ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ವಾಹನ ಸ್ಕ್ರ್ಯಾಪೇಜ್ (ಗುಜರಿ)  ನೀತಿ ಮತ್ತು ರಸ್ತೆ ಸುರಕ್ಷತಾ ಉಪಕ್ರಮಗಳು

ಪ್ರಕಟಣಾ ದಿನಾಂಕ: 04 FEB 2026 7:08PM by PIB Bengaluru

 

30.01.2026 ರಂದು, ವಾಹನ ಸ್ಕ್ರ್ಯಾಪಿಂಗ್ (ಗುಜರಿ) ನೀತಿ ಅಡಿಯಲ್ಲಿ ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 129 ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳು (ಆರ್.ವಿ.ಎಸ್.ಎಫ್.-RVSF ಗಳು) ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, 30.01.2026 ರವರೆಗೆ ಆರ್.ವಿ.ಎಸ್.ಎಫ್ ಗಳು ಒಟ್ಟು 4,30,306 ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಿವೆ.

 

ಹಣಕಾಸು ಸಚಿವಾಲಯ, ವೆಚ್ಚ ಇಲಾಖೆ, ದಿನಾಂಕ 22.05.2025ರ ಪತ್ರದ ಮೂಲಕ, ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಸಹಾಯ (ಎಸ್.ಎ.ಎಸ್.ಸಿ.ಐ-SASCI) 2025-26 ಕ್ಕಾಗಿ ಯೋಜನೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 'ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್' ಮಾಡಲು ಪ್ರೋತ್ಸಾಹಕಗಳನ್ನು ಮಾರ್ಗಸೂಚಿಗಳ ಭಾಗ-VI ಎ ಪ್ರಕಾರ ವಿಸ್ತರಿಸಲಾಗಿದೆ ಮತ್ತು ವರ್ಷ ನಿಗದಿಪಡಿಸಿದ ಪ್ರೋತ್ಸಾಹಕ ಮೊತ್ತವು ಮೊದಲು ಬಂದವರಿಗೆ ಮೊದಲು ಆದ್ಯತೆ ಆಧಾರದ ಮೇಲೆ ರೂ. 2,000 ಕೋಟಿ.  ಪ್ರೋತ್ಸಾಹಕಗಳು ಈ ಕೆಳಗಿನಂತಿವೆ:

i 26.03.2025ರ ಅಧಿಸೂಚನೆ ಸಂಖ್ಯೆ  ಜಿ.ಎಸ್.ಆರ್. 200(ಇ) ಪ್ರಕಾರ ಹೆಚ್ಚುವರಿ ಮೋಟಾರು ವಾಹನ ತೆರಿಗೆ ರಿಯಾಯಿತಿಯ ಅಧಿಸೂಚನೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವರ್ಗವನ್ನು ಆಧರಿಸಿ, ರೂ. 10 ಕೋಟಿಯಿಂದ ರೂ. 200 ಕೋಟಿಯವರೆಗಿನ ಒಟ್ಟು ಮೊತ್ತದ ಪ್ರೋತ್ಸಾಹ ಧನ.

 

ii. ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಲ್ಲಿ 15 ವರ್ಷಗಳಿಗಿಂತ ಹಳೆಯದಾದ ಸರ್ಕಾರಿ ಸ್ವಾಮ್ಯದ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲು ಪ್ರೋತ್ಸಾಹ ಧನಗಳು, ಇದರಲ್ಲಿ ರಾಜ್ಯಗಳು ಹಣಕಾಸು ವರ್ಷದಲ್ಲಿ ಸ್ಕ್ರ್ಯಾಪ್ ಮಾಡಿದ ಸರ್ಕಾರಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರೂ. 50,000 ರಿಂದ 1,50,000 ವರೆಗಿನ ಶ್ರೇಣೀಕೃತ ಪ್ರಮಾಣದಲ್ಲಿ ಪ್ರತಿ ವಾಹನಕ್ಕೆ ಪ್ರೋತ್ಸಾಹ ಧನ ಪಡೆಯಲು ಅರ್ಹವಾಗಿವೆ.

