ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಗಣಿ ಸುರಕ್ಷತೆ ಮತ್ತು ಕಾರ್ಮಿಕರ ಕಲ್ಯಾಣಕ್ಕೆ ಬದ್ಧತೆ ತೋರಿ 125 ವರ್ಷ ಪೂರೈಸಿದ ಡಿಜಿಎಂಎಸ್


ಗಣಿಗಾರಿಕೆ ವಲಯದಾದ್ಯಂತ ಏಕರೂಪದ ಸುರಕ್ಷತಾ ಮಾನದಂಡಗಳು ಅತ್ಯಗತ್ಯ: ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ

ಗಣಿ ಸುರಕ್ಷತೆ ಬಲವರ್ಧನೆಗೆ ಕಾರ್ಮಿಕ ಸಂಹಿತೆಗಳ ಅನುಷ್ಠಾನ ಮತ್ತು ತಂತ್ರಜ್ಞಾನದ ಬಳಕೆ: ಸುಶ್ರೀ ಕರಂದ್ಲಾಜೆ

प्रविष्टि तिथि: 07 JAN 2026 2:08PM by PIB Bengaluru

ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ಗಣಿ ಸುರಕ್ಷತಾ ಮಹಾನಿರ್ದೇಶನಾಲಯ (ಡಿಜಿಎಂಎಸ್) ಇಂದು ಜಾರ್ಖಂಡ್‌ನ ಧನ್ಬಾದ್‌ನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ತನ್ನ 125 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು, ಇದು ದೇಶಾದ್ಯಂತ ಗಣಿ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣವನ್ನು ಖಾತ್ರಿಪಡಿಸಿಕೊಳ್ಳಲು ಒಂದು ಶತಮಾನಕ್ಕೂ ಅಧಿಕ ಕಾಲದ ಬದ್ಧತೆಯ ಸೇವೆಯನ್ನು ಗುರುತಿಸುತ್ತದೆ. ಈ ಕಾರ್ಯಕ್ರಮವನ್ನು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಿಜಿಎಂಎಸ್ ಮಹಾನಿರ್ದೇಶಕಿ ಶ್ರೀ ಉಜ್ವಲ್ ತಾಹ್, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ದೀಪಿಕಾ ಕಚ್ಚಲ್, ಡಿಜಿಎಂಎಸ್‌ನ ಇತರ ಹಿರಿಯ ಅಧಿಕಾರಿಗಳು, ಸಚಿವಾಲಯದ ಅಧಿಕಾರಿಗಳು, ಗಣಿಗಾರಿಕೆ ಉದ್ಯಮದ ಪ್ರತಿನಿಧಿಗಳು ಮತ್ತು ವಲಯದ ಪಾಲುದಾರರು ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ, ಡಿಜಿಎಂಎಸ್‌ನ 125 ವರ್ಷಗಳ ಪಯಣವು ಅಧಿಕಾರಿಗಳ ಮತ್ತು ಗಣಿ ಕಾರ್ಮಿಕರ ತಲೆಮಾರುಗಳ ಬದ್ಧತೆಯ ಪ್ರಯತ್ನಗಳು ಮತ್ತು ತ್ಯಾಗಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಹಿಂದೆ ಸವಾಲಿನ ಪರಿಸ್ಥಿತಿಗಳಲ್ಲಿ ಕೆಲಸ ಮಾಡಿದವರ ಕೊಡುಗೆಗಳನ್ನು ಸ್ಮರಿಸಿಕೊಂಡ ಸಚಿವರು, ಇಂದಿನ ಗಣಿಗಾರಿಕೆ ಚಟುವಟಿಕೆಗಳು ಭಾರತದ ಪ್ರಗತಿಯ ಯೋಶಗಾಥೆಗೆ ನೇರವಾಗಿ ಸಂಬಂಧಿಸಿವೆ ಎಂದು ಒತ್ತಿ ಹೇಳಿದರು. ಗಣಿ ಕಾರ್ಮಿಕರ ಧೈರ್ಯ ಮತ್ತು ಬದ್ಧತೆ, ಆಗಾಗ್ಗೆ ಜೀವಕ್ಕೆ ಗಂಭೀರ ಅಪಾಯಗಳನ್ನುಂಟುಮಾಡುತ್ತದೆ, ಗಣಿಗಾರಿಕೆಯನ್ನು ಸಾಧ್ಯವಾಗಿಸುತ್ತದೆ ಮತ್ತು ರಾಷ್ಟ್ರ ನಿರ್ಮಾಣವನ್ನು ಬೆಂಬಲಿಸುತ್ತದೆ ಎಂದು ಸಚಿವರು ಗೌರವ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ”ಸುರಕ್ಷತೆ ಮೊದಲು’’ ಎಂಬ ದೂರದೃಷ್ಟಿಗೆ ಅನುಗುಣವಾಗಿ ಕಾರ್ಮಿಕರ ಸುರಕ್ಷತೆಯು ಸಚಿವಾಲಯದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವರು ಪುನರುಚ್ಚರಿಸಿದರು. ಎಲ್ಲಾ ಗಣಿಗಾರಿಕೆ ಕಾರ್ಯಾಚರಣೆಗಳಲ್ಲಿ ಏಕರೂಪದ ಸುರಕ್ಷತಾ ಮಾನದಂಡಗಳನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಡಿಜಿಎಂಎಸ್ ಪಾತ್ರವನ್ನು ಅವರು ಎತ್ತಿ ತೋರಿಸಿದರು ಮತ್ತು ಸುರಕ್ಷತಾ ಮಾನದಂಡಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ-ರಾಜ್ಯ ಪ್ರಯತ್ನಗಳು ಮತ್ತು ಡಿಜಿಎಂಎಸ್ ಪ್ರಾದೇಶಿಕ ಕಚೇರಿಗಳ ಸದೃಢವಾದ ಒಳಗೊಳ್ಳುವಿಕೆ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

