ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಮಾನವ ಸಹಿತ ಬಾಹ್ಯಾಕಾಶ ನೌಕೆ ಹಾರಾಟ ಕಾರ್ಯಕ್ರಮಕ್ಕೆ ಭಾರತದ ಸನ್ನದ್ಧತೆಯನ್ನು ಬಲಪಡಿಸಲು ಬೆಂಗಳೂರಿನಲ್ಲಿ ಸಿ.ಎಸ್.ಐ.ಆರ್-ಇಸ್ರೋ ಬಾಹ್ಯಾಕಾಶ ಸಭೆ 2025


ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ಅನುಭವಗಳನ್ನು ಹಂಚಿಕೊಂಡ ಭಾರತದ ಮೊದಲ ಗಗನಯಾತ್ರಿ ವಿಂಗ್. ಕಮಾಂಡರ್. ರಾಕೇಶ್ ಶರ್ಮಾ (ನಿವೃತ್ತ) ಮತ್ತು ಗಗನಯಾತ್ರಿ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್ (ಇಸ್ರೋ ಗಗನಯಾತ್ರಿ ಮತ್ತು ಗಗನಯಾತ್ರಿ) 

प्रविष्टि तिथि: 17 NOV 2025 7:42PM by PIB Bengaluru

ಭಾರತದ ಮಾನವ ಸಹಿತ ಬಾಹ್ಯಾಕಾಶ ನೌಕೆ ಹಾರಾಟದ ಕಾರ್ಯಾಚರಣೆಯ ಅವಶ್ಯಕತೆಗಳಿಗಾಗಿ ಬಹುಶಿಸ್ತೀಯ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಾಂಸ್ಥಿಕ ಸಹಯೋಗವನ್ನು ಜೋಡಿಸಲು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.-CSIR) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ-ISRO) ಜಂಟಿಯಾಗಿ ಬೆಂಗಳೂರಿನಲ್ಲಿ ಸಿ.ಎಸ್.ಐ.ಆರ್-ಇಸ್ರೋ ಬಾಹ್ಯಾಕಾಶ ಸಭೆ 2025 ನಡೆಸಿದವು. ಈ ಕಾರ್ಯಕ್ರಮವನ್ನು ನೋಡಲ್ ಆಯೋಜನಾ ಸಂಸ್ಥೆಯಾದ ಬೆಂಗಳೂರಿನ ಸಿ.ಎಸ್.ಐ.ಆರ್ -ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಸಿ.ಎಸ್.ಐ.ಆರ್-ಎನ್.ಎ.ಎಲ್.) ಆಯೋಜಿಸಿತ್ತು.

ಡಿಎಸ್ಐಆರ್ ಕಾರ್ಯದರ್ಶಿ ಮತ್ತು ಸಿಎಸ್ಐಆರ್ ಮಹಾನಿರ್ದೇಶಕಿ ಡಾ. ಎನ್. ಕಲೈಸೆಲ್ವಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಸಿಎಸ್ಐಆರ್‌ನ ವೈಜ್ಞಾನಿಕ ಮತ್ತು ತಾಂತ್ರಿಕ ಕೊಡುಗೆಗಳನ್ನು ವಿವರಿಸಿದರು ಮತ್ತು ವಿಜ್ಞಾನಿಗಳು, ಸಂಶೋಧಕರು, ಗಗನಯಾತ್ರಿಗಳು ಮತ್ತು ಅಂತಾರಾಷ್ಟ್ರೀಯ ತಜ್ಞರ ನಡುವೆ ಜ್ಞಾನ ಹಂಚಿಕೆಯ ಮೂಲಕ ಈ ಸಭೆಯು ಅಮೂಲ್ಯವಾದ ಪಾಠಗಳನ್ನು/ಮಾಹಿತಿಗಳನ್ನು (ಟೇಕ್‌ಅವೇಗಳನ್ನು)  ನೀಡುತ್ತದೆ ಮತ್ತು ವಿವಿಧ ಕ್ಷೇತ್ರಗಳ ಅಂತರವನ್ನು ಪರಿಹರಿಸುತ್ತದೆ ಎಂದು ಹೇಳಿದರು. ರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಗುರಿಗಳನ್ನು ಮುನ್ನಡೆಸುವಲ್ಲಿ ಗೌರವಾನ್ವಿತ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರ ಮಾರ್ಗದರ್ಶನವನ್ನು ಶ್ಲಾಘಿಸುತ್ತಾ, ಸ್ಥಳೀಯ ನಾವೀನ್ಯತೆ ಮತ್ತು ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಅವರು ಎತ್ತಿ ತೋರಿಸಿದರು.

