ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪ್ರಭಾವ, ಸಾರ್ವಭೌಮ ಮಾದರಿಗಳು ಮತ್ತು ಸುರಕ್ಷತಾ ಚೌಕಟ್ಟುಗಳನ್ನು ಪ್ರದರ್ಶಿಸಲಿರುವ ಭಾರತ
ನಮ್ಮ ಬಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಿಂದಾಗಿ ಭಾರತವು ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಿ ಕ್ರಮೇಣ ಹೊರಹೊಮ್ಮುತ್ತಿದೆ: ದಾವೋಸ್ ನಲ್ಲಿ ಭಾರತ
ಭಾರತವು 2030 ರ ವೇಳೆಗೆ 7 ನ್ಯಾನೊಮೀಟರ್ ತಂತ್ರಜ್ಞಾನವನ್ನು ಮತ್ತು 2032ರ ವೇಳೆಗೆ 3 ನ್ಯಾನೊಮೀಟರ್ ತಂತ್ರಜ್ಞಾನವನ್ನು ಹೊಂದಲಿದೆ: ದಾವೋಸ್ ನಲ್ಲಿ ಭಾರತ
ನಮ್ಮ ನಾಲ್ಕು ಘಟಕಗಳು ಇದೇ ವರ್ಷದಿಂದ ಉನ್ನತ ತಂತ್ರಜ್ಞಾನದ ಸ್ವದೇಶಿ ಚಿಪ್ ಉತ್ಪಾದನೆಯನ್ನು ಪ್ರಾರಂಭಿಸಲಿವೆ: ಶ್ರೀ ಅಶ್ವಿನಿ ವೈಷ್ಣವ್
प्रविष्टि तिथि:
21 JAN 2026 4:13PM by PIB Bengaluru
ದಾವೋಸ್ ನಲ್ಲಿ ನಡೆಯುತ್ತಿರುವ 2026 ರ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಸಂದರ್ಭದಲ್ಲಿ ನಡೆದ ವಿವಿಧ ಸಂವಾದಗಳಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಕೃತಕ ಬುದ್ಧಿಮತ್ತೆ (ಎಐ), ಸೆಮಿಕಂಡಕ್ಟರ್ ಮತ್ತು ಡೀಪ್ ಟೆಕ್ ನಾವೀನ್ಯತೆಗಳ ಬಗ್ಗೆ ಭಾರತದ ಸಮಗ್ರ ದೃಷ್ಟಿಕೋನವನ್ನು ಹಂಚಿಕೊಂಡರು.
ಫಲಿತಾಂಶ, ಜಾಗತಿಕ ದಕ್ಷಿಣ ಮತ್ತು ಸುರಕ್ಷತೆಯ ಮೇಲೆ ಎಐ ಇಂಪ್ಯಾಕ್ಟ್ ಶೃಂಗಸಭೆ ಗಮನ
ಮುಂಬರುವ 'ಎಐ ಇಂಪ್ಯಾಕ್ಟ್ ಶೃಂಗಸಭೆ' ಯನ್ನು ಫಲಿತಾಂಶಗಳ ಮೇಲೆ ಸ್ಪಷ್ಟ ಗಮನವಿಟ್ಟು ವಿನ್ಯಾಸಗೊಳಿಸಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಈ ಶೃಂಗಸಭೆಯ ಮೊದಲ ಉದ್ದೇಶ 'ಪ್ರಭಾವ' ಆಗಿದೆ—ಅಂದರೆ ಎಐ ಮಾದರಿಗಳು, ಅಪ್ಲಿಕೇಶನ್ ಗಳು ಮತ್ತು ಒಟ್ಟಾರೆ ಎಐ ಪರಿಸರ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆರ್ಥಿಕತೆಯ ಮೇಲೆ ಗುಣಕ ಪರಿಣಾಮವನ್ನು ಬೀರಲು ಹೇಗೆ ಬಳಸಬಹುದು ಎಂಬುದಾಗಿದೆ ಎಂದು ಹೇಳಿದರು.