ಇತ್ತೀಚೆಗೆ ಕೈಗೊಂಡ ಕಾರ್ಮಿಕ ಸುಧಾರಣೆಗಳ ಅಗತ್ಯತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು,  29 ಕಾನೂನುಗಳನ್ನು ಕ್ರೋಢೀಕರಿಸಿ ಬದಲಾಯಿಸಿದ ನಾಲ್ಕು ಕಾರ್ಮಿಕ ಸಂಹಿತೆಗಳು ವಿಕಸಿತ  ಭಾರತವನ್ನು ನಿರ್ಮಿಸುವ ಮತ್ತು ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿವೆ ಎಂದು ಸುಶ್ರೀ ಕರಂದ್ಲಾಜೆ ಉಲ್ಲೇಖಿಸಿದರು. ಸಂಹಿತೆಗಳ ಜಾಗೃತಿಯನ್ನು ಉತ್ತೇಜಿಸಲು ಮತ್ತು ಗಣಿ ಸುರಕ್ಷತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಅವರು ಡಿಜಿಎಂಎಸ್ ಗೆ ಕರೆ ನೀಡಿದರು. ಸುರಕ್ಷಿತ ಮತ್ತು ಹೆಚ್ಚು ಸುಸ್ಥಿರ ಗಣಿಗಾರಿಕೆಗಾಗಿ ಡಿಜಿಎಂಎಸ್ ಅನ್ನು ಬಲಪಡಿಸಲು ಸಚಿವಾಲಯದಿಂದ ಸಂಪೂರ್ಣ ಬೆಂಬಲವನ್ನು ನೀಡಲಾಗುವುದೆಂದರು.

