ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಜಂಟಿಯಾಗಿ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2025ರ ಭಾಗವಾಗಿ ‘ರೋಬೋಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025’ ಅನ್ನು ಆಯೋಜಿಸಿದವು
ಐಟಿಯುನ "ರೋಬೋಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025" ಸಮ್ಮೇಳನವನ್ನು ಡಿಜಿಟಲ್ ಸಂಪರ್ಕ ಆಯೋಗದ (ಸೇವೆಗಳು) ಸದಸ್ಯ ಶ್ರೀ ದೇಬ್ ಕುಮಾರ್ ಚಕ್ರವರ್ತಿ ಮತ್ತು ಟಿ ಎಸ್ ಬಿಯ ಉಪ ನಿರ್ದೇಶಕರು ಮತ್ತು ಮುಖ್ಯಸ್ಥ ಡಾ. ಬಿಲೆಲ್ ಜಮೌಸಿ ಉದ್ಘಾಟಿಸಿದರು
ಶ್ರೀ ಚಕ್ರವರ್ತಿ: “ಭಾರತವು ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ನಲ್ಲಿ ಪ್ರಮುಖ ನಾವೀನ್ಯತೆಯ ರಾಷ್ಟ್ರವಾಗಬೇಕು. ಯುವ ಪೀಳಿಗೆ ನಾವೀನ್ಯತೆ ಅಳವಡಿಕೆಯಲ್ಲಿ ಮುಂದಿರುವುದರಿಂದ ಅವರಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ನಾವೀನ್ಯತೆಯ ವಿರೋಧಾಭಾಸವನ್ನು ಪರಿಹರಿಸಬೇಕು, ಆಹಾರ ಮತ್ತು ಕೃಷಿ ಸಂಸ್ಥೆ ಮತ್ತು ಐಟಿಯು ಒಟ್ಟಾಗಿ ಪ್ರಪಂಚದಿಂದ ಹಸಿವನ್ನು ನಿರ್ಮೂಲನೆ ಮಾಡುವ ಉದಾತ್ತ ಉದ್ದೇಶಕ್ಕಾಗಿ ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಅನ್ನು ಘೋಷಿಸಿವೆ”
ವಿಜೇತರು (ಮೊದಲ ಸ್ಥಾನ): ಹಯಾನ್ಶ್ ತಂಡವನ್ನು ಜೂನಿಯರ್ ವಿಭಾಗದ ಚಾಂಪಿಯನ್ ಎಂದು ಘೋಷಿಸಲಾಯಿತು ಮತ್ತು ಜುಲೈ 2026ರಲ್ಲಿ ಸ್ವಿಟ್ಜರ್ಲೆಂಡಿನ ಜಿನೀವಾದಲ್ಲಿ ನಡೆಯುವ ಗ್ಲೋಬಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು
ಸತತ ಚಾಂಪಿಯನ್ ಗಳು: 2026ರ ಜಿನೀವಾದಲ್ಲಿ ಮತ್ತೆ ಭಾರತವನ್ನು ಪ್ರತಿನಿಧಿಸಲು ಆಂಬಿಷಿಯಸ್ ಅವೆಂಜರ್ಸ್ ತಂಡವನ್ನು ಹಿರಿಯರ ವಿಭಾಗದಲ್ಲಿ ಚಾಂಪಿಯನ್ ಎಂದು ಘೋಷಿಸಲಾಯಿತು
ವಿಶ್ವಸಂಸ್ಥೆ ಆಧಾರಿತ ಶೈಕ್ಷಣಿಕ ರೊಬೊಟಿಕ್ಸ್ ಸ್ಪರ್ಧೆ 'ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್' ಐಎಂಸಿ 2025ರಲ್ಲಿ ನೈಜ ಜಗತ್ತಿನ ಸವಾಲುಗಳನ್ನು ಎದುರಿಸುವ ಪ್ರಾಯೋಗಿಕ ರೊಬೊಟಿಕ್ ಪರಿಹಾರಗಳನ್ನು ಪ್ರದರ್ಶಿಸಲು ವಿಶ್ವಾದ್ಯಂತ ಯುವಜನರನ್ನು ತೊಡಗಿಸಿಕೊಂಡಿದೆ
ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025 ವಿಜೇತರಿಗೆ ಬಹುಮಾನ ವಿತರಣೆಯೊಂದಿಗೆ ಮುಕ್ತಾಯವಾಯಿತು
प्रविष्टि तिथि:
12 OCT 2025 1:38PM by PIB Bengaluru


ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025 ನಿನ್ನೆ ಸಂಜೆ ನವದೆಹಲಿಯ ಯಶೋಭೂಮಿ, ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಮುಕ್ತಾಯಗೊಂಡಿತು, ಇದು ನಾವೀನ್ಯತೆ, ಸೃಜನಶೀಲತೆ ಮತ್ತು ಯುವ ನೇತೃತ್ವದ ತಾಂತ್ರಿಕ ಪ್ರಗತಿಯನ್ನು ಆಚರಿಸುವ ಒಂದು ಸ್ಪೂರ್ತಿದಾಯಕ ದಿನವಾಗಿತ್ತು.
ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) ಎಐ ಫಾರ್ ಗುಡ್ ಇಂಪ್ಯಾಕ್ಟ್ ಇನಿಶಿಯೇಟಿವ್ ಅಡಿಯಲ್ಲಿ, ಐಐಟಿ ದೆಹಲಿಯ ಐ-ಹಬ್ ಫೌಂಡೇಶನ್ ಫಾರ್ ಕೊಬೊಟಿಕ್ಸ್ (ಐ ಎಚ್ ಎಫ್ ಸಿ) ಸಹಯೋಗದೊಂದಿಗೆ ಮತ್ತು ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆ (ಡಿಒಟಿ) ಬೆಂಬಲದೊಂದಿಗೆ ಆಯೋಜಿಸಲಾದ ಈ ರಾಷ್ಟ್ರೀಯ ಸವಾಲು, ಆಹಾರ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಪರಿಹರಿಸಲು ರೊಬೊಟಿಕ್ಸ್ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಯುವ ನಾವೀನ್ಯಕಾರರ ಪ್ರತಿಭೆಯನ್ನು ಪ್ರದರ್ಶಿಸಿತು.




ಪ್ರಶಸ್ತಿ ವಿಜೇತರ ಘೋಷಣೆ
ಸ್ಪರ್ಧೆಯು ಕಿರಿಯರು ಮತ್ತು ಹಿರಿಯರು ಎಂಬ ಎರಡು ವಿಭಾಗಗಳನ್ನು ಒಳಗೊಂಡಿತ್ತು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು ಮತ್ತು ಪ್ರತಿ ವಿಭಾಗದಲ್ಲಿ ಅತ್ಯಂತ ನವೀನ ರೋಬೋಟ್ ಗೆ ವಿಶೇಷ ಮನ್ನಣೆ ನೀಡಲಾಯಿತು.
ಕಿರಿಯರ ವಿಭಾಗ
ವಿಜೇತರು: ಬೆಂಗಳೂರಿನ ಪ್ಲೇಟೊ ಲ್ಯಾಬ್ಸ್ ನ ಹೇಯಾನ್ಶ್ ತಂಡವು ಜೂನಿಯರ್ ವಿಭಾಗದ ಚಾಂಪಿಯನ್ ಎಂದು ಘೋಷಿಸಲ್ಪಟ್ಟಿತು ಮತ್ತು ಜುಲೈ 2026ರಲ್ಲಿ ಸ್ವಿಟ್ಜರ್‌ಲ್ಯಾಂಡಿನ ಜಿನೀವಾದಲ್ಲಿ ನಡೆಯುವ ಗ್ಲೋಬಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಈ ತಂಡವು ಆಯ್ಕೆಯಾಯಿತು.
ಮೊದಲ ರನ್ನರ್ ಅಪ್: ರೋಬೋ ನೈಟ್ಸ್ ಜೂನಿಯರ್ ತಂಡ, ಡಿಪಿಎಸ್ ಆರ್.ಕೆ. ಪುರಂ, ನವದೆಹಲಿ.
ಎರಡನೇ ರನ್ನರ್ ಅಪ್: ನೈಟಿಕ್ ತಂಡ, ಪ್ಲೇಟೊ ಲ್ಯಾಬ್ಸ್, ಬೆಂಗಳೂರು.
