ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಸಚಿವರ ಪ್ರಾದೇಶಿಕ ಸಭೆ

Posted On: 30 OCT 2025 6:09PM by PIB Bengaluru

ನಗರಾಭಿವೃದ್ಧಿ ಸಚಿವರ ಮೊದಲ ಪ್ರಾದೇಶಿಕ ಸಭೆಯು ಅಕ್ಟೋಬರ್ 30, 2025 ರಂದು ಬೆಂಗಳೂರಿನಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಗೌರವಾನ್ವಿತ ಶ್ರೀ ಮನೋಹರ್ ಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಜುಲೈ 17, 2025 ರಂದು ನವದೆಹಲಿಯಲ್ಲಿ ನಡೆದ ನಗರಾಭಿವೃದ್ಧಿ ಸಚಿವರ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಈ ರೀತಿಯ ಪ್ರಾದೇಶಿಕ ಮಟ್ಟದ ಸಮಾಲೋಚನೆಗೆ ನಾಂದಿ ಹಾಡಲಾಗಿತ್ತು.

ಈ ಪ್ರಾದೇಶಿಕ ಸಭೆಯನ್ನು ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿತ್ತು. ನಗರಾಭಿವೃದ್ಧಿಯಲ್ಲಿನ ಪ್ರಮುಖ ಸಮಸ್ಯೆಗಳು, ಸವಾಲುಗಳು ಮತ್ತು ಅವಕಾಶಗಳ ಕುರಿತಾಗಿ ಚರ್ಚೆ ನಡೆಸಿ, ಈ ವಿಷಯಗಳ ಬಗ್ಗೆ ಸಾಮೂಹಿಕವಾಗಿ ಮುಂದುವರಿಯುವ ಮಾರ್ಗವನ್ನು ರೂಪಿಸಲು ದಕ್ಷಿಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಸಚಿವರನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು.

ಈ ಸಭೆಯಲ್ಲಿ ಕರ್ನಾಟಕದ ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉಪಮುಖ್ಯಮಂತ್ರಿಯವರಾದ ಶ್ರೀ ಡಿ. ಕೆ. ಶಿವಕುಮಾರ್, ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನಾ ಸಚಿವರಾದ ಶ್ರೀ ಸುರೇಶ ಬಿ.ಎಸ್., ಪೌರಾಡಳಿತ ಸಚಿವರಾದ ಶ್ರೀ ರಹೀಮ್ ಖಾನ್, ಕೇರಳದ ಸ್ಥಳೀಯ ಸ್ವಯಂ ಸರ್ಕಾರಗಳು, ಅಬಕಾರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಂ.ಬಿ. ರಾಜೇಶ್ ಮತ್ತು ಪುದುಚೇರಿಯ ವಸತಿ ಸಚಿವರಾದ ಶ್ರೀ ಪಿ. ಆರ್. ಎನ್. ತಿರುಮುರುಗನ್ ಸೇರಿದಂತೆ ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ನಗರ ವ್ಯವಹಾರಗಳ ವಸತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ, ನಗರ ವ್ಯವಹಾರಗಳ ವಸತಿ ಸಚಿವಾಲಯದ ನಿರ್ದೇಶಕ ರಾಷ್ಟ್ರೀಯ ನಗರ ವ್ಯವಹಾರಗಳ ಸಂಸ್ಥೆ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಎರಡು ಭಾಗಗಳಲ್ಲಿ ಚರ್ಚೆಗಳನ್ನು ನಡೆಸಲಾಯಿತು - ಮೊದಲನೆಯ ಚರ್ಚೆ ಬೆಂಗಳೂರಿನ ನಗರದ ಆದ್ಯತೆಗಳ ಮೇಲೆ ಕೇಂದ್ರೀಕರಿಸಿದರೆ, ಎರಡನೆಯ ಚರ್ಚೆಯು ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಯೋಜನೆಗಳು ಮತ್ತು ಮಧ್ಯಸ್ಥಿಕೆಗಳ ಪ್ರಗತಿಯನ್ನು ಪರಿಶೀಲಿಸಿತು. ಗೌರವಾನ್ವಿತ ಕೇಂದ್ರ ಸಚಿವರು ಸ್ವಚ್ಛ ಭಾರತ ಮಿಷನ್, ಅಮೃತ್, ಪಿ.ಎಂ.ಎ.ವೈ, ಮೆಟ್ರೋ ಯೋಜನೆಗಳು ಮತ್ತು ಪಿ.ಎಂ.-ಇ-ಬಸ್ ಸೇವಾ ಯೋಜನೆಯ ಪ್ರಗತಿಯನ್ನು ಕೂಡಾ ಪರಿಶೀಲಿಸಿ, ಅನುಷ್ಠಾನದ ಸವಾಲುಗಳನ್ನು ಚರ್ಚಿಸಿ, ಅದಕ್ಕೆ ಸಂಬಧಿಸಿದಂತೆ ಫಲಿತಾಂಶಗಳ ಸುಧಾರಣೆಗಾಗಿ ಕಾರ್ಯಸಾಧ್ಯ ಕ್ರಮಗಳನ್ನು ಪ್ರಸ್ತಾಪಿಸಿದರು. ಅಂತಹ ನೇರ ಸಂವಾದಗಳ ಮೂಲಕ ಪ್ರಾದೇಶಿಕ ಪಾಲುದಾರರನ್ನು ತೊಡಗಿಸಿಕೊಳ್ಳುವಲ್ಲಿ ಸಚಿವಾಲಯದ ಪೂರ್ವಭಾವಿ ವಿಧಾನವನ್ನು ರಾಜ್ಯ ಸಚಿವರು ಶ್ಲಾಘಿಸಿದರು. ಪ್ರಮುಖ ವಿಷಯಗಳನ್ನು ಅನುಸರಿಸಲು ಮತ್ತು ನಡೆಯುತ್ತಿರುವ ವಿವಿಧ ಕಾರ್ಯಾಚರಣೆಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕೆಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ಷೇತ್ರ ಭೇಟಿಗಳು ಮತ್ತು ಪ್ರತಿಯೊಬ್ಬರ ವೀಡಿಯೊ ಸಮ್ಮೇಳನಗಳನ್ನು ಸಹ ಪ್ರಾರಂಭಿಸಿದೆ.

ಭಾರತದ ನಗರ ಪರಿವರ್ತನೆಯ ಪ್ರಯಾಣವನ್ನು ತೀವ್ರಗೊಳಿಸಬಲ್ಲ ಸಮಾನ ಕಲಿಕೆಗಾಗಿ ಹಂಚಿಕೆಯ ಆದ್ಯತೆಗಳು, ಪ್ರಾದೇಶಿಕ ಅವಕಾಶಗಳು ಮತ್ತು ಸುಧಾರಣಾ ಮಾರ್ಗಗಳನ್ನು ಗುರುತಿಸಲು ಈ ಪ್ರಾದೇಶಿಕ ಸಭೆಗಳನ್ನು ದೇಶದ ಇತರ ಪ್ರದೇಶಗಳಲ್ಲಿ ನಿಯಮಿತವಾಗಿ ನಡೆಸಲಾಗುವುದು.

ಭಾಗವಹಿಸುವ ಎಲ್ಲಾ ರಾಜ್ಯಗಳನ್ನು 8 ಮತ್ತು 9 ನೇ ನವೆಂಬರ್ 2025 ರಂದು ನವದೆಹಲಿಯ ಯಶೋಭೂಮಿಯಲ್ಲಿ ನಡೆಯಲಿರುವ ಮುಂಬರುವ ರಾಷ್ಟ್ರೀಯ ನಗರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಈ ಸಮಾವೇಶವು ಎಲ್ಲಾ ಪ್ರಾದೇಶಿಕ ಸಭೆಗಳ ಫಲಿತಾಂಶಗಳು ಮತ್ತು ಕಲಿಕೆಗಳನ್ನು ಒಟ್ಟುಗೂಡಿಸಿ, ವಿಕಸಿತ ಭಾರತ @2047ರ ಅಡಿಯಲ್ಲಿ ನಗರ ಪರಿವರ್ತನೆಗಾಗಿ ಸಾಮೂಹಿಕ ಮಾರ್ಗಸೂಚಿಯನ್ನು ರೂಪಿಸುತ್ತದೆ. ಇದು ಸಮಗ್ರ, ಸುಸ್ಥಿರ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ನಗರಗಳನ್ನು ನಿರ್ಮಿಸುವ ಜಂಟಿ ಬದ್ಧತೆಯನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿದೆ.

****


(Release ID: 2184389) Visitor Counter : 8