ರೈಲ್ವೇ ಸಚಿವಾಲಯ
ಸಾಗರ ವಲಯ, ಸೇತುವೆ ಮತ್ತು ಸುರಂಗ ಎಂಜಿನಿಯರಿಂಗ್, ರಕ್ಷಣಾ ಲಾಜಿಸ್ಟಿಕ್ಸ್ ಮತ್ತು ಮಲ್ಟಿಮೋಡಲ್ ಸಾರಿಗೆ ಯೋಜನೆಗಳನ್ನು ಗತಿ ಶಕ್ತಿ ವಿಶ್ವವಿದ್ಯಾಲಯವು (ಜಿ.ಎಸ್.ವಿ.) ಅಧ್ಯಯನ ಪಠ್ಯವಾಗಿ ಮುನ್ನಡೆಸಲಿದೆ - ಶ್ರೀ ಅಶ್ವಿನಿ ವೈಷ್ಣವ್
ಗತಿ ಶಕ್ತಿ ವಿಶ್ವವಿದ್ಯಾಲಯವು ತನ್ನ 2ನೇ ವಿಶ್ವವಿದ್ಯಾಲಯ ನ್ಯಾಯಾಲಯ ಮಹಾ ಸಭೆಯನ್ನು ನಡೆಸಿತು
प्रविष्टि तिथि:
19 DEC 2025 5:02PM by PIB Bengaluru
ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್.ವಿ.) ನವದೆಹಲಿಯ ರೈಲು ಭವನದಲ್ಲಿ ತನ್ನ 2ನೇ ನ್ಯಾಯಾಲಯ ಸಭೆಯನ್ನು ನಡೆಸಿತು. ವಿಶ್ವವಿದ್ಯಾಲಯದ ಕುಲಪತಿಯಾಗಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಿದ ಶ್ರೀ ಅಶ್ವಿನಿ ವೈಷ್ಣವ್ ಅವರು "ಜಿ.ಎಸ್.ವಿ. ತನ್ನ ಕಾರ್ಯಾಚರಣೆಯ 3 ವರ್ಷಗಳಲ್ಲಿ ತನ್ನ ಉದ್ಯಮ-ಚಾಲಿತ ವಿಧಾನದೊಂದಿಗೆ ಅಗಾಧ ಪ್ರಗತಿಯನ್ನು ಸಾಧಿಸಿದೆ, ಇದು ದೇಶಕ್ಕೆ ಮಾದರಿಯಾಗಿದೆ. ರೈಲ್ವೆ ಮತ್ತು ವಾಯುಯಾನ ವಲಯಗಳ ಮೇಲೆ ತನ್ನ ಬಲವಾದ ಗಮನವನ್ನು ಮುಂದುವರಿಸುತ್ತಾ, ಜಿ.ಎಸ್.ವಿ ಸೇತುವೆ ಮತ್ತು ಸುರಂಗ ಎಂಜಿನಿಯರಿಂಗ್, ಹಡಗು ನಿರ್ಮಾಣಕ್ಕೆ ಒತ್ತು ನೀಡುವ ಸಮುದ್ರ ವಲಯದಲ್ಲಿ ಪಠ್ಯಕ್ರಮಗಳನ್ನು ಆಳ ಅಧ್ಯಯನಗೊಳಿಸುತ್ತದೆ, ರಕ್ಷಣಾ ಪಡೆಗಳು ಮತ್ತು ರೈಲ್ವೆಗಳ ಕೌಶಲ್ಯವನ್ನು ಹೆಚ್ಚಿಸಲು ಹೆಚ್ಚಿನ ಕೊಡುಗೆ ನೀಡುತ್ತದೆ; ಮತ್ತು ಸಮಗ್ರ ಸಾರಿಗೆ ಯೋಜನೆಗಾಗಿ ಅನ್ವಯಿಕ ಸಂಶೋಧನೆಯನ್ನು ಮಾಡುತ್ತದೆ."

