ಕೃಷಿ ಸಚಿವಾಲಯ
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ವಾರ್ಷಿಕವಾಗಿ 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು(ಎಂ ಎಸ್ ಪಿ)ಗಳನ್ನು ನಿಗದಿಪಡಿಸುತ್ತದೆ
ಪ್ರಕಟಣಾ ದಿನಾಂಕ:
03 FEB 2026 8:12PM by PIB Bengaluru
ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು/ ಇಲಾಖೆಗಳ ಅಭಿಪ್ರಾಯಗಳನ್ನು ಪರಿಗಣಿಸಿ, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ, ಪ್ರತಿ ವರ್ಷ, ಕೇಂದ್ರ ಸರ್ಕಾರವು ದೇಶಾದ್ಯಂತ 22 ಕಡ್ಡಾಯ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂ. ಎಸ್. ಪಿ.ಗಳು) ನಿಗದಿಪಡಿಸುತ್ತದೆ. 22 ಕಡ್ಡಾಯ ಬೆಳೆಗಳಲ್ಲಿ 14 ಖಾರಿಫ್ ಬೆಳೆಗಳು ಸೇರಿವೆ. ಭತ್ತ, ಜೋಳ, ಬಾಜ್ರಾ, ಮೆಕ್ಕೆಜೋಳ, ರಾಗಿ, ತೊಗರಿಬೇಳೆ (ಅರ್ಹಾರ್), ಹೆಸರುಕಾಳು, ಉದ್ದು, ನೆಲಗಡಲೆ, ಸೋಯಾಬೀನ್, ಸೂರ್ಯಕಾಂತಿ, ಎಳ್ಳು, ನೈಗರ್ ಬೀಜ, ಹತ್ತಿ ಮತ್ತು 6 ರಬಿ ಬೆಳೆಗಳು ಅಂದರೆ ಗೋಧಿ, ಬಾರ್ಲಿ, ಕಡಲೆ, ಮಸೂರ್ (ಮಸೂರ), ರಾಪ್ಸೀಡ್ ಮತ್ತು ಸಾಸಿವೆ, ಕುಸುಬೆ ಮತ್ತು ಎರಡು ವಾಣಿಜ್ಯ ಬೆಳೆಗಳು ಅಂದರೆ ಸೆಣಬು ಮತ್ತು ಕೊಪ್ಪರ (ಕೊಪ್ರಾ) ಇದರಲ್ಲಿ ಸೇರಿವೆ.
2018-19ರ ಕೇಂದ್ರ ಬಜೆಟ್ ನಲ್ಲಿ, ಉತ್ಪಾದನಾ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆಗಳನ್ನು ಕಾಯ್ದುಕೊಳ್ಳುವ ಪೂರ್ವನಿರ್ಧರಿತ ತತ್ವವನ್ನು ಘೋಷಿಸಿತ್ತು. ಅದರಂತೆ, 2018-19ನೇ ಸಾಲಿನಿಂದ, ಎಲ್ಲಾ ಕಡ್ಡಾಯ ಖಾರಿಫ್, ರಬಿ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗಳನ್ನು ( ಎಂ ಎಸ್ ಪಿ) ಕೇಂದ್ರ ಸರ್ಕಾರ ಹೆಚ್ಚಿಸಿದೆ, ಇದು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಹೆಚ್ಚಿನ ಆದಾಯವನ್ನು ನೀಡುತ್ತದೆ.
ಹೆಚ್ಚಿದ ಕನಿಷ್ಠ ಬೆಂಬಲ ಬೆಲೆಗಳು ( ಎಂ ಎಸ್ ಪಿ) ದೇಶದ ರೈತರಿಗೆ ಪ್ರಯೋಜನವನ್ನು ನೀಡಿದೆ, ಇದು ಖರೀದಿ ಮತ್ತು ರೈತರಿಗೆ ಪಾವತಿಸಿದ ಕನಿಷ್ಠ ಬೆಂಬಲ ಬೆಲೆಗಳ ( ಎಂ ಎಸ್ ಪಿ) ಮೊತ್ತದ ದತ್ತಾಂಶದಿಂದ ಸ್ಪಷ್ಟವಾಗಿದೆ. ಬೆಳೆ ವರ್ಷ 2022-23 ರಿಂದ 2024-25 ರವರೆಗೆ ರೈತರಿಗೆ ಪಾವತಿಸಲಾದ ಖರೀದಿ ಮತ್ತು ಕನಿಷ್ಠ ಬೆಂಬಲ ಬೆಲೆಗಳ ( ಎಂ ಎಸ್ ಪಿ) ಮೊತ್ತದ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ:
ಕನಿಷ್ಠ ಬೆಂಬಲ ಬೆಲೆಗಳ (ಎಂ ಎಸ್ ಪಿ) ಬೆಳೆಗಳ ಖರೀದಿ ಮತ್ತು ಕನಿಷ್ಠ ಬೆಂಬಲ ಬೆಲೆಗಳ ( ಎಂ ಎಸ್ ಪಿ) ಮೌಲ್ಯ ಮತ್ತು ಖರೀದಿ
|
ಎಲ್ಲಾ ಕನಿಷ್ಠ ಬೆಂಬಲ ಬೆಲೆಗಳ (ಎಂ ಎಸ್ ಪಿ) ಬೆಳೆಗಳು
|
2022-23
|
2023-24
|
2024-25
|
|
ಒಟ್ಟು ಖರೀದಿ
(ಎಲ್.ಎಂ.ಟಿಯಲ್ಲಿ)
|
1,118
|
1,089
|
1,223
|
|
ಒಟ್ಟು ಎಂ ಎಸ್ ಪಿ ಮೌಲ್ಯ
(ಲಕ್ಷ ಕೋಟಿಗಳಲ್ಲಿ)
|
2.47
|
2.63
|
3.47
|
ಈ ಮಾಹಿತಿಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2222906)
ವಿಸಿಟರ್ ಕೌಂಟರ್ : 17