ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯು ದೇಶಾದ್ಯಂತ 6,117 ನಿಲ್ದಾಣಗಳಲ್ಲಿ ಉಚಿತ ವೈ-ಫೈ ಒದಗಿಸುತ್ತಿದೆ
ಸುರಕ್ಷಿತ ಮತ್ತು ಸುಭದ್ರ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 1,731 ನಿಲ್ದಾಣಗಳು ಮತ್ತು 11,953 ಕೋಚ್ ಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ
ವರ್ಧಿತ ಹೆಚ್ಚುವರಿ ಭದ್ರತೆಗಾಗಿ ನವದೆಹಲಿ ರೈಲು ನಿಲ್ದಾಣವು ಒಟ್ಟು 250 ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದೆ
प्रविष्टि तिथि:
17 DEC 2025 3:52PM by PIB Bengaluru
ಭಾರತೀಯ ರೈಲ್ವೆಯಾದ್ಯಂತ 6117 ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಗಳನ್ನು ಒದಗಿಸಲಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಈ ವೈ-ಫೈ ಸೇವೆಗಳಿಗೆ ರೈಲ್ವೆ ಸಚಿವಾಲಯವು ಯಾವುದೇ ಪ್ರತ್ಯೇಕ ಹೆಚ್ಚುವರಿ ಹಣವನ್ನು ಮಂಜೂರು ಮಾಡಲಿಲ್ಲ.
ಒಟಿಪಿ ವ್ಯವಸ್ಥೆಗಾಗಿ ಬಳಸುವ ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾದ ವೈ-ಫೈ ಸೇವೆಯನ್ನು ಪ್ರವೇಶಿಸಲು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತಿಲ್ಲ. ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉಂಟಾದಾಗಲೆಲ್ಲಾ ರೈಲ್ವೆ ಆಡಳಿತವು ಸೂಕ್ತ ಕ್ರಮವನ್ನು ತಕ್ಷಣ ತೆಗೆದುಕೊಳ್ಳುತ್ತದೆ.
ನಿಲ್ದಾಣಗಳು ಮತ್ತು ಕೋಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸದಾ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಇಲ್ಲಿಯವರೆಗೆ, ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಭದ್ರ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 1731 ನಿಲ್ದಾಣಗಳು ಮತ್ತು 11,953 ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸಲಾಗಿದೆ. ಬಂಡವಾಳ ವೆಚ್ಚದ ಅಡಿಯಲ್ಲಿ ಶುಲ್ಕ ವಿಧಿಸುವ ಲೆಕ್ಕಾಚಾರದಲ್ಲಿ ವೆಚ್ಚ ಮಾಡಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಒದಗಿಸಲಾಗಿದೆ.
ನಿಲ್ದಾಣದಲ್ಲಿ, ಹೊರಾಂಗಣ ಪ್ರದೇಶಗಳಾದ ಪ್ರವೇಶ / ನಿರ್ಗಮನ ಬಿಂದುಗಳು, ಪಾದಚಾರಿ ಮೇಲು ಸೇತುವೆಗಳು, ಪ್ಲಾಟ್ ಫಾರ್ಮ್ ಗಳು ಇತ್ಯಾದಿಗಳನ್ನು ಮತ್ತು ಒಳಾಂಗಣ ಪ್ರದೇಶಗಳಾದ ಕಾಯುವ ಸಭಾಂಗಣಗಳು, ಟಿಕೆಟ್ ಕೌಂಟರ್ ಗಳು ಇತ್ಯಾದಿಗಳನ್ನು ಒಳಗೊಳ್ಳಲು ನವದೆಹಲಿ ರೈಲು ನಿಲ್ದಾಣದಲ್ಲಿ ಈಗಾಗಲೇ ಎಲ್ಲೆಡೆ ಸಿಸಿಟಿವಿಗಳನ್ನು ಸ್ಥಾಪಿಸಲಾಗಿದೆ. ಹಾಗೂ, ಫೆಬ್ರವರಿ 15, 2025 ರ ನಂತರ ನವದೆಹಲಿ ನಿಲ್ದಾಣದ ಆವರಣದಲ್ಲಿ ಕೆಲವು ಹೊಸ ಪ್ರದೇಶಗಳನ್ನು ಕೂಡ ಅಭಿವೃದ್ಧಿಪಡಿಸಲಾಯಿತು ಮತ್ತು ಅದಕ್ಕೆ ಅನುಗುಣವಾಗಿ ಈ ಪ್ರದೇಶಗಳನ್ನು ಒಳಗೊಳ್ಳಲು ಹೆಚ್ಚುವರಿ ಸಿಸಿಟಿವಿಗಳನ್ನು ಕೂಡ ಒದಗಿಸಲಾಗಿದೆ. ಪ್ರಸ್ತುತ, ನವದೆಹಲಿ ರೈಲು ನಿಲ್ದಾಣದಲ್ಲಿ ಒಟ್ಟು 250 ಸಿಸಿಟಿವಿಗಳನ್ನು ಅಳವಡಿಸಿ ಸುರಕ್ಷತೆ ಒದಗಿಸಲಾಗಿದೆ.
ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಲಿಖಿತ ಉತ್ತರ ರೂಪದಲ್ಲಿ ನೀಡಿದ್ದಾರೆ.
****
(रिलीज़ आईडी: 2205542)
आगंतुक पटल : 11