ಜವಳಿ ಸಚಿವಾಲಯ
ವಲಯ ಸಹಯೋಗವನ್ನು ಹೆಚ್ಚಿಸಲು ಭಾರತೀಯ ಜವಳಿ ನಾಯಕತ್ವದೊಂದಿಗೆ ಉನ್ನತ ಮಟ್ಟದ ಸೌದಿ ನಿಯೋಗ ತೊಡಗಿಸಿಕೊಂಡಿದೆ
ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಚೌಕಟ್ಟಿನಡಿಯಲ್ಲಿ ಭಾರತ-ಸೌದಿ ಬಾಂಧವ್ಯವನ್ನು ಬಲಪಡಿಸುವ ಬದ್ಧತೆಯನ್ನು ಸಭೆ ಉಳ್ಲಖಿಸಿದೆ
ಸಿದ್ಧ ಉಡುಪುಗಳು ತಾಂತ್ರಿಕ ಜವಳಿ, ಮಾನವ ನಿರ್ಮಿತ ನಾರುಗಳು, ಕಾರ್ಪೆಟ್ , ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಸಹಯೋಗದ ಪ್ರಮುಖ ಕ್ಷೇತ್ರಗಳಾಗಿ ಗುರುತಿಸಲಾಗಿದೆ
Posted On:
14 OCT 2025 7:36PM by PIB Bengaluru
ಸೌದಿ ಅರೇಬಿಯಾದ ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಉಪ ಸಚಿವರಾದ ಘನತೆವೆತ್ತ ಖಲೀಲ್ ಇಬ್ನ್ ಸಲಾಮಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಇಂದು ಜವಳಿ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸಲು ಭಾರತ ಸರ್ಕಾರದ ಜವಳಿ ಸಚಿವಾಲಯದ ಕಾರ್ಯದರ್ಶಿಯನ್ನು ನವದೆಹಲಿಯ ಉದ್ಯೋಗ ಭವನದಲ್ಲಿ ಭೇಟಿ ಮಾಡಿತು. ಈ ಸಭೆಯು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಭಾರತ ಮತ್ತು ಸೌದಿ ಅರೇಬಿಯಾ ಸಂಸ್ಥಾನವು ತಮ್ಮ ದೃಢವಾದ ಆರ್ಥಿಕ ಸಂಬಂಧವನ್ನು ಪುನರುಚ್ಚರಿಸಿದವು. ದ್ವಿಪಕ್ಷೀಯ ವ್ಯಾಪಾರವು 2024-25ರ ಹಣಕಾಸು ವರ್ಷದಲ್ಲಿ 41.88 ಶತಕೋಟಿ ಡಾಲರ್ ತಲುಪಿದೆ. ಸೌದಿ ಅರೇಬಿಯಾದ ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಭಾರತವು ಎರಡನೇ ಅತಿದೊಡ್ಡ ಪೂರೈಕೆದಾರನಾಗಿ (517.5 ದಶಲಕ್ಷ ಡಾಲರ್) ಹೊರಹೊಮ್ಮಿತು. 2024 ರಲ್ಲಿ ಸೌದಿ ಅರೇಬಿಯಾದ ಒಟ್ಟು ಜವಳಿ ಮತ್ತು ಉಡುಪು ಆಮದುಗಳಲ್ಲಿ ಶೇ.11.2 ರಷ್ಟು ಪಾಲನ್ನು ಪಡೆದುಕೊಂಡಿದೆ. ಈ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಲು ಎರಡೂ ಕಡೆಯವರು ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿ ಮತ್ತು ರಫ್ತಿನ ಪ್ರಮುಖ ಕ್ಷೇತ್ರವಾದ ಭಾರತದ ರೆಡಿಮೇಡ್ ಗಾರ್ಮೆಂಟ್ಸ್ (ಆರ್.ಎಂ.ಜಿ) ವಲಯದಲ್ಲಿ ಸೌದಿ ಹೂಡಿಕೆಗೆ ಗಮನಾರ್ಹ ಅವಕಾಶಗಳನ್ನು ಸಂವಾದವು ಬಿಂಬಿಸಿತು. ಪರಸ್ಪರ ಬೆಳವಣಿಗೆಯ ಹಂಚಿಕೆಯ ದೃಷ್ಟಿಕೋನದೊಂದಿಗೆ, ಎರಡೂ ಪಕ್ಷಕಾರರು ಜವಳಿ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಸಹಯೋಗದ ಪ್ರಯತ್ನಗಳ ಮೂಲಕ ಉತ್ಪಾದನಾ ಸಾಮರ್ಥ್ಯ ಮತ್ತು ಮಾರುಕಟ್ಟೆ ತಲುಪುವಿಕೆಯನ್ನು ವಿಸ್ತರಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.
