ಗೃಹ ವ್ಯವಹಾರಗಳ ಸಚಿವಾಲಯ
ಚುನಾವಣೆ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ಚರ್ಚೆಯಲ್ಲಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿರುವ ವಿರೋಧ ಪಕ್ಷವು ಕಳೆದ 4 ತಿಂಗಳಿಂದ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಬಗ್ಗೆ ಏಕಪಕ್ಷೀಯವಾಗಿ ಸುಳ್ಳುಗಳನ್ನು ಹರಡುತ್ತಿದೆ
ಮರಣ ಹೊಂದಿದರೆ ಅಥವಾ ಯಾರಾದರೂ 2 ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಲ್ಪಟ್ಟಿದ್ದರೆ ಅಂತಹ ಹೆಸರುಗಳನ್ನು ತೆಗೆದುಹಾಕುವುದು, ಯಾರಾದರೂ 18 ವರ್ಷ ತುಂಬಿದಾಗ ಹೆಸರು ಸೇರಿಸುವುದು ಮತ್ತು ಒಳನುಸುಳುಕೋರರನ್ನು ಆಯ್ದು ತೆಗೆದುಹಾಕುವುದು - ಎಸ್ಐಆರ್ ಎಂದರೆ ಅದೇ ಆಗಿದೆ
ದೇಶವನ್ನು ಅಸುರಕ್ಷಿತವಾಗಿಸುವ ಹುನ್ನಾರ ನಡೆಸುವ ಒಳನುಸುಳುಕೋರರು ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡುವುದನ್ನು ತಡೆಯಲು ಮತದಾರರ ಪಟ್ಟಿಯ ಶುದ್ಧೀಕರಣ ಅತ್ಯಗತ್ಯ - ಆ ಪ್ರಕ್ರಿಯೆಯನ್ನೇ ಎಸ್ಐಆರ್ ಎಂದು ಕರೆಯಲಾಗುತ್ತದೆ
ವಿರೋಧ ಪಕ್ಷದ ಪುನರಾವರ್ತಿತ ಚುನಾವಣಾ ಸೋಲಿಗೆ ಕಾರಣ ಇವಿಎಂಗಳು ಅಥವಾ ಮತ ಕಳ್ಳತನವಲ್ಲ, ಆದರೆ ಅದರ ಸ್ವಂತ ನಾಯಕತ್ವ - ಒಂದು ದಿನ ವಿಪಕ್ಷ ಕಾರ್ಯಕರ್ತರೇ ಖಂಡಿತವಾಗಿಯೂ ವಿಪಕ್ಷವನ್ನು ಸೋಲಿನ ಹೊಣೆಗಾರರನ್ನಾಗಿ ಮಾಡುತ್ತಾರೆ
ವಿರೋಧ ಪಕ್ಷದ ಸಮಯದಲ್ಲೇ ಇವಿಎಂಗಳನ್ನು ಪರಿಚಯಿಸಲಾಯಿತು; 2004ರಲ್ಲಿ ಇವಿಎಂಗಳೊಂದಿಗೆ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷ ಗೆದ್ದಿತು, ಆದರೆ ಈಗ ಅವರು ಸೋತಾಗ ಇವಿಎಂಗಳ ಮೇಲೆ ದೋಷಾರೋಪಣೆ ಮಾಡುತ್ತಿದ್ದಾರೆ
11 ವರ್ಷಗಳಿಂದ ಇವಿಎಂಗಳು ಮತ್ತು ಮತ ಕಳ್ಳತನದ ಬಗ್ಗೆ ಮಾತನಾಡುತ್ತಿರುವ ಪ್ರಮುಖ ವಿರೋಧ ಪಕ್ಷವು ಚುನಾವಣಾ ಸುಧಾರಣೆಗಳ ಕುರಿತು ಚುನಾವಣಾ ಆಯೋಗಕ್ಕೆ ಇಲ್ಲಿಯವರೆಗೆ ಒಂದೇ ಒಂದು ಸಲಹೆ ನೀಡಿಲ್ಲ
ನಮ್ಮ ದೇಶದಲ್ಲಿ, ತಲೆಮಾರುಗಳಿಂದ ಮತ ಕಳ್ಳತನ ಮಾಡುತ್ತಿರುವ ಕೆಲವು ಕುಟುಂಬಗಳಿವೆ
ಮತದಾರರ ಪಟ್ಟಿ ಹೊಸದಾಗಿರಲಿ ಅಥವಾ ಹಳೆಯದಾಗಿರಲಿ, ಪ್ರಮುಖ ವಿರೋಧ ಪಕ್ಷ ಮತ್ತು ಅದರ ಮೈತ್ರಿಕೂಟದ ಸೋಲು ಖಚಿತ
ಒಳನುಸುಳುಕೋರರ ಬಗ್ಗೆ ನಮ್ಮ ಪಕ್ಷದ ನೀತಿ ಹೀಗಿದೆ: ಪತ್ತೆ ಹಚ್ಚಿ, ನಿರ್ಮೂಲನೆ ಮಾಡಿ ಮತ್ತು ಗಡೀಪಾರು ಮಾಡಿ; ಒಳನುಸುಳುವಿಕೆಯನ್ನು ಸಾಮಾನ್ಯೀಕರಿಸುವುದು, ಅದಕ್ಕೆ ಮಾನ್ಯತೆ ನೀಡುವುದು ಮತ್ತು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಅದನ್ನು ಔಪಚಾರಿಕಗೊಳಿಸುವುದು ವಿರೋಧ ಪಕ್ಷದ ನೀತಿಯಾಗಿದೆ
ದೇಶಕ್ಕಾಗಿ ಮಡಿಯುವುದು, ರಾಷ್ಟ್ರವನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವುದು ಮತ್ತು ಭಾರತೀಯ ಸಂಸ್ಕೃತಿಯ ಧ್ವಜವನ್ನು ಎತ್ತರಕ್ಕೆ ಹಾರಿಸುವುದು ಆರ್‌ಎಸ್‌ಎಸ್‌ನ ಸಿದ್ಧಾಂತವಾಗಿದೆ
ಜನಸಂಖ್ಯೆ ಆಧಾರದ ಮೇಲೆ ದೇಶವನ್ನು ಈಗಾಗಲೇ ಒಮ್ಮೆ ವಿಭಜಿಸಲಾಗಿದೆ, ಆದ್ದರಿಂದ, ಭವಿಷ್ಯದ ಪೀಳಿಗೆಗಳು ಮತ್ತೆ ಅದೇ ಪರಿಸ್ಥಿತಿ ಎದುರಿಸಬೇಕಿಲ್ಲದ ರೀತಿಯಲ್ಲಿ ಎಸ್‌ಐಆರ್ ಅವಶ್ಯಕವಾಗಿದೆ
ಸರ್ಜಿಕಲ್ ದಾಳಿ, ವಾಯುದಾಳಿ, 370ನೇ ವಿಧಿ ರದ್ದತಿ, ರಾಮಮಂದಿರ ನಿರ್ಮಾಣ, ಒಳನುಸುಳುಕೋರರ ನಿರ್ಮೂಲನೆ, ಸಿಎಎ ಪರಿಚಯ ಮತ್ತು ತ್ರಿವಳಿ ತಲಾಖ್ ರದ್ದತಿಯನ್ನು ಪ್ರತಿಪಕ್ಷಗಳು ವಿರೋಧಿಸಿದವು – ಆದರೆ, ನಾವು ಅದಕ್ಕಾಗಿಯೇ
प्रविष्टि तिथि:
10 DEC 2025 10:15PM by PIB Bengaluru
ಮೋದಿ ಜಿ ದೇಶದ ಇತಿಹಾಸದಲ್ಲಿ ಅತ್ಯಂತ ಕಠಿಣ ಪರಿಶ್ರಮ ವಹಿಸಿದ ಮತ್ತು ಜನರ ಸಂಪರ್ಕಕ್ಕಾಗಿ ಹೆಚ್ಚು ಪ್ರಯಾಣ ಬೆಳಎಸಿದ ಪ್ರಧಾನಮಂತ್ರಿ
ಎಸ್‌ಐಆರ್‌ನಿಂದ ಉಂಟಾದ ರಾಜಕೀಯ ಹಾನಿಯಿಂದಾಗಿ ವಿರೋಧ ಪಕ್ಷಗಳು ಅಸಮಾಧಾನಗೊಂಡಿವೆ
ನೀವು ಚುನಾವಣೆಗಳಲ್ಲಿ ಗೆದ್ದಾಗ, ಮತದಾರರ ಪಟ್ಟಿ "ಸರಿಯಾಗಿರುತ್ತದೆ"; ವಿರೋಧ ಪಕ್ಷದ ಈ ದ್ವಂದ್ವ ನೀತಿಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ
ಎಸ್ಐಆರ್, ಇದು ಸಾಂವಿಧಾನಿಕ ಪ್ರಕ್ರಿಯೆ, ಅದನ್ನು ಪ್ರಶ್ನಿಸುವ ಮೂಲಕ, ವಿರೋಧ ಪಕ್ಷಗಳು ವಿಶ್ವಾದ್ಯಂತ ಭಾರತದ ಪ್ರಜಾಪ್ರಭುತ್ವದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿವೆ
ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಸೇರಿಸಿಕೊಂಡಿದ್ದು ಮೋದಿ ಸರ್ಕಾರ; ಇದಕ್ಕೂ ಮೊದಲು, ಪ್ರಧಾನಮಂತ್ರಿ ಒಬ್ಬರೇ ಇದನ್ನು ನಿರ್ಧರಿಸುತ್ತಿದ್ದರು
ವಿರೋಧ ಪಕ್ಷಗಳು ಸದನವನ್ನು 200 ಬಾರಿ ಬಹಿಷ್ಕರಿಸಿದರೂ, ಒಬ್ಬ ಒಳನುಸುಳುಕೋರನಿಗೆ ಮತದಾನದ ಹಕ್ಕು ಪಡೆಯಲು ನಾವು ಅವಕಾಶ ನೀಡುವುದಿಲ್ಲ
ತಮಿಳುನಾಡಿನಲ್ಲಿ, ವಿರೋಧ ಪಕ್ಷದ ಮೈತ್ರಿಕೂಟವು ಹಿಂದೂಗಳಿಗೆ ಪೂಜೆ ಹಕ್ಕನ್ನು ನೀಡಿದ ನ್ಯಾಯಾಧೀಶರ ವಿರುದ್ಧ ದೋಷಾರೋಪಣೆ ನಿರ್ಣಯ ಮಂಡಿಸಿದೆ - ಇದಕ್ಕಾಗಿ ದೇಶದ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಲೋಕಸಭೆಯಲ್ಲಿಂದು ಚುನಾವಣೆ ಸುಧಾರಣೆಗಳ ಕುರಿತು ಚರ್ಚೆಯಲ್ಲಿ ಭಾಗವಹಿಸಿದರು.
ರಾಷ್ಟ್ರೀಯ ವಿಷಯಗಳ ಚರ್ಚೆಗೆ ಸಂಸತ್ತು ಅತಿ ದೊಡ್ಡ ವೇದಿಕೆಯಾಗಿದ್ದು, ಚರ್ಚೆಯಿಂದ ನಾವು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಯಾವುದೇ ವಿಷಯವಿರಲಿ, ಸಂಸತ್ತಿನ ನಿಯಮಗಳ ಪ್ರಕಾರ ನಾವು ಯಾವಾಗಲೂ ಚರ್ಚೆಗೆ ಸಿದ್ಧರಿದ್ದೇವೆ. ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಥವಾ ಎಸ್ಐಆರ್ ಹೆಸರಿನಲ್ಲಿ ವಿರೋಧ ಪಕ್ಷ ಚರ್ಚೆ ಬಯಸಿದೆ, ಆದರೆ ವಿಶೇಷ ತೀವ್ರ ಪರಿಷ್ಕರಣೆಯ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ, ಆಯೋಗವು ಸರ್ಕಾರದ ಅಡಿ ಕಾರ್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಈ ಸದನದಲ್ಲಿ ಅಂತಹ ಚರ್ಚೆ ನಡೆಯಲು ಸಾಧ್ಯವಿಲ್ಲ. ಆದರೆ ಚುನಾವಣೆ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ವಿಶೇಷವೆಂದರೆ, ವಿರೋಧ ಪಕ್ಷದ ಹೆಚ್ಚಿನ ಸದಸ್ಯರು ಎಸ್ಐಆರ್ ಬಗ್ಗೆಯೇ ಮಾತನಾಡಿದರು ಎಂದರು.