ಬಾಹ್ಯಾಕಾಶ ಇಲಾಖೆಯ (ಡಿ.ಒ.ಎಸ್.) ಕಾರ್ಯದರ್ಶಿ ಮತ್ತು ಇಸ್ರೋ ಅಧ್ಯಕ್ಷರಾದ ಡಾ. ವಿ. ನಾರಾಯಣನ್ ಅವರು ಕಾರ್ಯತಂತ್ರದ ಕುರಿತು ಮಾತನಾಡಿದರು. ಮತ್ತು ಗಗನಯಾನ ಬಾಹ್ಯಾಕಾಶ ಯೋಜನೆಗೆ ವಿವಿಧ ಸಚಿವಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳ ಸಹಯೋಗದ ಅಗತ್ಯವಿದೆ ಎಂದು ಹೇಳಿದರು. ಮುಂದಿನ ಪೀಳಿಗೆಯ ಸಿಬ್ಬಂದಿ ಸುರಕ್ಷತಾ ವ್ಯವಸ್ಥೆಗಳು, ಸುಧಾರಿತ ಜೀವಾಧಾರಕ ತಂತ್ರಜ್ಞಾನಗಳು ಮತ್ತು ವೈಜ್ಞಾನಿಕ ಪೇಲೋಡ್ ಅಭಿವೃದ್ಧಿ ಸೇರಿದಂತೆ ವಿಕಸನಗೊಳ್ಳುತ್ತಿರುವ ಮಿಷನ್ ಆದ್ಯತೆಗಳನ್ನು ಅವರು ವಿವರಿಸಿದರು. ಅವರು ಸಿ.ಎಸ್.ಐ.ಆರ್. ಮತ್ತು ಭಾರತದ ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯ ಕೊಡುಗೆಗಳನ್ನು ಗುರುತಿಸಿದರು ಮತ್ತು ಚಂದ್ರನಲ್ಲಿಗೆ ಭವಿಷ್ಯದ ಮಾನವ ಮಿಷನ್, ಮಂಗಳ ಪರಿಶೋಧನೆ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಸೇರಿದಂತೆ ಭಾರತದ ದೀರ್ಘಕಾಲೀನ ಉದ್ದೇಶಗಳನ್ನು ಉಲ್ಲೇಖಿಸಿದರು.

ಸಿ.ಎಸ್.ಐ.ಆರ್-ಎನ್.ಎ.ಎಲ್. ನ ನಿರ್ದೇಶಕರಾದ ಡಾ. ಅಭಯ್ ಎ. ಪಾಶಿಲ್ಕರ್ ಅವರು ಪಾಲ್ಗೊಂಡವರನ್ನು ಸ್ವಾಗತಿಸಿದರು ಮತ್ತು ಭಾರತದ ಬಾಹ್ಯಾಕಾಶ ಮತ್ತು ಮಾನವ ಸಹಿತ ಬಾಹ್ಯಾಕಾಶ ಹಾರಾಟದ ಗುರಿಗಳನ್ನು ಬೆಂಬಲಿಸುವ ತಂತ್ರಜ್ಞಾನಗಳು, ವಸ್ತು ಸಂಶೋಧನೆ ಮತ್ತು ಪರೀಕ್ಷಾ ಸಾಮರ್ಥ್ಯಗಳನ್ನು ಮುಂದುವರಿಸಲು ಎನ್.ಎ.ಎಲ್.ನ ಬದ್ಧತೆಯನ್ನು ಪುನರುಚ್ಚರಿಸಿದರು.

ಇ.ಎಸ್.ಎ. ಗಗನಯಾತ್ರಿ (ನಾಸಾ ಎಸ್.ಟಿ.ಎಸ್.-66, ಎಸ್.ಟಿ.ಎಸ್.-84, ಎಸ್.ಟಿ.ಎಸ್.-103) ಶ್ರೀ ಜೀನ್-ಫ್ರಾಂಕೋಯಿಸ್ ಕ್ಲರ್ವಾಯ್ ಅವರ ವಿಶೇಷ ವೀಡಿಯೊ ಸಂದೇಶವು ಜಾಗತಿಕ ದೃಷ್ಟಿಕೋನವನ್ನು ಸೇರಿಸಿತು ಮತ್ತು ಮಾನವ ಸಹಿತ ಗಗನ ನೌಕೆಯ ಬಾಹ್ಯಾಕಾಶ ಹಾರಾಟವನ್ನು ಮುನ್ನಡೆಸುವಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಹಂಚಿಕೆಯ ವೈಜ್ಞಾನಿಕ ಕಲಿಕೆಯ ಮಹತ್ವವನ್ನು ಒತ್ತಿಹೇಳಿತು.

ಅನುಭವ ಹಂಚಿಕೆ ಅವಧಿಗಳಲ್ಲಿ, ಇಸ್ರೋ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಿ. ನಾಯರ್, ಗಗನಯಾತ್ರಿ ತರಬೇತಿ, ಸೂಕ್ಷ್ಮ ಗುರುತ್ವಾಕರ್ಷಣೆಯ ಸಿಮ್ಯುಲೇಶನ್‌ಗಳು, ಕಾರ್ಯಾಚರಣೆಯ ಸಿದ್ಧತೆ ಮತ್ತು ಚೇತರಿಕೆ ಚೌಕಟ್ಟುಗಳ ಕುರಿತು ಒಳನೋಟಗಳನ್ನು ಪ್ರಸ್ತುತಪಡಿಸಿದರು. ಭಾರತದ ಮೊದಲ ಗಗನಯಾತ್ರಿ ವಿಂಗ್ ಕಮಾಂಡರ್. ರಾಕೇಶ್ ಶರ್ಮಾ (ನಿವೃತ್ತ), ತಮ್ಮ 1984ರ ಸೋಯುಜ್ ಕಾರ್ಯಾಚರಣೆಯನ್ನು ಪ್ರತಿಬಿಂಬಿಸಿದರು ಮತ್ತು ಎನ್.ಎ.ಎಲ್. ನ ದೀರ್ಘಕಾಲದ ಬಾಹ್ಯಾಕಾಶ ಕೊಡುಗೆಗಳನ್ನು ಗುರುತಿಸಿದರು. ಇಬ್ಬರೂ ಗಗನಯಾತ್ರಿಗಳು ಭಾರತೀಯ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವು ಶಾಂತಿಯುತ ಪರಿಶೋಧನೆ ಮತ್ತು ಮಾನವ ಕೇಂದ್ರಿತ ಸಂಶೋಧನೆಯನ್ನು ಗುರಿಯಾಗಿರಿಸಿಕೊಂಡಿದೆ ಎಂದು ಒತ್ತಿ ಹೇಳಿದರು.

ತಾಂತ್ರಿಕ ಮತ್ತು ವಿಷಯಾಧಾರಿತ ಅವಧಿಗಳಲ್ಲಿ ಮಾನವ ಬಾಹ್ಯಾಕಾಶ ಹಾರಾಟ ಶರೀರಶಾಸ್ತ್ರದ ಕುರಿತು ಡಾ. ಲೂಸಿಯಾ ರೊಕ್ಕಾರೊ (ಇಎಸ್ಎ), ಸಹಯೋಗದ ಸಂಶೋಧನಾ ದೃಷ್ಟಿಕೋನಗಳ ಕುರಿತು ಡಾ. ಅಕಿಕೊ ಒಟ್ಸುಕಾ (ಜೆಎಎಕ್ಸ್ಎ) ಮತ್ತು ಮಾನವ-ತಂತ್ರಜ್ಞಾನ ಸಂವಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗಳಿಗಾಗಿ ಇಂಟರ್ಫೇಸ್ ವಿನ್ಯಾಸದ ಕುರಿತು ಪ್ರೊ. ಪ್ರದೀಪ್ತ ಬಿಸ್ವಾಸ್ (ಐಐಎಸ್ಸಿ) ಸೇರಿದಂತೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞರ ಪ್ರಸ್ತುತಿಗಳು ಮಂಡಿಸಲ್ಪಟ್ಟವು.

ವಿಕಸಿತ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಭಾರತದ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವನ್ನು ಮುನ್ನಡೆಸಲು ವಿಜ್ಞಾನ-ತಂತ್ರಜ್ಞಾನ ಸಂಯೋಜನೆ, ಮಿಷನ್-ಚಾಲಿತ ಆರ್ & ಡಿ ಮತ್ತು ಬಹು-ಏಜೆನ್ಸಿ ಸಹಯೋಗವನ್ನು ಬಲಪಡಿಸುವ ಸಾಮೂಹಿಕ ಸಂಕಲ್ಪದೊಂದಿಗೆ ಸಿಎಸ್ಐಆರ್-ಇಸ್ರೋ ಬಾಹ್ಯಾಕಾಶ ಸಭೆ 2025 ಮುಕ್ತಾಯವಾಯಿತು.

 

*****

 


(रिलीज़ आईडी: 2191086) आगंतुक पटल : 35
इस विज्ञप्ति को इन भाषाओं में पढ़ें: English , Urdu , हिन्दी