 

iii. ಸರ್ಕಾರೇತರ ವಾಹನಗಳ ಸ್ಕ್ರ್ಯಾಪಿಂಗ್‌ಗೆ ಪ್ರೋತ್ಸಾಹ ಧನ, ಇದರಲ್ಲಿ ರಾಜ್ಯಗಳು ರೂ. 5,000 ರಿಂದ 20,000 ವರೆಗಿನ ಶ್ರೇಣೀಕೃತ ರೀತಿಯಲ್ಲಿ ಪ್ರತಿ-ವಾಹನ ಪ್ರೋತ್ಸಾಹ ಧನಕ್ಕೆ ಅರ್ಹವಾಗಿವೆ, ಇದು ರಾಜ್ಯದೊಳಗಿನ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಲ್ಲಿ ಸ್ಕ್ರ್ಯಾಪ್ ಮಾಡಲಾದ ಸರ್ಕಾರೇತರ ವಾಹನಗಳ ಪ್ರಮಾಣವನ್ನು ಆಧರಿಸಿದೆ.

 

iv. ರಾಜ್ಯಗಳು ಪ್ರತಿ ಸ್ವಯಂಚಾಲಿತ ಪರೀಕ್ಷಾ ಕೇಂದ್ರ ಎ.ಟಿ.ಎಸ್.-(ATS)ಕ್ಕೆ ರೂ. 5 ಕೋಟಿಯಿಂದ ರೂ. 9 ಕೋಟಿಯವರೆಗಿನ) ಪ್ರೋತ್ಸಾಹ ಧನಕ್ಕೆ ಅರ್ಹವಾಗಿವೆ, ಇದು ಎ.ಟಿ.ಎಸ್.ನ್ನು ಹೆಚ್ಚಿನ ಆದ್ಯತೆಯ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆಯೇ ಅಥವಾ ಇತರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆಯೇ ಎಂಬುದನ್ನು ಅವಲಂಬಿಸಿರುತ್ತದೆ, ಪ್ರೋತ್ಸಾಹ ಧನದ 25% ಕೆಲಸವನ್ನು ನೀಡುವುದಕ್ಕೆ ಮತ್ತು ಉಳಿದ 75% ಎ.ಟಿ.ಎಸ್. ಕಾರ್ಯಾಚರಣೆಗೆ ಸಂಬಂಧಿಸಿದೆ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಎ.ಟಿ.ಎಸ್. ಗಳ ಸಕಾಲಿಕ ಕಾರ್ಯಾಚರಣೆಗೆ ಹೆಚ್ಚುವರಿ ಪ್ರೋತ್ಸಾಹಧನವನ್ನು ಅನುಮತಿಸಲಾಗಿದೆ.

 

ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 162 ರ ಅಡಿಯಲ್ಲಿ ಕಾನೂನು ಆದೇಶಕ್ಕೆ ಅನುಗುಣವಾಗಿ, ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆ, 2025 ಅನ್ನು ದಿನಾಂಕ 05.05.2025 ರ ಎಸ್.ಒ. 2015(ಇ) ಮೂಲಕ ಅಧಿಸೂಚಿಸಲಾಗಿದೆ. ಇದಲ್ಲದೆ, ಪ್ರಕ್ರಿಯೆ, ವಿವಿಧ ಪಾಲುದಾರರ ಪಾತ್ರಗಳು ಮತ್ತು ಜವಾಬ್ದಾರಿಗಳು ಹಾಗೂ ಅದರ ಅನುಷ್ಠಾನಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್.ಒ.ಪಿ.ಗಳನ್ನು-SOPs) ವಿವರಿಸುವ ಸಮಗ್ರ ಮಾರ್ಗಸೂಚಿಗಳನ್ನು ದಿನಾಂಕ 04.06.2025 ರ ಎಸ್.ಒ.. 2489 (ಇ) ಮೂಲಕ ನೀಡಲಾಗಿದೆ. ಯೋಜನೆಯ ಪ್ರಮುಖ ಲಕ್ಷಣಗಳು ಹೀಗಿವೆ:

    1. ಅಪಘಾತದ ದಿನಾಂಕದಿಂದ ಗರಿಷ್ಠ 7 ದಿನಗಳ ಮಿತಿಗೆ ಒಳಪಟ್ಟು, ಪ್ರತಿ ಸಂತ್ರಸ್ತರಿಗೆ 1.5 ಲಕ್ಷ ರೂ.ಗಳವರೆಗೆ ಚಿಕಿತ್ಸಾ ರಕ್ಷಣೆಯನ್ನು ಒದಗಿಸಲಾಗುವುದು. ಮೋಟಾರು ವಾಹನಗಳ ಬಳಕೆಯಿಂದ ಉಂಟಾಗುವ ರಸ್ತೆ ಅಪಘಾತಗಳಲ್ಲಿ ಭಾಗಿಯಾಗಿರುವ ಸಂತ್ರಸ್ತರಿಗೆ  ಚಿಕಿತ್ಸಾ ರಕ್ಷಣೆ ಲಭ್ಯವಿರುತ್ತದೆ.

