ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಭಾರತಕ್ಕೆ 2030ರ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆಯ ಆತಿಥ್ಯ ಹಕ್ಕುಗಳನ್ನು ಅಧಿಕೃತವಾಗಿ ನೀಡಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಸಾಮೂಹಿಕ ಬದ್ಧತೆ ಮತ್ತು ಕ್ರೀಡಾ ಮನೋಭಾವ"ವನ್ನು ಶ್ಲಾಘಿಸಿದ್ದಾರೆ


"ಭಾರತ ಈ ಹಂತಕ್ಕೆ ಬಂದಿದೆ": ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಭಾರತೀಯ ಕ್ರೀಡೆಗಳಿಗೆ ಹೊಸ ಯುಗ ಪ್ರಾರಂಭವಾದುದನ್ನು ಘೋಷಿಸಿದ್ದಾರೆ

प्रविष्टि तिथि: 26 NOV 2025 9:09PM by PIB Bengaluru

ಭಾರತಕ್ಕೆ 2030ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಅಧಿಕೃತವಾಗಿ ನೀಡಲಾಗಿದೆ, ಅಮ್ದಾವದ್ (ಅಹಮದಾಬಾದ್) ಅನ್ನು ಆತಿಥೇಯ ನಗರವೆಂದು ಘೋಷಿಸಲಾಗಿದೆ. ಬುಧವಾರ ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಫೆಡರೇಶನ್ (ಸಿ.ಜಿ.ಎಫ್) ಮಹಾಸಭೆಯಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಲಾಯಿತು.

"ಭಾರತವು 2030ರ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುವ ಬಿಡ್ ಅನ್ನು ಗೆದ್ದಿರುವುದು ಸಂತೋಷ ತಂದಿದೆ! ಭಾರತದ ಜನರಿಗೆ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಗೆ ಅಭಿನಂದನೆಗಳು. ನಮ್ಮ ಸಾಮೂಹಿಕ ಬದ್ಧತೆ ಮತ್ತು ಕ್ರೀಡಾ ಮನೋಭಾವವೇ ಭಾರತವನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ದೃಢವಾಗಿ ಇರಿಸಿದೆ.”

"ವಸುಧೈವ ಕುಟುಂಬಕಂನ ನೀತಿಯೊಂದಿಗೆ, ನಾವು ಈ ಐತಿಹಾಸಿಕ ಆಟಗಳನ್ನು ಬಹಳ ಉತ್ಸಾಹದಿಂದ ಆಚರಿಸಲು ಸದಾ ಉತ್ಸುಕರಾಗಿದ್ದೇವೆ" ಎಂದು ಎಕ್ಸ್ ತಾಣದ ಸಂದೇಶದಲ್ಲಿ ತಿಳಿಸಿದ್ದಾರೆ. "ಜಗತ್ತನ್ನು ಸ್ವಾಗತಿಸಲು ನಾವು ಸದಾ ಎದುರು ನೋಡುತ್ತಿದ್ದೇವೆ!" ಎಂದು ಅವರ ಟ್ವೀಟ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

20 ವರ್ಷಗಳ ನಂತರ ಭಾರತವು ಚತುರ್ವಾರ್ಷಿಕ ಕ್ರೀಡಾಕೂಟದ ಆತಿಥೇಯರಾಗಿ ಮರಳಿರುವುದನ್ನು ಗುರುತಿಸಿ, ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಘೋಷಣೆಯೊಂದಿಗೆ ಐತಿಹಾಸಿಕ ಆಚರಣೆಗಳು ಆರಂಭವಾದವು. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಎಂ.ವೈ.ಎ.ಎಸ್) ರಾಜಧಾನಿಯಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿತ್ತು, ಇದರಲ್ಲಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ಭಾರತೀಯ ಒಲಿಂಪಿಕ್ ಸಂಘದ ಹಿರಿಯ ಪ್ರತಿನಿಧಿಗಳು, ಕಾರ್ಯದರ್ಶಿ (ಕ್ರೀಡೆ) ಮತ್ತು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಎಂ.ವೈ.ಎ.ಎಸ್) ಹಾಗೂ ಎಸ್.ಎ.ಐ.ಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಭಾರತದ ಬೆಳೆಯುತ್ತಿರುವ ಕ್ರೀಡಾ ಪುನರುಜ್ಜೀವನವನ್ನು ಸಂಕೇತಿಸುವ ಒಲಿಂಪಿಯನ್ ರು, ಕಾಮನ್ವೆಲ್ತ್ ಪದಕ ವಿಜೇತರು ಮತ್ತು ಕ್ರೀಡಾ ಮಹಾನ್ ಸಾಧಕರು ಸಹ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಮಾಂಡವಿಯಾ ಅವರು, ಈ ದಿನವನ್ನು ಐತಿಹಾಸಿಕ ಎಂದು ಬಣ್ಣಿಸಿದರು. "2030ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವು ತನ್ನ 100ನೇ ವರ್ಷವನ್ನು ಆಯೋಜಿಸುವುದು ಸಿಜಿಎಫ್. ಮತ್ತು ಆತಿಥೇಯರಾದ ನಮಗೂ ಮುಖ್ಯವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತದ ಕ್ರೀಡಾ ವಲಯವು ರೂಪಾಂತರಗೊಳ್ಳುತ್ತಿದೆ. ಬಾಕ್ಸಿಂಗ್ ವಿಶ್ವಕಪ್, ಹಾಕಿ ವಿಶ್ವಕಪ್, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಮತ್ತು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಾವು ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ."

"ನಾವು 2029ರ ವಿಶ್ವ ಪೊಲೀಸ್ ಕ್ರೀಡಾಕೂಟವನ್ನು ಆಯೋಜಿಸಲು ಸಹ ಸಿದ್ಧರಾಗುತ್ತಿದ್ದೇವೆ ಮತ್ತು ಇವೆಲ್ಲವೂ 2036ರ ಒಲಿಂಪಿಕ್ ಕ್ರೀಡಾಕೂಟಗಳಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತವೆ, ಇದನ್ನು ನಾವು ಆಯೋಜಿಸುವ ಭರವಸೆ ಹೊಂದಿದ್ದೇವೆ.

ಖೇಲೋ ಭಾರತ್ ಉಪಕ್ರಮ, ಕ್ರೀಡಾ ನೀತಿ ಮತ್ತು ಕ್ರೀಡಾ ಆಡಳಿತ ಕಾಯ್ದೆಯು ನಮ್ಮ ಭಾರತೀಯ ಕ್ರೀಡೆಗಳ ಪರಿವರ್ತನೆ ಮತ್ತು ಸುಧಾರಣೆಗೆ ಉತ್ತೇಜನ ನೀಡಲಿದೆ. ಮುಂದಿನ 10 ವರ್ಷಗಳಲ್ಲಿ, ಭಾರತವು ಅಗ್ರ 10 ರಲ್ಲಿರುತ್ತದೆ ಮತ್ತು 2047ರ ವೇಳೆಗೆ, ನಾವು ಅಗ್ರ 5 ರಲ್ಲಿರುತ್ತೇವೆ. ರಾಷ್ಟ್ರವನ್ನು ಹೆಮ್ಮೆಪಡುವಂತೆ ಎಲ್ಲಾ ಕ್ರೀಡಾಪಟುಗಳು ಸಿದ್ಧರಾಗಬೇಕೆಂದು ನಾನು ಈಗ ಒತ್ತಾಯಿಸುತ್ತೇನೆ" ಎಂದು ಕೇಂದ್ರ ಸಚಿವರು ಹೇಳಿದರು.

ಡಾ. ಮಾಂಡವಿಯಾ ಅವರು ಭಾರತದ ಆತಿಥ್ಯ ಸಾಮರ್ಥ್ಯದ ಬಗ್ಗೆ ವಿಶ್ವದ ಹೆಚ್ಚುತ್ತಿರುವ ವಿಶ್ವಾಸವನ್ನು ಉಲ್ಲೇಖಿಸಿದರು, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಅಧ್ಯಕ್ಷ ಪಾಲ್ ಫಿಟ್ಜ್ಗೆರಾಲ್ಡ್, ವಿಶ್ವ ಬಾಕ್ಸಿಂಗ್ ಅಧ್ಯಕ್ಷ ಬೋರಿಸ್ ವ್ಯಾನ್ ಡೆರ್ ವೋರ್ಸ್ಟ್ ಮತ್ತು ಕ್ಯೂಬಾದ ಒಲಿಂಪಿಕ್ ದಂತಕಥೆ ಜೇವಿಯರ್ ಸೊಟೊಮೇಯರ್ ಸೇರಿದಂತೆ ಅಂತಾರಾಷ್ಟ್ರೀಯ ನಾಯಕರ ಭಾರತದ ಬಗೆಗಿನ ಇತ್ತೀಚಿನ ಪ್ರಶಂಸೆಯನ್ನು ಉಲ್ಲೇಖಿಸಿದರು. "ಅಂತಹ ಮನ್ನಣೆಯು ಜಗತ್ತು ಈಗಾಗಲೇ ಭಾವಿಸುವುದನ್ನು, ಭರವಸೆಗಳನ್ನು ಬಲಪಡಿಸುತ್ತದೆ: ಭಾರತ ಸಿದ್ಧವಾಗಿದೆ. ಭಾರತ ಸಮರ್ಥವಾಗಿದೆ. ಭಾರತ ಈ ಹಂತಕ್ಕೆ ಬಂದಿದೆ,” ಎಂದು ಅವರು ಹೇಳಿದರು.

ಕಾಮನ್ವೆಲ್ತ್ ಕ್ರೀಡಾಕೂಟದ ಫೆಡರೇಶನ್ (ಸಿ.ಜಿ.ಎಫ್) ಇದರ ಹಿಂದಿನ ಅಧಿಕೃತ ಹೇಳಿಕೆಯು ಹೀಗೆ ಹೇಳಿದೆ - "74 ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಪ್ರತಿನಿಧಿಗಳು ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾ ಸಾಮಾನ್ಯ ಸಭೆಯಲ್ಲಿ ಭಾರತದ ಬಿಡ್ ಅನ್ನು ಅನುಮೋದಿಸಿದ ನಂತರ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಕ್ರೀಡಾಕೂಟದ ಹೆಗ್ಗುರುತು ಆವೃತ್ತಿಯನ್ನು ಕೂಡಾ ಆಯೋಜಿಸಲಿದೆ ಎಂದು ಈ ಮೂಲಕ ದೃಢಪಡಿಸುತ್ತದೆ.

"ಗುಜರಾತ್ ರಾಜ್ಯದ ನಗರವಾದ ಅಮ್ದವಾದ್ (ಅಹಮದಾಬಾದ್) ಕೇಂದ್ರೀಕೃತವಾಗಿರುವ 2030ರ ಕ್ರೀಡಾಕೂಟಕ್ಕಾಗಿ ಭಾರತವು ಒಂದು ಬಲವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿತು, ಇದು ಗ್ಲ್ಯಾಸ್ಗೋ 2026 ರಿಂದ ಹಾಕಿದ ಅಡಿಪಾಯದ ಮೇಲೆ ನಿರ್ಮಿಸಲ್ಪಡುತ್ತದೆ, ಇದು ಭಾರತವು ಶತಮಾನೋತ್ಸವವನ್ನು ಶೈಲಿಯಲ್ಲಿ ಆಚರಿಸಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಬುಧವಾರ ಸಂಜೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪದಕದ ಮೈಲಿಗಲ್ಲುಗಳಿಂದ 2010ರ ಆವೃತ್ತಿಯನ್ನು ಆಯೋಜಿಸುವವರೆಗೆ ಭಾರತದ ಕಾಮನ್ವೆಲ್ತ್ ಕ್ರೀಡಾಕೂಟದ ಪರಂಪರೆಯನ್ನು ಪ್ರದರ್ಶಿಸುವ ವಿಶೇಷವಾಗಿ ಸಂಗ್ರಹಿಸಲಾದ ಆಡಿಯೊ-ದೃಶ್ಯ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಈ ಘೋಷಣೆಯ ನಂತರ ಅದ್ಭುತವಾದ ಲೇಸರ್ ಪ್ರದರ್ಶನ ಮತ್ತು ಪಟಾಕಿ ಸಿಡಿಸಲಾಯಿತು, ಇದರೊಂದಿಗೆ ಅಧಿಕೃತ ಹ್ಯಾಶ್ಟ್ಯಾಗ್ (#CWG2030InBHARAT) ಅನಾವರಣಗೊಂಡಿತು: ಇದು ಭಾರತದ ಮಹತ್ವಾಕಾಂಕ್ಷೆ ಮತ್ತು 2047ರ ವಿಕಸಿತ ಭಾರತ ಕಡೆಗೆ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ. ದೊಡ್ಡ ಪ್ರಮಾಣದ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ಸುಸ್ಥಿರತೆಯ ಧ್ಯೇಯವಾಕ್ಯಕ್ಕೆ ಅನುಗುಣವಾಗಿ, ಈ ಕಾರ್ಯಕ್ರಮದಲ್ಲಿ ಬಳಸಲಾದ ಪಟಾಕಿಗಳು ಪರಿಸರ ಸ್ನೇಹಿ ಹಸಿರು ಪಟಾಕಿಗಳಾಗಿದ್ದು, ಅವು ಮಾಲಿನ್ಯಕಾರಕವಲ್ಲ.

2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 38 ಚಿನ್ನ ಸೇರಿದಂತೆ ಒಟ್ಟು 101 ಪದಕಗಳನ್ನು ಗೆದ್ದಿತ್ತು, ಇದರಲ್ಲಿ 30 ಪದಕಗಳು ಶೂಟಿಂಗ್ ನಿಂದ ಮಾತ್ರ ಬಂದವು. 2022ರ ಆವೃತ್ತಿಯಲ್ಲಿ, ಭಾರತವು 22 ಚಿನ್ನ ಸೇರಿದಂತೆ 61 ಪದಕಗಳನ್ನು ಗಳಿಸಿತು. ಬರ್ಮಿಂಗ್ಹ್ಯಾಮ್ ಆವೃತ್ತಿಯಲ್ಲಿ ಶೂಟಿಂಗ್ ಅನ್ನು ಸೇರಿಸಲಾಗಿಲ್ಲ.

 

*****


(रिलीज़ आईडी: 2195292) आगंतुक पटल : 6
इस विज्ञप्ति को इन भाषाओं में पढ़ें: Khasi , English , हिन्दी