ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು 'ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್' ತಯಾರಿಕೆಯನ್ನು ಉತ್ತೇಜಿಸುವ ಯೋಜನೆ ಕುರಿತ ಹಿತಾಸಕ್ತಿದಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು


ಈ ಯೋಜನೆಯು 'ವಿಕಸಿತ ಭಾರತ @2047'ರ ದೂರದೃಷ್ಟಿಗೆ ಅನುಗುಣವಾಗಿ, ಆರ್ ಇ ಪಿ ಎಂ ಗಳಿಗಾಗಿ ಸ್ವಾವಲಂಬಿ, ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ: ಶ್ರೀ ಹೆಚ್.ಡಿ. ಕುಮಾರಸ್ವಾಮಿ

प्रविष्टि तिथि: 12 JAN 2026 5:19PM by PIB Bengaluru

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು 'ಸಿಂಟರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್' (ವಿರಳವಾದ ಭೂಮಿಯ ಶಾಶ್ವತ ಕಾಂತಗಳು) ತಯಾರಿಕೆಯನ್ನು ಉತ್ತೇಜಿಸುವ ಯೋಜನೆಯ ಕುರಿತು ಇಂದು ಹಿತಾಸಕ್ತಿದಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ; ಪರಮಾಣು ಇಂಧನ ಇಲಾಖೆಯ ಕಾರ್ಯದರ್ಶಿಗ; ಐ ಆರ್‌ ಇ ಎಲ್ (ಇಂಡಿಯಾ) ಲಿಮಿಟೆಡ್‌ ನ ಸಿಎಂಡಿ; ಎನ್‌ ಎಂ ಡಿ ಸಿ ತಾಂತ್ರಿಕ ನಿರ್ದೇಶಕರು; ಎನ್‌ ಎ ಫ್‌ ಟಿ ಡಿ ಸಿ ನಿರ್ದೇಶಕರು ಹಾಗೂ ಭಾರತ ಮತ್ತು ವಿದೇಶದ ವಿವಿಧ ಉದ್ಯಮಗಳ ಹಿತಾಸಕ್ತಿದಾರರು ಭಾಗವಹಿಸಿದ್ದರು.

ಸಚಿವರು ತಮ್ಮ ಆರಂಭಿಕ ಮಾತುಗಳಲ್ಲಿ, ಈ ಯೋಜನೆಯು 'ವಿಕಸಿತ ಭಾರತ @2047'ರ ದೂರದೃಷ್ಟಿಗೆ ಅನುಗುಣವಾಗಿ, ಆರ್‌ ಇ ಪಿ ಎಂ ಗಳಿಗಾಗಿ (ವಿರಳವಾದ ಭೂಮಿಯ ಶಾಶ್ವತ ಕಾಂತಗಳು) ಸ್ವಾವಲಂಬಿ, ಸ್ಥಿತಿಸ್ಥಾಪಕ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. ಅರ್ಹರಾದ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಮತ್ತು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭಾರತದ ದೀರ್ಘಕಾಲೀನ ಬೆಳವಣಿಗೆಯ ಪಯಣದಲ್ಲಿ ಕೊಡುಗೆ ನೀಡಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೆ, ಸಚಿವಾಲಯವು ಪ್ರಸ್ತಾವನೆಗಾಗಿ ವಿನಂತಿ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬೃಹತ್ ಕೈಗಾರಿಕಾ ಸಚಿವಾಲಯದ ಜಂಟಿ ಕಾರ್ಯದರ್ಶಿಯವರು ಡಿಸೆಂಬರ್ 15, 2025 ರಂದು ಅಧಿಸೂಚನೆ ಹೊರಡಿಸಲಾದ ಈ ಯೋಜನೆಯ ಪ್ರಮುಖ ಅಂಶಗಳನ್ನು ವಿವರಿಸಿದರು.

ಈ ಯೋಜನೆಯ ಒಟ್ಟು ಹಣಕಾಸಿನ ವೆಚ್ಚ 7,280 ಕೋಟಿ ರೂ. ಆಗಿದೆ. ಇದರಲ್ಲಿ ಆರ್‌ ಇ ಪಿ ಎಂ ಮಾರಾಟದ ಮೇಲಿನ ಮಾರಾಟ - ಆಧಾರಿತ ಪ್ರೋತ್ಸಾಹಕಗಳಿಗಾಗಿ 6,450 ಕೋಟಿ ರೂ. ಮತ್ತು ಒಟ್ಟು 6,000 ಎಂಟಿಪಿಎ (ವರ್ಷಕ್ಕೆ ಮೆಟ್ರಿಕ್ ಟನ್) ಸಾಮರ್ಥ್ಯದ ಆರ್‌ ಇ ಪಿ ಎಂ  ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಂಡವಾಳ ಸಬ್ಸಿಡಿಯಾಗಿ 750 ಕೋಟಿ ರೂ. ಒಳಗೊಂಡಿದೆ. ಇದು ಸ್ವಾವಲಂಬನೆಯನ್ನು ಹೆಚ್ಚಿಸುವುದಲ್ಲದೆ, ಜಾಗತಿಕ ಆರ್‌ ಇ ಪಿ ಎಂ  ಮಾರುಕಟ್ಟೆಯಲ್ಲಿ ದೇಶವನ್ನು ಪ್ರಮುಖವಾಗಿ ಗುರುತಿಸುವಂತೆ ಮಾಡುತ್ತದೆ. ಈ ಯೋಜನೆಯು ಆದೇಶ ನೀಡಿದ ದಿನಾಂಕದಿಂದ ಒಟ್ಟು 7 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಇದರಲ್ಲಿ ಸಂಯೋಜಿತ ಆರ್‌ ಇ ಪಿ ಎಂ  ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 2 ವರ್ಷಗಳ ಸಿದ್ಧತಾ ಅವಧಿ ಮತ್ತು ಆರ್‌ ಇ ಪಿ ಎಂ  ಮಾರಾಟದ ಮೇಲೆ ಪ್ರೋತ್ಸಾಹಧನ ವಿತರಣೆಗಾಗಿ 5 ವರ್ಷಗಳ ಕಾಲಾವಕಾಶ ಇರುತ್ತದೆ.

ಸಭೆಯಲ್ಲಿ, ಉದ್ದಿಮೆಗಳ ಪ್ರತಿನಿಧಿಗಳು ತಮ್ಮ ಸಾಮರ್ಥ್ಯಗಳನ್ನು ವಿವರಿಸಿದರು ಮತ್ತು ಈ ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದರು.

ಈ ಸಮಾಲೋಚನೆಯು ತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ಪಯಣವನ್ನು ವೇಗಗೊಳಿಸಲು ಮತ್ತು ನಿರ್ಣಾಯಕ ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ಪಾಲುದಾರನಾಗಲು, ಉದ್ದಿಮೆಗಳು ಮತ್ತು ನೀತಿ ನಿರೂಪಕರ ನಡುವೆ ಸಹಯೋಗವನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸುತ್ತದೆ.

 

******

 


(रिलीज़ आईडी: 2213913) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Tamil