ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಮಹಿಳೆಯರ ಉದ್ಯೋಗ ಯೋಜನೆಗಳು


ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಸೌಲಭ್ಯಗಳ ಉತ್ತೇಜನ

प्रविष्टि तिथि: 11 DEC 2025 5:37PM by PIB Bengaluru

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) 2017-18ರಿಂದ ನಡೆಸಿಕೊಂಡು ಬರುತ್ತಿರುವ ಉದ್ಯೋಗ ಮತ್ತು ನಿರುದ್ಯೋಗದ ಮೇಲಿನ ಅಧಿಕೃತ ಅಂಕಿಅಂಶ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಆಗಿದೆ.

ಇತ್ತೀಚಿನ ಲಭ್ಯವಿರುವ ವಾರ್ಷಿಕ ಪಿಎಲ್ ಎಫ್ ಎಸ್ ವರದಿಗಳ ಪ್ರಕಾರ, ದೇಶದಲ್ಲಿ 2023-24 ರಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಸಾಮಾನ್ಯ ಸ್ಥಿತಿಯ ಮೇಲೆ ಅಂದಾಜು ಕಾರ್ಮಿಕ ಬಲ ಭಾಗವಹಿಸುವಿಕೆ ಸಂಖ್ಯೆ (LFPR) ಶೇಕಡಾ 60.1ರಷ್ಟು ಆಗಿದೆ. ಅಲ್ಲದೆ, 2023-24 ರಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಸಾಮಾನ್ಯ ಸ್ಥಿತಿಯ ಮೇಲೆ ನಿರುದ್ಯೋಗ ಪ್ರಮಾಣ (UR) ದೇಶದಲ್ಲಿ ಶೇಕಡಾ 3.2ರಷ್ಟು ಆಗಿದೆ.

ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಾರ್ಹತೆಯನ್ನು ಸುಧಾರಿಸುವುದು ಸರ್ಕಾರದ ಆದ್ಯತೆಯಾಗಿದೆ. ಮಹಿಳಾ ಕಾರ್ಮಿಕ ವರ್ಗದ ಭಾಗವಹಿಸುವಿಕೆಯ ಸಂಖ್ಯೆಯನ್ನು (LFPR) ಹೆಚ್ಚಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರವು ಜಾರಿಗೆ ತರುತ್ತಿರುವ ವಿವಿಧ ಉದ್ಯೋಗ ಸೃಷ್ಟಿ ಯೋಜನೆಗಳು/ಕಾರ್ಯಕ್ರಮಗಳ ವಿವರಗಳನ್ನು https://dge.gov.in/dge/schemes_programmes ನಲ್ಲಿ ನೋಡಬಹುದು.

ಮಹಿಳೆಯರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಜೀವನ ಚಕ್ರದ ನಿರಂತರ ಆಧಾರದ ಮೇಲೆ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ. ಇದರ ಪರಿಣಾಮವಾಗಿ, ಭಾರತವು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ತ್ವರಿತ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ, ಮಹಿಳೆಯರು ವೇಗವಾಗಿ ಮತ್ತು ಸುಸ್ಥಿರ ರಾಷ್ಟ್ರೀಯ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದ್ದಾರೆ.

ಮಹಿಳೆಯರಲ್ಲಿ ಉದ್ಯೋಗ ಪ್ರಮಾಣವನ್ನು ಉತ್ತೇಜಿಸುವ ಸಲುವಾಗಿ, ನಾಲ್ಕು ಕಾರ್ಮಿಕ ಸಂಹಿತೆಗಳು - ವೇತನ ಸಂಹಿತೆ- 2019, ಕೈಗಾರಿಕಾ ಸಂಬಂಧಿ ಸಂಹಿತೆ- 2020, ಸಾಮಾಜಿಕ ಭದ್ರತೆ ಸಂಹಿತೆ-2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ- 2020 ಅನ್ನು ನವೆಂಬರ್ 21, 2025 ರಿಂದ ಜಾರಿಗೆ ತರಲಾಗಿದ್ದು, ಹಿಂದಿನ 29 ಕಾರ್ಮಿಕ ಕಾನೂನುಗಳನ್ನು ತರ್ಕಬದ್ಧಗೊಳಿಸಲಾಗಿದೆ.

