ಉಕ್ಕು ಸಚಿವಾಲಯ
2030ರ ವೇಳೆಗೆ ರೂರ್ಕೆಲಾ ಉಕ್ಕು ಸ್ಥಾವರದ ಸಾಮರ್ಥ್ಯವನ್ನು 9.8 ದಶಲಕ್ಷ ಟನ್‌ಗಳಿಗೆ ದ್ವಿಗುಣಗೊಳಿಸುವ ಯೋಜನೆಯನ್ನು ಕೇಂದ್ರ ಸಚಿವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಅನಾವರಣಗೊಳಿಸಿದರು
ರೂರ್ಕೆಲಾ ಉಕ್ಕು ಸ್ಥಾವರವು ಭಾರತದ ಕೈಗಾರಿಕಾ ಪಯಣಕ್ಕೆ ಅಡಿಪಾಯವಾಗಿದೆ: ಶ್ರೀ ಹೆಚ್.ಡಿ.ಕುಮಾರಸ್ವಾಮಿ
ವಿಸ್ತರಣೆಯು ಒಡಿಶಾಕ್ಕೆ ಸಮೃದ್ಧಿಯ ಹೊಸ ಅಲೆಗಳನ್ನು ತರುತ್ತದೆ: ಹೆಚ್.ಡಿ.ಕುಮಾರಸ್ವಾಮಿ
प्रविष्टि तिथि:
19 NOV 2025 5:05PM by PIB Bengaluru
ರೂರ್ಕೆಲಾ ಉಕ್ಕು ಸ್ಥಾವರಕ್ಕೆ (ಆರ್‌ಎಸ್‌ಪಿ) ನೀಡಿದ ಮಹತ್ವದ ಭೇಟಿಯಲ್ಲಿ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಭಾರತದ ಕೈಗಾರಿಕಾ ಬೆಳವಣಿಗೆಯಲ್ಲಿ ಸ್ಥಾವರದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು ಮತ್ತು ಪರಿವರ್ತನಾತ್ಮಕ ವಿಸ್ತರಣೆಯ ಮಾರ್ಗಸೂಚಿಯನ್ನು ವಿವರಿಸಿದರು.

ಆರ್‌ಎಸ್‌ಪಿಯನ್ನು ಭಾರತದ ಉಕ್ಕಿನ ಪ್ರಯಾಣದ ಆಧಾರಸ್ತಂಭ ಎಂದು ಬಣ್ಣಿಸಿದ ಸಚಿವರು, ದೇಶದ ಮೊದಲ ಸಾರ್ವಜನಿಕ ವಲಯದ ಸಮಗ್ರ ಉಕ್ಕು ಸ್ಥಾವರಕ್ಕೆ ಭೇಟಿ ನೀಡುವುದು ಹೆಮ್ಮೆಯ ಕ್ಷ ಣ ಎಂದು ಹೇಳಿದರು. ಆರು ದಶಕಗಳಿಂದ, ಆರ್‌ಎಸ್‌ಪಿ ಕೇವಲ ಕಾರ್ಯನಿರ್ವಹಿಸುತ್ತಿಲ್ಲ, ಆದರೆ ಪ್ರವರ್ಧಮಾನಕ್ಕೆ ಬಂದಿದೆ. ಇದು ನಮ್ಮ ದೇಶೀಯ ಉಕ್ಕು ಉದ್ಯಮದ ಪ್ರಮುಖ ಆಧಾರ ಮತ್ತು ಅಡಿಪಾಯವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.

ಆರ್‌ಎಸ್‌ಪಿ ಕಾರ್ಯಪಡೆಯ ಸಮರ್ಪಣೆಯನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ಉತ್ಪಾದನೆ, ಉತ್ಪಾದಕತೆ ಮತ್ತು ತಾಂತ್ರಿಕ-ಅರ್ಥಶಾಸ್ತ್ರದಲ್ಲಿ ಸಾಧಿಸಿದ ಗಣನೀಯ ಸುಧಾರಣೆಗಳಿಗಾಗಿ ನಾನು ಆರ್‌ಎಸ್‌ಪಿ ಸಾಮೂಹಿಕ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು. ಭೇಟಿಯ ಸಮಯದಲ್ಲಿ, ಅವರು ಸುಮಾರು 1,100 ಕೋಟಿ ರೂ.ಗಳ ಬಂಡವಾಳ ವೆಚ್ಚದೊಂದಿಗೆ ನಿರ್ಮಿಸಲಾದ ಸ್ಟೀಲ್ ಮೆಲ್ಟಿಂಗ್ ಶಾಪ್ -2 ರಲ್ಲಿ ಆಧುನಿಕ 1 ಎಂಟಿಪಿಎ ಸ್ಪ್ಯಾಬ್ ಕ್ಯಾಸ್ಟರ್‌ಅನ್ನು ಉದ್ಘಾಟಿಸಿದರು ಮತ್ತು ಕೋಕ್ ಓವನ್ ಬ್ಯಾಟರಿ 7 ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹೊಸ ಪೆಲೆಟ್ ಸ್ಥಾವರದ ಪ್ರಗತಿಯನ್ನು ಪರಿಶೀಲಿಸಿದರು.
ಕಚ್ಚಾ ವಸ್ತುಗಳಲ್ಲಿನ ಸಕಾರಾತ್ಮಕ ಬೆಳವಣಿಗೆಯನ್ನು ಬಿಂಬಿಸಿದ ಸಚಿವರು, ಒಡಿಶಾ ಗಣಿ ಸಮೂಹವು ಈ ವರ್ಷ ಉತ್ಪಾದನೆಯನ್ನು ಶೇ.5ಕ್ಕಿಂತ ಹೆಚ್ಚು ಅಧಿಕಗೊಳಿಸಿದೆ ಮತ್ತು 2025-26ರ ಹಣಕಾಸು ವರ್ಷದಲ್ಲಿ ಸುಮಾರು 15 ದಶಲಕ್ಷ ಟನ್ ದಾಟುವ ನಿರೀಕ್ಷೆಯಿದೆ, ಇದು ಆರ್‌ಎಸ್‌ಪಿಗೆ ಬಲವಾದ ಕಚ್ಚಾ ವಸ್ತುಗಳ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದರು.
ವಿಸ್ತರಣಾ ಕಾರ್ಯಸೂಚಿಯನ್ನು ವಿವರಿಸಿದ ಅವರು, ನಾವು ಆರ್‌ಎಸ್‌ಪಿ ವಿಸ್ತರಣೆಗೆ ಯೋಜಿಸುತ್ತಿದ್ದೇವೆ - ಸುಮಾರು 30,000 ಕೋಟಿ ರೂ.ಗಳ ಆರ್‌ಎಸ್‌ಪಿ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಹೇಳಿದರು.
ನಾವು ಸುಮಾರು 9,000 ಕೋಟಿ ರೂ.ಗಳಿಗೆ ಸ್ಥಾವರದ ಆಧುನೀಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ, ಆರ್‌ಎಸ್‌ಪಿ ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಸಚಿವಾಲಯವು ಒಡಿಶಾ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು. ನಾವು ರಾಜ್ಯ ಸರ್ಕಾರದೊಂದಿಗೆ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿದ್ದೇವೆ, ಇದರಿಂದಾಗಿ ವಿಸ್ತರಣೆಯು ಪರಿಣಾಮಕಾರಿಯಾಗಿ ಮತ್ತು ಸೌಹಾರ್ದಯುತ, ಸಹಯೋಗದ ವಾತಾವರಣದಲ್ಲಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ವ್ಯಾಪಕ ಪ್ರಾದೇಶಿಕ ಪರಿಣಾಮದ ಬಗ್ಗೆ ಚರ್ಚಿಸಿದ ಶ್ರೀ ಕುಮಾರಸ್ವಾಮಿ ಅವರು ಸಾಮಾಜಿಕ ಆರ್ಥಿಕ ಲಾಭಗಳನ್ನು ಬಿಂಬಿಸಿದರು. ಈ ವಿಸ್ತರಣೆಯು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ, ಎಂಎಸ್‌ಎಂಇಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸಮುದಾಯ ಅಭಿವೃದ್ಧಿಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಹೆಚ್ಚಿದ ಸಾಮರ್ಥ್ಯವು ಆರ್‌ಎಸ್‌ಪಿಯನ್ನು ಉತ್ತಮ ಗುಣಮಟ್ಟದ ಮತ್ತು ವಿಶೇಷ ಉಕ್ಕಿನ ಪ್ರಮುಖ ಉತ್ಪಾದಕರಾಗಿ ಇರಿಸುತ್ತದೆ ಎಂದು ಅವರು ಹೇಳಿದರು.
ಈ ಬೆಳವಣಿಗೆಯನ್ನು ರಾಷ್ಟ್ರೀಯ ಆದ್ಯತೆಗಳೊಂದಿಗೆ ಜೋಡಿಸಿದ ಅವರು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ರಾಷ್ಟ್ರೀಯ ಉಕ್ಕು ನೀತಿಯು 2030-31 ರ ವೇಳೆಗೆ ಭಾರತದ ಉಕ್ಕು ಸಾಮರ್ಥ್ಯವನ್ನು 300 ದಶಲಕ್ಷ ಟನ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಪಿಎಲ್‌ಐ ಯೋಜನೆಯ ಮೂಲಕ ವಿಶೇಷ ಉಕ್ಕು ಉತ್ಪಾದನೆಯನ್ನು ಹೆಚ್ಚಿಸುವುದು ಈ ಅಭಿಯಾನಕ್ಕೆ ನಿರ್ಣಾಯಕವಾಗಿದೆ.
ರೂರ್ಕೆಲಾದ ಕೈಗಾರಿಕಾ ಭವಿಷ್ಯದ ಬಗ್ಗೆ ತಮ್ಮ ವಿಶ್ವಾಸವನ್ನು ಪುನರುಚ್ಚರಿಸಿದ ಶ್ರೀ ಕುಮಾರಸ್ವಾಮಿ ಅವರು, ಮುಂದಿನ ದಿನಗಳಲ್ಲಿ ರೂರ್ಕೆಲಾ ದೇಶದ ಪ್ರಮುಖ ಉಕ್ಕಿನ ಕೇಂದ್ರವಾಗಲಿದೆ. ಇಲ್ಲಿನ ಪ್ರಗತಿಯು ನಗರಕ್ಕೆ ಮಾತ್ರವಲ್ಲದೆ ಇಡೀ ರಾಜ್ಯ ಮತ್ತು ರಾಷ್ಟ್ರಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
****
(रिलीज़ आईडी: 2191888)
आगंतुक पटल : 3