ಅತ್ಯಂತ ನವೀನ ಮತ್ತು ಸ್ವಂತಿಕೆಯ ರೋಬೋಟ್: ಟೀಮ್ ಹೇಯಾನ್ಶ್, ಪ್ಲೇಟೊ ಲ್ಯಾಬ್ಸ್, ಬೆಂಗಳೂರು
ಹಿರಿಯರ ವಿಭಾಗ
ವಿಜೇತರು: ತಂಡ - ದಿ ಆಂಬಿಷಿಯಸ್ ಅವೆಂಜರ್ಸ್, ಸಂತ ಅತುಲಾನಂದ ಕಾನ್ವೆಂಟ್ ಶಾಲೆ, ಕೊಯಿರಾಜ್‌ಪುರ, ವಾರಣಾಸಿ - ಸತತ ಎರಡನೇ ವರ್ಷ ವಿಜೇತರು ಎಂದು ಘೋಷಿಸಲ್ಪಟ್ಟ ಇವರು ಜುಲೈ 2026 ರಲ್ಲಿ ಜಿನೀವಾದಲ್ಲಿ ನಡೆಯುವ ಗ್ಲೋಬಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತವನ್ನು ಮತ್ತೆ ಪ್ರತಿನಿಧಿಸಲಿದ್ದಾರೆ.
ಮೊದಲ ರನ್ನರ್ ಅಪ್: ಟೀಮ್ ಆರವ್, ಪ್ಲೇಟೊ ಲ್ಯಾಬ್ಸ್, ಬೆಂಗಳೂರು
ಎರಡನೇ ರನ್ನರ್ ಅಪ್: ಟೀಮ್ - ಕೋಡ್, ಲೋಟಸ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್, ನೋಯ್ಡಾ ಎಕ್ಸ್‌ಪ್ರೆಸ್‌ವೇ, ಸೆಕ್ಟರ್ 126, ನೋಯ್ಡಾ
ಅತ್ಯಂತ ನವೀನ ಮತ್ತು ಸೃಜನಶೀಲ ರೋಬೋಟ್: ಟೀಮ್ ಆರವ್, ಪ್ಲೇಟೊ ಲ್ಯಾಬ್ಸ್, ಬೆಂಗಳೂರು
ವಿಜೇತರ ಪ್ರತಿಭೆ, ತಂಡದ ಕೆಲಸ ಮತ್ತು ನಾವೀನ್ಯತೆಯ ಮನೋಭಾವವನ್ನು ಗುರುತಿಸಿದ ಗಣ್ಯರು ಮತ್ತು ತೀರ್ಪುಗಾರರು ವಿಜೇತರನ್ನು ಗೌರವಿಸಿದಾಗ ಸಭಾಂಗಣವು ಚಪ್ಪಾಳೆಯಿಂದ ತುಂಬಿತು.
ಗೌರವಾನ್ವಿತ ಅತಿಥಿಗಳ ಉಪಸ್ಥಿತಿ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೂರಸಂಪರ್ಕ ಇಲಾಖೆಯ ಡಿಜಿಟಲ್ ಸಂಪರ್ಕ ಆಯೋಗದ ಸದಸ್ಯ (ಸೇವೆಗಳು) ಶ್ರೀ ದೇಬ್ ಕುಮಾರ್ ಚಕ್ರವರ್ತಿ; ದೂರಸಂಪರ್ಕ ಇಲಾಖೆಯ ಉಪ ಮಹಾನಿರ್ದೇಶಕ (ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ನಿಧಿ) ಡಾ. ಪರಾಗ್ ಅಗರ್ವಾಲ್; ಐಐಟಿ ದೆಹಲಿಯ ಐ-ಹಬ್ ಫೌಂಡೇಶನ್ ಫಾರ್ ಕೊಬೊಟಿಕ್ಸ್ (ಐ ಎಚ್ ಎಫ್ ಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶುತೋಷ್ ಶರ್ಮಾ; ಐಐಟಿ ದೆಹಲಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ಸುನಿಲ್ ಝಾ; ಮತ್ತು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) ಎಐ ಮತ್ತು ರೊಬೊಟಿಕ್ಸ್ ಕಾರ್ಯಕ್ರಮ ಅಧಿಕಾರಿ ಶ್ರೀ ಗಿಲ್ಲೆಮ್ ಮಾರ್ಟಿನೆಜ್ ರೌರಾ, ದೂರಸಂಪರ್ಕ ಇಲಾಖೆ, ಐಟಿಯು ಮತ್ತು ಐ ಎಚ್ ಎಫ್ ಸಿ–ಐಐಟಿ ದೆಹಲಿಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲಾ ವಿಜೇತರನ್ನು ಗಣ್ಯರು ಅಭಿನಂದಿಸಿದರು ಮತ್ತು ನಾವೀನ್ಯತೆ ಮತ್ತು ಕಲಿಕೆಯಲ್ಲಿ ಅವರ ನಿರಂತರ ಪ್ರಯಾಣಕ್ಕಾಗಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭಾಶಯಗಳನ್ನು ಕೋರಿದರು.
ಡಿಜಿಟಲ್ ಸುರಕ್ಷತೆ ಕುರಿತು ಜಾಗೃತಿ ಗೋಷ್ಠಿ
ದೂರಸಂಪರ್ಕ ಇಲಾಖೆಯ ADET (AI & DIU) ಶ್ರೀಮತಿ ದೀಕ್ಷಾ ಧಿಮಾನ್ ಅವರು "ಯುವಕರಿಗೆ ಡಿಜಿಟಲ್ ಸುರಕ್ಷತೆ" ಎಂಬ ವಿಶೇಷ ಪ್ರಸ್ತುತಿಯನ್ನು ನೀಡಿದರು, ಇದು ಆನ್‌ಲೈನ್ ಸುರಕ್ಷತೆಯ ಪ್ರಾಮುಖ್ಯತೆ, ಜವಾಬ್ದಾರಿಯುತ ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಮತ್ತು ತಂತ್ರಜ್ಞಾನದ ನೈತಿಕ ಬಳಕೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ಗೋಷ್ಠಿಯು ಎಂಟು ವಿಭಿನ್ನ ರಾಜ್ಯಗಳ ಭಾಗವಹಿಸುವವರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು, ಇದು ನಾವೀನ್ಯಕಾರರ ಜೊತೆಗೆ ಜವಾಬ್ದಾರಿಯುತ ಡಿಜಿಟಲ್ ನಾಗರಿಕರನ್ನು ಪೋಷಿಸುವತ್ತ ಸರ್ಕಾರದ ಗಮನವನ್ನು ಎತ್ತಿ ತೋರಿಸಿತು.
ಯುವ ಮನಸ್ಸುಗಳು ಮತ್ತು ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಆಚರಿಸುವುದು
ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025 ಭಾರತದಾದ್ಯಂತ 55 ತಂಡಗಳಿಂದ 271 ಭಾಗವಹಿಸುವವರನ್ನು ಯಶಸ್ವಿಯಾಗಿ ಒಟ್ಟುಗೂಡಿಸಿತು, ಇದು ಸೃಜನಶೀಲತೆ, ತಂಡದ ಕೆಲಸ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಸಂಯೋಜಿಸಿತು. ತಮ್ಮ ಗಮನಾರ್ಹ ಪ್ರದರ್ಶನದೊಂದಿಗೆ, ಟೀಮ್ ಹೇಯಾನ್ಶ್ (ಜೂನಿಯರ್) ಮತ್ತು ಟೀಮ್ ಆಂಬಿಷಿಯಸ್ ಅವೆಂಜರ್ಸ್ (ಸೀನಿಯರ್) ಈಗ ಸ್ವಿಟ್ಜರ್ಲೆಂಡಿನ ಜಿನೀವಾದಲ್ಲಿ (ಜುಲೈ 7-10, 2026) ನಡೆಯಲಿರುವ ಗ್ಲೋಬಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತವನ್ನು ಪ್ರತಿನಿಧಿಸಲಿವೆ ಮತ್ತು ಎಐ ಫಾರ್ ಗುಡ್ ಇಂಪ್ಯಾಕ್ಟ್ ಇನಿಶಿಯೇಟಿವ್ ಅಡಿಯಲ್ಲಿ ಭಾಗವಹಿಸುವ 25 ದೇಶಗಳ ಪೈಕಿ ಭಾರತವನ್ನು ಪ್ರತಿನಿಧಿಸಲಿವೆ.