 

    1.  ರಸ್ತೆ ಅಪಘಾತದ ಪ್ರತಿಯೊಬ್ಬ ಸಂತ್ರಸ್ತರಿಗೆ ಗುಣಮುಖರಾಗುವಂತೆ, ಗರಿಷ್ಠ ಚಿಕಿತ್ಸೆಯನ್ನು ಒದಗಿಸಲಾಗುವುದು.

ಜೀವಕ್ಕೆ ಅಪಾಯಕಾರಿಯಲ್ಲದ ಪ್ರಕರಣಗಳಲ್ಲಿ 24 ಗಂಟೆಗಳ ಕಾಲ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಮತ್ತು ಜೀವಕ್ಕೆ ಅಪಾಯಕಾರಿ ಪ್ರಕರಣಗಳಲ್ಲಿ 48 ಗಂಟೆಗಳವರೆಗೆ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ, ಪೊಲೀಸರ ಪ್ರತಿಕ್ರಿಯೆಗೆ ಒಳಪಟ್ಟು ಚಿಕಿತ್ಸೆ ಒದಗಿಸಲಾಗುತ್ತದೆ.

 

    1. ಶಾಸನಬದ್ಧ ಯೋಜನೆಯು ಯಾವುದೇ ಇತರ ಕೇಂದ್ರ / ರಾಜ್ಯ ಮಟ್ಟದ ಯೋಜನೆಗಳಿಗಿಂತ ಹೆಚ್ಚಿನ ಆದ್ಯತೆಯನ್ನು ಒಳಗೊಂಡಿರುತ್ತದೆ.  

    2. ಯೋಜನೆಯನ್ನು ಅಸ್ತಿತ್ವದಲ್ಲಿರುವ ಎರಡು ವೇದಿಕೆಗಳ ಸಂಯೋಜನೆಯ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ, ಅಂದರೆ, ಅಪಘಾತಗಳ ವರದಿಗಾಗಿ ಪೊಲೀಸ್ ಅಧಿಕಾರಿಗಳು ಬಳಸುವ ಇ ಡಿ.ಎ.ಆರ್ (eDAR-ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ) ಮತ್ತು ಆಸ್ಪತ್ರೆಗಳು ಚಿಕಿತ್ಸೆ, ಕ್ಲೇಮ್  ಸಲ್ಲಿಕೆ ಮತ್ತು ಪಾವತಿಗಳ ಪ್ರಕ್ರಿಯೆಗಾಗಿ ಬಳಸುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (NHA) ಟಿ.ಎಂ.ಎಸ್. 2.0 (ವಹಿವಾಟು ನಿರ್ವಹಣಾ ವ್ಯವಸ್ಥೆ).

    3. ಆಸ್ಪತ್ರೆಗಳಿಗೆ ಮರುಪಾವತಿಯನ್ನು ಮೋಟಾರು ವಾಹನ ಅಪಘಾತ ನಿಧಿ (MVAF) ಮೂಲಕ ಮಾಡಲಾಗುತ್ತಿದೆ, ಇದಕ್ಕೆ ಹಣಕಾಸು ಅಪರಾಧ ಎಸಗಿದ ಮೋಟಾರು ವಾಹನವನ್ನು ವಿಮೆ ಮಾಡಿಸಿದ ಪ್ರಕರಣಗಳಿಗೆ ವಿಮಾ ಕಂಪನಿಗಳ ಕೊಡುಗೆಗಳ ಮೂಲಕ ಮತ್ತು ವಿಮೆ ಮಾಡದ ಇತರ ಪ್ರಕರಣಗಳಿಗೆ ಬಜೆಟ್ ಬೆಂಬಲದ ಮೂಲಕ ಹಣವನ್ನು ಒದಗಿಸಲಾಗುತ್ತದೆ.

    4.  

