ರಕ್ಷಣಾ ಸಚಿವಾಲಯ
ಕಾರವಾರದಲ್ಲಿ ಹೊಸ ನೇಮಕಾತಿ ಕೇಂದ್ರವನ್ನು ಸ್ಥಾಪಿಸಿದ ಭಾರತೀಯ ನೌಕಾಪಡೆ
ಪಶ್ಚಿಮ ಸಮುದ್ರ ತೀರದಲ್ಲಿ ನೌಕಾಪಡೆಯ ಉಪಸ್ಥಿತಿಯನ್ನು ಬಲಪಡಿಸಲು ಮತ್ತು ನೇಮಕಾತಿಯನ್ನು ಹೆಚ್ಚಿಸಲು ಐ.ಎನ್.ಎಸ್ ಕದಂಬದಲ್ಲಿ ಹೊಸ ಕೇಂದ್ರ ಸ್ಥಾಪನೆ
Posted On:
12 NOV 2025 3:35PM by PIB Bengaluru
ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಅಡಿಯಲ್ಲಿ ಕಾರವಾರದ ಐ.ಎನ್.ಎಸ್ ಕದಂಬದಲ್ಲಿ ಭಾರತೀಯ ನೌಕಾಪಡೆಯು ಹೊಸ ನೇಮಕಾತಿ ಕೇಂದ್ರವನ್ನು ಸ್ಥಾಪಿಸಿದೆ. ಹೊಸ ನೇಮಕಾತಿ ಕೇಂದ್ರದ ಸ್ಥಾಪನೆಯೊಂದಿಗೆ ಐ.ಎನ್.ಎಸ್ ಕದಂಬ ಭಾರತೀಯ ನೌಕಾಪಡೆಯ ಹತ್ತನೇ ನೇಮಕಾತಿ ಸಂಸ್ಥೆಯಾಗಿದೆ.
01/2026 ಅಗ್ನಿವೀರ್ ಬ್ಯಾಚ್ ನ ಮೊದಲ ಹಂತ -2 ನೇಮಕಾತಿಯನ್ನು 2025ರ ನವೆಂಬರ್ 10 ರಿಂದ 15 ರವರೆಗೆ ಕೈಗೊಳ್ಳಲಾಗುತ್ತಿದೆ. ನವದೆಹಲಿಯ ಸಿಬ್ಬಂದಿ ಶಾಖೆ/ ನೌಕಾ ಪ್ರಧಾನ ಕಚೇರಿ ಮತ್ತು ಮುಂಬೈನ ಪಶ್ಚಿಮ ನೌಕಾ ಕಮಾಂಡ್ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೇಮಕಾತಿ ಅಭಿಯಾನದ ಸುಗಮ ಮತ್ತು ಯಶಸ್ವಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನಿಖರವಾದ ಯೋಜನೆ, ಲಾಜಿಸ್ಟಿಕ್ಸ್ ಮತ್ತು ವೈದ್ಯಕೀಯ ಬೆಂಬಲ ಸೇರಿದಂತೆ ಸಮಗ್ರ ಆಡಳಿತಾತ್ಮಕ ವ್ಯವಸ್ಥೆಗಳನ್ನು ಸಹ ಕೈಗೊಳ್ಳಲಾಗಿದೆ. ಘಟನೆ ಮುಕ್ತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಆಡಳಿತದೊಂದಿಗೆ ಪರಿಣಾಮಕಾರಿ ಸಂಪರ್ಕ ಮತ್ತು ಸಮನ್ವಯವನ್ನು ಸ್ಥಾಪಿಸಲಾಗಿದೆ.
ವೆಸ್ಟರ್ನ್ ಸೀಬೋರ್ಡ್ ನಲ್ಲಿ ಮತ್ತೊಂದು ನೇಮಕಾತಿ ಸ್ಥಾಪನೆಯನ್ನು ಸೇರಿಸುವುದರಿಂದ ಇದು ಒಂದು ಪ್ರಮುಖ ಮೈಲಿಗಲ್ಲು. ಸ್ಥಳೀಯ ಜನರೊಂದಿಗಿನ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ, ಇದು ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಯುವಕರಿಗೆ ಭಾರತೀಯ ನೌಕಾಪಡೆಗೆ ಸೇರಲು ಮತ್ತು ಹೆಮ್ಮೆ ಮತ್ತು ಗೌರವದಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಒಂದು ಮಾರ್ಗವನ್ನು ಒದಗಿಸುತ್ತದೆ.
8WZ6.jpeg)
N9Z9.jpeg)
*****
(Release ID: 2189209)
Visitor Counter : 20