ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯು ವಿವಿಧ ಪಾಲುದಾರರನ್ನು ಸಜ್ಜುಗೊಳಿಸಿ ಪಾಲ್ಗೊಳ್ಳಿಸುವ ಮೂಲಕ ಅದೊಂದು ನೀತಿ ಉಪಕ್ರಮಗಳಿಂದ ರಾಷ್ಟ್ರೀಯ ಚಳವಳಿಯಾಗಿ ರೂಪಾಂತರಗೊಂಡಿದೆ
ಪ್ರಕಟಣಾ ದಿನಾಂಕ:
04 FEB 2026 1:24PM by PIB Bengaluru
ಮಕ್ಕಳ ಲಿಂಗಾನುಪಾತ (ಸಿ.ಎಸ್.ಆರ್.) ಮತ್ತು ಜೀವನ ಚಕ್ರದ ನಿರಂತರತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು “ಬೇಟಿ ಬಚಾವೋ ಬೇಟಿ ಪಡಾವೋ (ಬಿಬಿಬಿಪಿ) “ಯೋಜನೆಯನ್ನು ಜನವರಿ 22, 2015 ರಂದು ಪ್ರಾರಂಭಿಸಲಾಯಿತು. ಸರ್ಕಾರಿ ಸಂಸ್ಥೆಗಳು, ಮಾಧ್ಯಮ, ನಾಗರಿಕ ಸಮಾಜ ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರನ್ನು ಸಜ್ಜುಗೊಳಿಸುವ ಮೂಲಕ “ಬೇಟಿ ಬಚಾವೋ ಬೇಟಿ ಪಡಾವೋ (ಬಿಬಿಬಿಪಿ)” ಯೋಜನೆಯು, ನೀತಿ ಉಪಕ್ರಮದಿಂದ ರಾಷ್ಟ್ರೀಯ ಚಳವಳಿಯಾಗಿ ರೂಪಾಂತರಗೊಂಡಿದೆ.
ನೀತಿ ಆಯೋಗವು 2019 ರಿಂದ 2024 ರವರೆಗಿನ ಹಣಕಾಸು ವರ್ಷಗಳ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆಗಳ ಮೂರನೇ ವ್ಯಕ್ತಿಯ ಮೌಲ್ಯಮಾಪನವನ್ನು ನಡೆಸಿದೆ. ಬಿಬಿಬಿಪಿ ಸೇರಿದಂತೆ ಮಿಷನ್ ಶಕ್ತಿಯ ಸಂಬಾಲ್ ಹೆಚ್ಚು ಪ್ರಸ್ತುತವಾಗಿದೆ ಮತ್ತು ಸಂಯೋಜಿತ ಮತ್ತು ಡೇಟಾ-ಚಾಲಿತ ಸೇವೆಗಳ ಮೂಲಕ ಪ್ರಮುಖ ಲಿಂಗ ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ ಎಂದು ಈ ಕುರಿತು ಅಧ್ಯಯನವು ಕಂಡುಹಿಡಿದಿದೆ. ಮೌಲ್ಯಮಾಪನವು ಪ್ರಾಯೋಗಿಕ ಮಿಶ್ರ-ವಿಧಾನಗಳ ವಿಧಾನವನ್ನು ಅಳವಡಿಸಿಕೊಂಡಿದ್ದು, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಶೋಧನೆಗಳನ್ನು ಒಟ್ಟುಗೂಡಿಸಿ ನಿರ್ಣಯಿಸಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂಒಎಚ್.ಎಫ್.ಡಬ್ಲ್ಯೂ) ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ (ಎಚ್.ಎಂ.ಐ.ಎಸ್) ಇತ್ತೀಚಿನ ವರದಿಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಜನನದ ಸಮಯದಲ್ಲಿ ಲಿಂಗಾನುಪಾತ (ಎಸ್.ಆರ್.ಬಿ) 2014-15 ರಲ್ಲಿದ್ದ 918 ರಿಂದ 2024-25ರಲ್ಲಿ ಅದು 929 ಕ್ಕೆ ಏರಿದೆ. ಶಿಕ್ಷಣ ಸಚಿವಾಲಯದ ಯುಡಿಐಎಸ್ ದತ್ತಾಂಶದ ಪ್ರಕಾರ, ಮಾಧ್ಯಮಿಕ ಹಂತದಲ್ಲಿ ಶಾಲೆಗಳಲ್ಲಿ ಹುಡುಗಿಯರ ಒಟ್ಟು ದಾಖಲಾತಿ ಅನುಪಾತವು 2014-15 ರಲ್ಲಿದ್ದ 75.51% ರಿಂದ 2024-25 ರಲ್ಲಿ ಅದು 80.2% ಕ್ಕೆ ಏರಿಕೆ ಕಂಡಿದೆ.
ಈ ಮಾಹಿತಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2223035)
ವಿಸಿಟರ್ ಕೌಂಟರ್ : 5