ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಯು.ಪಿ.ಎಸ್.ಸಿ ಯ ಶತಮಾನೋತ್ಸವ ಸಮ್ಮೇಳನ ಕಾರ್ಯಕ್ರಮದ ಪೂರ್ಣಾಧಿವೇಶನವನ್ನುದ್ದೇಶಿಸಿ ಮಾತನಾಡಿದರು
ಯು.ಪಿ.ಎಸ್.ಸಿ ಯ ಶತಮಾನೋತ್ಸವ ಆಚರಣೆಗಳು ಸಂವಿಧಾನ ಪಿತಾಮಹರ ಪ್ರಜ್ಞಾಪೂರ್ವಕತೆಗೆ ಸಲ್ಲಿಸುವ ಗೌರವವಾಗಿದೆ: ಡಾ. ಪಿ.ಕೆ. ಮಿಶ್ರಾ
ಯು.ಪಿ.ಎಸ್.ಸಿ ಯ ಪ್ರತಿಭಾ ಸೇತು ಅಂತಿಮ ಹಂತದ ಅಭ್ಯರ್ಥಿಗಳನ್ನು ದೇಶಾದ್ಯಂತ ಅವಕಾಶಗಳಿಗೆ ಸಂಪರ್ಕಿಸುತ್ತದೆ: ಡಾ. ಪಿ.ಕೆ. ಮಿಶ್ರಾ
ಮಿಷನ್ ಕರ್ಮಯೋಗಿ ನಾಗರಿಕ ಸೇವಕರಿಗೆ ಜೀವಮಾನದ ಕಲಿಕೆಯನ್ನು ಉತ್ತೇಜಿಸುತ್ತದೆ: ಡಾ. ಪಿ.ಕೆ. ಮಿಶ್ರಾ
ವಿಕಸಿತ ಭಾರತದತ್ತ ಭಾರತದ ಪ್ರಯಾಣದ ಕೇಂದ್ರದಲ್ಲಿ ನಾಗರಿಕ ಸೇವೆಗಳಿವೆ: ಡಾ. ಪಿ.ಕೆ. ಮಿಶ್ರಾ
ಮುಂದಿನ ಪೀಳಿಗೆಯ ಅಧಿಕಾರಿಗಳು ಭಾರತದ ಸಂಸ್ಥೆಗಳನ್ನು 2047ರ ಆಚೆಗೂ ರೂಪಿಸುತ್ತಾರೆ: ಡಾ. ಪಿ.ಕೆ. ಮಿಶ್ರಾ
Posted On:
27 NOV 2025 3:53PM by PIB Bengaluru
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಲೋಕಸೇವಾ ಆಯೋಗದ (ಯು.ಪಿ.ಎಸ್.ಸಿ) ಶತಮಾನೋತ್ಸವ ಸಮ್ಮೇಳನ ಕಾರ್ಯಕ್ರಮದ ಪೂರ್ಣಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಕಳೆದ 100 ವರ್ಷಗಳಲ್ಲಿ ಯು.ಪಿ.ಎಸ್.ಸಿ ದೇಶದ ಅತ್ಯಂತ ಗೌರವಾನ್ವಿತ ಸಾಂವಿಧಾನಿಕ ಸಂಸ್ಥೆಗಳಲ್ಲಿ ಒಂದಾಗಿ ತನ್ನ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ, ಅರ್ಹತೆ, ನ್ಯಾಯಸಮ್ಮತತೆ, ಶ್ರೇಷ್ಠತೆ ಮತ್ತು ಸಮಗ್ರತೆಯನ್ನು ಉಲ್ಲೇಖಿಸಿದೆ ಎಂದು ಹೇಳಿದರು. ಈ ಸಂದರ್ಭವು ಸಂವಿಧಾನದ ಪಿತಾಮಹರು ಮತ್ತು ಆಯೋಗವನ್ನು ಅದರ ಆರಂಭಿಕ ವರ್ಷಗಳಲ್ಲಿ ಮುನ್ನಡೆಸಿದ ದಾರ್ಶನಿಕರ ಪ್ರಜ್ಞಾಪೂರ್ವಕತೆಗೆ ಸಲ್ಲಿಸುವ ಗೌರವವಾಗಿದೆ ಎಂದು ಡಾ. ಪಿ.ಕೆ. ಮಿಶ್ರಾ ಹೇಳಿದರು. ಸವಾಲುಗಳ ಹೊರತಾಗಿಯೂ ನ್ಯಾಯಸಮ್ಮತತೆ ಮತ್ತು ಅರ್ಹತೆಯನ್ನು ಖಾತ್ರಿಪಡಿಸಿದ ಸತತ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊಡುಗೆಗಳನ್ನು ಅವರು ತಿಳಿಸಿದರು.
ಭಾರತದ ವೈವಿಧ್ಯಮಯ ಭೂದೃಶ್ಯದಿಂದ ಬಂದಿರುವ ನಾಗರಿಕ ಸೇವಕರ ಪೀಳಿಗೆಗಳು, ಸಾರ್ವಜನಿಕ ಕರ್ತವ್ಯ, ನಿಷ್ಪಕ್ಷಪಾತ ಮತ್ತು ರಾಷ್ಟ್ರಕ್ಕೆ ಸೇವೆ, ಸಂಸ್ಥೆಗಳನ್ನು ನಿರ್ಮಿಸುವುದು, ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ಸುಧಾರಣೆಗಳನ್ನು ಜಾರಿಗೆ ತರುವುದು ಮತ್ತು ಸಾಂವಿಧಾನಿಕ ಮೌಲ್ಯವನ್ನು ಉಲ್ಲೇಖಿಸಿಯುವ ಆದರ್ಶಗಳನ್ನು ಪ್ರತಿಪಾದಿಸಿದ್ದಾರೆ, ಆದರೆ ಅನೇಕವೇಳೆ ಅವರಿಗೆ ಯಾವುದೇ ಮನ್ನಣೆ ದೊರೆಯುವುದಿಲ್ಲ ಎಂದು ಅವರು ಹೇಳಿದರು.
ಆಯೋಗದ ಇತಿಹಾಸವನ್ನು ವಿವರಿಸಿದ ಡಾ. ಮಿಶ್ರಾ, ಯು.ಪಿ.ಎಸ್.ಸಿ ಗಿಂತ ಮೊದಲು 1926ರಲ್ಲಿ ಸ್ಥಾಪನೆಯಾದ ಸಾರ್ವಜನಿಕ ಸೇವಾ ಆಯೋಗವಿತ್ತು, ನಂತರ ಇದನ್ನು ಭಾರತ ಸರ್ಕಾರದ ಕಾಯ್ದೆ, 1935ರ ಅಡಿಯಲ್ಲಿ ಫೆಡರಲ್ ಸಾರ್ವಜನಿಕ ಸೇವಾ ಆಯೋಗ ಎಂದು ಗುರುತಿಸಲಾಯಿತು ಮತ್ತು ಸ್ವಾತಂತ್ರ್ಯದ ನಂತರ ಯು.ಪಿ.ಎಸ್.ಸಿ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು. ಭಾರತದ "ಉಕ್ಕಿನ ಚೌಕಟ್ಟು" ಆಗಿರುವ ನಾಗರಿಕ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸುವುದು ಅದರ ಪ್ರಮುಖ ಕಾರ್ಯವಾಗಿದೆ ಎಂದು ತಿಳಿಸಿದರು.
ಹಲವು ದಶಕಗಳಲ್ಲಿ, ಯು.ಪಿ.ಎಸ್.ಸಿ ಯ ಪರೀಕ್ಷಾ ವ್ಯವಸ್ಥೆಯು ನ್ಯಾಯಸಮ್ಮತ, ಅರ್ಹತೆ ಮತ್ತು ಸಮಾನತೆಯನ್ನು ಕಾಯ್ದುಕೊಂಡು ಆಧುನಿಕ ಆಡಳಿತಕ್ಕೆ ಹೊಂದಿಕೊಳ್ಳುವಂತೆ ವಿಕಸನಗೊಂಡಿದೆ. ನೇಮಕಾತಿಯ ಜೊತೆಗೆ, ಯು.ಪಿ.ಎಸ್.ಸಿ ಬಡ್ತಿಗಳು, ನಿಯೋಜನೆಗಳು ಮತ್ತು ಶಿಸ್ತಿನ ಕ್ರಮಗಳಲ್ಲಿ ಪ್ರಮುಖ ಸಲಹಾ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಡಾ. ಮಿಶ್ರಾ ಅವರು ಇತ್ತೀಚೆಗೆ ಪ್ರಾರಂಭಿಸಲಾದ ಪ್ರತಿಭಾ ಸೇತು ಪೋರ್ಟಲ್ ಬಗ್ಗೆ ಮಾತನಾಡಿದರು, ಇದು ಅಂತಿಮ ಪರೀಕ್ಷೆಯ ಹಂತವನ್ನು ತಲುಪಿದ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ರಾಷ್ಟ್ರೀಯ ವೃತ್ತಿ ಸೇವೆಯೊಂದಿಗೆ ಸಂಯೋಜಿತವಾಗಿರುವ ಸಂಭಾವ್ಯ ಉದ್ಯೋಗದಾತರೊಂದಿಗೆ ಸುರಕ್ಷಿತವಾಗಿ ಸಂಪರ್ಕಿಸುತ್ತದೆ, ಇದರಿಂದಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಯುವಜನರಿಗೆ ಹೊಸ ಅವಕಾಶಗಳು ತೆರೆಯುತ್ತವೆ ಎಂದು ಹೇಳಿದರು.
ನಾಗರಿಕ ಸೇವೆಗಳ ಪಾತ್ರವು ವರ್ಷಗಳಿಂದ ವಿಕಸಲಗೊಳ್ಳುತ್ತಿದೆ ಎಂದು ಡಾ. ಮಿಶ್ರಾ ಹೇಳಿದರು. ಸ್ವಾತಂತ್ರ್ಯದ ಮೊದಲು ಮತ್ತು ನಂತರ, ಆಡಳಿತವು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ಆದಾಯವನ್ನು ಸಂಗ್ರಹಿಸುವುದಕ್ಕೆ ಸೀಮಿತವಾಗಿತ್ತು ಎಂದು ಅವರು ವಿವರಿಸಿದರು. ಸ್ವಾತಂತ್ರ್ಯದ ನಂತರದ ಆರಂಭಿಕ ದಶಕಗಳಲ್ಲಿ, ಅಭಿವೃದ್ಧಿ ಯೋಜನೆ, ಸಂಸ್ಥೆಗಳನ್ನು ನಿರ್ಮಿಸುವುದು, ಕೈಗಾರಿಕಾ ಸಾಮರ್ಥ್ಯ ಮತ್ತು ಮೂಲಭೂತ ಸೇವೆಗಳ ಮೇಲೆ ನಾಗರಿಕ ಸೇವೆಗಳ ಪಾತ್ರವು ಕೇಂದ್ರೀಕರಿಸಿತು ಎಂದು ಅವರು ತಿಳಿಸಿದರು. ತಂತ್ರಜ್ಞಾನದ ಆಗಮನ, ನಗರೀಕರಣ, ಹವಾಮಾನ ಸವಾಲುಗಳು ಮತ್ತು ಆಗಾಗ್ಗೆ ಸಂಭವಿಸುವ ವಿಪತ್ತುಗಳು ನಾಗರಿಕ ಸೇವಕರ ಜವಾಬ್ದಾರಿಗಳನ್ನು ಪರಿವರ್ತಿಸಿವೆ ಮತ್ತು ಇಂದಿನ ಆಡಳಿತಕ್ಕೆ ಶ್ರೇಣಿ ವ್ಯವಸ್ಥೆಗಿಂತ ಸಹಯೋಗದ ಅಗತ್ಯವಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ, ಆಮೂಲಾಗ್ರವಾಗಿ ವಿಭಿನ್ನವಾದ ಪರಿವರ್ತನೆ ಕಂಡುಬಂದಿದೆ ಎಂದು ಹೇಳಿದರು.
ನಿರೀಕ್ಷೆಗಳು ಪ್ರಕ್ರಿಯೆಯ ಅನುಸರಣೆಯಿಂದ ಫಲಿತಾಂಶ ವಿತರಣೆಗೆ, ಕ್ರಮೇಣ ಸುಧಾರಣೆಯಿಂದ ತ್ವರಿತ ಬದಲಾವಣೆಗೆ, ಸೀಮಿತ ಸರ್ಕಾರಿ ಇಲಾಖೆಗಳಿಂದ ಪರಸ್ಪರ ಕಾರ್ಯನಿರ್ವಹಿಸಬಹುದಾದ ಡಿಜಿಟಲ್ ಮೂಲಸೌಕರ್ಯಕ್ಕೆ ಮತ್ತು ನಾಗರಿಕರಿಗೆ ತಲುಪಿಸುವ ಸರ್ಕಾರದಿಂದ ಜನಭಾಗೀದಾರಿಯ ಮೂಲಕ ನಾಗರಿಕರೊಂದಿಗೆ ಪಾಲುದಾರಿಕೆ ಹೊಂದಿರುವ ಸರ್ಕಾರಕ್ಕೆ ಬದಲಾಗಿವೆ ಎಂದು ಡಾ. ಮಿಶ್ರಾ ವಿವರಿಸಿದರು. ಡಿಜಿಟಲ್ ಪಾವತಿಗಳು, ಸಾಮಾಜಿಕ ಭದ್ರತೆ, ಆರೋಗ್ಯ, ಮೂಲಸೌಕರ್ಯ, ಲಾಜಿಸ್ಟಿಕ್ಸ್, ಕೌಶಲ್ಯ, ತೆರಿಗೆ, ನಗರ ಆಡಳಿತ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಈ ಬದಲಾವಣೆ ಗೋಚರಿಸುತ್ತಿದೆ ಮತ್ತು ಈಗ ಭಾರತವು ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ ನಾವೀನ್ಯತೆ ಮತ್ತು ನೀಲಿ ಮತ್ತು ಹಸಿರು ಆರ್ಥಿಕತೆ ಸೇರಿದಂತೆ ಜಾಗತಿಕ ನಾಯಕತ್ವವನ್ನು ಬಯಸುವ ಮುಂಚೂಣಿ ಪ್ರದೇಶಗಳಿಗೂ ವಿಸ್ತರಿಸುತ್ತಿದೆ ಎಂದು ತಿಳಿಸಿದರು.
2047ರ ವಿಕಸಿತ ಭಾರತದ ಕಡೆಗೆ ತನ್ನ ಪ್ರಯಾಣದಲ್ಲಿ ಭಾರತವು ಒಂದು ನಿರ್ಣಾಯಕ ಹಂತದಲ್ಲಿದೆ ಎಂದ ಡಾ. ಮಿಶ್ರಾ, ನಾಲ್ಕು ಅಂಶಗಳನ್ನು ಉಲ್ಲೇಖಿಸಿದರು.
ಮೊದಲನೆಯದಾಗಿ, ತಂತ್ರಜ್ಞಾನ, ಪೂರೈಕೆ ಸರಪಳಿಗಳು, ದತ್ತಾಂಶ, ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಮತ್ತು ನಿರ್ಣಾಯಕ ಖನಿಜಗಳಲ್ಲಿ ಕಾರ್ಯತಂತ್ರದ ಸ್ಪರ್ಧೆಯೊಂದಿಗೆ ಜಗತ್ತು ಹೆಚ್ಚು ಪರಸ್ಪರ ಸಂಬಂಧ ಹೊಂದಿದೆ ಮತ್ತು ಅಸ್ಥಿರವಾಗುತ್ತಿದೆ. ನಾಗರಿಕ ಸೇವಕರು ಅನಿಶ್ಚಿತತೆಯ ನಿರ್ವಾಹಕರು, ಸಂಕೀರ್ಣತೆಯ ವ್ಯಾಖ್ಯಾನಕಾರರು ಮತ್ತು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳ ರಕ್ಷಕರು ಮತ್ತು ಅವರ ತಯಾರಿ ಅವರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದರೊಂದಿಗೆ ಪ್ರಾರಂಭವಾಗಬೇಕು ಎಂದು ಹೇಳಿದರು.
ಎರಡನೆಯದಾಗಿ, ತಾಂತ್ರಿಕ ಬದಲಾವಣೆಯು ನಿಯಂತ್ರಕ ಬದಲಾವಣೆಗಳಿಗಿಂತ ಬಹಳ ವೇಗವಾಗಿರುತ್ತದೆ ಎಂದು ಅವರು ತಿಳಿಸಿದರು. ಕೃತಕ ಬುದ್ಧಿಮತ್ತೆ, ಸಿಂಥೆಟಿಕ್ ಜೀವಶಾಸ್ತ್ರ, ರೊಬೊಟಿಕ್ಸ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ನಲ್ಲಿ ಯಶಸ್ಸಿಗೆ ಬೌದ್ಧಿಕ ಚುರುಕುತನ, ನೈತಿಕ ನೆಲೆಗಟ್ಟು ಮತ್ತು ನಾವೀನ್ಯಕಾರರು ಮತ್ತು ವಿಜ್ಞಾನಿಗಳೊಂದಿಗೆ ಸಮಾನವಾಗಿ ತೊಡಗಿಸಿಕೊಳ್ಳುವ ಸಾಮರ್ಥ್ಯದ ಅಗತ್ಯವಿದೆ.
