ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ ಪ್ರಭಾವಶಾಲಿ ಹಣಕಾಸು ವರ್ಷ 26ನೇ ಎರಡನೇ ತ್ರೈಮಾಸಿಕದ ಪ್ರಗತಿಯೊಂದಿಗೆ ಭಾರತದ ಶುದ್ಧ ಇಂಧನದ ಪ್ರಗತಿಯು ಬಲವನ್ನು ಪಡೆದಿದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಎರಡನೇ ತ್ರೈಮಾಸಿಕದ ಫಲಿತಾಂಶಗಳು: ಐ.ಆರ್.ಇ.ಡಿ.ಎ ನಿವ್ವಳ ಲಾಭದಲ್ಲಿ 41% ಏರಿಕೆ, ಸಾಲ ವಿತರಣೆಯಲ್ಲಿ 81% ಬೆಳವಣಿಗೆ ದಾಖಲಿಸಿದೆ
Posted On:
14 OCT 2025 12:53PM by PIB Bengaluru
ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐ.ಆರ್.ಇ.ಡಿ.ಎ)ಯ ಪ್ರಭಾವಶಾಲಿ ಹಣಕಾಸು ವರ್ಷ 26ರ ಎರಡನೇ ತ್ರೈಮಾಸಿಕದ (Q2 ) ಕಾರ್ಯಕ್ಷಮತೆಯಿಂದ ಭಾರತದ ಶುದ್ಧ ಇಂಧನ ಪ್ರಯಾಣವು ಬಲವಾದ ಪ್ರಗತಿಯನ್ನು ಪಡೆಯುತ್ತಲೇ ಇದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಸುಸ್ಥಿರ ಅಭಿವೃದ್ಧಿ ಹಾಗು ಸ್ವಾವಲಂಬನೆಯನ್ನು ಐ.ಆರ್.ಇ.ಡಿ.ಎ ಉತ್ತೇಜಿಸುತ್ತಿದ್ದು, ಭಾರತದ ಭವಿಷ್ಯವನ್ನು ಬೆಳಗಿಸುತ್ತಿದೆ ಹಾಗು ಉತ್ಸಾಹ ಮತ್ತು ಉದ್ದೇಶದೊಂದಿಗೆ ಹಸಿರು ಮತ್ತು ಉಜ್ವಲ ಭವಿಷ್ಯದತ್ತ ಸಾಮೂಹಿಕ ಪ್ರಯತ್ನಗಳಿಗೆ ಪ್ರೇರಣೆಯನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ ಲಿಮಿಟೆಡ್ ಇಂದು ಸೆಪ್ಟೆಂಬರ್ 30, 2025ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ್ದು, ತನ್ನ ಬಲವಾದ ಬೆಳವಣಿಗೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಮುಂದುವರೆಸಿದೆ.
ನಿರ್ದೇಶಕರ ಮಂಡಳಿಯು ಇಂದು ನಡೆದ ಸಂಸ್ಥೆಯ ಸಭೆಯಲ್ಲಿ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಿದೆ. ಪ್ರಮುಖ ಹಣಕಾಸು ಮಾಪನಗಳಲ್ಲಿ ಐ.ಆರ್.ಇ.ಡಿ.ಎ ವರ್ಷದಿಂದ ವರ್ಷಕ್ಕೆ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯ ವಿಸ್ತರಿಸುತ್ತಿರುವ ಸಾಲ ವಿತರಣೆ, ಹೆಚ್ಚುತ್ತಿರುವ ನಿವ್ವಳ ಮೌಲ್ಯ ಮತ್ತು ಸ್ಥಿರವಾದ ಲಾಭದಾಯಕತೆಯು ಭಾರತದ ನವೀಕರಿಸಬಹುದಾದ ಇಂಧನದ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸುವ ಅದರ ಕಾರ್ಯತಂತ್ರದ ಗಮನ ಮತ್ತು ಬದ್ಧತೆಯನ್ನು ಒತ್ತಿಹೇಳುತ್ತದೆ.
ಪ್ರಮುಖ ಹಣಕಾಸು ಮುಖ್ಯಾಂಶಗಳು – Q2 ಹಣಕಾಸು ವರ್ಷ 2025-26 vs Q2 ಹಣಕಾಸು ವರ್ಷ 2024-25 (ಒಂದೇ ಘಟಕ):
- ಸಾಲ ಮಂಜೂರಾತಿಗಳು: ₹21,408 ಕೋಟಿ vs ₹8,724 ಕೋಟಿ (↑145%)
- ಸಾಲ ವಿತರಣೆಗಳು: ₹8,062 ಕೋಟಿ vs ₹4,462 ಕೋಟಿ (↑81%)
- ಒಟ್ಟು ಸಾಲಗಳು: ₹84,477 ಕೋಟಿ vs ₹64,564 ಕೋಟಿ (↑31%)
- ನಿವ್ವಳ ಮೌಲ್ಯ: ₹12,920 ಕೋಟಿ vs ₹9,336 ಕೋಟಿ (↑38%)
- ತೆರಿಗೆ ನಂತರದ ಲಾಭ: ₹549 ಕೋಟಿ vs ₹388 ಕೋಟಿ (↑41%)
- ಕಾರ್ಯನಿರ್ವಹಣೆಗಳಿಂದ ಬಂದ ಆದಾಯ: ₹2,057 ಕೋಟಿ vs ₹1,630 ಕೋಟಿ (↑26%)
Q2 ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸಿದ ಐ.ಆರ್.ಇ.ಡಿ.ಎದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರದೀಪ್ ಕುಮಾರ್ ದಾಸ್, “ಐ.ಆರ್.ಇ.ಡಿ.ಎ ಸಂಸ್ಥೆಯ ಸ್ಥಿರ ಬೆಳವಣಿಗೆ ತ್ರೈಮಾಸಿಕಗಳು ನಮ್ಮ ಕಾರ್ಯತಂತ್ರದ ಗಮನ ಮತ್ತು ಕಾರ್ಯಗತಗೊಳಿಸುವಿಕೆಯ ಶ್ರೇಷ್ಠತೆಯನ್ನು ಒತ್ತಿಹೇಳುತ್ತವೆ. ನಮ್ಮ ವಿಸ್ತರಿಸುತ್ತಿರುವ ಸಾಲ ನೀಡುವಿಕೆ ಮತ್ತು ಬಲವಾದ ಹಣಕಾಸು ಪಾಲುದಾರರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಹಾಗು ಭಾರತದ ಶುದ್ಧ ಇಂಧನ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಸಹಾಯಕರಾಗಿ ನಮ್ಮ ಪಾತ್ರವನ್ನು ಎತ್ತಿ ತೋರಿಸುತ್ತದೆ."
ಶ್ರೀ ದಾಸ್ ತಂಡ ಐ.ಆರ್.ಇ.ಡಿ.ಎ ಸಂಸ್ಥೆಯ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಗೌರವಾನ್ವಿತ ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವರು; ಗೌರವಾನ್ವಿತ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರು; ಕಾರ್ಯದರ್ಶಿ, ಎಂ.ಎನ್.ಆರ್.ಇ ; ಹಿರಿಯ ಸಚಿವಾಲಯದ ಅಧಿಕಾರಿಗಳು; ಮತ್ತು ನಿರ್ದೇಶಕರ ಮಂಡಳಿಗೆ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
*****
(Release ID: 2178985)
Visitor Counter : 4