ಕೃಷಿ ಸಚಿವಾಲಯ
azadi ka amrit mahotsav

ರೈತರ ದೂರುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಉನ್ನತ ಮಟ್ಟದ ಸಭೆ


ಶ್ರೀ ಶಿವರಾಜ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಸಗೊಬ್ಬರಗಳು, ಬೀಜಗಳು, ಕೀಟನಾಶಕಗಳು, ಪ್ರಧಾನ ಮಂತ್ರಿ-ಬೆಳೆ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಪೋರ್ಟಲ್‌ಗೆ ಸಂಬಂಧಿಸಿದ ದೂರುಗಳ ಕುರಿತು ಚರ್ಚೆ ನಡೆಸಲಾಯಿತು.

“ಕೃಷಿ ವಲಯಕ್ಕೆ ಸಂಬಂಧಿಸಿದ ಎಲ್ಲಾ ದೂರುಗಳಿಗೂ ಒಂದೇ ವೇದಿಕೆ ಇರಬೇಕು”: ಶ್ರೀ ಶಿವರಾಜ್ ಸಿಂಗ್

“ರೈತ ಸಂಪೂರ್ಣವಾಗಿ ತೃಪ್ತನಾಗುವವರೆಗೆ ಕ್ರಮವನ್ನು ತೆಗೆದುಕೊಳ್ಳಬೇಕು”: ಶ್ರೀ ಚೌಹಾಣ್

“ಕ್ರಮ ನಿಧಾನವಾಗಿರುವ ಮತ್ತು ದೂರುಗಳು ಹೆಚ್ಚಿರುವ ರಾಜ್ಯಗಳನ್ನು ಗುರುತಿಸಲಾಗುತ್ತದೆ”: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ರೈತರ ದೂರುಗಳಿಗೆ ಉತ್ತಮ ಪರಿಹಾರವನ್ನು ಒದಗಿಸುವ ರಾಜ್ಯಗಳು ಮತ್ತು ಉದ್ಯೋಗಿಗಳು ಮೆಚ್ಚುಗೆಗೆ ಅರ್ಹರು”: ಶ್ರೀ ಶಿವರಾಜ್ ಸಿಂಗ್

ಗಂಭೀರ ದೂರುಗಳ ಪ್ರಕರಣಗಳಲ್ಲಿ, ಸಚಿವಾಲಯದಿಂದಲೇ ನೇರವಾಗಿ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ

Posted On: 16 OCT 2025 6:50PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನವದೆಹಲಿಯ ಕೃಷಿ ಭವನದಲ್ಲಿ ಸತತ ಸಭೆಗಳನ್ನು ನಡೆಸಿ ಎರಡೂ ಸಚಿವಾಲಯಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಸಭೆಗಳ ಸಮಯದಲ್ಲಿ, ಕೇಂದ್ರ ಸಚಿವರು ದೂರು ಪೋರ್ಟಲ್ ಕುರಿತು ಉನ್ನತ ಮಟ್ಟದ ಚರ್ಚೆಯನ್ನೂ ನಡೆಸಿದರು. ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್ ಚತುರ್ವೇದಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ರಸಗೊಬ್ಬರಗಳು, ಬೀಜಗಳು, ಕೀಟನಾಶಕಗಳು, ಪಿ.ಎಂ.-ಫಸಲ್ ಬಿಮಾ ಯೋಜನೆ, ಮತ್ತು ಪಿ.ಎಂ. ಕಿಸಾನ್ ಪೋರ್ಟಲ್ ಸೇರಿದಂತೆ ವಿವಿಧ ವರ್ಗಗಳ ಅಡಿಯಲ್ಲಿ ದೂರುಗಳು ಬರುತ್ತಿವೆ ಮತ್ತು ಅವುಗಳನ್ನು ಪರಿಹರಿಸಲು ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.