ಎರಡನೇ ಉದ್ದೇಶವು 'ಲಭ್ಯತೆ', ವಿಶೇಷವಾಗಿ ಭಾರತ ಮತ್ತು ಜಾಗತಿಕ ದಕ್ಷಿಣದ ದೇಶಗಳಿಗೆ ತಲುಪಿಸುವುದು. ಯುಪಿಐ) ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ನಿರ್ಮಿಸುವಲ್ಲಿ ಭಾರತದ ಯಶಸ್ಸನ್ನು ಉಲ್ಲೇಖಿಸಿದ ಅವರು, ಎಐಗಾಗಿ ಅಂತಹುದೇ ವಿಸ್ತರಿಸಬಹುದಾದ ಮತ್ತು ಕೈಗೆಟುಕುವ ವ್ಯವಸ್ಥೆಯನ್ನು ರಚಿಸಲು ಸಾಧ್ಯವೇ ಎಂದು ಇಡೀ ವಿಶ್ವವೇ ಈಗ ಭಾರತದತ್ತ ನೋಡುತ್ತಿದೆ ಎಂದರು.
ಎಐ ಇಂಪ್ಯಾಕ್ಟ್ ಶೃಂಗಸಭೆಯ ಮೂರನೇ ಉದ್ದೇಶ 'ಸುರಕ್ಷತೆ' ಎಂದು ಸಚಿವರು ಹೇಳಿದರು. ಸೂಕ್ತವಾದ ಮಾರ್ಗಸೂಚಿಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ನಿರ್ಮಿಸುವ ಮೂಲಕ ಎಐ ಬಗೆಗಿನ ಆತಂಕಗಳನ್ನು ಹೋಗಲಾಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಎಐಗಾಗಿ ನಿಯಂತ್ರಕ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಸಹ ಭಾರತದಲ್ಲೇ ನಿರ್ಮಿಸಬೇಕು ಎಂದು ಅವರು ಪ್ರತಿಪಾದಿಸಿದರು. ಜಾಗತಿಕ ನಾಯಕರು ಮತ್ತು ತಂತ್ರಜ್ಞಾನ ನಾಯಕರು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ, ಅದರೊಂದಿಗೆ ಹೂಡಿಕೆ ಘೋಷಣೆಗಳು ಮತ್ತು ಭಾರತದ ಎಐ ಮಾದರಿಗಳ ಬಿಡುಗಡೆಯೂ ನಡೆಯಲಿದೆ ಎಂದು ತಿಳಿಸಿದರು.
ನವೋದ್ಯಮ ಬೆಳವಣಿಗೆ ಮತ್ತು ಡೀಪ್ ಟೆಕ್ ವೇಗ
ಭಾರತವು ಈಗ ಸುಮಾರು 2,00,000 ನವೋದ್ಯಮಗಳನ್ನು ಹೊಂದಿದೆ ಮತ್ತು ಜಾಗತಿಕವಾಗಿ ಅಗ್ರ ಮೂರು ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕಳೆದ ದಶಕದಲ್ಲಿ ಒಂದು ಮೂಲಭೂತ ಬದಲಾವಣೆಯಾಗಿದ್ದು, ಡೀಪ್ ಟೆಕ್ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.
24 ಭಾರತೀಯ ನವೋದ್ಯಮಗಳು ಚಿಪ್ ಗಳನ್ನು ವಿನ್ಯಾಸಗೊಳಿಸುತ್ತಿವೆ, ಇದು ನವೋದ್ಯಮಗಳಿಗೆ ಅತ್ಯಂತ ಸವಾಲಿನ ಕ್ಷೇತ್ರಗಳಲ್ಲಿ ಒಂದಾಗಿದೆ. ಇವುಗಳಲ್ಲಿ 18 ನವೋದ್ಯಮಗಳು ಈಗಾಗಲೇ ವೆಂಚರ್ ಕ್ಯಾಪಿಟಲ್ ಫಂಡಿಂಗ್ ಪಡೆದಿವೆ, ಇದು ಭಾರತದ ಡೀಪ್-ಟೆಕ್ ಸಾಮರ್ಥ್ಯಗಳ ಮೇಲಿನ ಬಲವಾದ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಉಲ್ಲೇಖಿಸಿದರು.
