ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಬಾಕಿ ಬಳಕೆ ಮಾಡಿದ ಹಾಗೂ ಉಳಿದಿರುವ ವಸ್ತುಗಳ ವಿಲೇವಾರಿಗಾಗಿ ಹಮ್ಮಿಕೊಂಡ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.) 5.0 ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ


ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಈ ಮೂಲಕ ₹41 ಲಕ್ಷ ತ್ಯಾಜ್ಯ /ರದ್ದಿ (ಸ್ಕ್ರ್ಯಾಪ್) ಆದಾಯವನ್ನು ಗಳಿಸುತ್ತದೆ, 150+ ಸ್ವಚ್ಛತಾ ಚಟುವಟಿಕೆಗಳನ್ನು ನಡೆಸುತ್ತದೆ, 1,700 ಚದರ ಅಡಿ ಕಚೇರಿ ಸ್ಥಳವನ್ನು ತ್ಯಾಜ್ಯ ಮುಕ್ತಗೊಳಿಸುತ್ತದೆ ಮತ್ತು ವಿಶೇಷ ಅಭಿಯಾನ 5.0 ಸಮಯದಲ್ಲಿ 1,460 ಇ-ಫೈಲ್‌ ಗಳನ್ನು ತೆಗೆದು ಹಾಕಲಾಗುತ್ತದೆ ಮತ್ತು ಮುಚ್ಚುತ್ತದೆ

ಬಳಕೆಯಾಗದ/ಉಳಿದಿರುವ ವಸ್ತುಗಳ ವಿಲೇವಾರಿಗಾಗಿ ಹಮ್ಮಿಕೊಂಡ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.) 5.0 ಅಡಿಯಲ್ಲಿ ದಾಖಲೆ ನಿರ್ವಹಣೆ, ಬಾಕಿ ಕಡಿತ ಮತ್ತು ಡಿಜಿಟಲ್ ಸ್ವಚ್ಛತೆಯಲ್ಲಿ ಮುಂತಾದವುಗಳು ಸಾಧಿಸಲಾದ ಪ್ರಮುಖ ಮೈಲಿಗಲ್ಲುಗಳಾಗಿವೆ

Posted On: 04 NOV 2025 7:26PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಮತ್ತು ಅದರ ಸಂಯೋಜಿತ ಇತರೇ ಸಂಸ್ಥೆಗಳು ಅಕ್ಟೋಬರ್ 2 ರಿಂದ ಅಕ್ಟೋಬರ್ 31, 2025 ರವರೆಗೆ ನಡೆಸಿದ ಬಳಕೆಯಾಗದೆ ಬಾಕಿ ಇರುವ ವಸ್ತುಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ (ಎಸ್.ಸಿ.ಡಿ.ಪಿ.ಎಂ.) 5.0 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಅಭಿಯಾನವು ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುವತ್ತ ಅತ್ಯಂತ  ಮಹತ್ವಪೂರ್ಣ ರೀತಿಯಲ್ಲಿ ಗಮನಹರಿಸಿದೆ.

ಡಿಜಿಟಲ್ ಇಂಡಿಯಾ ಉಪಕ್ರಮದ ಸುಸ್ಥಿರತೆಯ ತತ್ವಗಳಿಗೆ ಅನುಗುಣವಾಗಿ ಸಮಗ್ರ "ಸೈಬರ್ ಸ್ವಚ್ಛತಾ" ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಉಪಕ್ರಮವು ಪರಿಣಾಮಕಾರಿ ಡಿಜಿಟಲ್ ಸಂಪನ್ಮೂಲ ನಿರ್ವಹಣೆಯನ್ನು ಉತ್ತೇಜಿಸುವುದು, ಡೇಟಾ ಗೊಂದಲವನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆ ಸೈಬರ್ ಭದ್ರತೆ ಮತ್ತು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನದ ಭಾಗವಾಗಿ, ಎಸ್.ಡಿ.ಎ.ಸಿ. ಮತ್ತು ಎಸ್.ಟಿ.ಕ್ಯೂ.ಸಿ. ಕೇಂದ್ರಗಳು ಸೈಬರ್ ನೈರ್ಮಲ್ಯಕ್ಕಾಗಿ ಉತ್ತಮ ಅಭ್ಯಾಸಗಳ ಮೇಲೆ ಕೇಂದ್ರೀಕರಿಸಿದ ಜಾಗೃತಿ ಅವಧಿಗಳನ್ನು ಆಯೋಜಿಸಿದವು. ವಿನಯ್ ಮಾರ್ಗದ ಸಿ.ಎಸ್.ಒ.ಐ. ನಲ್ಲಿ ಅಕ್ಟೋಬರ್ 8, 2025 ರಂದು ನಡೆದ ಸೈಬರ್ ಭದ್ರತಾ ಸ್ವಚ್ಛತಾ ಕಾರ್ಯಾಗಾರದಲ್ಲಿ ಎಸ್.ಸಿ.ಡಿ.ಪಿ.ಎಂ. 5.0 ನೋಡಲ್ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮೈಟಿ ಕಾರ್ಯದರ್ಶಿ ಮತ್ತು ಸೆರ್ಟ್-ಇನ್ ನ ಮಹಾನಿರ್ದೇಶಕರು ಮಾತನಾಡಿದರು.

ಅಭಿಯಾನದ ಸಮಯದಲ್ಲಿ, ಸಾಂದ್ರತೆ (ಸ್ಯಾಚುರೇಶನ್) ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ದಾಖಲೆ ನಿರ್ವಹಣೆ, ಸ್ಥಳ ಅತ್ಯುತ್ತಮ ರೀತಿಯಲ್ಲಿ ಬಳಕೆ (ಆಪ್ಟಿಮೈಸೇಶನ್), ಬಾಕಿ ಕಡಿತ ಮತ್ತು ಸಾರ್ವಜನಿಕ ಕುಂದುಕೊರತೆಗಳ ವಿಲೇವಾರಿಯಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸಲಾಯಿತು. ಈ ಉಪಕ್ರಮವು ಹಲವಾರು ಉತ್ತಮ ಅಭ್ಯಾಸಗಳ ಅನುಷ್ಠಾನಕ್ಕೆ ಸಾಕ್ಷಿಯಾಯಿತು, ಮೈಟಿ ಮತ್ತು ಅದರ ಇತರೇ ಸಂಸ್ಥೆಗಳಲ್ಲಿ ಪರಿಣಾಮಕಾರಿ ಆಡಳಿತಕ್ಕಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಿತು.

ಮೈಟಿ ನಡೆಸಿದ ವಿಶೇಷ ಅಭಿಯಾನವು ರದ್ದಿ /ತ್ಯಾಜ್ಯ (ಸ್ಕ್ರ್ಯಾಪ್ ) ವಿಲೇವಾರಿ ಮೂಲಕ ₹41,12,480 ಆದಾಯವನ್ನು ಗಳಿಸಿತು. ವಿಶೇಷ ಅಭಿಯಾನ 5.0 ಭಾಗವಾಗಿ ಸಂಬಂಧಿತ 20 ಸಂಸ್ಥೆಗಳು ಮತ್ತು ಕ್ಷೇತ್ರ ಕಚೇರಿಗಳ ಅಡಿಯಲ್ಲಿ ಬಹು ಸ್ಥಳಗಳಲ್ಲಿ 150 ಕ್ಕೂ ಹೆಚ್ಚು ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಂಡಿದ್ದು, ಇದರ ಪರಿಣಾಮವಾಗಿ ಪರಿಣಾಮಕಾರಿ ಕಚೇರಿ ಬಳಕೆಗಾಗಿ 1,700 ಚದರ ಅಡಿಗೂ ಹೆಚ್ಚು ಜಾಗವನ್ನು ಮುಕ್ತಗೊಳಿಸಲಾಯಿತು.

ಅಭಿಯಾನದ ಅವಧಿಯಲ್ಲಿ, ಸಚಿವಾಲಯದೊಂದಿಗೆ ಬಾಕಿ ಇರುವ ಎಲ್ಲಾ ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಯಿತು ಮತ್ತು ಪರಿಹರಿಸಲಾಯಿತು, ಸಂಪೂರ್ಣ ವಿಲೇವಾರಿಯನ್ನು ಖಚಿತಪಡಿಸಲಾಯಿತು ಮತ್ತು ನಾಗರಿಕ ಕೇಂದ್ರಿತ ಆಡಳಿತಕ್ಕೆ ಸಚಿವಾಲಯದ ಬದ್ಧತೆಯನ್ನು ಪುನರುಚ್ಚರಿಸಿತು. ಬಾಕಿ ಇರುವ ಎಲ್ಲಾ ಸಂಸದೀಯ ಭರವಸೆಗಳು, ಅಂತರ-ಸಚಿವಾಲಯ ಸಮಿತಿ (ಐ.ಎಂ.ಸಿ) ಉಲ್ಲೇಖಗಳು ಮತ್ತು ವಿಐಪಿ ಸಂವಹನಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಲಾಯಿತು ಮತ್ತು ಸೂಕ್ತ ರೀತಿಯಲ್ಲಿ ಪರಿಹರಿಸಲಾಯಿತು, ಇದು ಹೊಣೆಗಾರಿಕೆ ಮತ್ತು ತ್ವರಿತ ಕ್ರಮವನ್ನು ಪ್ರತಿಬಿಂಬಿಸುತ್ತದೆ.

ಎಲ್ಲಾ ಲಗತ್ತಿಸಲಾದ ಕಚೇರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ವ್ಯಾಪಕವಾದ ಡಿಜಿಟಲೀಕರಣ ಮತ್ತು ಕಳೆ ತೆಗೆಯುವ ಕಾರ್ಯಯೋಜನೆ (ಡ್ರೈವ್‌)ಗಳ ಮೂಲಕ ಭೌತಿಕ ಫೈಲ್‌ ಗಳ ಪ್ರಮಾಣವನ್ನು ಕಡಿಮೆ ಮಾಡಲು ಸಂಘಟಿತ ಪ್ರಯತ್ನವನ್ನು ಮಾಡಲಾಯಿತು, ಇದು ಸುಧಾರಿತ ದಾಖಲೆ ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಗೆ ಕಾರಣವಾಯಿತು. ಒಟ್ಟು 1,460 ಇ-ಫೈಲ್‌ಗಳನ್ನು ಮುಚ್ಚಲಾಯಿತು. ಮೈಟಿಯ ಎಲ್ಲಾ ವಿಭಾಗಗಳಲ್ಲಿ ಇ-ಆಫೀಸ್ ವೇದಿಕೆಯ ಸಂಪೂರ್ಣ ಅಳವಡಿಕೆಯು ಪಾರದರ್ಶಕತೆ, ಫೈಲ್ ಟ್ರ್ಯಾಕಿಂಗ್ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಿತು.

ನೈರ್ಮಲ್ಯವನ್ನು ಸುಧಾರಿಸಲು, ಸಾರ್ವಜನಿಕ ಬಳಕೆಗಾಗಿ ಶೌಚಾಲಯಗಳನ್ನು ನವೀಕರಿಸಲಾಯಿತು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಳವಾದ ಶುಚಿಗೊಳಿಸುವಿಕೆಯನ್ನು ಸಹ ಕೈಗೊಳ್ಳಲಾಯಿತು.

ಎಸ್.ಸಿ.ಡಿ.ಪಿ.ಎಂ. 5.0 ಅಭಿಯಾನದ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೈಟಿ) ಅಡಿಯಲ್ಲಿ ಮೈಗೌ, "ನಿಮ್ಮ ಚಿತ್ರವನ್ನು ಹಂಚಿಕೊಳ್ಳಿ - ತ್ಯಾಜ್ಯವನ್ನು ಕಲೆಯಾಗಿ ಪರಿವರ್ತಿಸುವುದು" ಸ್ಪರ್ಧೆಯನ್ನು ಆಯೋಜಿಸಿತು, ಮೈಗೌ ಪೋರ್ಟಲ್‌ ನಲ್ಲಿ ತ್ಯಾಜ್ಯವನ್ನು ಕಲೆಯಾಗಿ ಪರಿವರ್ತಿಸುವ ಮೂಲಕ ನಾಗರಿಕರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಆಹ್ವಾನಿಸಿತು. ಈ ವಿಶೇಷ ವೇದಿಕೆಯ ಮೂಲಕ ಒಟ್ಟು 654 ನಮೂದುಗಳನ್ನು ಸ್ವೀಕರಿಸಲಾಗಿದೆ.

ವರ್ಷವಿಡೀ ನಿಯಮಿತವಾಗಿ ಭೌತಿಕ ಮತ್ತು ಡಿಜಿಟಲ್ ಸ್ವಚ್ಛತಾ ಅಭಿಯಾನಗಳನ್ನು ಮುಂದುವರಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಯೋಜಿಸಲಾಗಿದೆ. ಎಸ್.ಸಿ.ಡಿ.ಪಿ.ಎಂ. 5.0 ಮೂಲಕ, ದಕ್ಷ, ಪಾರದರ್ಶಕ ಮತ್ತು ಡಿಜಿಟಲ್ ಆಗಿ ಸಬಲೀಕರಣಗೊಂಡ ಆಡಳಿತ ಪರಿಸರ ವ್ಯವಸ್ಥೆಗೆ ತನ್ನ ಬದ್ಧತೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೈಟಿ) ಈ ಮೂಲಕ ಪುನರುಚ್ಚರಿಸಿದೆ.

 

*****

 


(Release ID: 2186500) Visitor Counter : 5