ಹೆಚ್ಚಿನ ದೂರುಗಳು ರಸಗೊಬ್ಬರಗಳ ಲಭ್ಯತೆ, ಹೆಚ್ಚಿನ ಬೆಲೆಗಳು, ಕಳಪೆ ಗುಣಮಟ್ಟದ ಬೀಜಗಳು ಮತ್ತು ನ್ಯಾನೋ ಯೂರಿಯಾ ಟ್ಯಾಗಿಂಗ್‌ಗೆ ಸಂಬಂಧಿಸಿವೆ. ಈ ದೂರುಗಳನ್ನು ವರ್ಗೀಕರಿಸಿ ಸೂಕ್ತವಾಗಿ ಪರಿಹರಿಸಲಾಗುತ್ತಿದೆ. ಕೀಟನಾಶಕಗಳ ವಿಷಯದಲ್ಲಿ, ಅಧಿಕಾರಿಗಳು ಕೇಂದ್ರ ಸಚಿವರಿಗೆ 150 ದೂರುಗಳ ವಿವರಗಳನ್ನು ಪ್ರಸ್ತುತಪಡಿಸಿದರು. 120 ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ, ನಕಲಿ ಕೀಟನಾಶಕಗಳ 11 ಪ್ರಕರಣಗಳಲ್ಲಿ ಎಫ್‌.ಐ.ಆರ್ ದಾಖಲಿಸಲಾಗಿದೆ, 8 ಕಂಪನಿಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಮತ್ತು 24 ಪ್ರಕರಣಗಳಲ್ಲಿ ರೈತರಿಗೆ ದೂರುಗಳ ಆಧಾರದ ಮೇಲೆ ಸೂಕ್ತ ಪರಿಹಾರ ನೀಡಲಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ರೈತ ಸಂಪೂರ್ಣವಾಗಿ ತೃಪ್ತನಾಗುವವರೆಗೆ ದೂರನ್ನು ಕ್ಲೋಸ್‌ ಮಾಡಬಾರದು  ಎಂದು ಶ್ರೀ ಚೌಹಾಣ್ ಸಲಹೆ ನೀಡಿದರು. ಕ್ರಮ ಕೈಗೊಂಡ ನಂತರ, ಅಧಿಕಾರಿಗಳು ರೈತನಿಗೆ ಕರೆ ಮಾಡಿ ದೃಢೀಕರಣ ಪಡೆಯಬೇಕು. ಅತೃಪ್ತಿ ಉಳಿದಿದ್ದರೆ, ವಿಷಯವನ್ನು ಮರು ಗಮನ ಹರಿಸಿ ಪರಿಹರಿಸಬೇಕು. ದೂರುಗಳು ದೀರ್ಘಕಾಲದವರೆಗೆ ಬಾಕಿ ಉಳಿಯದಂತೆ ನೋಡಿಕೊಳ್ಳಲು ದೂರು ಪರಿಹಾರಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಬೇಕು ಎಂದು ಹೇಳಿದರು.

ದೂರುಗಳು ಹೆಚ್ಚಿರುವ ಮತ್ತು ಕ್ರಮ ನಿಧಾನವಾಗಿರುವ ರಾಜ್ಯಗಳನ್ನು ಗುರುತಿಸಿ, ಅವುಗಳನ್ನು ಪಟ್ಟಿ ಮಾಡಿ, ನಂತರದ ಸಭೆಗಳಲ್ಲಿ ಈ ರಾಜ್ಯಗಳಿಂದ ಪ್ರತಿಕ್ರಿಯೆ ಪಡೆಯುವಂತೆ ಕೇಂದ್ರ ಕೃಷಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ರಾಜ್ಯಗಳು ಮತ್ತು ಸಿಬ್ಬಂದಿಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಉತ್ತೇಜಿಸಲು ದೂರುಗಳನ್ನು ಪರಿಹರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳು ಮತ್ತು ಅಧಿಕಾರಿಗಳು/ನೌಕರರನ್ನು ಮೆಚ್ಚುಗೆಯ ಪ್ರಮಾಣಪತ್ರಗಳೊಂದಿಗೆ ಗೌರವಿಸುವಂತೆ ಅವರು ಸೂಚಿಸಿದರು.

ಗಂಭೀರ ದೂರುಗಳಿಗೆ ಪರಿಹಾರಕ್ಕಾಗಿ ಸಚಿವಾಲಯದ ನೇರ ಹಸ್ತಕ್ಷೇಪದ ಅಗತ್ಯವಿರಬಹುದು ಎಂದು ಶ್ರೀ ಚೌಹಾಣ್ ತಿಳಿಸಿದರು. ರಾಜ್ಯ ನೋಡಲ್ ಅಧಿಕಾರಿಗಳು ಪ್ರತಿದಿನ 10 ದೂರುಗಳ ಕುರಿತು ರೈತರಿಂದ ನೇರ ಪ್ರತಿಕ್ರಿಯೆ ಪಡೆಯುವ ಪ್ರಸ್ತಾಪವನ್ನು ಸಹ ಸಭೆಯಲ್ಲಿ ಚರ್ಚಿಸಲಾಯಿತು.

 

*****


(Release ID: 2180155) Visitor Counter : 22