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಬ್ಲ್ಯಾಕ್ ಸ್ಪಾಟ್ (ಸಂಭಾವ್ಯ ಅಪಘಾತದ ಸ್ಥಳಗಳನ್ನು)  ಸರಿಪಡಿಸಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಲ್ಲಿ ಸರ್ಕಾರವು ತೆಗೆದುಕೊಂಡ ವಿವಿಧ ಉಪಕ್ರಮಗಳ ವಿವರಗಳು ಕೆಳಗಿನಂತಿವೆ: -

 

x. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸುವುದಕ್ಕೆ  ಮತ್ತು ಸರಿಪಡಿಸುವುದಕ್ಕೆ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ರಸ್ತೆ ಗುರುತುಗಳು, ಸೂಚನಾ ಫಲಕಗಳು, ಅಪಘಾತ ತಡೆಗೋಡೆಗಳು, ರಸ್ತೆ ಸ್ಟಡ್‌ಗಳು, ಡಿಲಿನೇಟರ್‌ಗಳು, ರಸ್ತೆಯ ಮಧ್ಯ ಭಾಗದ  ಅನಧಿಕೃತ ತೆರೆಯುವಿಕೆಗಳನ್ನು ಮುಚ್ಚುವುದು, ಸಂಚಾರ ಸರಾಗಗೊಳಿಸುವ ಕ್ರಮಗಳು ಒಳಗೊಂಡಂತೆ ತಕ್ಷಣದ ಅಲ್ಪಾವಧಿಯ ಸರಿಪಡಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ರಸ್ತೆ ಜ್ಯಾಮಿತೀಯ ಸುಧಾರಣೆ, ಜಂಕ್ಷನ್ ಸುಧಾರಣೆಗಳು, ಕ್ಯಾರೇಜ್‌ವೇಯ ಸ್ಥಳ ಅಗಲೀಕರಣ, ಅಂಡರ್‌ಪಾಸ್‌ಗಳು/ಓವರ್‌ಪಾಸ್‌ಗಳ ನಿರ್ಮಾಣ ಮುಂತಾದ ದೀರ್ಘಕಾಲೀನ ಸರಿಪಡಿಸುವ ಕ್ರಮಗಳನ್ನು ಸಹ ಸ್ಥಳ ತನಿಖೆಗಳ ಆಧಾರದ ಮೇಲೆ ಅಂತಹ ಬ್ಲ್ಯಾಕ್ ಸ್ಪಾಟ್ ಗಳಲ್ಲಿ  ತೆಗೆದುಕೊಳ್ಳಲಾಗುತ್ತದೆ.

 

xi. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ (NH) ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆ (RSA) ಅನ್ನು ಎಲ್ಲಾ ಹಂತಗಳಲ್ಲಿ ಅಂದರೆ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ ಇತ್ಯಾದಿಗಳಲ್ಲಿ ಮೂರನೇ ವ್ಯಕ್ತಿಯ ಲೆಕ್ಕಪರಿಶೋಧಕರು/ತಜ್ಞರ ಮೂಲಕ ಕಡ್ಡಾಯಗೊಳಿಸಲಾಗಿದೆ.\

 

xii. ರಸ್ತೆ ಮಾಲೀಕತ್ವದ ಏಜೆನ್ಸಿಗಳ ಪ್ರತಿಯೊಂದು ಪ್ರಾದೇಶಿಕ ಕಚೇರಿಯಲ್ಲಿ ಆರ್.ಎಸ್.ಎ. ಮತ್ತು ಇತರ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳಲು ರಸ್ತೆ ಸುರಕ್ಷತಾ ಅಧಿಕಾರಿಯನ್ನು (ಆರ್.ಎಸ್.ಒ.-RSO) ನೇಮಿಸಲಾಗುತ್ತದೆ.

 

xiii. ಚಾಲಕರಿಗೆ ಸುಧಾರಿತ ಗೋಚರತೆ ಮತ್ತು ಅರ್ಥಗರ್ಭಿತ ಮಾರ್ಗದರ್ಶನವನ್ನು ನೀಡಲು ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಜ್ಞಾ ಫಲಕಗಳನ್ನು ಅಳವಡಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

 

xiv. ದೇಶಾದ್ಯಂತ ರಸ್ತೆ ಅಪಘಾತಗಳ ಡೇಟಾವನ್ನು ವರದಿ ಮಾಡುವುದು, ನಿರ್ವಹಿಸುವುದು ಮತ್ತು ವಿಶ್ಲೇಷಿಸುವುದಕ್ಕೆ ಕೇಂದ್ರ ಭಂಡಾರವನ್ನು ಸ್ಥಾಪಿಸಲು ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ (ಇ-ಡಿಎಆರ್) ಕಾರ್ಯಮಗ್ನವಾಗಿದೆ.

 

Xv ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಮತ್ತು ರಸ್ತೆ ಸುರಕ್ಷತೆಯ ಜಾರಿಗಾಗಿ ನಿಯಮಗಳನ್ನು ಹೊರಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ನಗರಗಳ ನಿರ್ಣಾಯಕ ಜಂಕ್ಷನ್ ಗಳಲ್ಲಿ ಹೆಚ್ಚಿನ ಅಪಾಯ ಮತ್ತು ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ಗಳಲ್ಲಿ ಎಲೆಕ್ಟ್ರಾನಿಕ್ ಜಾರಿ ಸಾಧನಗಳನ್ನು ಸ್ಥಾಪಿಸಲು ನಿಯಮಗಳು ವಿವರವಾದ ನಿಬಂಧನೆಗಳನ್ನು ನಿರ್ದಿಷ್ಟಪಡಿಸುತ್ತವೆ. ದೇಶದಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿನ ಜಂಕ್ಷನ್‌ಗಳು ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್.ಸಿ.ಎ.ಪಿ.-NCAP) ಅಡಿಯಲ್ಲಿರುವ ನಗರಗಳು ಇದರಡಿಗೆ ಬರುತ್ತವೆ.

 

xvi. ರಾಷ್ಟ್ರೀಯ ಹೆದ್ದಾರಿಗಳ ಪೂರ್ಣಗೊಂಡ ಕಾರಿಡಾರ್‌ಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿ/ತುರ್ತು ವೈದ್ಯಕೀಯ ತಂತ್ರಜ್ಞರು/ನರ್ಸ್ ಹೊಂದಿರುವ ಆಂಬ್ಯುಲೆನ್ಸ್‌ಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವಕಾಶ ಕಲ್ಪಿಸಿದೆ.

 

xvii. ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆ ಯೋಜನೆ, 2025 ಅನ್ನು ಮೇ 5, 2025 ರಂದು ಪ್ರಕಟಿಸಲಾಗಿದೆ. ಪ್ರಕ್ರಿಯೆಯ ಮುನ್ನಡೆ, ಪಾಲುದಾರಗ್ ಅನ್ವಯಿಸಿದ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳು ಮತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಒಳಗೊಂಡ ವಿವರವಾದ ಮಾರ್ಗಸೂಚಿಗಳನ್ನು ಜೂನ್ 4, 2025 ರಂದು ಅಧಿಸೂಚಿಸಲಾಗಿದೆ.

 

xviii. ಉತ್ತಮ ಸಮಾಜಸೇವೆಕರ ರಕ್ಷಣೆಗಾಗಿ, ಸ್ವಯಂಪ್ರೇರಣೆಯಿಂದ ಮತ್ತು ಯಾವುದೇ ಪ್ರತಿಫಲ ಅಥವಾ ಪರಿಹಾರದ ನಿರೀಕ್ಷೆಯಿಲ್ಲದೆ, ಸಂತ್ರಸ್ತರಿಗೆ  ಅಪಘಾತದ ಸ್ಥಳದಲ್ಲಿ ತುರ್ತು ವೈದ್ಯಕೀಯ ಅಥವಾ ವೈದ್ಯಕೀಯೇತರ ಆರೈಕೆ ಅಥವಾ ಸಹಾಯವನ್ನು ನೀಡುವ ಪರೋಪಕಾರಿ ಅಥವಾ ಅಂತಹ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಸಂಬಂಧಿಸಿ  ಯೋಜನೆಯ ಮಾರ್ಗಸೂಚಿಗಳನ್ನು (ರಾಹ್-ವೀರ್ ಎಂದು ಹೆಸರಿಸಲಾಗಿದೆ) ಪರಿಷ್ಕರಿಸಲಾಗಿದೆ. ಯೋಜನೆಯ ಪ್ರಕಾರ, ರಾಹ್-ವೀರ್‌ಗೆ ನೀಡುವ ಬಹುಮಾನವನ್ನು ರೂ. 5,000 ರಿಂದ ರೂ. 25,000 ಕ್ಕೆ ಹೆಚ್ಚಿಸಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಜೈರಾಮ್ ಗಡ್ಕರಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 

******

 


(ಪ್ರಕಟಣೆ ಐ.ಡಿ.: 2223520) ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी