ರೈಲ್ವೇ ಸಚಿವಾಲಯ
azadi ka amrit mahotsav

ಒಂದು ನಿಲ್ದಾಣ ಒಂದು ಉತ್ಪನ್ನ (ಒ ಎಸ್‌ ಒ ಪಿ): ಭಾರತೀಯ ರೈಲ್ವೆಯ ಮೂಲಕ ಪ್ರಾದೇಶಿಕ ಅನನ್ಯತೆಯ ಆಚರಣೆ


2,000ಕ್ಕೂ ಹೆಚ್ಚು ರೈಲು ನಿಲ್ದಾಣಗಳಿಗೆ ವಿಸ್ತರಿಸಿದ ಒ ಎಸ್‌ ಒ ಪಿ; ಲಕ್ಷಾಂತರ ಪ್ರಯಾಣಿಕರಿಗೆ ನೇರ ಮಾರುಕಟ್ಟೆ ಪ್ರವೇಶ ನೀಡುವ ಮೂಲಕ 1.32 ಲಕ್ಷ ಕುಶಲಕರ್ಮಿಗಳ ಸಬಲೀಕರಣ ಮತ್ತು ಭಾರತದ ಸಾಂಪ್ರದಾಯಿಕ ಕಲೆಗಳ ಪುನರುಜ್ಜೀವನ

प्रविष्टि तिथि: 20 JAN 2026 4:43PM by PIB Bengaluru

ಭಾರತೀಯ ರೈಲ್ವೆಯ 'ಒಂದು ನಿಲ್ದಾಣ ಒಂದು ಉತ್ಪನ್ನ' (ಒ ಎಸ್‌ ಒ ಪಿ) ಯೋಜನೆಯು ಸ್ಥಳೀಯ ಕುಶಲಕರ್ಮಗಳನ್ನು ಉತ್ತೇಜಿಸುವ ಪ್ರಬಲ ವೇದಿಕೆಯಾಗಿ ಹೊರಹೊಮ್ಮಿದೆ. ಇದು ದೇಶಾದ್ಯಂತ ತಳಮಟ್ಟದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಉಪಕ್ರಮವು ರೈಲು ನಿಲ್ದಾಣಗಳನ್ನು ಭಾರತದ ಶ್ರೀಮಂತ ಪ್ರಾದೇಶಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ರೋಮಾಂಚಕ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

ತೆಂಕಶಿ ಜಂಕ್ಷನ್ ರೈಲು ನಿಲ್ದಾಣ, ತಮಿಳುನಾಡು

ಸ್ಥಳೀಯ ಪರಂಪರೆಯನ್ನು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಯೋಜಿಸುವ ಮೂಲಕ, ಒ ಎಸ್‌ ಒ ಪಿ ಪ್ರಯಾಣಿಕರ ಅನುಭವವನ್ನು ಸುಧಾರಿಸುವುದಲ್ಲದೆ, ಎಲ್ಲರನ್ನು ಒಳಗೊಂಡ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

19 ಜನವರಿ 2026ರ ಹೊತ್ತಿಗೆ, 2,002 ನಿಲ್ದಾಣಗಳಲ್ಲಿ ಒ.ಎಸ್‌.ಒ.ಪಿ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 2,326 ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರೊಂದಿಗೆ ನೇರ ಸಂಪರ್ಕವನ್ನು ಹೊಂದಿರುವ ಸಾವಿರಾರು ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಸಣ್ಣ ಉತ್ಪಾದಕರಿಗೆ ಈ ಮಳಿಗೆಗಳು ಜೀವನೋಪಾಯದ ಮೂಲವಾಗಿವೆ. ಇದಲ್ಲದೆ, 2022ರಲ್ಲಿ ಒ.ಎಸ್‌.ಒ.ಪಿ  ಪ್ರಾರಂಭವಾದಾಗಿನಿಂದ, ಈ ಉಪಕ್ರಮವು ಭಾರತದಾದ್ಯಂತ 1.32 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೇರ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿದೆ.

ಕೇವಲ ಅಂಕಿಅಂಶಗಳಿಗಿಂತ ಮಿಗಿಲಾಗಿ, ಒಂದು ಕಾಲದಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದ ಸಾಂಪ್ರದಾಯಿಕ ಕಲೆಗಳು ಮತ್ತು ಪ್ರಾದೇಶಿಕ ವಿಶೇಷತೆಗಳನ್ನು ಪುನರುಜ್ಜೀವನಗೊಳಿಸಲು ಒ ಎಸ್‌ ಒ ಪಿ  ಸಹಾಯ ಮಾಡುತ್ತಿದೆ. ಈಶಾನ್ಯ ಭಾರತದ ಕೈಯಿಂದ ಮಾಡಿದ ಮಣ್ಣಿನ ಮಡಿಕೆಗಳು ಮತ್ತು ಬಿದಿರಿನ ಕೆಲಸಗಳಿಂದ ಹಿಡಿದು, ಇತರ ಪ್ರದೇಶಗಳ ಸಾಂಬಾರ ಪದಾರ್ಥಗಳು, ಕೈಮಗ್ಗಗಳು ಮತ್ತು ಸ್ಥಳೀಯ ಸಿಹಿತಿಂಡಿಗಳವರೆಗೆ, ಈ ಉತ್ಪನ್ನಗಳು ಆಯಾ ಪ್ರದೇಶದ ಸಾರವನ್ನು ಪ್ರಯಾಣಿಕರಿಗೆ ತಲುಪಿಸುತ್ತಿವೆ.

ವಾಣಿಜ್ಯವನ್ನು ಸಂಸ್ಕೃತಿಯೊಂದಿಗೆ ಬೆಸೆಯುವ ಮೂಲಕ, ಭಾರತೀಯ ರೈಲ್ವೆಯು ನಿಲ್ದಾಣಗಳನ್ನು ಸ್ಥಳೀಯ ಉದ್ಯಮಗಳ ಕೇಂದ್ರಗಳನ್ನಾಗಿ ಮಾರ್ಪಡಿಸಿದೆ. 'ಒಂದು ನಿಲ್ದಾಣ ಒಂದು ಉತ್ಪನ್ನ' ಉಪಕ್ರಮವು ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ದೇಶಾದ್ಯಂತ ಪ್ರಯಾಣಿಕರ ಅನುಭವವನ್ನು ಶ್ರೀಮಂತಗೊಳಿಸುವ ಮೂಲಕ "ವೋಕಲ್ ಫಾರ್ ಲೋಕಲ್" (ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ) ಅಭಿಯಾನಕ್ಕೆ ನೈಜ ಉದಾಹರಣೆಯಾಗಿದೆ.

 

*****

 


(रिलीज़ आईडी: 2216467) आगंतुक पटल : 15
इस विज्ञप्ति को इन भाषाओं में पढ़ें: Tamil , English , Urdu , हिन्दी , Marathi , Gujarati