ಭಾರತದಲ್ಲಿ ಗಣಿ ಸುರಕ್ಷತಾ ಪದ್ಧತಿಗಳ ಶ್ರೀಮಂತ ಪರಂಪರೆ ಮತ್ತು ಬೆಳವಣಿಗೆಯನ್ನು ಬಿಂಬಿಸುವ ಪ್ರದರ್ಶನ, ಹಳೆಯ ದಾಖಲೆಗಳ ವಿಭಾಗ ಮತ್ತು ಮಾದರಿಗಳ ಗ್ಯಾಲರಿಗೆ ಸಚಿವರು ಭೇಟಿ ನೀಡಿದರು. ಆಚರಣೆಯ ಭಾಗವಾಗಿ ಗಣ್ಯರು ಸಸಿ ನೆಡುವ ಅಭಿಯಾನವನ್ನು ಕೈಗೊಂಡರು, ಇದು ಪರಿಸರ ಸುಸ್ಥಿರತೆಗೆ ಡಿಜಿಎಂಎಸ್‌ನ ಬದ್ಧತೆಯನ್ನು ಪುನರುಚ್ಚರಿಸಿತು.

ಕಾರ್ಯಕ್ರಮದ ಸಮಯದಲ್ಲಿ ಡಿಜಿಎಂಎಸ್‌ನ ಐತಿಹಾಸಿಕ ಮೈಲಿಗಲ್ಲುಗಳು, ಅದರ ನಿಯಂತ್ರಣ ಚೌಕಟ್ಟು ಮತ್ತು ಗಣಿ ಸುರಕ್ಷತೆಯಲ್ಲಿನ ತಾಂತ್ರಿಕ ಪ್ರಗತಿಯನ್ನು ಚಿತ್ರಿಸುವ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವರು ಹಳೆಯ ಲೋಗೋ ಬದಲಾಯಿಸುವ ಹೊಸ ಡಿಜಿಎಂಎಸ್ ಲೋಗೋವನ್ನು ಬಿಡುಗಡೆ ಮಾಡಿದರು. ಅವರು ಡಿಜಿಎಂಎಸ್ ಥೀಮ್ ಸಾಂಗ್ ಮತ್ತು ಸಂಸ್ಥೆಯ ಪಯಣ ಮತ್ತು ಕೊಡುಗೆಗಳನ್ನು ಹಿಡಿದಿಡುವ ಡಿಜಿಟಲ್ ಕಾಫಿ ಟೇಬಲ್ ಪುಸ್ತಕವನ್ನು ಸಹ ಬಿಡುಗಡೆ ಮಾಡಿದರು. ಗಣಿ ಸುರಕ್ಷತೆಯಲ್ಲಿ ಅತ್ಯುತ್ತಮ ಪದ್ಧತಿಗಳ ಸ್ಮರಣಿಕೆ/ಡಿಜಿಟಲ್ ಸಂಕಲನವನ್ನು ಸಹ ಬಿಡುಗಡೆ ಮಾಡಲಾಯಿತು.

ಶೌರ್ಯ ಮತ್ತು ಸೇವೆಯನ್ನು ಗುರುತಿಸುವ ಮಹತ್ವದ ಸೂಚನೆಯಾಗಿ, ತುರ್ತು ಸಂದರ್ಭಗಳಲ್ಲಿ ಗಣಿ ಕೂಲಿಕಾರರ ಜೀವಗಳನ್ನು ರಕ್ಷಿಸುವಲ್ಲಿ ಅವರ ಅನುಕರಣೀಯ ಕೊಡುಗೆಗಾಗಿ ರಕ್ಷಣಾ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.

1902ರಲ್ಲಿ ಸ್ಥಾಪನೆಯಾದ ಡಿಜಿಎಂಎಸ್, ಭಾರತದಲ್ಲಿ ಗಣಿ ಸುರಕ್ಷತೆ ಮತ್ತು ಆರೋಗ್ಯ ಮಾನದಂಡಗಳನ್ನು ನಿಯಂತ್ರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ, ಗಣಿ ಕಾರ್ಮಿಕರ ಸ್ವಾಸ್ಥ್ಯ ಮತ್ತು ಗಣಿ ಉದ್ಯಮದ ಸುಸ್ಥಿರ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡುತ್ತದೆ.

 

*****


(रिलीज़ आईडी: 2212081) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Tamil