ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಕೇರಳದ ಐ.ಐ.ಟಿ ಪಾಲಕ್ಕಾಡ್ ನಡುವೆ ಪ್ರಧಾನ ಮಂತ್ರಿ ವಿಕಾಸ ಯೋಜನೆಯಡಿ ಕೌಶಲ್ಯ ಯೋಜನೆಗಾಗಿ ಒಡಂಬಡಿಕೆಗೆ ಸಹಿ
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು ಪಿ.ಎಂ. ವಿಕಾಸ್ (PMVIKAS) ಯೋಜನೆಯ ಮಹತ್ವ ಹಾಗೂ ಉದ್ಯೋಗಾವಕಾಶ ಸೃಷ್ಟಿ, ನಾವಿನ್ಯತೆ ಮತ್ತು ಸುಸ್ಥಿರ ಜೀವನೋಪಾಯವನ್ನು ರೂಪಿಸುವಲ್ಲಿ ಅದರ ಪಾತ್ರದ ಬಗ್ಗೆ ಉಲ್ಲೇಖಿಸಿದರು
प्रविष्टि तिथि:
08 OCT 2025 5:29PM by PIB Bengaluru
ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕೇರಳದ ಪಾಲಕ್ಕಾಡ್ ನಲ್ಲಿ 2025 ರ ಅಕ್ಟೋಬರ್ 8 ರಂದು ಪ್ರಧಾನ ಮಂತ್ರಿ ವಿರಾಸತ್ ಕಾ ಸಂವರ್ಧನ್ (PM VIKAS) ಯೋಜನೆಯಡಿ ಕೌಶಲ್ಯ ಯೋಜನೆಗಾಗಿ ಪಾಲಕಾಡ್ ನ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಒಪ್ಪಂದ ಸಹಿ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪಿಎಂ ವಿಕಾಸ್ ಯೋಜನೆಯ ಉದ್ದೇಶಗಳಿಗೆ ಅನುಗುಣವಾಗಿ, ಕೇರಳದ ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಉದಯೋನ್ಮುಖ ಕ್ಷೇತ್ರಗಳಲ್ಲಿ ಭವಿಷ್ಯದ ತಾಂತ್ರಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

ಅಲ್ಪಸಂಖ್ಯಾತ ಸಮುದಾಯಗಳನ್ನು ಕೇಂದ್ರೀಕರಿಸಿ 400 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಈ ಸಹಯೋಗದಡಿಯಲ್ಲಿ ಐಐಟಿ ಪಾಲಕ್ಕಾಡ್ ಸಚಿವಾಲಯದ ಅನುಷ್ಠಾನ ಪಾಲುದಾರ ಸಂಸ್ಥೆಯಾಗಿದೆ. ಒಟ್ಟು 150 ಪ್ರಶಿಕ್ಷಣಾರ್ಥಿಗಳಿಗೆ ಜೂನಿಯರ್ ಚಿಪ್ ಡಿಸೈನರ್‌ಗಳು ಮತ್ತು ಎಂಬೆಡೆಡ್ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ತರಬೇತಿ ನೀಡಲಾಗುವುದು, ಅಲ್ಲದೇ 100 ಪ್ರಶಿಕ್ಷಣಾರ್ಥಿಗಳಿಗೆ ಜೂನಿಯರ್ ಎಂಜಿನಿಯರ್ ಗಳಾಗಿ (ಡ್ರೋನ್ ಆರ್ & ಡಿ) ತರಬೇತಿ ನೀಡಲಾಗುವುದು.
ತರಬೇತಿಯ ಸಂಪೂರ್ಣ ವೆಚ್ಚವನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಭರಿಸಲಿದೆ. ತರಬೇತಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಅನುಷ್ಠಾನ ಸಂಸ್ಥೆಯಾಗಿ ಐಐಟಿ ಪಾಲಕ್ಕಾಡ್ ಹೊಂದಿದೆ. ತರಬೇತಿ ಪಡೆಯುವವರಿಗೆ ತರಬೇತಿ ಅವಧಿಯಲ್ಲಿ ಸ್ಟೈಫಂಡ್ ನೀಡಲಾಗುವುದು ಮತ್ತು ತರಬೇತಿ ಪೂರ್ಣಗೊಂಡ ನಂತರ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳಿಗೆ ಪೂರಕ ಬೆಂಬಲ ನೀಡಲಾಗುವುದು.
ಅಲ್ಪಸಂಖ್ಯಾತ ವ್ಯವಹಾರಗಳ ಕಾರ್ಯದರ್ಶಿಯಾದ ಡಾ. ಚಂದ್ರ ಶೇಖರ್ ಕುಮಾರ್; ಐಐಟಿ ಪಾಲಕ್ಕಾಡ್ ನಿರ್ದೇಶಕರಾದ ಪ್ರೊ. ಎ. ಶೇಷಾದ್ರಿ ಶೇಖರ್; ಸಚಿವಾಲಯದ ಅಧಿಕಾರಿಗಳು ಮತ್ತು ಐಐಟಿ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪಿ.ಎಂ. ವಿಕಾಸ್ ಆಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಅವರು, ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ PM VIKAS ಯೋಜನೆಯು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನದ ಮೂಲಕ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಬಲೀಕರಣದ ಮೇಲೆ ಕೇಂದ್ರೀಕರಿಸಿದೆ ಎಂದು ಒತ್ತಿ ಹೇಳಿದರು. ಇಂತಹ ