ಕೃಷಿ ಸಚಿವಾಲಯ
ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ 33ನೇ ಸಭೆಯು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
“ಯೋಜನೆಯ ಅನುಷ್ಠಾನವು ಸಕಾಲಿಕ, ಪಾರದರ್ಶಕ ಮತ್ತು ರೈತ ಕೇಂದ್ರಿತವಾಗಿರಬೇಕು” - ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ಸಣ್ಣ ರೈತರು ಗರಿಷ್ಠ ಪ್ರಯೋಜನಗಳನ್ನು ಪಡೆಯಬೇಕು ಮತ್ತು ಅವರ ಆದಾಯವೂ ಹೆಚ್ಚಾಗಬೇಕು” - ಶ್ರೀ ಶಿವರಾಜ್ ಸಿಂಗ್ ಚೌಹಾಣ್
“ತೋಟಗಾರಿಕೆ ಉತ್ಪನ್ನಗಳು ಬೇಗನೆ ಹಾಳಾಗುವುದನ್ನು ತಡೆಯಲು ಮತ್ತು ಅವುಗಳ ಶೆಲ್ಫ್ ಅವಧಿಯನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಿ” - ಕೇಂದ್ರ ಕೃಷಿ ಸಚಿವರು
“ರೈತರು ನಷ್ಟ ಅನುಭವಿಸಬಾರದು; ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ” - ಶ್ರೀ ಶಿವರಾಜ್ ಸಿಂಗ್ ಚೌಹಾಣ್
प्रविष्टि तिथि:
04 DEC 2025 8:18PM by PIB Bengaluru
ರಾಷ್ಟ್ರೀಯ ತೋಟಗಾರಿಕೆ ಮಂಡಳಿ (ಎನ್.ಹೆಚ್.ಬಿ) ನಿರ್ದೇಶಕರ ಮಂಡಳಿಯ 33ನೇ ಸಭೆ ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಮುಖ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರ ರೂಪುರೇಷೆಗಳ ಪರಿಶೀಲನಾ ಸಭೆಯಲ್ಲಿ - ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಎನ್.ಹೆಚ್.ಬಿ ಯೋಜನೆಗಳನ್ನು ಪರಿಶೀಲಿಸಿದರು, ವಿಶೇಷವಾಗಿ ವಾಣಿಜ್ಯ ತೋಟಗಾರಿಕೆ ಅಭಿವೃದ್ಧಿ ಯೋಜನೆ, ಕೋಲ್ಡ್-ಚೈನ್ ಮೂಲಸೌಕರ್ಯ ಯೋಜನೆ, ಪ್ರದೇಶ-ನಿರ್ದಿಷ್ಟ ತೋಟಗಾರಿಕೆ ಕ್ಲಸ್ಟರ್ ಗಳ ಮೂಲಕ ಉತ್ಪಾದಕತೆ ಮತ್ತು ಮಾರುಕಟ್ಟೆ ಸಂಪರ್ಕವನ್ನು ಹೆಚ್ಚಿಸುವ ಹೊಸ ಉಪಕ್ರಮವಾದ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ (ಸಿಡಿಪಿ) ಮತ್ತು ಹೆಚ್ಚಿನ ಮೌಲ್ಯದ ಬೆಳೆಗಳಿಗೆ ರೋಗ-ಮುಕ್ತ ನಾಟಿ ಪರಿಕರಗಳನ್ನು ಒದಗಿಸುವ ಕ್ಲೀನ್ ಪ್ಲಾಂಟ್ ಪ್ರೋಗ್ರಾಂ ಕುರಿತು ಚರ್ಚೆಗಳು ನಡೆದವು.

ಯೋಜನೆಯ ಅನುಷ್ಠಾನವು ಸಕಾಲಿಕ, ಪಾರದರ್ಶಕ ಮತ್ತು ರೈತ ಕೇಂದ್ರಿತವಾಗಿರಬೇಕು, ರೈತರಿಗೆ ಸಕಾಲದಲ್ಲಿ ಸಬ್ಸಿಡಿಗಳನ್ನು ಒದಗಿಸಬೇಕು ಮತ್ತು ಮತ್ತು ಯಾವುದೇ ದೂರುಗಳು ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಶ್ರೀ ಶಿವರಾಜ್ ಸಿಂಗ್ ನಿರ್ದೇಶನ ನೀಡಿದರು. ಬಹಳ ಬೇಗನೆ ಹಾಳಾಗುವ ತೋಟಗಾರಿಕೆ ಉತ್ಪನ್ನಗಳಿಗೆ ವಿಶೇಷ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವುದು, ಅವುಗಳ ಶೆಲ್ಫ್ ಅವಧಿಯನ್ನು ಹೆಚ್ಚಿಸುವುದು, ರೈತರಿಗೆ ನಷ್ಟವನ್ನು ತಡೆಗಟ್ಟುವುದು ಮತ್ತು ಹಾನಿಯನ್ನು ತಪ್ಪಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರ ಬಗ್ಗೆಯೂ ಅವರು ಒತ್ತು ನೀಡಿದರು.
ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಪಾತ್ರವನ್ನು ಬಲಪಡಿಸಲು ಮಾರ್ಗದರ್ಶನ - ಸಭೆಯಲ್ಲಿ, ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ತೋಟಗಾರಿಕೆ ವಲಯದಲ್ಲಿ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಲವಾರು ಕಾರ್ಯತಂತ್ರದ ಸಲಹೆಗಳನ್ನು ನೀಡಿದರು. ಗುಣಮಟ್ಟದ ನಾಟಿ ಪರಿಕರಗಳು, ಕೊಯ್ಲಿನ ನಂತರದ ನಿರ್ವಹಣೆ ಮತ್ತು ಉತ್ಪಾದಕತೆ ವರ್ಧನೆಗೆ ವಿಶೇಷ ಗಮನ ಹರಿಸುವಂತೆ ಅವರು ಸೂಚನೆ ನೀಡಿದರು. ರೈತರನ್ನು ಮಾರುಕಟ್ಟೆಗಳು, ಕೋಲ್ಡ್-ಚೈನ್ ಜಾಲಗಳು ಮತ್ತು ಮೌಲ್ಯವರ್ಧನೆ ಅವಕಾಶಗಳೊಂದಿಗೆ ಸಂಪೂರ್ಣವಾಗಿ ಸಂಪರ್ಕಿಸಲು ವ್ಯವಸ್ಥೆಯನ್ನು ಬಲಪಡಿಸುವುದು ಮುಖ್ಯವಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು. ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ರಾಜ್ಯವಾರು ಮತ್ತು ಪ್ರದೇಶವಾರು ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಮತ್ತು ರೈತರ ಅನುಕೂಲಕ್ಕಾಗಿ ಪೂರ್ಣ ಬಲದಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ತಾಂತ್ರಿಕ ಪ್ರಕಟಣೆಗಳ ಬಿಡುಗಡೆ: ಉತ್ತಮ ಕೃಷಿ ಪದ್ಧತಿಗಳು, ಸಾವಯವ ಕೃಷಿ ಮಾದರಿಗಳು ಮತ್ತು ಸುಧಾರಿತ ತೋಟಗಾರಿಕೆ ತಂತ್ರಜ್ಞಾನಗಳ ಕುರಿತು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ಸಿದ್ಧಪಡಿಸಿದ ತಾಂತ್ರಿಕ ಪ್ರಕಟಣೆಗಳನ್ನು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಬಿಡುಗಡೆ ಮಾಡಿದರು. ಈ ಸಂಪನ್ಮೂಲಗಳು ರೈತರು, ಉದ್ಯಮಿಗಳು ಮತ್ತು ಕೃಷಿ ತಜ್ಞರಿಗೆ ಅಮೂಲ್ಯವಾದ ಉಲ್ಲೇಖ ಸಾಮಗ್ರಿಯಾಗಿ ಕಾರ್ಯನಿರ್ವಹಿಸುತ್ತವೆ. ಸಭೆಯಲ್ಲಿ ಕೇಂದ್ರ ಕೃಷಿ ಕಾರ್ಯದರ್ಶಿ ಡಾ. ದೇವೇಶ್ ಚತುರ್ವೇದಿ, ಐಸಿಎಆರ್ ಮಹಾನಿರ್ದೇಶಕ ಡಾ. ಮಂಗಿ ಲಾಲ್ ಜಾಟ್, ಕೃಷಿ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ತೋಟಗಾರಿಕೆ ಉದ್ಯಮಕ್ಕೆ ಸಂಬಂಧಿಸಿದ ಸದಸ್ಯರು ಭಾಗವಹಿಸಿದ್ದರು. ಈ ದೊಡ್ಡ ಪ್ರಾತಿನಿಧ್ಯವು ಸಭೆಯಲ್ಲಿ ಪ್ರಾದೇಶಿಕ ದೃಷ್ಟಿಕೋನಗಳು ಮತ್ತು ಭಾಗವಹಿಸುವಿಕೆಯ ಸಂವಾದವನ್ನು ಬಲಪಡಿಸಿತು.
ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು ದೇಶಾದ್ಯಂತ ವಾಣಿಜ್ಯ ತೋಟಗಾರಿಕೆ ಮತ್ತು ಕೋಲ್ಡ್-ಚೈನ್ ಮೂಲಸೌಕರ್ಯದ ದೃಢವಾದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ.
****
(रिलीज़ आईडी: 2199078)
आगंतुक पटल : 9