ಈ ಕಾರ್ಮಿಕ ಸಂಹಿತೆಗಳು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ವಿವಿಧ ನಿಬಂಧನೆಗಳನ್ನು ಹೊಂದಿವೆ, ಅವುಗಳೆಂದರೆ:

-ಕೆಲಸದ ಸ್ಥಳದ ವಿವಾದ ಪರಿಹಾರಗಳಲ್ಲಿ ಮಹಿಳೆಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಲು ಕುಂದುಕೊರತೆ ನಿವಾರಣಾ ಸಮಿತಿಯಲ್ಲಿ ಮಹಿಳೆಯರಿಗೆ ಅನುಪಾತದಲ್ಲಿ ಪ್ರಾತಿನಿಧ್ಯ.

- ದತ್ತು ಪಡೆದ ಮತ್ತು ಬಾಡಿಗೆ ತಾಯಂದಿರಿಗೆ 12 ವಾರಗಳ ಜೊತೆಗೆ 26 ವಾರಗಳವರೆಗೆ ವೇತನ ಸಹಿತ ಹೆರಿಗೆ ರಜೆ ಮತ್ತು ಸಾಧ್ಯವಾದಲ್ಲಿ ಹೆರಿಗೆ ರಜೆಯ ನಂತರ ಮನೆಯಿಂದಲೇ ಕೆಲಸ ಮಾಡುವ ಅವಕಾಶ,

-ಸಾಯಂಕಾಲ 7 ರಿಂದ ಮುಂಜಾನೆ 6 ಗಂಟೆಯವರೆಗೆ ನೆಲದ ಮೇಲಿನ ಗಣಿಗಳಲ್ಲಿ ಮತ್ತು ಮುಂಜಾನೆ 6 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ (ಸಮ್ಮತಿಯೊಂದಿಗೆ) ನಿರ್ದಿಷ್ಠ ಕೆಲಸಗಳನ್ನು ಮಾಡಲು ಮಹಿಳೆಯರಿಗೆ ಸೂಕ್ತ ಸುರಕ್ಷತೆ ಮತ್ತು ಆರೋಗ್ಯ ಭದ್ರತೆಯೊಂದಿಗೆ ಅವಕಾಶ ನೀಡುವುದು.

-ಒಂದೇ ರೀತಿಯ ಕೆಲಸಕ್ಕೆ ವೇತನ ಮತ್ತು ಉದ್ಯೋಗ ಪರಿಸ್ಥಿತಿಗಳ ವಿಷಯಗಳಲ್ಲಿ ಲಿಂಗ ಆಧಾರಿತ ತಾರತಮ್ಯ ತೋರಿಸದೇ ಇರುವುದು. 

-ಹೊರಗೆ ಹೋಗಿ ದುಡಿಯುವ ತಾಯಂದಿರು ಕೆಲಸ ಮತ್ತು ಕುಟುಂಬ ಜೀವನವನ್ನು ಸುಗಮವಾಗಿ ನಿರ್ವಹಿಸಲು ಸಹಾಯ ಮಾಡಲು ಆರು ವರ್ಷದೊಳಗಿನ ಮಕ್ಕಳಿಗೆ ಶಿಶುವಿಹಾರ ಸೌಲಭ್ಯಗಳನ್ನು ನೀಡುವುದು. 

