ಉಕ್ಕು ಸಚಿವಾಲಯ
azadi ka amrit mahotsav

ಭುವನೇಶ್ವರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಚಿಂತನ ಶಿಬಿರದ ಅಧ್ಯಕ್ಷತೆಯನ್ನು ಕೇಂದ್ರ ಉಕ್ಕು ರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ವಹಿಸಲಿದ್ದಾರೆ


ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ವಾವಲಂಬನೆ ಎಂಬ ವಿಷಯಗಳ ಮೇಲೆ ಕೇಂದ್ರೀಕರಿಸುವ ಎರಡು ದಿನಗಳ ಚಿಂತನ ಶಿಬಿರವನ್ನು ಭುವನೇಶ್ವರದಲ್ಲಿ ಕೇಂದ್ರ ಉಕ್ಕು ಸಚಿವಾಲಯ ಆಯೋಜಿಸಲಿದೆ

ಉಕ್ಕು ವಲಯದಲ್ಲಿ ಅಭಿವೃದ್ದಿ, ಬೆಳವಣಿಗೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗಾಗಿ ವಿವಿಧ ಸಹಯೋಗದ ತಂತ್ರಗಾರಿಕೆಗಳಿಗೆ ಚಿಂತನ ಶಿಬಿರ ಚಾಲನೆ ನೀಡಲಿದೆ

Posted On: 19 NOV 2025 5:04PM by PIB Bengaluru

ಭಾರತದ ಉಕ್ಕು ಕ್ಷೇತ್ರದ ಭವಿಷ್ಯದ ಪಥದ ಕುರಿತು ಚರ್ಚಿಸಲು ಹಿರಿಯ ನಾಯಕತ್ವ ಮತ್ತು ಪಾಲುದಾರರನ್ನು ಒಟ್ಟುಗೂಡಿಸಲು ಕೇಂದ್ರ ಉಕ್ಕು ಸಚಿವಾಲಯವು ನವೆಂಬರ್ 20, 2025 ರಿಂದ ಭುವನೇಶ್ವರದಲ್ಲಿ ನಡೆಯುವ ಮೇಫೇರ್ ಸಮಾವೇಶದಲ್ಲಿ ಎರಡು ದಿನಗಳ ಚಿಂತನ ಶಿಬಿರವನ್ನು ಆಯೋಜಿಸಲಿದೆ.

ರಾಷ್ಟ್ರ ನಿರ್ಮಾಣದಲ್ಲಿ ದೇಶೀಯ ಉಕ್ಕು ಕ್ಷೇತ್ರದ ಪಾತ್ರವನ್ನು ಬಲಪಡಿಸಲು ತೀವ್ರವಾದ ಚಿಂತನ-ಮಂಥನ, ಸಹಯೋಗ ಮತ್ತು ಕಾರ್ಯತಂತ್ರದ ಜೋಡಣೆಗೆ ವೇದಿಕೆಯಾಗಿ ಶಿಬಿರವನ್ನು ಆಯೋಜಿಸಲಾಗಿದೆ. ಕೇಂದ್ರ ಉಕ್ಕು ಸಚಿವರಾದ ಗೌರವಾನ್ವಿತ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೇಂದ್ರ ಉಕ್ಕು ಖಾತೆ ರಾಜ್ಯ ಸಚಿವರಾದ ಗೌರವಾನ್ವಿತ ಶ್ರೀ ಭೂಪತಿರಾಜು ಶ್ರೀನಿವಾಸ ವರ್ಮಾ ಅವರ ಉಪಸ್ಥಿತಿಯಲ್ಲಿ ಚರ್ಚೆಗಳು ನಡೆಯಲಿವೆ. ಅವರೊಂದಿಗೆ ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್, ಕೇಂದ್ರ ಉಕ್ಕು ಸಚಿವಾಲಯದ ಅಡಿಯಲ್ಲಿ ಬರುವ ಸಿ.ಪಿ.ಎಸ್.ಇ.ಗಳ ಮುಖ್ಯಸ್ಥರು ಮತ್ತು ಕೇಂದ್ರ ಉಕ್ಕು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಚಿಂತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ವಿಷಯಾಧಾರಿತ ಅಧಿವೇಶನಗಳು ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಡಿಜಿಟಲೀಕರಣ ಸೇರಿದಂತೆ ಭಾರತದ ಉಕ್ಕಿನಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಮೇಲೆ ಚಿಂತನ ಶಿಬಿರದ ಕಾರ್ಯಕ್ರಮಗಳು ಕೇಂದ್ರೀಕರಿಸಲಿದೆ. ಮೌಲ್ಯ ಸರಪಳಿಯಾದ್ಯಂತ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಉತ್ಪಾದಕತೆಯ ಮೇಲೆ ಚರ್ಚೆಗಳು ಕೇಂದ್ರೀಕರಿಸಲಿದೆ. ಇದು ಪಾಲುದಾರರ ದೃಷ್ಟಿಕೋನಗಳ ಮೂಲಕ ಕಾರ್ಯತಂತ್ರದ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ, ಹಾಗೂ, ಸ್ವಾವಲಂಬನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸಲು ಭಾರತೀಯ ಉಕ್ಕಿನ ವಲಯದಲ್ಲಿ ಸ್ಥಳೀಯ ತಂತ್ರಜ್ಞಾನಗಳನ್ನು ಉತ್ತೇಜಿಸುವ ವಿಷಯದ ಮೇಲೆ ವಿಶೇಷ ಒತ್ತು ನೀಡಲಾಗುತ್ತದೆ.

ಇದರ ಜೊತೆಗೆ, ಶಿಬಿರವು ಆಧುನಿಕ ಗಣಿಗಾರಿಕೆ ವಿಧಾನಗಳ ಬಗ್ಗೆಯೂ ಚರ್ಚಿಸಲಿದೆ, ಗಣಿಗಾರಿಕೆ ಮೂಲಸೌಕರ್ಯವನ್ನು ನವೀಕರಿಸುವುದು ಮತ್ತು ಉದ್ಯಮದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನಹರಿಸಲಿದೆ. ಭುವನೇಶ್ವರದಲ್ಲಿ ನಡೆಯುವ ಚಿಂತನ ಶಿಬಿರವು ಉಕ್ಕಿನ ಉದ್ಯಮದ ಮಾರ್ಗಸೂಚಿಯನ್ನು ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ, ಇದು ಭಾರತದ ಆರ್ಥಿಕ ಬೆಳವಣಿಗೆ ಮತ್ತು ಕೈಗಾರಿಕಾ ಪ್ರಗತಿಯಲ್ಲಿ ಅದರ ಪ್ರಮುಖ ಪಾತ್ರವನ್ನು ಬಲಪಡಿಸುತ್ತದೆ.

 

*****


(Release ID: 2191754) Visitor Counter : 4