ಸೆಮಿಕಂಡಕ್ಟರ್ ಗಳಿಗೆ ಮಾರ್ಗಸೂಚಿ
ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರವನ್ನು ವಿವರಿಸಿದ ಶ್ರೀ ವೈಷ್ಣವ್, ಜಾಗತಿಕ ಚಿಪ್ ಪ್ರಮಾಣದ ಸುಮಾರು 75 ಪ್ರತಿಶತವು 28nm (ನ್ಯಾನೋ ಮೀಟರ್) ನಿಂದ 90nm ವ್ಯಾಪ್ತಿಯಲ್ಲಿದೆ. ಇವು ಎಲೆಕ್ಟ್ರಿಕ್ ವಾಹನಗಳು, ಆಟೋಮೊಬೈಲ್ ಗಳು, ರೈಲ್ವೆ, ರಕ್ಷಣಾ ವ್ಯವಸ್ಥೆಗಳು, ಟೆಲಿಕಾಂ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ನಲ್ಲಿ ಬಳಕೆಯಾಗುತ್ತವೆ ಎಂದು ತಿಳಿಸಿದರು. ಸುಧಾರಿತ ತಂತ್ರಜ್ಞಾನಕ್ಕೆ ಹೋಗುವ ಮೊದಲು ಭಾರತವು ಈ ವಿಭಾಗದಲ್ಲಿ ಉತ್ಪಾದನೆಯಲ್ಲಿ ಪರಿಣತಿ ಸಾಧಿಸಲು ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು. ಐಬಿಎಂ ಸೇರಿದಂತೆ ಉದ್ಯಮ ಪಾಲುದಾರರೊಂದಿಗೆ ಕೆಲಸ ಮಾಡುತ್ತಿರುವ ಭಾರತವು 2030 ರ ವೇಳೆಗೆ 28nm ನಿಂದ 7nm ಗೆ ಮತ್ತು 2032 ರ ವೇಳೆಗೆ 3nm ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ವಿಶಾಲವಾದ ಪ್ರತಿಭಾವಂತ ಸಮೂಹ, ಸಂಪೂರ್ಣ ವಿನ್ಯಾಸ ಸಾಮರ್ಥ್ಯಗಳು, ವಿಸ್ತರಿಸುತ್ತಿರುವ ಉತ್ಪಾದನಾ ನೆಲೆ ಮತ್ತು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯನ್ನು ಉಲ್ಲೇಖಿಸಿದ ಅವರು, ಭಾರತವು ಜಾಗತಿಕವಾಗಿ ಅಗ್ರ ನಾಲ್ಕು ಅಥವಾ ಐದು ಸೆಮಿಕಂಡಕ್ಟರ್ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ವೈಷ್ಣವ್ ಅವರು ದಾವೋಸ್ ನಲ್ಲಿ ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರನ್ನು ಭೇಟಿ ಮಾಡಿದರು. ಗೂಗಲ್ ಆಂಧ್ರಪ್ರದೇಶದ ವೈಜಾಗ್ ನಲ್ಲಿ 15 ಬಿಲಿಯನ್ ಡಾಲರ್ ವೆಚ್ಚದ ಎಐ ಡೇಟಾ ಸೆಂಟರ್ ಮತ್ತು ಭಾರತೀಯ ನವೋದ್ಯಮಗಳೊಂದಿಗೆ ಪಾಲುದಾರಿಕೆ ಸೇರಿದಂತೆ ಭಾರತದ ಎಐ ಪರಿಸರ ವ್ಯವಸ್ಥೆಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತಿದೆ. ಅವರು ಮೆಟಾದ (Meta) ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯಲ್ ಕಾಪ್ಲಾನ್ ಅವರನ್ನೂ ಭೇಟಿ ಮಾಡಿ, ಡೀಪ್ ಫೇಕ್ ಮತ್ತು ಎಐನಿಂದ ರಚಿಸಲಾದ ವಿಷಯಗಳಿಂದ ಸಾಮಾಜಿಕ ಮಾಧ್ಯಮ ಬಳಕೆದಾರರ ಸುರಕ್ಷತೆಯ ಬಗ್ಗೆ ಚರ್ಚಿಸಿದರು. ಬಳಕೆದಾರರನ್ನು ರಕ್ಷಿಸಲು ಮೆಟಾ ಕೈಗೊಳ್ಳುತ್ತಿರುವ ಪ್ರಯತ್ನಗಳ ಬಗ್ಗೆ ಸಚಿವರಿಗೆ ವಿವರಿಸಲಾಯಿತು.
