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪಾಲುದಾರರಿಗೆ ಸಹಾಯ ಮಾಡಲು ನೆರವಾಗುತ್ತದೆ.
ಈ ಪೋರ್ಟಲ್ ಸಂಪನ್ಮೂಲ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಸಮಿತಿಯ ವಿವರಗಳು, ವಾರ್ಷಿಕ ವರದಿಗಳು ಮತ್ತು ಜಾಗೃತಿ ಮತ್ತು ತರಬೇತಿ ಉಪಕ್ರಮಗಳು ಸೇರಿದಂತೆ ನಿಯಮಗಳ ಪಾಲನೆಗೆ ಸಂಬಂಧಿತ ಮಾಹಿತಿಯನ್ನು ಅಪ್‌ಲೋಡ್ ಮಾಡಲು ದುಡಿಯುವ ಸ್ಥಳಗಳಿಗೆ ಅನುವು ಮಾಡಿಕೊಡುತ್ತದೆ.
ಈ ಕಾರ್ಯಕ್ರಮವು ಉದ್ಘಾಟನಾ ಗೋಷ್ಠಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದುಂಡುಮೇಜಿನ ಸಭೆ, SHe-Box ಲೋಗೋ ಬಿಡುಗಡೆ, ರಾಷ್ಟ್ರವ್ಯಾಪಿ PoSH ತರಬೇತಿ ವೀಡಿಯೋ, ಐಇಸಿ- ಮಾಹಿತಿ ಸಂವಹನ ಮತ್ತು ಪ್ರಚಾರ ಸಾಮಗ್ರಿಗಳು ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಕರ್ಮಯೋಗಿ ಭಾರತ್‌ನಲ್ಲಿ ಲಭ್ಯವಿರುವ PoSH ಕುರಿತು ತರಬೇತಿಗೆ ಪಡೆಯುವುದಕ್ಕೆ ಅವಕಾಶ ಮಾಡಿಕೊಡುವುದನ್ನು ಒಳಗೊಂಡಿದೆ. ರಾಷ್ಟ್ರೀಯ ದುಡಿಯುವ ಸ್ಥಳ ಸುರಕ್ಷತಾ ಪ್ರತಿಜ್ಞೆಯನ್ನು ಕೇಂದ್ರ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಬೋಧಿಸುಲಿದ್ದಾರೆ, ನಂತರ ಅವರ ಪ್ರಧಾನ ಭಾಷಣವಿರಲಿದೆ.
ಪ್ರಮುಖ ಗೋಷ್ಠಿಗಳಲ್ಲಿ ಅಸಂಘಟಿತ ವಲಯದ ಮೇಲೆ ಕೇಂದ್ರೀಕರಿಸಿ, PoSH ಅನುಸರಣೆ ಮತ್ತು ದುಡಿಯುವ ಸ್ಥಳ ಸಂಸ್ಕೃತಿಯನ್ನು ಬಲಪಡಿಸುವ ಕುರಿತು ರಾಷ್ಟ್ರೀಯ ದುಂಡುಮೇಜಿನ ಸಭೆ ಮತ್ತು ದುಡಿಯುವ ಸ್ಥಳ ಸುರಕ್ಷತೆಯ ಕುರಿತು ಜಾಗತಿಕ ಅತ್ಯುತ್ತಮ ಪದ್ಧತಿಗಳ ಕುರಿತು ವಿಶ್ವಸಂಸ್ಥೆಯ ಏಜೆನ್ಸಿಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಅಂತಾರಾಷ್ಟ್ರೀಯ ದುಂಡುಮೇಜಿನ ಸಭೆ ಇರಲಿದೆ. ಸುರಕ್ಷಿತ ದುಡಿಯುವ ಸ್ಥಳಗಳಿಗೆ ಬದ್ಧತೆಯನ್ನು ಹೆಚ್ಚಿಸಲು ಸಮ್ಮೇಳನವು PoSH ಸ್ವಯಂಪ್ರೇರಿತ ಅನುಸರಣೆ ಪರಿಶೀಲನಾಪಟ್ಟಿಯನ್ನು ಬಿಡುಗಡೆ ಮಾಡುವುದನ್ನು ಸಹ ಒಳಗೊಂಡಿರುತ್ತದೆ.
ಸರ್ಕಾರಿ ಮತ್ತು ಖಾಸಗಿ ವಲಯಗಳು ಸೇರಿದಂತೆ 100ಕ್ಕೂ ಅಧಿಕ ಸಂಸ್ಥೆಗಳಿಂದ ಸುಮಾರು 1,500 ಪ್ರತಿನಿಧಿಗಳನ್ನು ಸಮ್ಮೇಳನವು ಒಗೂಡಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ವೆಬ್‌ಕಾಸ್ಟ್ ಮೂಲಕವೂ ಲಭ್ಯವಿದ್ದು, ಜನರು link https://webcast.gov.in/mwcd/ ಲಿಂಕ್‌ನಲ್ಲಿ ಆನ್‌ಲೈನ್‌ನಲ್ಲಿ ಜಾಯಿನ್ ಅಗಿ ವೀಕ್ಷಿಸಲು ಅವಕಾಶವಿದೆ. PoSH ಹಕ್ಕುಗಳ ಜಾಗೃತಿ, ಅನುಸರಣೆ ಹೆಚ್ಚಿಸುವುದು, SHe-Box ಅಳವಡಿಕೆ ಹೆಚ್ಚಿಸುವುದು ಮತ್ತು ಸುರಕ್ಷಿತ ಮತ್ತು ಘನತೆಯ ದುಡಿಯುವ ಸ್ಥಳಗಳನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವ ಮೂಲಕ ಸಕಾರಾತ್ಮಕ ದುಡಿಯುವ ಸ್ಥಳ ಸಂಸ್ಕೃತಿಯನ್ನು ಉತ್ತೇಜಿಸಲು ಇದು ಸರ್ಕಾರದ ಪ್ರಯತ್ನವಾಗಿದೆ.
*****
(ಪ್ರಕಟಣೆ ಐ.ಡಿ.: 2227365)
ವಿಸಿಟರ್ ಕೌಂಟರ್ : 17