ಕಳೆದ 4 ತಿಂಗಳಿಂದ ಎಸ್‌ಐಆರ್ ಬಗ್ಗೆ ಏಕಪಕ್ಷೀಯ ಸುಳ್ಳುಗಳನ್ನು ಹರಡಲಾಗುತ್ತಿದೆ, ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಗಳು ನಿರಂತವಾಗಿ ನಡೆಯುತ್ತಿವೆ. ಚುನಾವಣಾ ಆಯೋಗವನ್ನು ಸಂವಿಧಾನದ ವಿಧಿಗಳ ಅಡಿ ಸ್ಥಾಪಿಸಲಾಗಿದೆ. ಒಂದು ಅರ್ಥದಲ್ಲಿ ಇದು ಸಾಂವಿಧಾನಿಕ ಸಂಸ್ಥೆಯಾಗಿದೆ. ಸಂವಿಧಾನವು ಚುನಾವಣಾ ಆಯೋಗಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಜತೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮತ್ತು ಪರಿಷ್ಕರಿಸುವ ಜವಾಬ್ದಾರಿ ವಹಿಸಿದೆ. ಸಂವಿಧಾನದ ಭಾಗ 15, ವಿಧಿ 324ರ ಅಡಿ, ಚುನಾವಣಾ ಆಯೋಗ ಸ್ಥಾಪಿಸಲು, ಚುನಾವಣಾ ಆಯುಕ್ತರನ್ನು ನೇಮಿಸಲು ಮತ್ತು ಚುನಾವಣಾ ಆಯೋಗಕ್ಕೆ ಲೋಕಸಭೆ, ರಾಜ್ಯಸಭೆ, ರಾಜ್ಯ ಶಾಸಕಾಂಗ ಸಭೆಗಳು, ಉಪ ರಾಷ್ಟ್ರಪತಿ ಮತ್ತು ರಾಷ್ಟ್ರಪತಿ ಚುನಾವಣೆಗಳ ಮೇಲೆ ಸಂಪೂರ್ಣ ನಿಯಂತ್ರಣ ನೀಡುತ್ತದೆ ಎಂದು ಅಮಿತ್ ಶ್ಹಾ ಹೇಳಿದರು. ವಿಧಿ 325ರ ಪ್ರಕಾರ, ಯಾವುದೇ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದಿಲ್ಲ, ವಿಶೇಷ ತೀವ್ರ ಪರಿಷ್ಕರಣೆಗೆ ವಿಧಿ 326 ಅತ್ಯಂತ ಮುಖ್ಯವಾಗಿದೆ. ಸಂವಿಧಾನದ 326 ವಿಧಿಯು ಮತದಾರರಾಗಲು ಬೇಕಾದ ಅರ್ಹತೆ, ಮಾನದಂಡಗಳು ಮತ್ತು ಷರತ್ತುಗಳನ್ನು ವ್ಯಾಖ್ಯಾನಿಸುತ್ತದೆ. ಮೊದಲ ಷರತ್ತು ಎಂದರೆ ಮತದಾರನು ಭಾರತದ ಪ್ರಜೆಯಾಗಿರಬೇಕು, ವಿದೇಶಿಗನಾಗಿರಬಾರದು. ಎರಡನೆಯ ಷರತ್ತು ಎಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಮತದಾರರಾಗಬಹುದು, ಮೂರನೆಯ ಷರತ್ತು ಎಂದರೆ ಮಾನಸಿಕ ಅಸಾಮರ್ಥ್ಯ, ಅಪರಾಧದಲ್ಲಿ ಭಾಗಿಯಾಗುವಿಕೆ ಅಥವಾ ಭ್ರಷ್ಟಾಚಾರದ ಬಗ್ಗೆ ಕಾಲಕಾಲಕ್ಕೆ ಕಾನೂನಿನಲ್ಲಿ ನಿಗದಿಪಡಿಸಲಾದ ನಿಬಂಧನೆಗಳ ಆಧಾರದ ಮೇಲೆ ಮತದಾರರ ಸಿಂಧುತ್ವ ನಿರ್ಧರಿಸಲಾಗುತ್ತದೆ. ಈ 3 ಅರ್ಹತೆಗಳ ಆಧಾರದ ಮೇಲೆ, ಭಾರತೀಯ ಮತದಾರರಾಗಲು ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ಈ ಎಲ್ಲಾ 3 ಅಂಶಗಳನ್ನು ಚುನಾವಣಾ ಆಯೋಗವು ಪರಿಶೀಲಿಸಬೇಕು. 327ನೇ ವಿಧಿಯು ಮತದಾರರ ಪಟ್ಟಿ, ಗಡಿ ನಿರ್ಣಯ, ಚುನಾವಣೆಗಳನ್ನು ನಡೆಸುವುದು ಮತ್ತು ಇತರ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಶಿಫಾರಸು ಮಾಡಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುತ್ತದೆ. ಈ ವ್ಯಾಖ್ಯಾನದ ಪ್ರಕಾರ, ಮತದಾರರ ಪಟ್ಟಿ ತಯಾರಿಸಲು 327ನೇ ವಿಧಿಯು ಚುನಾವಣಾ ಆಯೋಗಕ್ಕೆ ಸಂಪೂರ್ಣ ಅಧಿಕಾರ ನೀಡುತ್ತದೆ ಎಂದು ಗೃಹ ಸಚಿವರು ಹೇಳಿದರು.