ಸಂಪೂರ್ಣ ಎಐ ಸ್ಟ್ಯಾಕ್ ನಲ್ಲಿ ಕೆಲಸ ಮಾಡುತ್ತಿರುವ ಭಾರತ
ಎಐ ಪರಿಸರ ವ್ಯವಸ್ಥೆಯು ಅಪ್ಲಿಕೇಶನ್ ಲೇಯರ್, ಮಾಡೆಲ್ ಲೇಯರ್, ಸೆಮಿಕಂಡಕ್ಟರ್ ಅಥವಾ ಚಿಪ್ ಲೇಯರ್, ಡೇಟಾ ಸೆಂಟರ್ ಗಳಂತಹ ಮೂಲಸೌಕರ್ಯ ಮತ್ತು ಇಂಧನ ಲೇಯರ್ ಎಂಬ ಐದು ಹಂತಗಳನ್ನು ಒಳಗೊಂಡಿದೆ ಎಂದು ಶ್ರೀ ವೈಷ್ಣವ್ ವಿವರಿಸಿದರು. ಭಾರತದ ಆರ್ಥಿಕತೆಯ ಗಾತ್ರ, ತಂತ್ರಜ್ಞಾನದ ಅರಿವಿರುವ ಜನಸಂಖ್ಯೆ ಮತ್ತು ಭಾರತೀಯ ಐಟಿ ಕಂಪನಿಗಳ ಜಾಗತಿಕ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಈ ಐದೂ ಹಂತಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಅಪ್ಲಿಕೇಶನ್ ಮತ್ತು ಬಳಕೆಯ ಹಂತವು ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ಅವರು ಒತ್ತಿಹೇಳಿದರು. ಉದ್ಯಮ ಕೆಲಸದ ಹರಿವುಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಎಐ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಮೂಲಕ ಭಾರತವು ಎಐ ಅಪ್ಲಿಕೇಶನ್ ಗಳಲ್ಲಿ ಮುನ್ನಡೆ ಸಾಧಿಸಬೇಕು ಎಂದರು. ಭಾರತೀಯ ಐಟಿ ಸೇವಾ ಸಂಸ್ಥೆಗಳು ಈಗಾಗಲೇ ಈ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದು, ಎಐ ನೇಮಕಾತಿಯು ಸುಮಾರು 33 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಸಣ್ಣ ಮಾದರಿಗಳು, ಸಾರ್ವಭೌಮ ಸಾಮರ್ಥ್ಯ ಮತ್ತು ದಕ್ಷತೆ
ಇಂದಿನ ಶೇಕಡಾ 95 ರಷ್ಟು ಎಐ ಕೆಲಸದ ಹೊರೆಗಳನ್ನು ಸಣ್ಣ ಮಾದರಿಗಳು ನಿರ್ವಹಿಸುತ್ತವೆ ಮತ್ತು ಹೆಚ್ಚಿನ ಉದ್ಯಮದ ಅಗತ್ಯಗಳಿಗೆ 50-ಬಿಲಿಯನ್-ಪ್ಯಾರಾಮೀಟರ್ ಮಾದರಿಯು ಸಾಕು ಎಂದು ಕೇಂದ್ರ ಸಚಿವರು ತಿಳಿಸಿದರು. ಭಾರತವು ಸುಮಾರು 12 ಕೇಂದ್ರೀಕೃತ ಎಐ ಮಾದರಿಗಳ ಗುಂಪನ್ನು ಅಭಿವೃದ್ಧಿಪಡಿಸುತ್ತಿದೆ, ಇವು ಸಣ್ಣ ಜಿಪಿಯು ಕ್ಲಸ್ಟರ್ ಗಳಲ್ಲಿ ಚಲಿಸಬಲ್ಲವು ಮತ್ತು ಅತಿ ದೊಡ್ಡ ಜನಸಂಖ್ಯೆಗೆ ಕಡಿಮೆ ವೆಚ್ಚದಲ್ಲಿ ಎಐ ಸೇವೆಗಳನ್ನು ನೀಡಬಲ್ಲವುಎಂದು ಶ್ರೀ ವೈಷ್ಣವ್ ತಿಳಿಸಿದರು.
