ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೋರ್ಡಾನ್, ಇಥಿಯೋಪಿಯಾ ಮತ್ತು ಓಮಾನ್ ಭೇಟಿಗೆ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

प्रविष्टि तिथि: 15 DEC 2025 8:15AM by PIB Bengaluru

ಇಂದು, ನಾನು ಹಾಶೆಮೈಟ್ ಕಿಂಗ್ಡಂ ಆಫ್ ಜೋರ್ಡಾನ್ , ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಮತ್ತು ಒಮಾನ್ ಸುಲ್ತಾನೇಟ್ ಗೆ ಮೂರು ದೇಶಗಳ ಭೇಟಿಯನ್ನು ಕೈಗೊಳ್ಳುತ್ತಿದ್ದೇನೆ, ಈ ಮೂರು ದೇಶಗಳೊಂದಿಗೆ ಭಾರತವು ವ್ಯಾಪಕವಾದ ಸಮಕಾಲೀನ ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾಚೀನ ನಾಗರಿಕ ಸಂಬಂಧಗಳನ್ನು ಹೊಂದಿದೆ.

ಮೊದಲಿಗೆ, ಗೌರವಾನ್ವಿತ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ನಾನು ಜೋರ್ಡಾನ್ ಗೆ ಭೇಟಿ ನೀಡಲಿದ್ದೇನೆ. ಈ ಐತಿಹಾಸಿಕ ಭೇಟಿಯು ನಮ್ಮ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತದೆ. ನನ್ನ ಈ ಭೇಟಿಯ ಸಂದರ್ಭದಲ್ಲಿ, ನಾನು ಗೌರವಾನ್ವಿತ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್, ಜೋರ್ಡಾನ್ ಪ್ರಧಾನಮಂತ್ರಿ ಶ್ರೀ ಜಾಫರ್ ಹಸನ್ ಅವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸುತ್ತೇನೆ ಮತ್ತು ಗೌರವಾನ್ವಿತ ರಾಜಕುಮಾರ  ಅಲ್ ಹುಸೇನ್ ಬಿನ್ ಅಬ್ದುಲ್ಲಾ II ಅವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತೇನೆ. ಅಮ್ಮನ್‌ ನಲ್ಲಿ, ಭಾರತ ಮತ್ತು ಜೋರ್ಡಾನ್ ಸಂಬಂಧಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಚೈತನ್ಯಶೀಲ ಭಾರತೀಯ ಸಮುದಾಯದವರನ್ನು ಸಹ ನಾನು ಭೇಟಿ ಮಾಡುತ್ತೇನೆ.

ಅಮ್ಮನ್ ನಿಂದ, ಇಥಿಯೋಪಿಯಾದ ಪ್ರಧಾನಮಂತ್ರಿ ಅವರಾದ ಗೌರವಾನ್ವಿತ ಡಾ. ಅಬಿಯ್ ಅಹ್ಮದ್ ಅಲಿ ಅವರ ಆಹ್ವಾನದ ಮೇರೆಗೆ, ನಾನು ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾಕ್ಕೆ ನನ್ನ ಮೊದಲ ಭೇಟಿ ನೀಡಲಿದ್ದೇನೆ. ಅಡಿಸ್ ಅಬಾಬಾ ಆಫ್ರಿಕನ್ ಒಕ್ಕೂಟದ ಪ್ರಧಾನ ಕಚೇರಿಯೂ ಆಗಿದೆ. 2023ರಲ್ಲಿ, ಭಾರತದ ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಆಫ್ರಿಕನ್ ಒಕ್ಕೂಟವನ್ನು ಜಿ-20ರ ಖಾಯಂ ಸದಸ್ಯರನ್ನಾಗಿ ಸೇರಿಸಲಾಯಿತು. ಅಡಿಸ್ ಅಬಾಬಾದಲ್ಲಿ, ನಾನು ಗೌರವಾನ್ವಿತ ಡಾ. ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸುತ್ತೇನೆ ಮತ್ತು ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರನ್ನು ಭೇಟಿ ಮಾಡುವ ಅವಕಾಶವನ್ನು ಸಹ ಪಡೆಯುತ್ತೇನೆ. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನನಗೆ ಸಿಗುವುದು. ಅಲ್ಲಿ "ಪ್ರಜಾಪ್ರಭುತ್ವದ ತಾಯಿ"ಯಾಗಿ ಭಾರತದ ಪ್ರಯಾಣದ ಬಗ್ಗೆ ಮತ್ತು ಭಾರತ ಮತ್ತು ಇಥಿಯೋಪಿಯಾ ಪಾಲುದಾರಿಕೆಯು ಜಾಗತಿಕ ದಕ್ಷಿಣಕ್ಕೆ ತರಬಹುದಾದ ಮೌಲ್ಯದ ಬಗ್ಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.

ನನ್ನ ಪ್ರವಾಸದ ಕೊನೆಯ ಹಂತದಲ್ಲಿ, ನಾನು ಒಮನ್ ಗೆ ಭೇಟಿ ನೀಡುತ್ತೇನೆ. ನನ್ನ ಭೇಟಿಯು ಭಾರತ ಮತ್ತು ಒಮಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಗುರುತಿಸುತ್ತದೆ. ಮಸ್ಕತ್ ನಲ್ಲಿ, ಒಮಾನ್ ನ ಘನತೆವೆತ್ತ ದೊರೆ ಸುಲ್ತಾನರೊಂದಿಗೆ ನನ್ನ ಮಾತುಕತೆಗಳನ್ನು ಮತ್ತು ನಮ್ಮ ಬಲವಾದ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳ ಜೊತೆಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಕಡೆಗೆ ನಾನು ಎದುರು ನೋಡುತ್ತಿದ್ದೇನೆ. ದೇಶದ ಅಭಿವೃದ್ಧಿಗೆ ಮತ್ತು ನಮ್ಮ ಪಾಲುದಾರಿಕೆಯನ್ನು ಹೆಚ್ಚಿಸುವಲ್ಲಿ ಅಪಾರ ಕೊಡುಗೆ ನೀಡಿದ ಒಮಾನ್ ನಲ್ಲಿರುವ ಭಾರತೀಯ ಸಮುದಾಯದವರ ಸಭೆಯನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ.

 

*****


(रिलीज़ आईडी: 2203960) आगंतुक पटल : 11
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Assamese , Manipuri , Punjabi , Gujarati , Odia , Tamil , Telugu , Malayalam