ನಮ್ಮ ಪ್ರಜಾಪ್ರಭುತ್ವದ ಇತಿಹಾಸವು 1952ರಲ್ಲಿ ಆರಂಭವಾಯಿತು, ಮೊದಲ ವಿಶೇಷ ತೀವ್ರ ಪರಿಷ್ಕರಣೆ 1952ರಲ್ಲೇ ನಡೆಯಿತು. ಎರಡನೆಯದು 1957ರಲ್ಲಿ ಮತ್ತು ಮೂರನೆಯದು 1961ರಲ್ಲಿ, ಪ್ರಧಾನ ಮಂತ್ರಿ ಅವರು ಆಗ ಪ್ರಮುಖ ವಿರೋಧ ಪಕ್ಷಕ್ಕೆ ಸೇರಿದ್ದರು. ವಿಶೇಷ ತೀವ್ರ ಪರಿಷ್ಕರಣೆಗಳನ್ನು 1965 ಮತ್ತು 1966ರಲ್ಲೂ ಸಹ ನಡೆಸಲಾಯಿತು, ಆ ಸಮಯದಲ್ಲೂ ಸಹ, ಪ್ರಧಾನ ಮಂತ್ರಿಗಳು ವಿರೋಧ ಪಕ್ಷದಲ್ಲಿದ್ದರು. 1983–84, 1987–89 ಮತ್ತು 1992–93–95ರಲ್ಲಿ ಪರಿಷ್ಕರಣೆಗಳನ್ನು ನಡೆಸಲಾಯಿತು. ಆಗಲೂ ಸಹ, ಪ್ರಧಾನ ಮಂತ್ರಿಗಳು ಪ್ರಮುಖ ವಿರೋಧ ಪಕ್ಷದ ನಾಯಕರಾಗಿದ್ದರು. 2002–03ರಲ್ಲಿ ಪರಿಷ್ಕರಣೆ ನಡೆದಾಗ, ಪ್ರಧಾನ ಮಂತ್ರಿಗಳು ತಮ್ಮದೇ ಪಕ್ಷದಲ್ಲಿದ್ದರು. 2004ರಲ್ಲಿ, ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಯಿತು. 2004ರ ನಂತರ, ಮುಂದಿನ ವಿಶೇಷ ತೀವ್ರ ಪರಿಷ್ಕರಣೆ 2025ರಲ್ಲಿ ಮಾತ್ರ ನಡೆಯುತ್ತಿದೆ, ಯಾವುದೇ ರಾಜಕೀಯ ಪಕ್ಷ ಇಲ್ಲಿಯವರೆಗೆ ಈ ಪ್ರಕ್ರಿಯೆಯನ್ನು ವಿರೋಧಿಸಿಲ್ಲ, ಏಕೆಂದರೆ ಇದು ಚುನಾವಣೆಗಳ ಪಾವಿತ್ರ್ಯ, ಚುನಾವಣೆಗಳ ಉದ್ದೇಶಗಳು ಮತ್ತು ಪ್ರಜಾಪ್ರಭುತ್ವದ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಆಧಾರವಾಗಿರುವ ಮತದಾರರ ಪಟ್ಟಿಯೇ ಕಲುಷಿತಗೊಂಡರೆ, ಚುನಾವಣೆಗಳು ಹೇಗೆ ಮುಕ್ತ ಮತ್ತು ನ್ಯಾಯಸಮ್ಮತವಾಗಿರುತ್ತವೆ? ಮತದಾರರ ಪಟ್ಟಿಯ ಪುನರಾವರ್ತಿತ ತೀವ್ರ ಪರಿಷ್ಕರಣೆ ಅಗತ್ಯ. ಆದ್ದರಿಂದಲೇ, ಚುನಾವಣಾ ಆಯೋಗವು ಅದನ್ನು 2025ರಲ್ಲಿ ನಡೆಸಬೇಕೆಂದು ನಿರ್ಧರಿಸಿದೆ ಎಂದು ಅಮಿತ್ ಶ್ಹಾ ಹೇಳಿದರು.
2010ರಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕುವಂತಿಲ್ಲ ಎಂಬ ನಿಬಂಧನೆ ಪರಿಚಯಿಸಲಾಗಿದೆ. ಆಗಿನ ಸರ್ಕಾರ ಪ್ರಮುಖ ವಿರೋಧ ಪಕ್ಷದ್ದಾಗಿತ್ತು. ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಎಂದರೆ ಮರಣ ಹೊಂದಿದಾಗ ಅಥವಾ ನಕಲಿ ನಮೂದುಗಳಿದ್ದರೆ ಅಂತಹ ಹೆಸರುಗಳನ್ನು ತೆಗೆದುಹಾಕುವುದು(2 ಸ್ಥಳಗಳಲ್ಲಿ ನೋಂದಾಯಿಸಲಾದ ಮತದಾರರು), ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದಾಗ ಹೆಸರು ಸೇರಿಸುವುದು ಮತ್ತು ವಿದೇಶಿ ನಾಗರಿಕರಾಗಿದ್ದರೆ ಅಂತಹ ಹೆಸರು ಆಯ್ದು ಅಳಿಸುವುದಾಗಿದೆ. ದೇಶದ ಪ್ರಧಾನಿ ಅಥವಾ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಒಳನುಸುಳಕೋರರು ನಿರ್ಧರಿಸುವುದಾದರೆ, ಯಾವುದೇ ದೇಶದ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯಬಹುದೇ? ಒಬ್ಬ ಮತದಾರ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತ ಚಲಾಯಿಸಲು ಸಾಧ್ಯವಾಗಬಾರದು. ಎಸ್ಐಆರ್ ಎಂದರೆ ಮತದಾರರ ಪಟ್ಟಿಯ ಶುದ್ಧೀಕರಣ, ಆದರೆ ಇದು ಕೆಲವು ಪಕ್ಷಗಳ ರಾಜಕೀಯ ಹಿತಾಸಕ್ತಿಗಳನ್ನು ಹಾನಿ ಮಾಡುತ್ತದೆ. ಈ ದೇಶದ ಸಂಸತ್ತು ಅಥವಾ ರಾಜ್ಯ ಶಾಸಕಾಂಗಗಳನ್ನು ಆಯ್ಕೆ ಮಾಡಲು ವಿದೇಶಿಯರಿಗೆ ಮತ ಚಲಾಯಿಸುವ ಹಕ್ಕು ನೀಡಬಾರದು ಎಂದು ಶ್ರೀ ಅಮಿತ್ ಶಾ ಹೇಳಿದರು.