ಸಾರ್ವಭೌಮ ಎಐ ಮಾದರಿಗಳ ಮಹತ್ವವನ್ನು ಹೇಳಿದ ಅವರು, ಜಾಗತಿಕ ಎಐ ಸಂಪನ್ಮೂಲಗಳ ಪ್ರವೇಶಕ್ಕೆ ನಿರ್ಬಂಧ ಹೇರಲ್ಪಟ್ಟ ಸಂದರ್ಭದಲ್ಲಿ ಇಂತಹ ಮಾದರಿಗಳು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯ ಎಂದು ಹೇಳಿದರು. ದಕ್ಷತೆ, ಕೈಗೆಟುಕುವಿಕೆ ಮತ್ತು ಸಾರ್ವಭೌಮತ್ವದ ಮೇಲೆ ಕೇಂದ್ರೀಕೃತವಾಗಿರುವ ಈ ವಿಧಾನವು ಜಾಗತಿಕ ಎಐ ಸ್ಪರ್ಧೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಭಾರತವನ್ನು ಸಜ್ಜುಗೊಳಿಸುತ್ತದೆ. ಈ ಮಾದರಿಗಳಲ್ಲಿ ಹಲವನ್ನು ಈಗಾಗಲೇ ನೈಜ ಜೀವನದ ಪ್ರಕರಣಗಳಲ್ಲಿ ಪರೀಕ್ಷಿಸಲಾಗಿದೆ ಮತ್ತು ಶೀಘ್ರದಲ್ಲೇ ಭಾರತವು ಈ ಸಂಪೂರ್ಣ ಸರಣಿಯ ಮಾದರಿಗಳನ್ನು ಪ್ರಾರಂಭಿಸುವ ಸ್ಥಿತಿಯಲ್ಲಿರುತ್ತದೆ ಎಂದು ಎಂದರು.
ಎಐ ಮೂಲಸೌಕರ್ಯ ಮತ್ತು ಇಂಧನ ಸನ್ನದ್ಧತೆ
ಮೂಲಸೌಕರ್ಯದ ಕುರಿತು ಮಾತನಾಡಿದ ಸಚಿವರು, ಸುಮಾರು 70 ಬಿಲಿಯನ್ ಡಾಲರ್ ಮೌಲ್ಯದ ಎಐ ಮೂಲಸೌಕರ್ಯ ಹೂಡಿಕೆಯನ್ನು ಈಗಾಗಲೇ ಖಚಿತಪಡಿಸಲಾಗಿದೆ ಮತ್ತು ಜಾರಿಗೊಳಿಸಲಾಗುತ್ತಿದೆ ಎಂದರು. ಎಐ ಪರಿಸರ ವ್ಯವಸ್ಥೆಗೆ ಇಂಧನ ಹಂತವು ನಿರ್ಣಾಯಕವಾಗಿದ್ದು, ಭಾರತವು 'ಶಕ್ತಿ ಕಾಯ್ದೆ'ಯ ಮೂಲಕ ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಮುಕ್ತಗೊಳಿಸಿದೆ, ಇದು ಸಂಪೂರ್ಣ ಎಐ ವ್ಯವಸ್ಥೆಯನ್ನು ಬೆಂಬಲಿಸಲಿದೆ ಎಂದು ಹೇಳಿದರು.
ಬಹು-ದಶಕದ ಎಐ ಪ್ರಯಾಣ ಮತ್ತು ನಾವೀನ್ಯತೆ ಸಾಮರ್ಥ್ಯ
ಎಐ ಕ್ರಾಂತಿಯು ಹಲವು ದಶಕಗಳ ಕಾಲ ನಡೆಯಲಿದೆ ಮತ್ತು ವಿಶ್ವವು ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಕೇವಲ ಕೆಲವು ವ್ಯಾಟ್ ವಿದ್ಯುತ್ ನಲ್ಲಿ ಕಾರ್ಯನಿರ್ವಹಿಸುವ ಮಾನವ ಮೆದುಳಿಗೂ ಮತ್ತು ನೂರಾರು ಮೆಗಾವ್ಯಾಟ್ ಬಳಸುವ ಎಐ ಡೇಟಾ ಸೆಂಟರ್ ಗಳಿಗೂ ಹೋಲಿಕೆ ಮಾಡಿದ ಅವರು, ಈ ಅಂತರವು ಭವಿಷ್ಯದ ನಾವೀನ್ಯತೆಗೆ ಇರುವ ದೊಡ್ಡ ಅವಕಾಶವನ್ನು ತೋರಿಸುತ್ತದೆ ಎಂದರು. ಮುಂದಿನ ಪೀಳಿಗೆಯ ಎಐ ಮಾದರಿಗಳನ್ನು ರಚಿಸಲು ಅನೇಕ ಭಾರತೀಯ ನವೋದ್ಯಮಗಳು ಇಂಜಿನಿಯರಿಂಗ್ ಮತ್ತು ದಕ್ಷತೆಯಲ್ಲಿ ಅದ್ಭುತಗಳನ್ನು ಸಾಧಿಸಲು ಗಮನಹರಿಸುತ್ತಿವೆ, ಇದು ದೇಶಕ್ಕೆ ದೊಡ್ಡ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು.