ಮೂರನೆಯದಾಗಿ, ಭಾರತದ ಅಭಿವೃದ್ಧಿ ಪಥವು ಇನ್‌ಪುಟ್-ಆಧಾರಿತ ಬೆಳವಣಿಗೆಯಿಂದ ಸಾಮರ್ಥ್ಯ-ಆಧಾರಿತ ಬೆಳವಣಿಗೆಗೆ ಬದಲಾಗುತ್ತಿದೆ ಎಂದು ಅವರು ತಿಳಿಸಿದರು. ಯಶಸ್ಸನ್ನು ಫಲಿತಾಂಶಗಳು, ಹೊಣೆಗಾರಿಕೆ, ಪ್ರಯೋಗ ಮತ್ತು ವಾಸ್ತವಿಕ ಬದಲಾವಣೆಯಿಂದ ಅಳೆಯಬೇಕು ಎಂದು ಅವರು ಹೇಳಿದರು. ಯು.ಪಿ.ಎಸ್.ಸಿ ಯು ತೀರ್ಪು, ನಮ್ಯತೆ ಮತ್ತು ಜೀವಮಾನವಿಡೀ ಕಲಿಕಾ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ನಾಲ್ಕನೆಯದಾಗಿ, ಪ್ರತಿಭೆಗಾಗಿ ಜಾಗತಿಕವಾಗಿ ಹೊರಹೊಮ್ಮುತ್ತಿರುವ ಸ್ಪರ್ಧೆಯನ್ನು ಅವರು ತಿಳಿಸಿದರು. ಭಾರತದ ನಾಗರಿಕ ಸೇವೆಗಳು ಉತ್ತಮ ಮನಸ್ಸುಗಳಿಗೆ ಒಂದು ಆಯಸ್ಕಾಂತವಾಗಿ ಉಳಿಯಬೇಕು ಎಂದು ಅವರು ಹೇಳಿದರು. ಜಾಗತಿಕವಾಗಿ ಗುರುತಿಸಲ್ಪಟ್ಟ ಮತ್ತು ಮಹತ್ವಾಕಾಂಕ್ಷೆಯ ಯುವಜನರು ಉದ್ದೇಶ, ಸ್ವಾಯತ್ತತೆ, ಸವಾಲು ಮತ್ತು ಪ್ರಭಾವವನ್ನು ಬಯಸುತ್ತಾರೆ ಮತ್ತು ನಾಗರಿಕ ಸೇವೆಗಳು ಈ ಗುಣಗಳನ್ನು ಹೆಚ್ಚು ಸಕ್ರಿಯವಾಗಿ ಮತ್ತು ಸ್ಪಷ್ಟವಾಗಿ ಉತ್ತೇಜಿಸಬೇಕು ಎಂದರು.
ವಿಕಸಿತ ಭಾರತಕ್ಕಾಗಿ, ಮುಂಬರುವ ದಶಕಗಳನ್ನು ಮೂರು ತತ್ವಗಳಿಂದ - ಅಭಿವೃದ್ಧಿಶೀಲ, ಸೇವೆ ಆಧಾರಿತ ರಾಷ್ಟ್ರಕ್ಕಾಗಿ ನಾಗರಿಕ ಸೇವೆಗಳನ್ನು ಮರುರೂಪಿಸುವುದು; ಅತ್ಯಂತ ಸಮರ್ಥ ವ್ಯಕ್ತಿಗಳನ್ನು ಗುರುತಿಸಲು ಆಯ್ಕೆಯನ್ನು ಪುನರ್ವಿಮರ್ಶಿಸುವುದು; ಮತ್ತು ಜೀವನಪರ್ಯಂತ ಕಲಿಕಾ ವಾತಾವರಣವನ್ನು ನಿರ್ಮಿಸುವುದು - ಮುನ್ನಡೆಸಬೇಕು ಎಂದು ಡಾ. ಮಿಶ್ರಾ ತಿಳಿಸಿದರು.
ಮಿಷನ್ ಕರ್ಮಯೋಗಿ ಸಮಗ್ರವಾಗಿದ್ದು, ಸಾಮರ್ಥ್ಯ ವೃದ್ಧಿಗೆ ವ್ಯವಸ್ಥಿತ, ತಂತ್ರಜ್ಞಾನ ಸಕ್ರಿಯಗೊಳಿಸಿದ, ಸಾಮರ್ಥ್ಯ ಆಧಾರಿತ ವಿಧಾನವನ್ನು ಪರಿಚಯಿಸುತ್ತದೆ ಎಂದು ಡಾ. ಮಿಶ್ರಾ ತಿಳಿಸಿದರು. ಈ ಪರಿವರ್ತನೆಯು ನಿಯಮ ಆಧಾರಿತದಿಂದ ಪಾತ್ರ ಆಧಾರಿತ ಚೌಕಟ್ಟುಗಳಿಗೆ, ಏಕರೂಪದ ತರಬೇತಿಯಿಂದ ನಿರಂತರ ಕಲಿಕೆಗೆ ಮತ್ತು ಸೀಮಿತ ಕಾರ್ಯನಿರ್ವಹಣೆಯಿಂದ ಸಹಯೋಗದ ಕೆಲಸಕ್ಕೆ ಬದಲಾಗುತ್ತದೆ ಎಂದು ಅವರು ತಿಳಿಸಿದರು. 3000+ ಕೋರ್ಸ್‌ಗಳು ಮತ್ತು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಹೊಂದಿರುವ iGOT ಕರ್ಮಯೋಗಿ ವೇದಿಕೆಯು ಈ ವಿಕಸನವನ್ನು ಬೆಂಬಲಿಸುತ್ತದೆ, ಸೇವೆ ಸಲ್ಲಿಸುವಾಗ ಕಲಿಯುವ ಕಾರ್ಯಪಡೆಯನ್ನು ಸೃಷ್ಟಿಸುತ್ತದೆ ಎಂದರು.
ವಿಕಸಿತ ಭಾರತದತ್ತ ಭಾರತದ ಪ್ರಯಾಣದ ಕೇಂದ್ರಭಾಗದಲ್ಲಿ ನಾಗರಿಕ ಸೇವೆ ಇದೆ ಎಂದು ಡಾ. ಮಿಶ್ರಾ ತಿಳಿಸಿದರು. ಅಧಿಕಾರಿಗಳು ವಿವಿಧ ಕ್ಷೇತ್ರಗಳಾದ್ಯಂತ ಯೋಚಿಸಬೇಕು, ವಿವಿಧ ಕ್ಷೇತ್ರಗಳಾದ್ಯಂತ ಕೆಲಸ ಮಾಡಬೇಕು ಮತ್ತು ನಮ್ರತೆ, ಸಮಗ್ರತೆ ಮತ್ತು ಉದ್ದೇಶದೊಂದಿಗೆ ತಮ್ಮ ಕೆಲಸ ನಿರ್ವಹಿಸಬೇಕು ಎಂದು ಅವರು ಹೇಳಿದರು. ಅವರು ಜನರೊಂದಿಗೆ ಮಾಡುವಂತೆಯೇ ದತ್ತಾಂಶದೊಂದಿಗೂ ಆತ್ಮವಿಶ್ವಾಸದಿಂದ ತೊಡಗಿಸಿಕೊಳ್ಳಬೇಕು, ನೈತಿಕ ತೀರ್ಪು ಮತ್ತು ಆಡಳಿತಾತ್ಮಕ ಸಾಮರ್ಥ್ಯದ ನಡುವೆ ಸಮತೋಲನವನ್ನು ಸಾಧಿಸಬೇಕು ಮತ್ತು ಮುನ್ನಡೆಸುವಾಗಲೂ ನಿರಂತರವಾಗಿ ಕಲಿಯುತ್ತಿರಬೇಕು ಎಂದು ಹೇಳಿದ ಡಾ. ಮಿಶ್ರಾ ತಮ್ಮ ಮಾತು ಮುಕ್ತಾಯಗೊಳಿಸಿದರು.
*****
(Release ID: 2195450)
Visitor Counter : 7