ವಿಶೇಷ ತೀವ್ರ ಪರಿಷ್ಕರಣೆ ಎಂದರೆ ಕೇವಲ ಮತದಾರರ ಪಟ್ಟಿಯನ್ನು ಸುಧಾರಿಸುವ ಪ್ರಕ್ರಿಯೆ. ಮತದಾರರ ಪಟ್ಟಿ ಹಳೆಯದಾಗಿರಲಿ ಅಥವಾ ಹೊಸದಾಗಿರಲಿ, ಒಂದು ಪಕ್ಷದ ಸೋಲಿಗೆ ಪಟ್ಟಿಯೇ ಕಾರಣವಲ್ಲ - ಅದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವವರು ಎದುರಿಸುವ ಆಡಳಿತ ವಿರೋಧಿ ಮನೋಭಾವದಿಂದ ಉಂಟಾಗುತ್ತದೆ. ನಾವು ಚುನಾವಣೆಯಲ್ಲಿ ಸೋತಾಗ ವಿರೋಧ ಪಕ್ಷಗಳು ಮತದಾರರ ಪಟ್ಟಿಯನ್ನು ವಿರೋಧಿಸುವುದಿಲ್ಲ, ಆದರೆ ಇತ್ತೀಚೆಗೆ ನಡೆದ ರಾಜ್ಯಗಳ ಚುನಾವಣೆಯಲ್ಲಿ ಭಾರಿ ಸೋಲುಂಟಾದಾಗ, ಅವರು ಪಟ್ಟಿಯನ್ನು ವಿರೋಧಿಸುತ್ತಾರೆ. ನೀವು ಗೆದ್ದಾಗ ಚುನಾವಣಾ ಆಯೋಗವು ಅದ್ಭುತವಾಗಿರುತ್ತದೆ, ನೀವು ಸೋತಾಗ ಆಯೋಗದ ವಿರುದ್ಧ ಆರೋಪಗಳನ್ನು ಮಾಡುತ್ತೀರಿ. ನೀವು ಗೆದ್ದಾಗ, ಮತದಾರರ ಪಟ್ಟಿ ಒಳ್ಳೆಯದಾಗಿರುತ್ತದೆ, ನೀವು ಸೋತಾಗ ಮತದಾರರ ಪಟ್ಟಿ ಕೆಟ್ಟದಾಗಿರುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ದ್ವಂದ್ವ ನೀತಿಗಳನ್ನು ಒಪ್ಪಲಾಗುವುದಿಲ್ಲ. ಅನುವಂಶೀಯವಾಗಿ ಮತ ಕದಿಯುವಲ್ಲಿ ತೊಡಗಿರುವ ಕೆಲವು ಕುಟುಂಬಗಳು ಇಲ್ಲಿವೆ ಎಂದು ಶ್ರೀ ಅಮಿತ್ ಶಾ ಆರೋಪಿಸಿದರು.
ನಾವು ಕೂಡ ವಿರೋಧ ಪಕ್ಷದಲ್ಲಿದ್ದೆವು. ಅದು ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ, ಚುನಾವಣಾ ಆಯೋಗ ಅಥವಾ ಚುನಾವಣಾ ಆಯುಕ್ತರ ವಿರುದ್ಧ ನಾವು ಎಂದಿಗೂ ಆರೋಪಗಳನ್ನು ಹೊರಿಸಿಲ್ಲ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸುವ ಸಂಸ್ಥೆಯಾಗಿದ್ದು, ಅದನ್ನು ಯಾವುದೇ ರಾಜಕೀಯ ಪಕ್ಷವಲ್ಲ, ಸಂವಿಧಾನ ಗುರುತಿಸಿದೆ. ಮತದಾರರ ಪರಿಶೀಲನೆಯು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಈ ಸಾಂವಿಧಾನಿಕ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ, ಪ್ರತಿಪಕ್ಷಗಳು ವಿಶ್ವಾದ್ಯಂತ ಚುನಾವಣಾ ಆಯೋಗದ ವರ್ಚಸ್ಸಿಗೆ ಕಳಂಕ ತರುವ ಕೆಲಸ ಮಾಡುತ್ತಿವೆ. ಹಾಗೆ ಮಾಡುವುದರಿಂದ ಪ್ರತಿಪಕ್ಷಗಳು, ವಿಶ್ವದಲ್ಲಿ ಭಾರತದ ಪ್ರಜಾಪ್ರಭುತ್ವದ ವರ್ಚಸ್ಸಿಗೆ ಹಾನಿ ಮಾಡುತ್ತಿವೆ ಎಂದು ಸಚಿವ ಅಮಿತ್ ಶಾ ಟೀಕಿಸಿದರು.
2014 ಮೇ ತಿಂಗಳಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಆದಾಗಿನಿಂದ, ಪ್ರತಿಪಕ್ಷಗಳು ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಾ ಬಂದಿವೆ. ಎನ್‌ಡಿಎ 3 ಲೋಕಸಭಾ ಚುನಾವಣೆಗಳು ಮತ್ತು 41 ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಗೆದ್ದಿದೆ - ಅಂದರೆ ಒಟ್ಟು 44 ಚುನಾವಣೆಗಳು - ಆದರೆ ವಿರೋಧ ಪಕ್ಷಗಳು 30 ವಿಧಾನಸಭಾ ಚುನಾವಣೆಗಳನ್ನು ಗೆದ್ದಿವೆ. ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮವಿದ್ದರೆ, ಚುನಾವಣೆಗಳನ್ನು ಗೆದ್ದ ನಂತರ ವಿರೋಧ ಪಕ್ಷಗಳು ಏಕೆ ಪ್ರಮಾಣ ವಚನ ಸ್ವೀಕರಿಸಿದವು ಅವುಗಳಿಗೆ ಅವರು ಏಕೆ ಸ್ಪರ್ಧಿಸಿದರು? ಮತದಾರರ ಪಟ್ಟಿಯಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೆ, ಪರಿಶೀಲನೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯು ಮತದಾರರ ಪಟ್ಟಿಯನ್ನು ಸರಿಪಡಿಸುವುದು ಎಂದರ್ಥ. ಆದಾಗ್ಯೂ, ವಿರೋಧ ಪಕ್ಷಗಳು ಈ ಪ್ರಕ್ರಿಯೆಯನ್ನು ಬಹಿಷ್ಕರಿಸುತ್ತವೆ, ಅವರ ಸರ್ಕಾರಗಳು ಸಹ ಇದಕ್ಕೆ ಸಹಕಾರ ನೀಡುತ್ತಿಲ್ಲ. ಮತದಾರರ ಪಟ್ಟಿಯ ಶುದ್ಧೀಕರಣವು ವಿರೋಧ ಪಕ್ಷದ ಬೇಡಿಕೆಯಾಗಿದೆ, ಚುನಾವಣಾ ಆಯೋಗವು ಅದನ್ನು ನಿಖರವಾಗಿ ಮಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಪ್ರಜಾಪ್ರಭುತ್ವದಲ್ಲಿ, ತಮ್ಮ ಇಚ್ಛೆಯ ಪ್ರಶ್ನೆಗಳನ್ನು ಮಾತ್ರ ಕೇಳಬೇಕು ಎಂದು ವಿರೋಧ ಪಕ್ಷಗಳು ನಂಬಿದರೆ, ಇದು ಸಾಧ್ಯವಿಲ್ಲ. ಏಕೆಂದರೆ ಇದು ತುರ್ತು ಪರಿಸ್ಥಿತಿಯಲ್ಲ. ಒಬ್ಬ ಪತ್ರಕರ್ತ ಪ್ರಶ್ನೆ ಕೇಳಿದರೆ, ನೀವು ಅವರನ್ನು ಆಡಳಿತ ಪಕ್ಷದ ಏಜೆಂಟ್ ಎಂದು ಹಣೆಪಟ್ಟಿ ಕಟ್ಟುತ್ತೀರಿ. ನೀವು ಪ್ರಕರಣದಲ್ಲಿ ಸೋತಾಗ, ನ್ಯಾಯಾಧೀಶರನ್ನು ದೂಷಿಸುತ್ತೀರಿ, ನೀವು ಚುನಾವಣೆಯಲ್ಲಿ ಸೋತಾಗ ಇವಿಎಂಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತೀರಿ. ಪ್ರತಿಪಕ್ಷಗಳು ಜನರ ಮನ ಗೆಲ್ಲದಿದ್ದಾಗ ಇವಿಎಂಗಳನ್ನು ತಿರುಚುವ ವಾದ ಮುಂದಿಡುತ್ತವೆ, "ಮತ ಕಳ್ಳತನ"ವನ್ನು ಒಂದು ವಿಷಯವನ್ನಾಗಿ ಮಾಡಿ ಬಿಹಾರದಾದ್ಯಂತ ಯಾತ್ರೆ ಪ್ರಾರಂಭಿಸಿದವು, ಆದರೆ ಅವರು ಅಲ್ಲೂ ಸೋತರು. ಪ್ರತಿಪಕ್ಷಗಳ ಸೋಲಿಗೆ ಕಾರಣ ಇವಿಎಂಗಳು ಅಥವಾ ಮತದಾರರ ಪಟ್ಟಿಯಲ್ಲ, ಅವರ ಸ್ವಂತ ನಾಯಕತ್ವ ಎಂದು ಅಮಿತ್ ಶಾ ಹೇಳಿದರು.
1989 ಮಾರ್ಚ್ 15ರಂದು, ಪ್ರಮುಖ ವಿರೋಧ ಪಕ್ಷದ ನಾಯಕರು ದೇಶದ ಪ್ರಧಾನಿಯಾಗಿದ್ದಾಗಲೇ, ಇವಿಎಂಗಳನ್ನು ಪರಿಚಯಿಸಲು ಕಾನೂನು ಬದಲಾವಣೆಗಳನ್ನು ಮಾಡಲಾಯಿತು. ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರಿದ್ದ ಪೀಠವು 2002ರಲ್ಲಿ ಇವಿಎಂಗಳಿಗೆ ಸಂಬಂಧಿಸಿದ ಕಾನೂನು ಬದಲಾವಣೆಗಳನ್ನು ಎತ್ತಿಹಿಡಿದಿದೆ. ನಂತರ 1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಕೇವಲ 16 ವಿಧಾನಸಭಾ ಕ್ಷೇತ್ರಗಳಲ್ಲಿ ವಿಚಾರಣೆ ನಡೆಸಲಾಯಿತು. ಸಂಪೂರ್ಣ ಪರಿಶೀಲನೆಯ ನಂತರ 2004ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ಇವಿಎಂಗಳ ಬಳಕೆ ಪ್ರಾರಂಭವಾಯಿತು, ಆ ಸಮಯದಲ್ಲಿ ವಿರೋಧ ಪಕ್ಷ ಗೆದ್ದಿತು. 2009ರ ಚುನಾವಣೆಯನ್ನು ಸಹ ಇವಿಎಂಗಳನ್ನು ಬಳಸಿ ನಡೆಸಲಾಯಿತು, ಚುನಾವಣೆ ಗೆದ್ದ ನಂತರ ವಿರೋಧ ಪಕ್ಷಗಳು ಮೌನವಾಗಿದ್ದವು. ನೀವು ಇವಿಎಂಗಳ ಬಳಕೆಯ ಬಗ್ಗೆ ಕಾನೂನು ಮಾಡಿದ್ದೀರಿ, ನೀವು ಯಂತ್ರಗಳನ್ನು ಪರಿಚಯಿಸಿದ್ದೀರಿ, ಇವಿಎಂಗಳೊಂದಿಗೆ ನಡೆದ ಮೊದಲ ಮತ್ತು ಎರಡನೇ ಚುನಾವಣೆಗಳನ್ನು ಸಹ ವಿರೋಧ ಪಕ್ಷಗಳು ಗೆದ್ದವು, ನೀವು 10 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದೀರಿ, ಆದರೆ ನೀವು ಸೋತಾಗ, ನೀವು ಇವಿಎಂಗಳನ್ನು ತಿರುಚಿದ್ದೀರಿ ಎಂದು ಆರೋಪಿಸಲು ಪ್ರಾರಂಭಿಸಿದ್ದೀರಿ ಎಂದು ಅಮಿತ್ ಶಾ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
5 ವರ್ಷಗಳ ಸಂಶೋಧನೆಯ ನಂತರ, ವಿವಿಪ್ಯಾಟ್ ಪರಿಚಯಿಸಲಾಗಿದೆ, ಇದು ಮತದಾರರು ಚಲಾಯಿಸಿದ ಮತವನ್ನು ಅವರು ಆಯ್ಕೆ ಮಾಡಿದ ಪಕ್ಷದ ಚಿಹ್ನೆಯ ಮೇಲೆ ನೋಂದಾಯಿಸುತ್ತದೆ. ಆದರೆ ನಂತರ ವಿರೋಧ ಪಕ್ಷಗಳು ವಿವಿಪ್ಯಾಟ್ ಬಗ್ಗೆಯೂ ಆರೋಪಗಳನ್ನು ಮಾಡಲು ಪ್ರಾರಂಭಿಸಿದವು. ನಂತರ ಚುನಾವಣಾ ಆಯೋಗವು 5% ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ಹೊಂದಿಸಲು ನಿರ್ಧರಿಸಿತು. ಇಲ್ಲಿಯವರೆಗೆ, 16,000 ಇವಿಎಂಗಳು ಮತ್ತು ವಿವಿಪ್ಯಾಟ್ ಗಳನ್ನು ಹೊಂದಿಸಲಾಗಿದೆ, ಆದರೆ ಅವುಗಳಲ್ಲಿ ಒಂದರಲ್ಲಿಯೂ ಒಂದೇ ಒಂದು ಮತ ಬದಲಾಗಿದೆ ಎಂಬುದು ಕಂಡುಬಂದಿಲ್ಲ. ಎಣಿಕೆಯ ಸಮಯದಲ್ಲಿ, ಎಲ್ಲಾ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳು ಹಾಜರಿರುತ್ತಾರೆ, ಅವರು ಫಲಿತಾಂಶಗಳಿಗೆ ಸಹಿ ಮಾಡುತ್ತಾರೆ. ಅವರು ಇವಿಎಂಗಳು ಮತ್ತು ವಿವಿಪ್ಯಾಟ್ ಗಳಿಂದ ಪಡೆದ ಎರಡೂ ರೀತಿಯ ಫಲಿತಾಂಶಗಳಿಗೂ ಸಹಿ ಮಾಡುತ್ತಾರೆ.
