ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಛಠ್ ಮಹಾಪರ್ವದ ಕೊನೆಯ ದಿನದಂದು ಪ್ರಧಾನಮಂತ್ರಿ ಅವರಿಂದ ದೇಶದ ಜನತೆಗೆ ಶುಭಾಶಯ

Posted On: 28 OCT 2025 7:56AM by PIB Bengaluru

ಛಠ್ ಪೂಜೆಯ ಕೊನೆಯ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಭಕ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ನಾಲ್ಕು ದಿನಗಳ ಭವ್ಯ ಉತ್ಸವವು ಇಂದು ಬೆಳಗ್ಗೆ ಭಗವಾನ್ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸುವುದರೊಂದಿಗೆ ಮುಕ್ತಾಯಗೊಂಡಿದೆ. ಈ ಹಬ್ಬದ ಸಮಯದಲ್ಲಿ, ಭಾರತದ ಸಂಸ್ಕೃತಿಯಲ್ಲಿರುವ ಅದ್ಭುತ ಛಠ್ ಪೂಜಾ ಸಂಪ್ರದಾಯದ ದೈವಿಕ ವೈಭವವನ್ನು ಕಣ್ತುಂಬಿಕೊಂಡಿದ್ದೇವೆ.

ಪ್ರಧಾನಮಂತ್ರಿ ಅವರು ಉತ್ಸವದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ಮತ್ತು ಕುಟುಂಬಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಛಠೀ ಮೈಯಾದ ಆಶೀರ್ವಾದವು ಎಲ್ಲರ ಜೀವನವನ್ನು ಬೆಳಕು ಮತ್ತು ಸಂತೋಷದಿಂದ ತುಂಬಿಸಲಿ ಎಂದು ಅವರು ಪ್ರಾರ್ಥಿಸಿಕೊಂಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಹೀಗೆ ಪೊಸ್ಟ್ ಮಾಡಿದ್ದಾರೆ;

“भगवान सूर्यदेव को प्रात:कालीन अर्घ्य के साथ आज महापर्व छठ का शुभ समापन हुआ। चार दिवसीय इस अनुष्ठान के दौरान छठ पूजा की हमारी भव्य परंपरा के दिव्य दर्शन हुए। समस्त व्रतियों और श्रद्धालुओं सहित पावन पर्व का हिस्सा बने अपने सभी परिवारजनों का हृदय से अभिनंदन! छठी मइया की असीम कृपा से आप सभी का जीवन सदैव आलोकित रहे।”

****


(Release ID: 2183193) Visitor Counter : 6