ಪಂಚಾಯತ್ ರಾಜ್ ಸಚಿವಾಲಯ
2025ರ ನವೆಂಬರ್ 26ರಂದು ರಾಷ್ಟ್ರವ್ಯಾಪಿ ನಡೆಯಲಿರುವ ಸಂವಿಧಾನ ದಿನಾಚರಣೆಯಲ್ಲಿ ಪಂಚಾಯತ್ ರಾಜ್ ಸಚಿವಾಲಯ ಭಾಗಿ
Posted On:
24 NOV 2025 3:32PM by PIB Bengaluru
ಪಂಚಾಯತ್ ರಾಜ್ ಸಚಿವಾಲಯವು ಎಲ್ಲಾ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು (ಪಿ ಆರ್ ಐ ಗಳು) ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು (ಆರ್ ಎಲ್ ಬಿ ಗಳು) 2025ರ ನವೆಂಬರ್ 26 ರಂದು ರಾಷ್ಟ್ರವ್ಯಾಪಿ ಸಂವಿಧಾನ ದಿನ (ಸಂವಿಧಾನ್ ದಿವಸ್) ಆಚರಣೆ ಮಾಡಲು ಸಮನ್ವಯ ಮಾಡುತ್ತಿದೆ. ಈ ಉಪಕ್ರಮವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಂಚಾಯತ್ ರಾಜ್ ಇಲಾಖೆಗಳು, ಎಸ್ ಐಆರ್ ಡಿ &ಪಿಆರ್ ಗಳು, ಪಿಇಎಸ್ ಎ ಮೊಬಲೈಜರ್‌ಗಳು, ಪಂಚಾಯತಿ ರಾಜ್ ಅಸೋಸಿಯೇಟ್‌ಗಳು, ಎನ್ ಐ ಆರ್ ಡಿ & ಪಿ ಆರ್ ನಲ್ಲಿನ ಎಸ್ ಒ ಪಿ ಇ ಆರ್ ಮತ್ತು ಇತರ ಸಂಬಂಧಿತ ನೆಟ್‌ವರ್ಕ್‌ಗಳ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತಿದೆ. ವ್ಯಾಪಕವಾದ ವರ್ಚುವಲ್ ಸಮಾಲೋಚನೆಗಳಿಂದಾಗಿ ಸಮಗ್ರ ಸಿದ್ಧತೆ ಮತ್ತು ತಳಮಟ್ಟದಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸಿವೆ.
ಸಚಿವಾಲಯವು ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ನೇತೃತ್ವದಲ್ಲಿ ನವೆಂಬರ್ 26 ರಂದು ಬೆಳಿಗ್ಗೆ 11:00 ಗಂಟೆಗೆ ಪೀಠಿಕೆಯನ್ನು ಓದುವ ಮೂಲಕ ಸಂವಿಧಾನ ದಿನವನ್ನು ಆಚರಿಸುತ್ತದೆ. ಎಲ್ಲಾ ಉದ್ಯೋಗಿಗಳಿಗೆ 'ನಿಮ್ಮ ಸಂವಿಧಾನವನ್ನು ತಿಳಿದುಕೊಳ್ಳಿ' ಎಂಬ ವಿಷಯದ ಕುರಿತು ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತಿದೆ. ಇದೇ ವೇಳೆ ದೇಶಾದ್ಯಂತದ ಪಂಚಾಯತ್‌ಗಳು ಸ್ಥಳೀಯ ಭಾಷೆಗಳಲ್ಲಿ ಪೀಠಿಕೆಯ ಸಾಮೂಹಿಕ ಪಠಣವನ್ನು ನಡೆಸುತ್ತವೆ, ಜೊತೆಗೆ ಸಾಂವಿಧಾನಿಕ ಮೌಲ್ಯಗಳ ಕುರಿತು ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಗುವುದು. ರಾಷ್ಟ್ರವ್ಯಾಪಿ ಸಂವಿಧಾನ ಸಂಪರ್ಕ-ಪೀಠಿಕೆ ಓದುವ ಕಾರ್ಯಕ್ರಮದ ಪ್ರಸಾರವು ಬೆಳಿಗ್ಗೆ 10:00 ರಿಂದ ಸಂಜೆ 6:45 ರವರೆಗೆ ನಡೆಯಲಿದ್ದು, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು 15 ನಿಮಿಷಗಳ ಸೆಗ್ಮೆಂಟ್ ನಲ್ಲಿ ಕೈ ಜೋಡಿಸುತ್ತದೆ. ಈ ಕಾರ್ಯಕ್ರಮವನ್ನು ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಮುದಾಯ ಕಲೆಯ ಮೂಲಕ ಗೋಡೆಗಳ ಮೇಲೆ ಪೀಠಿಕೆಗಳನ್ನು ಬರೆಯಲು ಮತ್ತು ಯುವ ಗುಂಪುಗಳು, ಸ್ವ-ಸಹಾಯ ಗುಂಪುಗಳು ಮತ್ತು ಸಮುದಾಯ ಸಂಸ್ಥೆಗಳೊಂದಿಗೆ "ನಮ್ಮ ಗ್ರಾಮ, ನಮ್ಮ ಸಂವಿಧಾನ" ಕೂಟಗಳನ್ನು ಆಯೋಜಿಸಲು ಪಿ ಆರ್ ಐ ಗಳು ಮತ್ತು ಅರ್ ಎಲ್ ಬಿ ಗಳನ್ನು ಪ್ರೋತ್ಸಾಹಿಸಲಾಗುವುದು. ಪಿ ಇ ಎಸ್ ಎ ಪ್ರದೇಶಗಳಲ್ಲಿ ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ವಿಶೇಷ ಗಮನ ಹರಿಸಿ, ಈ ಚಟುವಟಿಕೆಗಳನ್ನು ಬೆಂಬಲಿಸಲು ರಾಜ್ಯ ಮಟ್ಟದ ಸಮನ್ವಯ ಕೋಶಗಳನ್ನು ಸಕ್ರಿಯಗೊಳಿಸಲಾಗಿದೆ.
*****
(Release ID: 2193623)
Visitor Counter : 6