ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ನೋಟರಿ (ತಿದ್ದುಪಡಿ) ನಿಯಮಗಳು, 2025ರ ಅಡಿಯಲ್ಲಿ ಸರ್ಕಾರದಿಂದ ನಾಲ್ಕು ರಾಜ್ಯಗಳಲ್ಲಿ ನೋಟರಿಗಳ ನೇಮಕ ಮಿತಿ ಹೆಚ್ಚಳ

Posted On: 19 OCT 2025 9:50AM by PIB Bengaluru

ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ಇಲಾಖೆಯು ಜಿ.ಎಸ್.ಆರ್. 763(ಇ) ಅಧಿಸೂಚನೆ ಮೂಲಕ ನೋಟರಿ (ತಿದ್ದುಪಡಿ) ನಿಯಮಗಳು, 2025 ಅನ್ನು 2025ರ ಅಕ್ಟೋಬರ್ 17 ರಂದು ಹೊರಡಿಸಿದೆ. ನೋಟರಿ ಕಾಯ್ದೆ, 1952 (1952 ರ 53) ರ ಸೆಕ್ಷನ್ 15 ರಡಿ ಪ್ರದತ್ತವಾದ ಅಧಿಕಾರದನ್ವಯ ನೋಟರಿ ನಿಯಮಗಳು, 1956 ಅನ್ನು ಮತ್ತಷ್ಟು ತಿದ್ದುಪಡಿ ಮಾಡಿದೆ. 

ಈ ತಿದ್ದುಪಡಿಯಿಂದಾಗಿ ಗುಜರಾತ್, ತಮಿಳುನಾಡು, ರಾಜಸ್ಥಾನ ಮತ್ತು ನಾಗಾಲ್ಯಾಂಡ್ ರಾಜ್ಯ ಸರ್ಕಾರಗಳು ಈ ಕೆಳಗೆ ಹೆಚ್ಚಳ ಮಾಡಿ ನೀಡಿರುವಷ್ಟು ಗರಿಷ್ಠ ಸಂಖ್ಯೆಯ ನೋಟರಿಗಳನ್ನು ನೇಮಕ ಮಾಡಬಹುದಾಗಿದೆ.

“ನೋಟರಿ ಕಾಯ್ದೆ, 1952 (1952 ರ 53) ರ ನಿಯಮ 15 ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಕೇಂದ್ರ ಸರ್ಕಾರವು ನೋಟರಿ ನಿಯಮಗಳು, 1956 ಅನ್ನು ಇನ್ನಷ್ಟು ತಿದ್ದುಪಡಿ ಮಾಡಲು ಈ ಕೆಳಗಿನ ನಿಯಮಗಳನ್ನು ರೂಪಿಸಿದೆ :— 

1. (1) ಈ ನಿಯಮಗಳನ್ನು ನೋಟರಿ (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯಲಾಗುವುದು.
    (2) ಇವು ಅಧಿಕೃತ ಗೆಜೆಟ್ ನಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿವೆ. 

2.    ನೋಟರಿ ನಿಯಮಗಳ ಷೆಡ್ಯೂಲ್, 1956 ರಲ್ಲಿ,—

(i) ಗುಜರಾತ್ ಗೆ ಸಂಬಂಧಿಸಿದ ಕ್ರಮ ಸಂಖ್ಯೆ 4 ರ, ಕಲಂ (3) ರಲ್ಲಿನ “2900” ರ ಅಂಕಿಯನ್ನು “6000” ಎಂದು ಬದಲಿಸಿಕೊಳ್ಳುವುದು; 
(ii) ತಮಿಳುನಾಡಿಗೆ ಸಂಬಂಧಿಸಿದ ಕ್ರಮ ಸಂಖ್ಯೆ 7 ರ ಕಲಂ (3) ರಲ್ಲಿ, “2500” ಸಂಖ್ಯೆಯನ್ನು “3500” ಎಂದು ಬದಲಿಸಿಕೊಳ್ಳುವುದು;
(iii) ರಾಜಸ್ಥಾನಕ್ಕೆ ಸಂಬಂಧಿಸಿದ ಕ್ರಮ ಸಂಖ್ಯೆ 12 ರ ಕಲಂ (3) ರಲ್ಲಿ, “2000” ಅಂಕಿಯನ್ನು “3000” ಎಂದು ಬದಲಿಸಿಕೊಳ್ಳುವುದು; ಮತ್ತು
(iv) ನಾಗಾಲ್ಯಾಂಡ್ ಗೆ ಸಂಬಂಧಿಸಿದ ಕ್ರಮ ಸಂಖ್ಯೆ 16 ರ ಕಲಂ (3) ರಲ್ಲಿ, “200” ಸಂಖ್ಯೆಯನ್ನು “400” ಎಂದು ಬದಲಿಸಿಕೊಳ್ಳುವುದು.

ಜನಸಂಖ್ಯೆ ಹೆಚ್ಚಳ ಮತ್ತು ಜಿಲ್ಲೆಗಳು/ತಹಸಿಲ್ ಗಳು/ತಾಲೂಕುಗಳ ಸಂಖ್ಯೆ ಹೆಚ್ಚಳ ಹಾಗೂ ಅದರಿಂದಾಗಿ ಉದ್ಭವಿಸಿರುವ ನೋಟರಿ ಸೇವೆಗಳ ಬೇಡಿಕೆಯನ್ನು ಗುರುತಿಸಿ ಆಯಾ ರಾಜ್ಯ ಸರ್ಕಾರಗಳಿಂದ ಸ್ವೀಕೃತವಾದ ಮನವಿಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.

 

*****


(Release ID: 2180846) Visitor Counter : 10