ನೀತಿ ಆಯೋಗ
ನೀತಿ ಆಯೋಗಕ್ಕೆ ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಭೇಟಿ
Posted On:
17 OCT 2025 9:30AM by PIB Bengaluru
ನೀತಿ ಆಯೋಗವು 2025ರ ಅಕ್ಟೋಬರ್ 16 ರಂದು ನವದೆಹಲಿಯಲ್ಲಿ ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ಡಾ. ಹರಿಣಿ ನಿರೇಕಾ ಅಮರಸೂರ್ಯ ಅವರಿಗೆ ಆತಿಥ್ಯ ನೀಡಿತು. ಈ ಭೇಟಿಯು ಎರಡು ದೇಶಗಳ ನಡುವೆ ಗಾಢವಾದ ಸಹಯೋಗವನ್ನು ವೃದ್ಧಿಸುವ ಮತ್ತು ಮೂಲಸೌಕರ್ಯ, ಶಿಕ್ಷಣ, ಪ್ರವಾಸೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ವಲಯಗಳಲ್ಲಿ ಭಾರತದ ಪರಿವರ್ತನಾ ಉಪಕ್ರಮಗಳ ಕುರಿತು ಒಳನೋಟಗಳನ್ನು ಹಂಚಿಕೊಳ್ಳುವತ್ತ ಗಮನಹರಿಸಿತು.
ಶ್ರೀಲಂಕಾದ ಗೌರವಾನ್ವಿತ ಪ್ರಧಾನಮಂತ್ರಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ನೀತಿ ಆಯೋಗ ನೀತಿಗಳ ಚಿಂತಕರ ಚಾವಡಿ ಮತ್ತು ಸಮನ್ವಯ ವೇದಿಕೆಯ ಪಾತ್ರವನ್ನು ವಹಿಸುವಂತೆ ಎಂದು ಶ್ಲಾಘಿಸಿದರು ಮತ್ತು ದೀರ್ಘಕಾಲೀನ ನೀತಿಗಳನ್ನು ರೂಪಿಸುವುದ ಜತೆಗೆ ತಳಮಟ್ಟದಲ್ಲಿ ಅವುಗಳ ಅನುಷ್ಠಾನದೊಂದಿಗೆ ಬೆಸೆಯುವ ಅದರ ವಿಶಿಷ್ಟ ಸಾಮರ್ಥ್ಯವನ್ನು ಉಲ್ಲೇಖಿಸಿದರು. ನೀತಿ ಆಯೋಗವು ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳ ಜೊತೆಗೆ ಹೇಗೆ ಕಾರ್ಯನಿರ್ವಹಿಸುತ್ತದೆ- ವಿಶ್ಲೇಷಣೆ, ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಮತ್ತು ನಾಗರಿಕರಿಂದ ಪ್ರತಿಕ್ರಿಯೆಯನ್ನು ಪರಿಣಾಮಕಾರಿ ಆಡಳಿತದೊಂದಿಗೆ ಸಂಯೋಜಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ಆಸಕ್ತಿ ತೋರಿಸಿದರು. ಶ್ರೀಲಂಕಾದ ಸ್ವಂತ ಸುಧಾರಣಾ ಪಯಣ ಮತ್ತು ರಾಜಕೀಯ ಆವರ್ತನಗಳನ್ನು ಮೀರಿ ನೀತಿ ಸುಸಂಬದ್ಧತೆ, ಸಾಕ್ಷ್ಯಾಧಾರಿತ ನಿರ್ಧಾರಗಳು ಮತ್ತು ಸ್ಥಿರತೆಯನ್ನು ಉತ್ತೇಜಿಸುವ ಸಂಸ್ಥೆಗಳ ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಗೌರವಾನ್ವಿತ ಸದಸ್ಯರ ಸಮಕ್ಷಮದಲ್ಲಿ ಗೌರವಾನ್ವಿತ ಉಪಾಧ್ಯಕ್ಷ ಶ್ರೀ ಸುಮನ್ ಕೆ. ಬೆರಿ ಅವರು ನಡೆಸಿದ ಚರ್ಚೆಗಳು, ಬಹುಮಾದರಿ ಮೂಲಸೌಕರ್ಯ ಯೋಜನೆಗಾಗಿ ರೂಪಿಸಿರುವ ಪಿಎಂ ಗತಿ ಶಕ್ತಿ ಯೋಜನೆ, ಸಮಗ್ರ ಮತ್ತು ಎಲ್ಲವನ್ನೂ ಒಳಗೊಂಡ ಕಲಿಕೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಸಹಯೋಗದ ಅವಕಾಶಗಳು ಮತ್ತು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಆಡಳಿತ ಸೇರಿದಂತೆ ಹೊರದೇಶಗಳ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಭಾರತದಲ್ಲಿ ನಡೆಯುತ್ತಿರುವ ಉಪಕ್ರಮಗಳ ಸ್ಥೂಲ ನೋಟವನ್ನು ಒದಗಿಸಿದವು.
ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದ (ಇಟಿಸಿಎ) ಸೇರಿದಂತೆ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸಂಬಂಧಗಳು; ಸಮಗ್ರ ಮೂಲಸೌಕರ್ಯ ಯೋಜನೆ ಮತ್ತು ಕ್ಯಾಂಡಿ ನಗರಕ್ಕೆ ಭಾರತದ ಬಹುಮಾದರಿ ಲಾಜಿಸ್ಟಿಕ್ಸ್ ಮಾದರಿಯ ಸಂಭಾವ್ಯ ಅನ್ವಯಿಕೆಯನ್ನು ಪ್ರದರ್ಶಿಸುವ ಪಿಎಂ ಗತಿ ಶಕ್ತಿ; ಸಮಗ್ರ, ಎಲ್ಲವನ್ನೂ ಒಳಗೊಂಡ ಮತ್ತು ತಂತ್ರಜ್ಞಾನ-ಆಧಾರಿತ ಕಲಿಕಾ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸುವ ಎನ್ಇಪಿ 2020 ರ ಅಡಿಯಲ್ಲಿ ಶಿಕ್ಷಣ ಸುಧಾರಣೆಗಳು; ಜನರಿಂದ ಜನರಿಗೆ ಸಂಬಂಧಗಳನ್ನು ವೃದ್ಧಿಸುವ ಪರಂಪರೆ, ಪರಿಸರ ಮತ್ತು ಕ್ಷೇಮ ಪ್ರವಾಸೋದ್ಯಮದಲ್ಲಿ ಸಹಕಾರವನ್ನು ಎತ್ತಿ ತೋರಿಸುವ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯ; ಮತ್ತು ಡಿಜಿಟಲ್ ನಾವೀನ್ಯತೆ ಮತ್ತು ಆಡಳಿತದಲ್ಲಿ ಸಹಯೋಗವನ್ನು ಕಂಡುಕೊಳ್ಳುವ ಹೊರದೇಶಗಳ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶನ ಮಾಡಲಾಯಿತು.
ನೀತಿ ಆಯೋಗದ ವಿವಿಧ ವಿಭಾಗಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ, ಜ್ಞಾನ ಹಂಚಿಕೆ ಮತ್ತು ಸಹಯೋಗದಲ್ಲಿ ತೊಡಗಿಸಿಕೊಳ್ಳುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸಿದರು.
ಈ ಭೇಟಿಯು ಭಾರತ ಮತ್ತು ಶ್ರೀಲಂಕಾದ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಪ್ರಾದೇಶಿಕ ಸವಾಲುಗಳು ಮತ್ತು ಅವಕಾಶಗಳನ್ನು ಪರಿಹರಿಸಲು ನಾವೀನ್ಯತೆ ಮತ್ತು ಕೌಶಲ್ಯಗಳನ್ನು ಬಳಸಿಕೊಳ್ಳುವ ಹಂಚಿಕೆಯ ದೂರದೃಷ್ಟಿಯನ್ನು ಒತ್ತಿಹೇಳಿತು. ನೆರೆಹೊರೆ ಮೊದಲು ಮತ್ತು ಮಹಾಸಾಗರ ಚೌಕಟ್ಟುಗಳಡಿಯಲ್ಲಿ ಜ್ಞಾನ ಆಧಾರಿತ, ತಂತ್ರಜ್ಞಾನ ಆಧಾರಿತ ಮತ್ತು ಜನ-ಕೇಂದ್ರಿತ ಪಾಲುದಾರಿಕೆ ಮುನ್ನಡೆಸುವ ತಮ್ಮ ಬದ್ಧತೆಯನ್ನು ಎರಡೂ ರಾಷ್ಟ್ರಗಳು ಪುನರುಚ್ಚರಿಸಿದವು.
*****
(Release ID: 2180280)
Visitor Counter : 10