ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿ ಮತ್ತು ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿ  ಪರೀಕ್ಷಾ ಯೋಧರೊಂದಿಗೆ ನಡೆದ ವಿಶೇಷ “ಪರೀಕ್ಷಾ ಪೇ ಚರ್ಚಾ” ಸಂಚಿಕೆಯನ್ನು ವೀಕ್ಷಿಸಲು ಪ್ರಧಾನಮಂತ್ರಿ ಅವರು ಎಲ್ಲರಿಗೂ ಕರೆ ನೀಡಿದ್ದಾರೆ

ಪ್ರಕಟಣಾ ದಿನಾಂಕ: 03 FEB 2026 2:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 6, 2026 ರಂದು ಭಾರತದ ಯುವಕರ ಈ ಆಕರ್ಷಕ ಸಂಭಾಷಣೆಗಳು ಮತ್ತು ಸಾಮೂಹಿಕ ಮನೋಭಾವವನ್ನು ವೀಕ್ಷಿಸಲು ವಿಶೇಷ “ಪರೀಕ್ಷಾ ಪೇ ಚರ್ಚಾ” ಸಂಚಿಕೆಗೆ ನಾಗರಿಕರನ್ನು ಇಂದು ಆಹ್ವಾನಿಸಿದ್ದಾರೆ.

ಪರೀಕ್ಷಾ ಕಾಲ ಸಮೀಪಿಸುತ್ತಿದ್ದಂತೆ, ಪ್ರಧಾನಮಂತ್ರಿ ಅವರು ಮತ್ತೊಮ್ಮೆ “ಪರೀಕ್ಷಾ ಪೇ ಚರ್ಚಾ” ಮೂಲಕ ಯುವ ವಿದ್ಯಾರ್ಥಿಗಳೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ಈ ವರ್ಷ, ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿ ಮತ್ತು ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿ “ಪರೀಕ್ಷಾ ಯೋಧ”ರೊಂದಿಗೆ ಸಂವಾದಾತ್ಮಕ ವಿಶೇಷ ಅವಧಿಯ ಕಾರ್ಯಕ್ರಮಗಳನ್ನು ನಡೆಸಲಾಯಿತು.

ವಿದ್ಯಾರ್ಥಿಗಳ ಉತ್ಸಾಹ ಮತ್ತು ಮುಕ್ತತೆಯನ್ನು ಗಮನಿಸಿದ ಪ್ರಧಾನಮಂತ್ರಿಯವರು “ಈ ಅನುಭವವನ್ನು ಉಲ್ಲಾಸಕರ ಮತ್ತು ಸ್ಪೂರ್ತಿದಾಯಕ” ಎಂದು ಬಣ್ಣಿಸಿದರು. ಒತ್ತಡ-ಮುಕ್ತ ಪರೀಕ್ಷೆಗಳ ಮಹತ್ವವನ್ನು ತಿಳಿಯಪಡಿಸಿದರು ಮತ್ತು ಸವಾಲುಗಳನ್ನು ನಿವಾರಿಸುವುದು, ಸಮತೋಲನವನ್ನು ಕಾಪಾಡಿಕೊಳ್ಳುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಬಗ್ಗೆ ತಮ್ಮ ಪ್ರಾಯೋಗಿಕ ಒಳನೋಟಗಳನ್ನು ಹಾಗೂ ಅನುಭವಗಳನ್ನು ಹಂಚಿಕೊಂಡರು.

ಎಕ್ಸ್ ತಾಣದ ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

"ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ  #ParikshaPeCharcha ಕೂಡ ಮರಳಿದೆ!

ಈ ಬಾರಿ, ದೇವಮೋಗ್ರ, ಕೊಯಮತ್ತೂರು, ರಾಯ್‌ಪುರ, ಗುವಾಹಟಿಯಲ್ಲಿ ಮತ್ತು ದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ  #ExamWarriors ಗಳ ಜೊತೆಗೆ ಚರ್ಚಾ ಕಾರ್ಯಕ್ರಮ ನಡೆಯಿತು. ಪ್ರತಿಬಾರಿಯಂತೆ, ನನ್ನ ಯುವ ಸ್ನೇಹಿತರೊಂದಿಗೆ ಸಂವಹನ ನಡೆಸುವುದು ಮತ್ತು ಒತ್ತಡ ರಹಿತ ಪರೀಕ್ಷೆಗಳು ಹಾಗೂ ಹಲವಾರು ಇತರ ವಿಷಯಗಳನ್ನು ಚರ್ಚಿಸುವುದು ಉಲ್ಲಾಸಕರವಾಗಿದೆ."

 

*****

 


(ಪ್ರಕಟಣೆ ಐ.ಡಿ.: 2222536) ವಿಸಿಟರ್ ಕೌಂಟರ್ : 25