ಈ ಮಹಾ ಸಭೆಯಲ್ಲಿ ಗೌರವಾನ್ವಿತ ಶ್ರೀಮತಿ ಶುಭಾಂಗಿನಿ ರಾಜೇ ಗಾಯಕ್ವಾಡ್ (ಬರೋಡಾದ ರಾಜಮಾತಾ), ಶ್ರೀ ಸತೀಶ್ ಕುಮಾರ್ (ಅಧ್ಯಕ್ಷರು ಮತ್ತು ಸಿಇಒ, ರೈಲ್ವೆ ಮಂಡಳಿ), ಲೆಫ್ಟಿನೆಂಟ್ ಜನರಲ್ ಪುಷ್ಪೇಂದ್ರ ಸಿಂಗ್ (ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ), ಶ್ರೀ ಅಮರದೀಪ್ ಸಿಂಗ್ ಭಾಟಿಯಾ (ಕಾರ್ಯದರ್ಶಿ, ಡಿ.ಪಿ.ಐ.ಐ.ಟಿ), ಶ್ರೀ ಟಿಪಿ ಸಿಂಗ್ (ಡಿಜಿ-ಬಿ.ಐ.ಎ.ಎಸ್.ಎ.ಜಿ), ಪ್ರೊ. ರಜತ್ ಮೂನಾ (ನಿರ್ದೇಶಕರು, ಐ.ಐ.ಟಿ ಜಿಎನ್), ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ, ಎಂ.ಒ.ಆರ್.ಟಿ.ಎಚ್, ಎಲ್ & ಟಿ, ಎ.ಎಮ್.ಡಿ.ಯಂತಹ ಪ್ರಮುಖ ಕೈಗಾರಿಕೆಗಳ ಪ್ರತಿನಿಧಿಗಳು ಮತ್ತು ಗತಿ ಶಕ್ತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರೊ. ಮನೋಜ್ ಚೌಧರಿ (ಉಪಕುಲಪತಿ, ಜಿಎಸ್‌ವಿ) ವಿವರವಾದ ಪ್ರಗತಿ ಮತ್ತು ಸ್ಥಿತಿ ವರದಿಯನ್ನು ಮಂಡಿಸಿದರು. ಎಲ್ಲಾ ಸದಸ್ಯರು ಇಷ್ಟು ಕಡಿಮೆ ಸಮಯದಲ್ಲಿ ವಿಶ್ವವಿದ್ಯಾಲಯದ ಅತ್ಯುತ್ತಮ ಪ್ರಗತಿಯನ್ನು, ವಿಶೇಷವಾಗಿ ಕೈಗಾರಿಕೆ, ರೈಲ್ವೆ, ರಕ್ಷಣಾ ಪಡೆಗಳಿಗೆ ಕಾರ್ಯನಿರ್ವಾಹಕ ತರಬೇತಿ ಮತ್ತು ನಾಗರಿಕ ಸೇವೆಗಳಿಗಾಗಿ ಪಿಎಂ ಗತಿ ಶಕ್ತಿಯೊಂದಿಗೆ ಅದರ ಸಹಯೋಗವನ್ನು ಶ್ಲಾಘಿಸಿದರು. ನ್ಯಾಯಾಲಯದ ಸದಸ್ಯರು ಸೇತುವೆ ಮತ್ತು ಸುರಂಗ ಎಂಜಿನಿಯರಿಂಗ್, ಹಡಗು ನಿರ್ಮಾಣ, ರೈಲ್ವೆಗಳು, ರಕ್ಷಣಾ ವಲಯಗಳ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯಲ್ಲಿ ಭವಿಷ್ಯದ ಪ್ರಗತಿಗಾಗಿ ಹಲವಾರು ಸಲಹೆಗಳು ಮತ್ತು ಸಹಯೋಗದ ಇನ್‌ಪುಟ್‌ಗಳನ್ನು ನೀಡಿದರು. ಭಾರತೀಯ ಸೇನೆಯ ವಲಯ ಸಂಬಂಧಿತ ಅಕಾಡೆಮಿಗಳನ್ನು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿಸುವುದರ ಜೊತೆಗೆ ತರಬೇತಿ ಕಾರ್ಯಕ್ರಮಗಳ ವ್ಯಾಪ್ತಿ ಮತ್ತು ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರು ಪ್ರತಿಪಾದಿಸಿದರು. ಈ ವರ್ಷದಿಂದ ವಿಶ್ವವಿದ್ಯಾಲಯವು ಐ.ಆರ್.ಎಂ.ಎಸ್ ಅಧಿಕಾರಿಗಳಿಗೆ ಪ್ರೊಬೇಷನರಿ ತರಬೇತಿಯನ್ನು ವಿನ್ಯಾಸಗೊಳಿಸುತ್ತದೆ ಮತ್ತು ನಡೆಸುತ್ತದೆ ಮತ್ತು ಹೆಚ್ಚಿನ ಚೇರ್ ಪ್ರೊಫೆಸರ್ ಶಿಪ್ ಗಳನ್ನು ಸ್ಥಾಪಿಸಲು ಕೈಗಾರಿಕೆಗಳೊಂದಿಗೆ ಕೆಲಸ ಮಾಡುತ್ತದೆ.

