ರೈಲ್ವೇ ಸಚಿವಾಲಯ
azadi ka amrit mahotsav

ಗುರುಗ್ರಾಮ್‌ ನ ಇಚ್ಚಾಪುರಿಯಿಂದ ಮುಂದ್ರಾ ಬಂದರಿಗೆ ಓಡಲಿರುವ ನಿರ್ಯತ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು 


ಖಚಿತ ರೈಲು ಸೇವೆಯು ವೇಗವಾದ ಮತ್ತು ವೆಚ್ಚ-ಪರಿಣಾಮಕಾರಿ ರಫ್ತನ್ನು ಸಕ್ರಿಯಗೊಳಿಸುತ್ತದೆ

प्रविष्टि तिथि: 19 DEC 2025 4:24PM by PIB Bengaluru

ರಫ್ತು-ಕೇಂದ್ರಿತ, ಖಚಿತ ಸಾರಿಗೆ ಸೇವೆಯಾದ ನಿರ್ಯತ್ ಕಾರ್ಗೋ ಎಕ್ಸ್‌ಪ್ರೆಸ್ ಅನ್ನು ಗುರುಗ್ರಾಮ್‌ ನ ಇಚ್ಚಾಪುರಿ ಕಂಟೇನರ್ ಟರ್ಮಿನಲ್‌ ನಿಂದ ಮುಂದ್ರಾ ಬಂದರಿಗೆ ಡಬಲ್-ಸ್ಟ್ಯಾಕ್ ಕಂಟೇನರ್ ರೈಲಾಗಿ ನಿರ್ವಹಿಸುವ ಮೂಲಕ ರೈಲ್ವೆಗಳು ಸರಕು ಸಾಗಣೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿವೆ. ಇದಕ್ಕೂ ಮೊದಲು ಗುರುಗ್ರಾಮ್‌ನ ಗರ್ಹಿಯಿಂದ 20 ಟ್ರಿಪ್‌ಗಳ ಖಚಿತ ಸಾರಿಗೆ ಸೇವೆಯನ್ನು ನಿರ್ವಹಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸಮಯ ನಿಗದಿಪಡಿಸಿದ ವೇಗದ ರೈಲನ್ನು ಗುರುಗ್ರಾಮ್‌ ನ ಇಚ್ಚಾಪುರಿಯಿಂದ ಮೊದಲ ಬಾರಿಗೆ ನಿರ್ವಹಿಸಲಾಗುತ್ತಿದೆ.

ಈ ಖಚಿತ, ಸಮಯಕ್ಕೆ ಸೀಮಿತವಾದ ಸಾಪ್ತಾಹಿಕ ಸೇವೆಯು ರಫ್ತುದಾರರಿಗೆ ಮುಂದ್ರಾ ಬಂದರಿಗೆ ಸರಕುಗಳ ವೇಗವಾದ, ವಿಶ್ವಾಸಾರ್ಹ ಮತ್ತು ಊಹಿಸಬಹುದಾದ ಚಲನೆಯನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ, ವಿಳಂಬ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.

ಉತ್ತರ ಭಾರತ ರೈಲ್ವೆಯ ದೆಹಲಿ ವಿಭಾಗವು ರಫ್ತುದಾರರಿಗೆ ಖಚಿತ ಸರಕು ಸಾಗಣೆಯನ್ನು ಈ ಮೂಲಕ ಬಲಪಡಿಸಿದೆ. ಈ ರೈಲನ್ನು ಕ್ರ್ಯಾಕ್ ರೈಲಾಗಿ ನಿರ್ವಹಿಸಲಾಯಿತು, ಅಂದರೆ ಕನಿಷ್ಠ ನಿಲುಗಡೆಗಳು ಮತ್ತು ಅಡೆತಡೆಯಿಲ್ಲದ ಚಲನೆ, ವೇಗವಾದ ಸಾಗಣೆ ಮತ್ತು ಸಕಾಲಿಕ ವಿತರಣೆಯನ್ನು ಹೊಂದಿರುತ್ತದೆ - ವಿಶೇಷವಾಗಿ ಹೆಚ್ಚಿನ ಮೌಲ್ಯದ ರಫ್ತು ಸರಕುಗಳಿಗೆ ಈ ಸೇವೆಯು ಬಹಳಷ್ಟು ಉಪಯುಕ್ತವಾಗಿದೆ.

 

*****


(रिलीज़ आईडी: 2206948) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी