ಕೃಷಿ ಸಚಿವಾಲಯ
azadi ka amrit mahotsav

ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಕೃಷಿ ರಫ್ತಿಗೆ ಕೇಂದ್ರ ಸರ್ಕಾರದ ಉತ್ತೇಜನ

ಪ್ರಕಟಣಾ ದಿನಾಂಕ: 03 FEB 2026 8:08PM by PIB Bengaluru

ಕೃಷಿ ಮತ್ತು ಸಂಬಂಧಿತ ಸರಕುಗಳ ರಫ್ತು ಹೆಚ್ಚಿಸಲು ಮತ್ತು ಜಾಗತಿಕ ವ್ಯಾಪಾರದಲ್ಲಿ ತನ್ನ ಪಾಲನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. 2024-25ರಲ್ಲಿ ಈ ಉತ್ಪನ್ನಗಳ ಒಟ್ಟಾರೆ ರಫ್ತು  51.9 ಬಿಲಿಯನ್ ಡಾಲರ್ ಆಗಿತ್ತು

ಕೃಷಿ ಸರಕುಗಳ ರಫ್ತನ್ನು ಬೆಂಬಲಿಸಲು, ಕೇಂದ್ರ ವಾಣಿಜ್ಯ ಇಲಾಖೆಯ ಅಡಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೇಡಾ) ಮೂಲಕ ಉಪಕ್ರಮಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಉಪಕ್ರಮಗಳಲ್ಲಿ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿ, ನವೀನ ಮತ್ತು ಸ್ವಯಂಚಾಲಿತ ಯಂತ್ರೋಪಕರಣಗಳ ಅಳವಡಿಕೆ, ಹೊಸ ಮೌಲ್ಯವರ್ಧಿತ ಉತ್ಪನ್ನ ಅಭಿವೃದ್ಧಿಯ ಪ್ರೋತ್ಸಾಹ, ಗುಣಮಟ್ಟದ ಅಭಿವೃದ್ಧಿ, ಮಾರುಕಟ್ಟೆ ಅಭಿವೃದ್ಧಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸುವಲ್ಲಿ ಕಾರ್ಯಪಡೆಯನ್ನು ಕೌಶಲ್ಯಗೊಳಿಸಲು ತರಬೇತಿ ಕಾರ್ಯಕ್ರಮಗಳು ಸೇರಿವೆ. ಇಂತಹ ಕ್ರಮಗಳು ಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ.

ಅಪೇಡಾ ಮೂಲಕ ವಾಣಿಜ್ಯ ಇಲಾಖೆಯು ದೇಶಾದ್ಯಂತದ ತನ್ನ ಸದಸ್ಯ ರಫ್ತುದಾರರಿಗೆ ತನ್ನ ಹಣಕಾಸು ಸಹಾಯ ಯೋಜನೆ (ಫಾಸ್) ಮೂಲಕ ನಿಗದಿತ ಉತ್ಪನ್ನಗಳ ರಫ್ತು ಪ್ರಚಾರಕ್ಕಾಗಿ ಹಣಕಾಸಿನ ನೆರವು ನೀಡುತ್ತದೆ.  ಈ ಯೋಜನೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

I. ರಫ್ತು ಮೂಲಸೌಕರ್ಯ ಅಭಿವೃದ್ಧಿ
II. ಗುಣಮಟ್ಟದ ಅಭಿವೃದ್ಧಿ
III. ಮಾರುಕಟ್ಟೆ ಅಭಿವೃದ್ಧಿ

ಹಣಕಾಸಿನ ನೆರವು ಮಾರ್ಗಸೂಚಿಗಳ ವಿವರಗಳು ಅಪೇಡಾ ದ ವೆಬ್‌ಸೈಟ್ www.apeda.gov.in ನಲ್ಲಿ “ಯೋಜನೆ” ಟ್ಯಾಬ್ ಅಡಿಯಲ್ಲಿ ಲಭ್ಯವಿದೆ.

ಈ ಮಾಹಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2222904) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil