ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ವಿಶ್ವ ಮೀನುಗಾರಿಕಾ ದಿನದ ಪ್ರಯುಕ್ತ ಮೀನುಗಾರಿಕಾ ವಲಯದ ಒಂದು ಪ್ರಮುಖ ಪ್ರಗತಿಯ ಗುರುತಿಸುವಿಕೆಗಾಗಿ ಭಾರತವು "ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಅನ್ವೇಷಣೆಯ ರಾಷ್ಟ್ರೀಯ ಚೌಕಟ್ಟು 2025" ಅನ್ನು ಅನಾವರಣಗೊಳಿಸಿತು


“ಭಾರತದ ಸಮುದ್ರಾಹಾರ ರಫ್ತನ್ನು ವಿಸ್ತರಿಸಲು ಸಂಘಟಿತ ಪ್ರಯತ್ನಗಳು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳು ಪ್ರಮುಖವಾಗಿವೆ”: ಶ್ರೀ ರಾಜೀವ್ ರಂಜನ್ ಸಿಂಗ್

2030ರ ವೇಳೆಗೆ ₹1 ಲಕ್ಷ ಕೋಟಿ ಸಮುದ್ರಾಹಾರ ರಫ್ತಿನ ಗುರಿಯನ್ನು ಹೊಂದಿರುವ ಭಾರತ

ಭಾರತದ ಮೀನುಗಾರಿಕಾ ರಫ್ತು ಮತ್ತು 2ನೇ ಹಂತದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಕಾರ್ಯತಂತ್ರವನ್ನು ಹೆಚ್ಚಿಸಲು ಜಾಗತಿಕ ಚರ್ಚೆಯಲ್ಲಿ ಭಾಗವಹಿಸಲಿರುವ ಪಾಲುದಾರರು

Posted On: 21 NOV 2025 5:55PM by PIB Bengaluru

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿರುವ ಮೀನುಗಾರಿಕೆ ಇಲಾಖೆಯು ಇಂದು ನವದೆಹಲಿಯಲ್ಲಿ "ಭಾರತದ ನೀಲಿ ಪರಿವರ್ತನೆ: ಸಮುದ್ರಾಹಾರ ರಫ್ತಿನ ಮೌಲ್ಯವರ್ಧನೆ ಬಲಪಡಿಕೆ" ಎಂಬ ವಿಷಯ ಕುರಿತಾಗಿ 2025 ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಿತು. ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ವೀಡಿಯೊ ಸಂದೇಶದ ಮೂಲಕ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರಾದ ಪ್ರೊ. ಎಸ್. ಪಿ. ಸಿಂಗ್ ಬಾಘೇಲ್ ಮತ್ತು ಶ್ರೀ ಜಾರ್ಜ್ ಕುರಿಯನ್ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತದ ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಲಯದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಮೂಲಕ, ಸಂಬಧಪಟ್ಟ ಇಲಾಖೆಯು ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಅನ್ವೇಷಣೆಯ ರಾಷ್ಟ್ರೀಯ ಚೌಕಟ್ಟು 2025 ಅನ್ನು ಅನಾವರಣಗೊಳಿಸಿತು. ಅದಲ್ಲದೆ ಮೀನುಗಾರಿಕೆ ಮರಿ ಸಾಕಣೆಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ, ಬುದ್ದಿವಂತಿಕೆಯ ಮತ್ತು ಸಂಯೋಜಿತ ಮೀನುಗಾರಿಕೆ ಬಂದರುಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ, ಅಧಿಸೂಚಿತ ಸಾಗರ ಮೀನು ಇಳಿದಾಣ ಕೇಂದ್ರಗಳಲ್ಲಿ ಕನಿಷ್ಠ ಮೂಲಭೂತ ಮೂಲಸೌಕರ್ಯಗಳ ಅಭಿವೃದ್ಧಿಯ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ, ಜಲಾಶಯ ಮೀನುಗಾರಿಕೆ ನಿರ್ವಹಣೆಗಾಗಿ ಮಾರ್ಗಸೂಚಿಗಳು ಮತ್ತು ಕರಾವಳಿ ಜಲಚರ ಸಾಕಣೆ ಮಾರ್ಗಸೂಚಿಗಳ ಸಂಕಲನ ಸೇರಿದಂತೆ ಹಲವಾರು ಪ್ರಮುಖ ಉಪಕ್ರಮಗಳನ್ನು ಅನಾವರಣಗೊಳಿಸಿತು. ಈ ಮಧ್ಯಸ್ಥಿಕೆಗಳು ಒಟ್ಟಾರೆ ಮೀನುಗಾರಿಕೆಯ ಮೂಲಸೌಕರ್ಯದ ಆಧುನೀಕರಣ, ಸುಸ್ಥಿರತೆಯ ಅಭ್ಯಾಸಗಳ ಬಲಪಡಿಸುವಿಕೆ ಮತ್ತು ವಲಯದಾದ್ಯಂತ ಮೌಲ್ಯವರ್ಧನೆಯ ತೀವ್ರಗೊಳಿಸುವಿಕೆಯ ಗುರಿಯನ್ನು ಹೊಂದಿವೆ.

A group of people standing on a stageAI-generated content may be incorrect.

A group of people sitting in a roomAI-generated content may be incorrect.

ಕೇಂದ್ರ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅವರು ತಮ್ಮ ಮುದ್ರಿತ ವೀಡಿಯೊ ಸಂದೇಶದಲ್ಲಿ, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನಾವೀನ್ಯತೆಯ ಬಳಕೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ನಿರ್ಮಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ಯಾಕೇಜಿಂಗ್ ವ್ಯವಸ್ಥೆಯನ್ನು ಸುಧಾರಿತ, ಪ್ರಮಾಣೀಕರಣ ಮಾನದಂಡಗಳನ್ನು ಪೂರೈಸುವ ಮತ್ತು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಬಳಸಿಕೊಳ್ಳುವ ಮೂಲಕ ಸಮುದ್ರಾಹಾರ ಮೌಲ್ಯ ಸರಪಳಿಯನ್ನು ಬಲಪಡಿಸಲು ಸಂಘಟಿತ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅವರು ಪಾಲುದಾರರಿಗೆ ಕರೆ ನೀಡಿದರು. ಜಾಗತಿಕ ಮಾನದಂಡಗಳ ಪೂರೈಕೆಗೆ ಅನ್ವೇಷಣೆ, ಬ್ರ್ಯಾಂಡಿಂಗ್ ಮತ್ತು ಜೈವಿಕ ಸುರಕ್ಷತೆಯನ್ನು ಬಲಪಡಿಸುವ ಮಹತ್ವವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ರಾಷ್ಟ್ರೀಯ ಅನ್ವೇಷಣಾ ಚೌಕಟ್ಟಿನ ಉಡಾವಣೆಯನ್ನು ಸಮುದ್ರಾಹಾರ ರಫ್ತುನ್ನು ಹೆಚ್ಚಿಸುವ ಮತ್ತು ಮೀನುಗಾರರಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುವ ಪರಿವರ್ತನಾ ಮೈಲಿಗಲ್ಲು ಎಂದು ಅವರು ವಿವರಿಸಿದರು.

ಕಳೆದ ದಶಕದಲ್ಲಿ ಭಾರತವು ಮೀನು ಉತ್ಪಾದನೆಯನ್ನು 96 ಲಕ್ಷ ಟನ್‌ಗಳಿಂದ 195 ಲಕ್ಷ ಟನ್‌ಗಳಿಗೆ ದ್ವಿಗುಣಗೊಳಿಸುವಲ್ಲಿ ಗಳಿಸಿದ ಸಾಧನೆಯನ್ನು ಶ್ರೀ ಜಾರ್ಜ್ ಕುರಿಯನ್ ಉಲ್ಲೇಖಿಸಿದರು. ಇದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮುಂತಾದ ಪ್ರಮುಖ ಯೋಜನೆಗಳ ಅಡಿಯಲ್ಲಿ ₹ 38,572 ಕೋಟಿಗಳ ಐತಿಹಾಸಿಕ ಹೂಡಿಕೆಯಿಂದ ಸಾಧ್ಯವಾಗಿದೆ. ಭವಿಷ್ಯದ ದೃಷ್ಟಿಕೋನವನ್ನು ವಿವರಿಸುತ್ತಾ, 2030 ರ ವೇಳೆಗೆ ಸಮುದ್ರಾಹಾರ ರಫ್ತನ್ನು ₹1 ಲಕ್ಷ ಕೋಟಿಗೆ ಹೆಚ್ಚಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಅವರು ಒತ್ತಿ ಹೇಳಿದರು. ಈ ಯೋಜನೆಯು 30% ಹೆಚ್ಚಿನ ಮೌಲ್ಯದ, ಮೌಲ್ಯವರ್ಧಿತ ಉತ್ಪನ್ನಗಳನ್ನು ಒಳಗೊಂಡಿದೆ. ಪ್ರೊ. ಎಸ್. ಪಿ. ಸಿಂಗ್ ಬಾಘೇಲ್ ಅವರು ತಮ್ಮ ಭಾಷಣದಲ್ಲಿ, ರಫ್ತುಗಳನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ 3 ಕೋಟಿಗೂ ಹೆಚ್ಚು ಜನರ ಜೀವನೋಪಾಯವನ್ನು ಬೆಂಬಲಿಸುವಲ್ಲಿ ಮೀನುಗಾರಿಕಾ ಕ್ಷೇತ್ರದ ಪ್ರಮುಖ ಕೊಡುಗೆಯನ್ನು ಒತ್ತಿ ಹಿಡಿದರು. ನೋಂದಾಯಿತ ರಫ್ತುದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯು ಮೀನುಗಾರಿಕಾ ವಲಯದಲ್ಲಿ ಭಾರತದ ಜಾಗತಿಕ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದೆ ಮತ್ತು ರಫ್ತು ಬೆಳವಣಿಗೆಯನ್ನು ವೇಗಗೊಳಿಸಿದೆ ಎಂದು ಅವರು ಒತ್ತಿ ಹೇಳಿದರು. ಜಿಎಸ್‌ಟಿ ಸುಧಾರಣೆಗಳು, ಡಿಜಿಟಲೀಕರಣ ಮತ್ತು ತರಬೇತಿಯ ಮೇಲೆ ಕೇಂದ್ರೀಕರಿಸುವಂತಹ ಇತ್ತೀಚಿನ ಸರ್ಕಾರಿ ಉಪಕ್ರಮಗಳು ವ್ಯವಹಾರವನ್ನು ಸುಲಭಗೊಳಿಸುವ ಮೂಲಕ ಮೀನುಗಾರಿಕಾ ವಲಯವನ್ನು ಬಲಪಡಿಸಿವೆ ಎಂದು ಪ್ರೊ. ಬಾಘೇಲ್ ಹೇಳಿದರು.

ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿಯವರಾದ ಡಾ. ಅಭಿಲಕ್ಷ್ ಲಿಖಿಯವರು, ಭಾರತದ ಮೀನುಗಾರಿಕಾ ವಲಯವು ವಾರ್ಷಿಕ 9% ದರದಲ್ಲಿ ವಿಸ್ತರಿಸುತ್ತಿದ್ದು, 2024–25ನೇ ಹಣಕಾಸು ವರ್ಷದಲ್ಲಿ ಸಮುದ್ರಾಹಾರ ರಫ್ತು 16.85 ಲಕ್ಷ ಟನ್‌ಗಳನ್ನು ತಲುಪಿದೆ ಎಂದು ಹೇಳಿದರು - ಕಳೆದ ದಶಕದಲ್ಲಿ ಇದು 88% ಹೆಚ್ಚಳವಾಗಿದ್ದನ್ನು ಅವರು ನೆನಪಿಸಿಕೊಂಡರು. ಭಾರತವನ್ನು ಪ್ರಮುಖ ಜಾಗತಿಕ ಸಮುದ್ರಾಹಾರ ಸಂಸ್ಕರಣಾ ಕೇಂದ್ರವಾಗಿ ಸ್ಥಾಪಿಸಲು ಮೌಲ್ಯವರ್ಧನೆ, ವೈವಿಧ್ಯೀಕರಣ ಮತ್ತು ನಿಯಂತ್ರಕ ಅನುಸರಣೆಯ ಮೇಲೆ ಸರ್ಕಾರ ಗಮನಹರಿಸುವುದನ್ನು ಅವರು ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಪರಿಸರ ಮಾನದಂಡಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಸಾಗರ ಸಸ್ತನಿ ಸಂಗ್ರಹ ಮೌಲ್ಯಮಾಪನ ಯೋಜನೆ ಮತ್ತು ಆಮೆ ಹೊರಗಿಡುವ ಸಾಧನಗಳ (TED) ಅಳವಡಿಕೆ ಸೇರಿದಂತೆ ಪ್ರಮುಖ ಸುಸ್ಥಿರತೆಯ ಪ್ರಯತ್ನಗಳನ್ನು ಡಾ. ಲಿಖಿ ಎತ್ತಿ ತೋರಿಸಿದರು.

ಆಹಾರ ಮತ್ತು ಕೃಷಿ ಸಂಸ್ಥೆಯ ಭಾರತದ ಪ್ರತಿನಿಧಿಯವರಾದ ಶ್ರೀ ತಕಯುಕಿ ಹಗಿವಾರಾ ಅವರು ತಮ್ಮ ಭಾಷಣದಲ್ಲಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಆಹಾರ ಭದ್ರತೆ, ಸುಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಮುನ್ನಡೆಸುವಲ್ಲಿ ಭಾರತವನ್ನು ಬೆಂಬಲಿಸುವ ಆಹಾರ ಮತ್ತು ಕೃಷಿ ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಬ್ಲೂ ಪೋರ್ಟ್ ಉಪಕ್ರಮವನ್ನು ಉಲ್ಲೇಖಿಸುವ ನಿಟ್ಟಿನಲ್ಲಿ ಅವರು, ಮೀನುಗಾರಿಕಾ ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುವ, ಆ ಮೂಲಕ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಅದರ ದೃಷ್ಟಿಕೋನವನ್ನು ಶ್ರೀ ಹಗಿವಾರಾ ಅವರು ಒತ್ತಿ ಹೇಳಿದರು. ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಅನ್ನು ನಿಭಾಯಿಸುವ ತುರ್ತು ಅಗತ್ಯವನ್ನು ಕೂಡಾ ಅವರು ಒತ್ತಿ ಹೇಳಿದರು. ಸಮುದ್ರಾಹಾರ ಮೌಲ್ಯ ಸರಪಳಿ ಸಂಸ್ಕರಣೆಯಲ್ಲಿ ಔಷಧ ಬಳಕೆಯನ್ನು ಕಡಿಮೆ ಮಾಡುವುದು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ ಅವರು, ಈ ಸವಾಲನ್ನು ಎದುರಿಸಲು ಆಹಾರ ಮತ್ತು ಕೃಷಿ ಸಂಸ್ಥೆ ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿಯನ್ನು ನೀಡಿದರು.

A group of people standing on a stageAI-generated content may be incorrect.

A group of people sitting in a roomAI-generated content may be incorrect.

ಈ ಕಾರ್ಯಕ್ರಮದಲ್ಲಿ 19 ರಾಯಭಾರ ಕಚೇರಿಗಳು ಮತ್ತು ವಿಶ್ವ ಬ್ಯಾಂಕ್, FAO, AFD, GIZ, JICA, BoBP ಮತ್ತು MSC ಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಜಾಗತಿಕವಾಗಿ ಭಾಗವಹಿಸಿದ್ದವು. ಇದು ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಆಳವಾದ ಅಂತಾರಾಷ್ಟ್ರೀಯ ಸಹಯೋಗವನ್ನು ಪ್ರತಿಬಿಂಬಿಸುತ್ತದೆ. ಈ ವ್ಯವಸ್ಥೆಯು ಇತ್ತೀಚಿನ ರಾಜತಾಂತ್ರಿಕ ಸಭೆಯ ಮೇಲೆ ನಿರ್ಮಿಸಲ್ಪಟ್ಟಿದ್ದು, ಇದರಲ್ಲಿ ಮೀನುಗಾರಿಕಾ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ಮತ್ತು ಇಂಧನ ರಫ್ತು ಉತ್ತೇಜನವನ್ನು ಬಲಪಡಿಸಲು ಥೈಲ್ಯಾಂಡ್, ಇಂಡೋನೇಷ್ಯಾ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಯಭಾರ ಕಚೇರಿಗಳೊಂದಿಗಿನ ಚರ್ಚೆ-ಸಭೆಗಳು ಕೂಡಾ ಸೇರಿವೆ.

ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಮೌಲ್ಯವರ್ಧನೆಯ ಮೂಲಕ ಬೆಳವಣಿಗೆಯ ಹೆಚ್ಚಳ ಮತ್ತು ಭಾರತದ ಒಳನಾಡಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರಫ್ತು ಸಾಮರ್ಥ್ಯದ ಬಳಕೆ ಎಂಬ ಎರಡು ತಾಂತ್ರಿಕ ಅಧಿವೇಶನಗಳು ಸಿಹಿನೀರಿನ ಮೀನು ಪ್ರಭೇದಗಳ ಮೇಲೆ ಕೇಂದ್ರೀಕರಿಸಿ, ಮೌಲ್ಯವರ್ಧನೆ, ನಾವೀನ್ಯತೆ, ಬ್ರ್ಯಾಂಡಿಂಗ್, ಗುಣಮಟ್ಟದ ಮಾನದಂಡಗಳ ಅನುಸರಣೆ ಮತ್ತು ಬುದ್ದಿವಂತಿಕಯ ಮೂಲಸೌಕರ್ಯದ ಮೂಲಕ ಸಮುದ್ರಾಹಾರ ರಫ್ತು ಬೆಳವಣಿಗೆಯನ್ನು ವೇಗಗೊಳಿಸುವುದರ ಜೊತೆಗೆ ಮಾರುಕಟ್ಟೆ ವೈವಿಧ್ಯೀಕರಣ ಮತ್ತು ಡಿಜಿಟಲ್ ಬಳಕೆಯ ಮೂಲಕ ಸಿಹಿನೀರಿನ ಮೀನು ಪ್ರಭೇದಗಳಿಗೆ ರಫ್ತು ಅವಕಾಶಗಳನ್ನು ವಿಸ್ತರಿಸುವತ್ತ ಗಮನಹರಿಸಿವೆ. ಈ ಚರ್ಚೆಗಳ ಸಲಹೆಗಳು 2ನೇ ಹಂತದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಕಾರ್ಯತಂತ್ರವನ್ನು  ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಅನ್ವೇಷಣೆಯ ರಾಷ್ಟ್ರೀಯ ಚೌಕಟ್ಟು 2025 ಕುರಿತಾಗಿ ತಿಳುವಳಿಕೆ:

ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಅನ್ವೇಷಣೆಯ ರಾಷ್ಟ್ರೀಯ ಚೌಕಟ್ಟು 2025, ಆಹಾರ ಸುರಕ್ಷತೆ, ಸುಸ್ಥಿರತೆ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ರಾಷ್ಟ್ರೀಯ ಡಿಜಿಟಲ್ ಅನ್ವೇಷಣೆಯ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಸಣ್ಣ ಪ್ರಮಾಣದ ಮೀನುಗಾರರು ಮತ್ತು ರೈತರನ್ನು ಒಳಗೊಂಡು ಇದು, ಬ್ಲಾಕ್‌ಚೈನ್, IoT, QR ಕೋಡ್‌ಗಳು ಮತ್ತು GPS ನಂತಹ ಡಿಜಿಟಲ್ ಪರಿಕರಗಳನ್ನು ಸಂಯೋಜಿಸುವ ಮೂಲಕ ವಿಘಟಿತ ಅನ್ವೇಷಣೆಯ ಅಭ್ಯಾಸಗಳನ್ನು ಏಕೀಕರಿಸುವ ಸಮಗ್ರ ಕಾರ್ಯತಂತ್ರದ ಚೌಕಟ್ಟು ವಿವರಿಸುತ್ತದೆ. ಈ ಚೌಕಟ್ಟು 'ಫಾರ್ಮ್‌ನಿಂದ ಪ್ಲೇಟ್‌ಗೆ' ಮತ್ತು 'ಗ್ರಾಹಕರ ಸದುಪಯೋಗ' ಸಮುದ್ರಾಹಾರ ಉತ್ಪನ್ನಗಳ ನೈಜ-ಸಮಯದ, ಆದಿಯಿಂದ ಅಂತ್ಯದ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. (ರಾಷ್ಟ್ರೀಯ ಅನ್ವೇಷಣೆಯ ಚೌಕಟ್ಟಿನ ಸಂಕ್ಷಿಪ್ತ ವರದಿ)

National Framework on Traceability in Fisheries and Aquaculture 2025

SOP for Mariculture

SOP on Development and Management of Smart and Integrated Fishing Harbours 

SOP on Development of Minimum Basic Infrastructure at Notified Marine Fish Landing Centres

Guidelines for Reservoir Fisheries Management

Compendium of Coastal Aquaculture Guidelines

 

*****

 

 


(Release ID: 2192770) Visitor Counter : 4