ಸಾಮಾಜಿಕ ಒಳಿತಿಗಾಗಿ ಡಿಜಿಟಲ್ ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಐಟಿಯು, ದೂರಸಂಪರ್ಕ ಇಲಾಖೆ ಮತ್ತು ಐ ಎಚ್ ಎಫ್ ಸಿ-ಐಐಟಿ ದೆಹಲಿ ನಡುವಿನ ಸಹಯೋಗದ ಮನೋಭಾವವನ್ನು ಗಣ್ಯರು ಶ್ಲಾಘಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಅವರು ಭಾಗವಹಿಸುವವರು ನೈತಿಕ ಜವಾಬ್ದಾರಿಯೊಂದಿಗೆ ನಾವೀನ್ಯತೆಯನ್ನು ಮುಂದುವರಿಸುವಂತೆ ಕರೆ ನೀಡಿದರು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ನವದೆಹಲಿಯಲ್ಲಿ ಇಂದು ನಡೆದ ಐಎಂಸಿ 2025ರ 9ನೇ ಆವೃತ್ತಿಯಲ್ಲಿ, ಶ್ರೀ ಚಕ್ರವರ್ತಿ ಮತ್ತು ಟೆಲಿಕಾಂ ಪ್ರಮಾಣೀಕರಣ ನೀತಿ ವಿಭಾಗದ (ಟಿ ಎಸ್ ಬಿ) ಉಪ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಡಾ. ಬಿಲೆಲ್ ಜಮೌಸಿ ಅವರು ಪ್ರತಿಷ್ಠಿತ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) "ರೋಬೋಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025" ಅನ್ನು ಉದ್ಘಾಟಿಸಿದರು. ಇದು ವಿಶ್ವಸಂಸ್ಥೆಯ ಪ್ರಮುಖ ಜಾಗತಿಕ ರೊಬೊಟಿಕ್ಸ್ ಸ್ಪರ್ಧೆಯಾಗಿದೆ.


ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯ) ಈ ಕಾರ್ಯಕ್ರಮವನ್ನು ಐ ಎಚ್ ಎಫ್ ಸಿ ಮತ್ತು ಐಐಟಿ ದೆಹಲಿಯ ತಂತ್ರಜ್ಞಾನ ನಾವೀನ್ಯತೆ ಕೇಂದ್ರದ ಸಹಭಾಗಿತ್ವದಲ್ಲಿ ಆಯೋಜಿಸಿವೆ. ಈ ಉಪಕ್ರಮವು ತಂತ್ರಜ್ಞಾನ, ನಾವೀನ್ಯತೆ ಮತ್ತು ರೋಬೋಟಿಕ್ಸ್, ಎಐ ಮತ್ತು ಐಒಟಿ ಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಜಾಗತಿಕ ಸಹಯೋಗದ ಮೂಲಕ ಯುವಕರನ್ನು ಸಬಲೀಕರಣಗೊಳಿಸುವ ಭಾರತ ಸರ್ಕಾರದ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ.
ಈ ಸವಾಲು 10 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳನ್ನು ಕೃಷಿ ಮತ್ತು ಆಹಾರ ಭದ್ರತೆಯಂತಹ ನಿರ್ಣಾಯಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ ಜಾಗತಿಕ ಸವಾಲುಗಳನ್ನು ಎದುರಿಸಲು ಎಐ ಮತ್ತು ರೊಬೊಟಿಕ್ಸ್ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಆಹ್ವಾನಿಸಿತು. ವ್ಯಕ್ತಿಗಳು ಮತ್ತು ತಂಡಗಳಿಗೆ ಮುಕ್ತವಾದ ಈ ಸ್ಪರ್ಧೆಯು ಸ್ಪರ್ಧಾ ಗೇಮ್ ಬೋರ್ಡ್‌ನಲ್ಲಿ ಪ್ರಸ್ತುತಪಡಿಸಲಾದ ಆಹಾರ ಭದ್ರತಾ ಸವಾಲನ್ನು ಪರಿಹರಿಸಲು ರೋಬೋಟ್ ಅನ್ನು ವಿನ್ಯಾಸಗೊಳಿಸುವುದು, ನಿರ್ಮಿಸುವುದು ಮತ್ತು ಪ್ರೋಗ್ರಾಮಿಂಗ್ ಮಾಡುವುದನ್ನು ಒಳಗೊಂಡಿತ್ತು. ಭಾರತೀಯ ತಂಡಗಳು ತಮ್ಮ ಕೌಶಲ್ಯಗಳಲ್ಲಿ ಅಪಾರ ಪ್ರತಿಭೆ ಮತ್ತು ಜಾಣ್ಮೆಯನ್ನು ಪ್ರದರ್ಶಿಸಿದವು, ಕೃಷಿ ಮತ್ತು ಆಹಾರ ಭದ್ರತೆಯ ನಿರ್ಣಾಯಕ ಕ್ಷೇತ್ರದ ಮೇಲೆ ಕೇಂದ್ರೀಕರಿಸಿದವು. ಈ ರಾಷ್ಟ್ರೀಯ ಕಾರ್ಯಕ್ರಮವು ಜಿನೀವಾದಲ್ಲಿ ನಡೆಯುವ ಎಐ ಫಾರ್ ಗುಡ್ ಗ್ಲೋಬಲ್ ಶೃಂಗಸಭೆ 2026 ರ ಸಂದರ್ಭದಲ್ಲಿ ಗ್ರ್ಯಾಂಡ್ ಫಿನಾಲೆಗೆ ಅರ್ಹತಾ ಪಂದ್ಯಾವಳಿಯಾಗಿದೆ.