ಈ ಸಂದರ್ಭದಲ್ಲಿ, ಬಿಸಾಗ್ ಮತ್ತು ಜಿ.ಎಸ್.ವಿ ಪ್ರಧಾನಮಂತ್ರಿ ಗತಿ ಶಕ್ತಿಗೆ ಪ್ರಚೋದನೆಯನ್ನು ಮತ್ತಷ್ಟು ವೇಗಗೊಳಿಸಲು ಒಪ್ಪಂದವನ್ನು ಘೋಷಿಸಿದವು, ಎಎಂಡಿ ಜಿ.ಎಸ್.ವಿ ಯಲ್ಲಿ ಇನ್ ಕ್ಯುಬೇಶನ್ ಸೌಲಭ್ಯಕ್ಕೆ ಆರ್ಥಿಕ ಸಹಾಯವನ್ನು ಘೋಷಿಸಿತು. ಹೆಚ್ಚುವರಿ ಕ್ಯಾಂಪಸ್ ಮೂಲಸೌಕರ್ಯವನ್ನು ನಿರ್ಮಿಸಲಾಗುತ್ತಿದೆ ಮತ್ತು ಈಗಾಗಲೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಹೆಚ್ಚುವರಿ ಕ್ಯಾಂಪಸ್ ಗಾಗಿ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಲಾಗುತ್ತದೆ. ವಿಶ್ವವಿದ್ಯಾಲಯದ ವಾರ್ಷಿಕ ವರದಿಗಳು ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಅಥವಾ 2024-2025ರ ಹಣಕಾಸು ವರ್ಷವನ್ನು ಸಂಸತ್ತಿನ ಮುಂದೆ ಮಂಡಿಸಲು ಅನುಮೋದಿಸಲಾಗಿದೆ.
ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ಭಾರತದ ಪ್ರಮುಖ ವಿಶ್ವವಿದ್ಯಾಲಯವಾದ ಗತಿ ಶಕ್ತಿ ವಿಶ್ವವಿದ್ಯಾಲಯ (ಜಿ.ಎಸ್.ವಿ)ವನ್ನು 2022 ರಲ್ಲಿ ಸಂಸತ್ತಿನ ಕಾಯಿದೆಯ ಮೂಲಕ ಕೇಂದ್ರ ವಿಶ್ವವಿದ್ಯಾಲಯವಾಗಿ ಸ್ಥಾಪಿಸಲಾಯಿತು. ರೈಲ್ವೆ ಸಚಿವಾಲಯದ (ಭಾರತ ಸರ್ಕಾರ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಿಶ್ವವಿದ್ಯಾಲಯವು ರೈಲ್ವೆಗಳು, ಹೆದ್ದಾರಿಗಳು, ಬಂದರುಗಳು, ವಿಮಾನಯಾನ, ಸಮುದ್ರಯಾನ, ಸಾಗಣೆ, ಒಳನಾಡಿನ ಜಲಮಾರ್ಗಗಳು, ನಗರ ಸಾರಿಗೆ ಮತ್ತು ಸಂಪೂರ್ಣ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಜಾಲಗಳು ಸೇರಿದಂತೆ ಸಂಪೂರ್ಣ ಸಾರಿಗೆ ವಲಯವನ್ನು ಒಳಗೊಂಡಿದೆ.
*****
(रिलीज़ आईडी: 2206950)
आगंतुक पटल : 5