2009ರಲ್ಲಿ ಇವಿಎಂಗಳನ್ನು ತಿರುಚಿದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಚುನಾವಣಾ ಆಯೋಗವು, 10 ರಾಜ್ಯಗಳಲ್ಲಿ 100 ಇವಿಎಂಗಳನ್ನು ಸ್ಥಾಪಿಸುವ ಮೂಲಕ ಎಲ್ಲರಿಗೂ ಸವಾಲು ಹಾಕಿತು. ಆದರೆ ಎಲ್ಲರೂ ಪ್ರಯತ್ನಿಸಿದರು, ಆದರೆ ಯಾರೂ ಸಹ ಯಾವುದೇ ಇವಿಎಂ ತಿರುಚಲು ಸಾಧ್ಯವಾಗಲಿಲ್ಲ. 2017 ಜೂನ್ ನಲ್ಲಿ ಚುನಾವಣಾ ಆಯೋಗವು ಇವಿಎಂಗಳನ್ನು 3 ದಿನಗಳ ಕಾಲ ತನ್ನ ಕಚೇರಿಯಲ್ಲಿ ಇರಿಸಿಕೊಂಡು ಯಾವುದೇ ರಾಜಕೀಯ ಪಕ್ಷ, ಯಾವುದೇ ತಾಂತ್ರಿಕ ತಜ್ಞರು ಅಥವಾ ಯಾವುದೇ ವಿಜ್ಞಾನಿಗಳು ಬಂದು ಇವಿಎಂಗಳನ್ನು ಹ್ಯಾಕ್ ಮಾಡಲಿ ಎಂದು ಪ್ರಕಟಿಸಿತು. ಆದರೆ ಪ್ರತಿಪಕ್ಷಗಳು ಬರಲಿಲ್ಲ. ಪ್ರತಿಪಕ್ಷಗಳು ಪತ್ರಿಕೆಗಳಲ್ಲಿ ಮಾತ್ರ ಆರೋಪಗಳನ್ನು ಮಾಡುತ್ತವೆ, ಅವರು ನ್ಯಾಯಾಲಯಕ್ಕೂ ಹೋಗುವುದಿಲ್ಲ ಅಥವಾ ಚುನಾವಣಾ ಆಯೋಗಕ್ಕೂ ಹೋಗುವುದಿಲ್ಲ. 2017ರಲ್ಲಿ ಚುನಾವಣಾ ಆಯೋಗವು ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಇವಿಎಂಗಳನ್ನು ಬಳಸಿ ನಡೆಸಲಾಗುವುದು ಎಂದು ತೀರ್ಮಾನಿಸಿತು. ಆದರೆ ಪ್ರತಿಪಕ್ಷಗಳು ಅದನ್ನು ಏಕೆ ವಿರೋಧಿಸುತ್ತಿವೆ? ಈ ಹಿಂದೆ ಸಂಪೂರ್ಣ ಮತಪೆಟ್ಟಿಗೆಗಳನ್ನು ಅಪಹರಿಸಲಾಗುತ್ತಿತ್ತು. ಇವಿಎಂಗಳ ಆಗಮನದ ನಂತರ ಅದೆಲ್ಲವೂ ನಿಂತುಹೋಯಿತು. ಮತ ಕಳ್ಳತನ ಕೊನೆಗೊಂಡಿದೆ ಮತ್ತು ಅದಕ್ಕಾಗಿಯೇ ಪ್ರತಿಪಕ್ಷ ನಾಯಕರು ನೋವಿನಲ್ಲಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ನಂತರ ಸಾರ್ವಜನಿಕ ಸಂಪರ್ಕಕ್ಕಾಗಿ ಹೆಚ್ಚು ಪ್ರಯಾಣ ಬೆಳೆಸಿದ ಪ್ರಧಾನಿ ಆಗಿದ್ದಾರೆ. ಶ್ರೀ ಮೋದಿ ಅವರು 2001 ರಿಂದ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ, ಜನರಿಗಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. 2014 ಮೇನಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಪ್ರಮುಖ ವಿರೋಧ ಪಕ್ಷವು ಚುನಾವಣಾ ಸುಧಾರಣೆಗಳಿಗಾಗಿ ಚುನಾವಣಾ ಆಯೋಗಕ್ಕೆ ಒಂದೇ ಒಂದು ಸಲಹೆ ನೀಡಿಲ್ಲ. ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಸೇರಿಸಿಕೊಂಡಿದ್ದು ಮೋದಿ ಸರ್ಕಾರ, ಇದಕ್ಕೂ ಮೊದಲು ಇದನ್ನು ಪ್ರಧಾನ ಮಂತ್ರಿ ಒಬ್ಬರೇ ನಿರ್ಧರಿಸುತ್ತಿದ್ದರು ಎಂದು ಅಮಿತ್ ಶಾ ಹೇಳಿದರು.