ಉಪರಾಷ್ಟ್ರಪತಿಗಳ ಕಾರ್ಯಾಲಯ
ಭಾರತ ರತ್ನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದ ನಿಮಿತ್ತ ಬಿಹಾರದ ಸಿತಾಬ್ ದಿಯಾರಾದಲ್ಲಿ ಗೌರವ ನಮನ ಸಲ್ಲಿಸಲಿರುವ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್
प्रविष्टि तिथि:
09 OCT 2025 6:44PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಭಾರತ ರತ್ನ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದ ಅಂಗವಾಗಿ 2025ರ ಅಕ್ಟೋಬರ್ 11 ರಂದು ಬಿಹಾರ್‌ಗೆ ಒಂದು ದಿನದ ಭೇಟಿ ನೀಡಿ, ಸರಣ್ ಜಿಲ್ಲೆಯಲ್ಲಿನ ಜಯಪ್ರಕಾಶ್ ಅವರ ಪೂರ್ವಜರ ಗ್ರಾಮವಾದ ಸಿತಾಬ್ ದಿಯಾರಾದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಸಿತಾಬ್ ದಿಯಾರಾದಲ್ಲಿರುವ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಪೂರ್ವಜರ ಮನೆಯಲ್ಲಿ ಗೌರವ ನಮನ ಸಲ್ಲಿಸಲಿದ್ದಾರೆ ಹಾಗೂ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಬಳಿಕ ಉಪರಾಷ್ಟ್ರಪತಿ ಅವರು, ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಪತ್ನಿ ಶ್ರೀಮತಿ ಪ್ರಭಾವತಿ ದೇವಿ ಅವರ ಸ್ಮರಣಾರ್ಥ ಹೆಸರಿಸಿರುವ ಸಿತಾಬ್ ದಿಯಾರಾದಲ್ಲಿರುವ ಪ್ರಭಾವತಿ ಪುಸ್ತಕಾಲಯಕ್ಕೂ ಭೇಟಿ ನೀಡಲಿದ್ದಾರೆ.

ಸಂಗ್ರಹ ಚಿತ್ರ: ಸಂವಿಧಾನ ಸದನದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರಿಗೆ ಮಾನ್ಯ ಉಪರಾಷ್ಟ್ರಪತಿ ಶ್ರೀ ಸಿ.ಪಿ.ರಾಧಾಕೃಷ್ಣನ್ ಅವರಿಂದ ಪುಷ್ಪ ನಮನ
****
(रिलीज़ आईडी: 2177047)
आगंतुक पटल : 40