ಕೈಮಗ್ಗ, ಕರಕುಶಲ ವಸ್ತುಗಳು ಮತ್ತು ಕಾರ್ಪೆಟ್ ಗಳಂತಹ ಸಾಂಪ್ರದಾಯಿಕ ವಲಯಗಳಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ಮಹತ್ವವನ್ನು ಚರ್ಚೆಗಳು ಒತ್ತಿ ಹೇಳಿದವು. ಈ ವಲಯಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಕುಶಲಕರ್ಮಿ ಪರಂಪರೆಯನ್ನು ಪ್ರತಿನಿಧಿಸುವುದಲ್ಲದೆ, ಪರಿಸರ ಸ್ನೇಹಿ ಮತ್ತು ನೈತಿಕವಾಗಿ ಉತ್ಪಾದಿಸಿದ ಸರಕುಗಳಿಗೆ ಜಾಗತಿಕ ಗ್ರಾಹಕರ ಆದ್ಯತೆಗಳೊಂದಿಗೆ ಪ್ರತಿಧ್ವನಿಸುತ್ತವೆ.

ಎಂ.ಎಂ.ಎಫ್. ಮತ್ತು ತಾಂತ್ರಿಕ ಜವಳಿಯಲ್ಲಿ ವ್ಯೂಹಾತ್ಮಕ ಜೋಡಣೆ
ಪೆಟ್ರೋಕೆಮಿಕಲ್ ಆಧಾರಿತ ಕೈಗಾರಿಕೆಗಳಲ್ಲಿ ಸೌದಿ ಅರೇಬಿಯಾದ ಶಕ್ತಿಯನ್ನು ಪರಸ್ಪರ ಗುರುತಿಸುವುದು ಮತ್ತು ಮಾನವ ನಿರ್ಮಿತ ಫೈಬರ್ (ಎಂ.ಎಂ.ಎಫ್) ಮತ್ತು ತಾಂತ್ರಿಕ ಜವಳಿಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸುವುದು ಸಭೆಯ ಪ್ರಮುಖ ಅಂಶವಾಗಿದೆ. ಈ ವಿಭಾಗಗಳು ದ್ವಿಪಕ್ಷೀಯ ವ್ಯಾಪಾರದ ಆಧಾರ ಸ್ತಂಭಗಳಾಗಲು ಸಜ್ಜಿವೆ, ಕಚ್ಚಾ ವಸ್ತುಗಳ ಮೂಲ, ತಂತ್ರಜ್ಞಾನ ವಿನಿಮಯ ಮತ್ತು ಉತ್ಪನ್ನ ಅಭಿವೃದ್ಧಿಯಲ್ಲಿ ಸಮನ್ವಯವನ್ನು ಬಳಸಿಕೊಳ್ಳಲು ಅವಕಾಶಗಳನ್ನು ನೀಡುತ್ತವೆ. ಜವಳಿ ಸಚಿವಾಲಯದ ಕಾರ್ಯದರ್ಶಿ, ಎಂ.ಎಂ.ಎಫ್ ಮತ್ತು ತಾಂತ್ರಿಕ ಜವಳಿಗಳು ಹೆಚ್ಚಿನ ಬೆಳವಣಿಗೆಯ ಕ್ಷೇತ್ರಗಳಾಗಿ ಹೊರಹೊಮ್ಮುತ್ತಿವೆ ಎಂದು ಒತ್ತಿ ಹೇಳಿದರು.
ಸೌದಿ ನಿಯೋಗವು ಭಾರತದ ಪ್ರಮುಖ ಜವಳಿ ವಸ್ತುಪ್ರದರ್ಶನಗಳು ಮತ್ತು ವ್ಯಾಪಾರ ಮೇಳಗಳಾದ ಭಾರತ್ ಟೆಕ್ಸ್, ರಿವರ್ಸ್ ಖರೀದಿದಾರ-ಮಾರಾಟಗಾರರ ಸಭೆಗಳು (ಆರ್.ಬಿ.ಎಸ್.ಎಂ.ಗಳು) ಮತ್ತು ಸಂಪೂರ್ಣ ಜವಳಿ ಮೌಲ್ಯ ಸರಪಳಿಯನ್ನು ಪ್ರದರ್ಶಿಸುವ ಇತರ ಪ್ರಮುಖ ಪ್ರದರ್ಶನಗಳ ಬಗ್ಗೆ ತೀವ್ರ ಆಸಕ್ತಿ ವಹಿಸಿತು. ಈ ಕಾರ್ಯಕ್ರಮಗಳು ಜಾಗತಿಕ ತೊಡಗಿಸಿಕೊಳ್ಳುವಿಕೆಗೆ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ, ನೀತಿ ನಿರೂಪಕರು, ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು 100 ಕ್ಕೂ ಹೆಚ್ಚು ದೇಶಗಳ ಖರೀದಿದಾರರನ್ನು ಒಟ್ಟುಗೂಡಿಸುತ್ತವೆ. 2025 ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ಭಾರತ್ ಟೆಕ್ಸ್ 2025 ರಲ್ಲಿ ಸೌದಿ ಅರೇಬಿಯಾದ ಹಲವಾರು ಪ್ರಮುಖ ಕಂಪನಿಗಳು ಭಾಗವಹಿಸಿದ್ದವು ಎಂದು ಬಿಂಬಿಸಲಾಯಿತು. ಅಂತೆಯೇ, ಇ.ಪಿ.ಸಿ.ಎಚ್ ನೇತೃತ್ವದ ಭಾರತೀಯ ಕಂಪನಿಗಳ ನಿಯೋಗವು ಜವಳಿ ಸಚಿವಾಲಯದ ಬೆಂಬಲಿತ ಕುಶಲಕರ್ಮಿಗಳೊಂದಿಗೆ ಸೆಪ್ಟೆಂಬರ್ 2025 ರಲ್ಲಿ ನಡೆದ ಸೌದಿ ಸೂಚ್ಯಂಕ 2025 ರಲ್ಲಿ ಭಾಗವಹಿಸಿತು.
ಸಹಯೋಗದ ಆವಿಷ್ಕಾರಗಳನ್ನು ಪ್ರದರ್ಶಿಸಲು ಮತ್ತು ಹೊಸ ಮಾರುಕಟ್ಟೆ ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಈ ವೇದಿಕೆಗಳನ್ನು ಬಳಸಿಕೊಳ್ಳುವುದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಭಾರತದ ಕಡೆಯವರು ತನ್ನ ಎರಡು ಪ್ರಮುಖ ಉಪಕ್ರಮಗಳನ್ನು ಪ್ರಸ್ತುತಪಡಿಸಿದರು – ಪಿ.ಎಂ. ಮಿತ್ರ (ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪು) ಪಾರ್ಕ್ ಗಳು ಮತ್ತು ಎಂ.ಎಂ.ಎಫ್ ಮತ್ತು ತಾಂತ್ರಿಕ ಜವಳಿಗಳಿಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ.ಎಲ್.ಐ) ಯೋಜನೆ. ಈ ಯೋಜನೆಗಳು ವಿಶ್ವದರ್ಜೆಯ ಮೂಲಸೌಕರ್ಯವನ್ನು ಸೃಷ್ಟಿಸುವ ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಸೌದಿ ಅರೇಬಿಯಾದ ಕೈಗಾರಿಕಾ ಮತ್ತು ಹೂಡಿಕೆ ಆದ್ಯತೆಗಳೊಂದಿಗೆ ಈ ಯೋಜನೆಗಳನ್ನು ಜೋಡಿಸಲು ಸೌದಿ ನಿಯೋಗವು ಆಸಕ್ತಿ ವ್ಯಕ್ತಪಡಿಸಿತು.
ಈ ಒಡಂಬಡಿಕೆಯು ಭಾರತ ಮತ್ತು ಸೌದಿ ಅರೇಬಿಯಾ ಸಾಮ್ರಾಜ್ಯದ ನಡುವಿನ ಕಾರ್ಯತಂತ್ರ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಪ್ರತಿಬಿಂಬಿಸುವ ಜತೆಗೆ ದೃಢವಾದ ಭವಿಷ್ಯಕ್ಕೆ ಸಿದ್ಧವಾದ ಜವಳಿ ಸಹಯೋಗಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತದೆ.
****
(Release ID: 2179215)
Visitor Counter : 5