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 81ರ ಪ್ರಕಾರ, ಅಭ್ಯರ್ಥಿಯು ಆಯ್ಕೆಯಾದ 45 ದಿನಗಳ ಒಳಗೆ ಚುನಾವಣಾ ಅರ್ಜಿ ಸಲ್ಲಿಸಬಹುದು, 45 ದಿನಗಳ ನಂತರ ಯಾರೂ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ, ಚುನಾವಣಾ ಆಯುಕ್ತರಿಗೆ ನೀಡಲಾದ ವಿನಾಯಿತಿಯನ್ನು ನಾವು ಹೆಚ್ಚಿಸಿಲ್ಲ. ಅಕ್ರಮ ನುಸುಳುಕೋರರನ್ನು ಮತದಾರರ ಪಟ್ಟಿಯಲ್ಲಿ ಇಡುವುದು ವಿರೋಧ ಪಕ್ಷದ ನಿಜವಾದ ಸಮಸ್ಯೆಯಾಗಿದೆ. ವಿರೋಧ ಪಕ್ಷಗಳು ಸದನವನ್ನು 200 ಬಾರಿ ಬಹಿಷ್ಕರಿಸಿದರೂ, ದೇಶದಲ್ಲಿ ಒಬ್ಬ ಅಕ್ರಮ ನುಸುಳುಕೋರನನ್ನು ಸಹ ಮತ ಚಲಾಯಿಸಲು ನಾವು ಅನುಮತಿ ನೀಡುವುದಿಲ್ಲ. ನುಸುಳುಕೋರರನ್ನು ಪತ್ತೆ ಮಾಡುವುದು, ನಿರ್ಮೂಲನೆ ಮಾಡುವುದು ಮತ್ತು ಗಡೀಪಾರು ಮಾಡುವುದು ಸರ್ಕಾರದ ನೀತಿಯಾಗಿದೆ, ಸಾಂವಿಧಾನಿಕ ಪ್ರಕ್ರಿಯೆಗಳ ಮೂಲಕ ನಾವು ಈ ಕೆಲಸವನ್ನು ನಿರ್ವಹಿಸುತ್ತೇವೆ ಎಂದು ಗೃಹ ಸಚಿವರು ಹೇಳಿದರು.
ಮೊದಲು ನುಸುಳುಕೋರರನ್ನು ಸಾಮಾನ್ಯೀಕರಿಸುವುದು, ಅವರಿಗೆ ಮಾನ್ಯತೆ ನೀಡುವುದು ಮತ್ತು ನಂತರ ಅವರನ್ನು ಮತದಾರರ ಪಟ್ಟಿಗೆ ಸೇರಿಸುವ ಮೂಲಕ ಅವರನ್ನು ಔಪಚಾರಿಕಗೊಳಿಸುವುದು ವಿರೋಧ ಪಕ್ಷದ ನೀತಿಯಾಗಿದೆ. ಜನಸಂಖ್ಯೆಯ ಇಂತಹ ಬೃಹತ್ ಬದಲಾವಣೆಯು ದೇಶಕ್ಕೆ ಬಹಳ ದೊಡ್ಡ ಅಪಾಯ ಉಂಟುಮಾಡುತ್ತದೆ. ಈ ದೇಶವು ಈಗಾಗಲೇ ಜನಸಂಖ್ಯೆ ಆಧಾರದ ಮೇಲೆ ವಿಭಜನೆಯಾಗಿದೆ, ಭವಿಷ್ಯದ ಪೀಳಿಗೆಗಳು ಈ ದೇಶದ ಮತ್ತೊಂದು ವಿಭಜನೆಯನ್ನು ನೋಡಬೇಕೆಂದು ನಾವು ಬಯಸುವುದಿಲ್ಲ. ವಿರೋಧ ಪಕ್ಷಗಳು 200 ಬಾರಿ ಸದನ ಬಹಿಷ್ಕರಿಸಿದರೂ, ಒಬ್ಬ ನುಸುಳುಕೋರನಿಗೂ ನಾವು ಮತದಾನದ ಹಕ್ಕು ನೀಡುವುದಿಲ್ಲ ಎಂದು ಅಮಿತ್ ಶಾ ಸಮರ್ಥಿಸಿಕೊಂಡರು.
ದೇಶಕ್ಕಾಗಿ ಸಾಯುವುದು, ರಾಷ್ಟ್ರವನ್ನು ಸಮೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುವುದು ಮತ್ತು ಭಾರತೀಯ ಸಂಸ್ಕೃತಿಯ ಧ್ವಜವನ್ನು ಎತ್ತರಕ್ಕೆ ಹಾರಿಸುವುದು ಆರ್‌ಎಸ್‌ಎಸ್‌ನ ಸಿದ್ಧಾಂತವಾಗಿದೆ. ಸರ್ಜಿಕಲ್ ದಾಳಿಗಳು, ವಾಯುದಾಳಿಗಳು, 370ನೇ ವಿಧಿ ರದ್ದತಿ, ರಾಮ ಮಂದಿರ ನಿರ್ಮಾಣ, ಒಳನುಸುಳುಕೋರರ ನಿರ್ಮೂಲನೆ, ಸಿಎಎ, ತ್ರಿವಳಿ ತಲಾಖ್ ರದ್ದತಿ ಮತ್ತು ಒಂದು ರಾಷ್ಟ್ರ - ಒಂದು ಚುನಾವಣೆಯನ್ನು ವಿರೋಧ ಪಕ್ಷಗಳು ವಿರೋಧಿಸಿದವು, ಆದರೆ ನಾವು ಅದಕ್ಕಾಗಿಯೇ ಗೆಲ್ಲುತ್ತಲೇ ಇದ್ದೇವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದ ಮೂಲಸೌಕರ್ಯವನ್ನು 3 ಪಟ್ಟು ಹೆಚ್ಚಿಸಿದ್ದಾರೆ. ತಮಿಳುನಾಡಿನಲ್ಲಿ ಹಿಂದೂಗಳಿಗೆ ಪೂಜಿಸುವ ಹಕ್ಕು ನೀಡಿದ ನ್ಯಾಯಾಧೀಶರ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟವು ದೋಷಾರೋಪಣೆ ನಿರ್ಣಯ ಮಂಡಿಸಿದೆ. ಇದಕ್ಕಾಗಿ ದೇಶದ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು.
*****
(रिलीज़ आईडी: 2202253)
आगंतुक पटल : 8