‘ರೋಬೋಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ 2025ʼ
ರೊಬೊಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಎಂಬುದು ಐಟಿಯು ನ ಎಐ ಫಾರ್ ಗುಡ್ ಕಾರ್ಯಕ್ರಮದ ಪ್ರಮುಖ ಉಪಕ್ರಮವಾಗಿದ್ದು, ಇದು ಮುಂದಿನ ಪೀಳಿಗೆಯ ನಾವೀನ್ಯಕಾರರನ್ನು ರೊಬೊಟಿಕ್ಸ್ ಮತ್ತು ಎಐ ಬಳಸಿಕೊಂಡು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸಲು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಉತ್ತಮ, ಅಂತರ್ಗತ ಮತ್ತು ಸುಸ್ಥಿರ ಜಗತ್ತಿಗೆ ರೊಬೊಟಿಕ್ಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ತಂತ್ರಜ್ಞರ ನಡುವೆ ಜಾಗತಿಕ ಸಹಯೋಗವನ್ನು ಈ ಸವಾಲು ಉತ್ತೇಜಿಸುತ್ತದೆ.
'ರೋಬೋಟಿಕ್ಸ್ ಫಾರ್ ಗುಡ್ ಯೂತ್ ಚಾಲೆಂಜ್ ಇಂಡಿಯಾ'ವು ಪ್ರಪಂಚದಾದ್ಯಂತದ ಪ್ರಮುಖ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಸಮಾನ ಮತ್ತು ಸುಸ್ಥಿರ ಡಿಜಿಟಲ್ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಎಐನ ಪಾತ್ರದ ಕುರಿತು ಚರ್ಚಿಸಿತು. 'ಯುವ ಸಮಾಜಕ್ಕಾಗಿ ರೊಬೋಟಿಕ್ಸ್ ಮತ್ತು ಎಐ', 'ಯುವಕರಿಗೆ ಡಿಜಿಟಲ್ ಸುರಕ್ಷತೆ', 'ಎಐ ಫಾರ್ ಗುಡ್: ಜಾಗತಿಕ ಸವಾಲುಗಳನ್ನು ಪರಿಹರಿಸಲು ಎಐ ಮತ್ತು ರೊಬೊಟಿಕ್ಸ್ ಅನ್ನು ಬಳಸುವುದು' ಮತ್ತು 'ಯುವ ನೇತೃತ್ವದ ಸಮಾಜಕ್ಕಾಗಿ ರೊಬೋಟಿಕ್ಸ್ ಮತ್ತು ಎಐ' ಸೇರಿದಂತೆ ವೈವಿಧ್ಯಮಯ ಮತ್ತು ಪ್ರಮುಖ ವಿಷಯಗಳನ್ನು ಗೋಷ್ಠಿಗಳು ಒಳಗೊಂಡಿವೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2025 ಕುರಿತು
ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ವೇದಿಕೆಯಾದ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ಅನ್ನು ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಜಂಟಿಯಾಗಿ ಆಯೋಜಿಸಿವೆ. ಈ ಕಾರ್ಯಕ್ರಮವು ಜಾಗತಿಕ ಐಸಿಟಿ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಯ ನಾಯಕರನ್ನು ಒಟ್ಟುಗೂಡಿಸಿ ಸಂಪರ್ಕ, ಡಿಜಿಟಲ್ ರೂಪಾಂತರ ಮತ್ತು ಕೃತಕ ಬುದ್ಧಿಮತ್ತೆಯ ವಿಕಸನಗೊಳುತ್ತಿರುವ ಪಾತ್ರವನ್ನು ರೂಪಿಸುವ ನಾವೀನ್ಯತೆಗಳನ್ನು ಅನ್ವೇಷಿಸುತ್ತದೆ.
*****
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2178163)
आगंतुक पटल : 26