ಗ್ರಾಮೀಣಾಭಿವೃದ್ಧಿ ಸಚಿವಾಲಯ
ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಜಲಾನಯನ ಮಹೋತ್ಸವದ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಸಾರ್ವಜನಿಕ ಜಾಗೃತಿ ಮತ್ತು ಪ್ರಬಲವಾದ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ತಮ್ಮ ರಾಜ್ಯಗಳಲ್ಲಿ 'ಜಲಾನಯನ ಮಹೋತ್ಸವ'ವನ್ನು ಜಾರಿಗೆ ತರಲು ಎಲ್ಲರೂ ಬೆಂಬಲ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ
प्रविष्टि तिथि:
25 NOV 2025 7:39PM by PIB Bengaluru
ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗು ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನವೆಂಬರ್ 25, 2025 ರಂದು ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವ ನೋಡಲ್ ಇಲಾಖೆಗಳ ರಾಜ್ಯ ಸಚಿವರು ಮತ್ತು ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ವೀಡಿಯೊ ಸಮ್ಮೇಳನ ನಡೆಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ ಕೈಗೊಳ್ಳಲಾದ ಜಲಾನಯನ ಅಭಿವೃದ್ಧಿ ಉಪಕ್ರಮಗಳಲ್ಲಿ ಸಾರ್ವಜನಿಕ ಜಾಗೃತಿ ಮತ್ತು ಬಲವಾದ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ತಮ್ಮ ರಾಜ್ಯಗಳಲ್ಲಿ 'ಜಲಾನಯನ ಮಹೋತ್ಸವ'ವನ್ನು ಜಾರಿಗೆ ತರಲು ಆಯಾ ಸಚಿವರು ಬೆಂಬಲ ನೀಡಬೇಕೆಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಒತ್ತಾಯಿಸಿದರು. ವೀಡಿಯೊ ಸಮ್ಮೇಳನ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು:

I8Z1.jpeg)
a. ಹೊಸ ಕಾಮಗಾರಿಗಳ ಭೂಮಿಪೂಜೆ ಮತ್ತು ಪೂರ್ಣಗೊಂಡ ನೀರು ಕೊಯ್ಲು ಕಾಮಗಾರಿಗಳಾದ ಚೆಕ್ ಡ್ಯಾಮ್‌ಗಳು, ಗ್ರಾಮ ಕೊಳಗಳು, ಕೃಷಿ ಹೊಂಡಗಳು ಇತ್ಯಾದಿಗಳ ಲೋಕಾರ್ಪಣೆಯನ್ನು ನಡೆಸುವುದು.
b. ಸಂಸದರು, ಶಾಸಕರು ಮತ್ತು ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಯುವಕರು ಮತ್ತು ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ದೊಡ್ಡ ಪ್ರಮಾಣದ ಭಾಗವಹಿಸುವಿಕೆಯೊಂದಿಗೆ ಜನಭಾಗಿದಾರಿ ಕಪ್ 2026 ಅನ್ನು ಮರುಪ್ರಾರಂಭಿಸುವುದು.
c. ಎಂ.ಜಿ.ಎನ್.ಆರ್.ಇ.ಜಿ.ಎಸ್ ನೊಂದಿಗೆ ಡೆಬ್ಲ್ಯೂ.ಡಿ.ಸಿ - ಪಿ.ಎಂ.ಕೆ.ಎಸ್.ವೈ 1.0 ಅಡಿಯಲ್ಲಿ ನಿರ್ಮಿಸಲಾದ ನೀರು ಕೊಯ್ಲು ರಚನೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ ಮಿಷನ್ ವಾಟರ್‌ಶೆಡ್ ಪುನರುತ್ಥಾನವನ್ನು ಕೈಗೊಳ್ಳುವುದು.
d. ನೆಡುತೋಪು ಮತ್ತು ಶ್ರಮದಾನ ಚಟುವಟಿಕೆಗಳು
e. ಜಲಾನಯನ ಉಪಕ್ರಮಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ಸ್ಪರ್ಧೆಯನ್ನು ಪ್ರಾರಂಭಿಸುವುದು.
f. ಕಳೆದ ಜಲಾನಯನ ಯಾತ್ರೆಯ ಸಮಯದಲ್ಲಿ ಗೌರವಿಸಲಾದ ಜಲಾನಯನ ಮಾರ್ಗದರ್ಶಕರನ್ನು ತೊಡಗಿಸಿಕೊಳ್ಳುವಿಕೆ.
ಈ ವೀಡಿಯೊ ಸಮ್ಮೇಳನ ಸಭೆಯಲ್ಲಿ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ, ಭೂ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರ, ಗ್ರಾಮೀಣಾಭಿವೃದ್ಧಿ, ಕೃಷಿ, ಜಲಾನಯನ ಅಭಿವೃದ್ಧಿ, ಅರಣ್ಯ ಮತ್ತು ಪರಿಸರ ಇತ್ಯಾದಿಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
*****
(रिलीज़ आईडी: 2194411)
आगंतुक पटल : 4