ಗ್ರಾಮೀಣಾಭಿವೃದ್ಧಿ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಕರ ಸಂಕ್ರಾಂತಿ, ಲೋಹ್ರಿ ಮತ್ತು ಪೊಂಗಲ್‌ಗೆ ಶುಭಾಶಯ ಕೋರಿದ್ದಾರೆ
प्रविष्टि तिथि:
13 JAN 2026 7:14PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಕರ ಸಂಕ್ರಾಂತಿ, ಲೋಹ್ರಿ ಮತ್ತು ಪೊಂಗಲ್ ಹಬ್ಬದ ಶುಭ ಸಂದರ್ಭದಲ್ಲಿ ರೈತರು, ಗ್ರಾಮೀಣ ಸಮುದಾಯಗಳು ಮತ್ತು ದೇಶದ ಎಲ್ಲಾ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
ಈ ಹಬ್ಬಗಳು ಭಾರತದ ಶ್ರೀಮಂತ ಕೃಷಿ ಸಂಪ್ರದಾಯಗಳು, ಪ್ರಕೃತಿಯ ಬಗೆಗಿನ ಕೃತಜ್ಞತೆ ಮತ್ತು ರಾಷ್ಟ್ರದ ಬೆನ್ನೆಲುಬಾಗಿರುವ ಕಠಿಣ ಪರಿಶ್ರಮಿ ರೈತರಿಗೆ ಗೌರವವನ್ನು ಸಂಕೇತಿಸುತ್ತವೆ ಎಂದು ಕೇಂದ್ರ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಮಕರ ಸಂಕ್ರಾಂತಿ, ಲೋಹ್ರಿ ಮತ್ತು ಪೊಂಗಲ್ ಅನ್ನು ದೇಶಾದ್ಯಂತ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ ಮತ್ತು ಜನರಲ್ಲಿ ಏಕತೆ, ಸಾಮರಸ್ಯ ಮತ್ತು ಪರಸ್ಪರ ಸಹಕಾರದ ಸಂದೇಶವನ್ನು ಸಾರುತ್ತದೆ.
ಕೃಷಿ ಮತ್ತು ಗ್ರಾಮೀಣ ಜೀವನದೊಂದಿಗೆ ನಿಕಟ ಸಂಬಂಧ ಹೊಂದಿರುವ ಈ ಹಬ್ಬಗಳು ಕಠಿಣ ಪರಿಶ್ರಮ, ಸಮತೋಲನ ಮತ್ತು ಹಂಚಿಕೆಯ ಸಮೃದ್ಧಿಯ ಮೌಲ್ಯಗಳಿಗೆ ಸೂಧಿರ್ತಿ ನೀಡುತ್ತವೆ ಎಂದು ಶ್ರೀ ಚೌಹಾಣ್ ಹೇಳಿದರು. ಈ ಆಚರಣೆಗಳು ರೈತರು ಮತ್ತು ಗ್ರಾಮೀಣ ಕುಟುಂಬಗಳ ಜೀವನದಲ್ಲಿ ಹೊಸ ಸಮೃದ್ಧಿಯನ್ನು ತರುತ್ತವೆ, ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತವೆ ಮತ್ತು ಸಾಮೂಹಿಕ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ ಎಂದು ಕೇಂದ್ರ ಸಚಿವರು ಭರವಸೆ ವ್ಯಕ್ತಪಡಿಸಿದರು. ಈ ಹಬ್ಬಗಳು ದೇಶದ ಎಲ್ಲಾ ನಾಗರಿಕರಿಗೆ ಸಂತೋಷ, ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯವನ್ನು ತರುತ್ತವೆ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ವ್ಯಾಖ್ಯಾನಿಸುವ ಒಗ್ಗಟ್ಟು ಮತ್ತು ಕೃತಜ್ಞತೆಯ ಮನೋಭಾವವನ್ನು ಬಲಪಡಿಸುತ್ತವೆ ಎಂದು ಅವರು ಹಾರೈಸಿದರು.
ಈ ಶುಭಾಶಯಗಳ ಮೂಲಕ, ಶ್ರೀ ಚೌಹಾಣ್ ಅವರು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಅಂತರ್ಗತ ಬೆಳವಣಿಗೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು, ಕೃಷಿಯಲ್ಲಿ ಬೇರೂರಿರುವ ಹಬ್ಬಗಳು ಶ್ರಮದ ಘನತೆ, ಸುಸ್ಥಿರ ಜೀವನ ಮತ್ತು ಪ್ರಕೃತಿಯ ಕಡೆಗೆ ಸಾಮೂಹಿಕ ಜವಾಬ್ದಾರಿ, ಸಮುದಾಯ ಸಾಮರಸ್ಯ ಮತ್ತು ರಾಷ್ಟ್ರೀಯ ಪ್ರಗತಿ, ಸಮೃದ್ಧಿ ಮತ್ತು ಶಾಂತಿಯನ್ನು ಸಮಾಜಕ್ಕೆ ಒಟ್ಟಾರೆಯಾಗಿ ರಾಷ್ಟ್ರದಾದ್ಯಂತ ನೆನಪಿಸುತ್ತವೆ ಎಂದು ಒತ್ತಿ ಹೇಳಿದರು. ಅವರು ಮತ್ತೊಮ್ಮೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು.
*****
(रिलीज़ आईडी: 2214342)
आगंतुक पटल : 6