ಬೇಡಿಕೆ ಸೃಷ್ಟಿಕರ್ತನಾಗಿ ಸರ್ಕಾರ ಮತ್ತು ಗಮನಹರಿಸುವ ಕ್ಷೇತ್ರಗಳು
ವಾಣಿಜ್ಯ ಮಾದರಿಗಳು ಸ್ಪಷ್ಟವಾಗಿಲ್ಲದ ಕ್ಷೇತ್ರಗಳಲ್ಲಿ ಸರ್ಕಾರವು ಈಗಾಗಲೇ ಎಐ ಗಾಗಿ 'ಬೇಡಿಕೆ ಸೃಷ್ಟಿಕರ್ತನ' ಪಾತ್ರವನ್ನು ವಹಿಸುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಹವಾಮಾನ ಮುನ್ಸೂಚನೆ, ಕೃಷಿ ಮತ್ತು ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಿಗಾಗಿ ಸರ್ಕಾರವು ಎಐ ಬಳಕೆಗಳ ಮೇಲೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಮುನ್ಸೂಚಕ ಮತ್ತು ತಡೆಗಟ್ಟುವ ಆರೋಗ್ಯ ರಕ್ಷಣೆಯಲ್ಲಿ ಭಾರತಕ್ಕೆ ಜಾಗತಿಕವಾಗಿ ಮುನ್ನಡೆ ಸಾಧಿಸುವ ಅವಕಾಶವಿದೆ ಎಂದರು. ಸಾರ್ವಭೌಮ ಎಐ ಮಾದರಿಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಗಳ ಅಭಿವೃದ್ಧಿಗೆ ಸರ್ಕಾರವು ಧನಸಹಾಯ ನೀಡಲಿದೆ ಮತ್ತು ದೊಡ್ಡ ಮಟ್ಟದ ಮೂಲಸೌಕರ್ಯಗಳ ಮೂಲಕ ಅವುಗಳನ್ನು ಬೆಂಬಲಿಸಲಿದೆ. ಇದು ಎಐ ತಂತ್ರಜ್ಞಾನಗಳ ವ್ಯಾಪಕ ಪ್ರಸರಣಕ್ಕೆ ಮತ್ತು ಪ್ರತಿಭೆಗಳ ಸಿದ್ಧತೆಗೆ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಉದ್ಯಮದ ಸಹಯೋಗ ಮತ್ತು ಕೌಶಲ್ಯ
ಎಐ ಮಿಷನ್ ಅನ್ನು ಸೆಮಿಕಂಡಕ್ಟರ್ ಕಾರ್ಯಕ್ರಮದಂತೆಯೇ ಉದ್ಯಮದೊಂದಿಗೆ ನಿಕಟ ಸಮಾಲೋಚನೆಯ ನಂತರ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಸೆಮಿಕಂಡಕ್ಟರ್ ಗಳು ಮತ್ತು 5ಜಿ ವಿಷಯಗಳಲ್ಲಿ ಮೊದಲು ಮಾಡಿದ ಪ್ರಯತ್ನಗಳಂತೆಯೇ, ಕಾಲೇಜುಗಳಿಂದ ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳು ಉದಯೋನ್ಮುಖ ಎಐ-ಚಾಲಿತ ಕೈಗಾರಿಕಾ ರೂಪಾಂತರಕ್ಕೆ ಉತ್ತಮವಾಗಿ ಸಜ್ಜಾಗಲು, ಎಐ-ಸಿದ್ಧ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಬೆಂಬಲ ನೀಡಬೇಕು ಎಂದು ಉದ್ಯಮದ ನಾಯಕರಿಗೆ ಅವರು ಮನವಿ ಮಾಡಿದರು.
******
(रिलीज़ आईडी: 2217047)
आगंतुक पटल : 14