ಇದಲ್ಲದೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 ರಲ್ಲಿ, ಮಹಿಳೆಯರನ್ನು ಎಲ್ಲಾ ರೀತಿಯ ಕೆಲಸಗಳಿಗೆ ಎಲ್ಲಾ ಸಂಸ್ಥೆಗಳಲ್ಲಿ ನೇಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಮತ್ತು ಸುರಕ್ಷತೆ, ರಜಾದಿನಗಳು ಮತ್ತು ಕೆಲಸದ ಸಮಯಕ್ಕೆ ಸಂಬಂಧಿಸಿದ ಷರತ್ತುಗಳಿಗೆ ಒಳಪಟ್ಟು ಬೆಳಗ್ಗೆ 6 ಗಂಟೆಯ ಮೊದಲು ಮತ್ತು ಸಾಯಂಕಾಲ 7 ಗಂಟೆಯ ನಂತರ ಅವರ ಒಪ್ಪಿಗೆಯೊಂದಿಗೆ ಕೆಲಸ ಮಾಡಬಹುದು ಎಂದು ಹೇಳುತ್ತದೆ. ಯಾವುದೇ ಅಪಾಯಕಾರಿ ಅಥವಾ ಅಪಾಯಕಾರಿ ಕೆಲಸಗಳಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳುವ ಮೊದಲು ಸಂಸ್ಥೆಗಳು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಒದಗಿಸಬೇಕೆಂದು ಸಂಹಿತೆ ಸೂಚಿಸುತ್ತದೆ.

ಇದಲ್ಲದೆ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ರಾಷ್ಟ್ರೀಯ ವೃತ್ತಿ ಸೇವೆ (NCS) ಪೋರ್ಟಲ್ ನ್ನು ಸಹ ನಡೆಸುತ್ತಿದೆ, ಇದು ಖಾಸಗಿ ಮತ್ತು ಸರ್ಕಾರಿ ವಲಯಗಳ ಉದ್ಯೋಗಗಳು, ಆನ್‌ಲೈನ್ ಮತ್ತು ಆಫ್‌ಲೈನ್ ಉದ್ಯೋಗ ಮೇಳಗಳ ಮಾಹಿತಿ, ಉದ್ಯೋಗ ಹುಡುಕಾಟ ಮತ್ತು ಹೊಂದಾಣಿಕೆ, ವೃತ್ತಿ ಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳ ಮಾಹಿತಿ, ಕೌಶಲ್ಯ/ತರಬೇತಿ ಕಾರ್ಯಕ್ರಮಗಳು ಇತ್ಯಾದಿಗಳನ್ನು ಡಿಜಿಟಲ್ ವೇದಿಕೆಯ ಮೂಲಕ ಒದಗಿಸಲು ಒಂದೇ ಸೂರಿನಡಿ ಸಿಗುವ ಪರಿಹಾರವಾಗಿದೆ, ಅದು [www.ncs.gov.in].

ಇದಲ್ಲದೆ, ಸರ್ಕಾರವು ಎಲ್ಲಾ ವಲಯಗಳಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಪ್ರೋತ್ಸಾಹಿಸಲು, ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು, ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ, ಪ್ರಧಾನ ಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆ ಎಂದು ಕರೆಯಲ್ಪಡುವ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ELI) ಯೋಜನೆಯನ್ನು ಜಾರಿಗೆ ತರುತ್ತಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶೀ-ಬಾಕ್ಸ್ (SHe-Box) ಪೋರ್ಟಲ್ ಎಂಬ ವಿದ್ಯುನ್ಮಾನ ವೇದಿಕೆಯನ್ನು ಸ್ಥಾಪಿಸಿದೆ, ಇದು 'ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013' (POSH Act) ನ ವಿವಿಧ ನಿಬಂಧನೆಗಳನ್ನು ಸರಿಯಾಗಿ ಒಳಗೊಂಡಿದೆ.

ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ.

 

*****


(रिलीज़ आईडी: 2202658) आगंतुक पटल : 10
इस विज्ञप्ति को इन भाषाओं में पढ़ें: English , Urdu , Gujarati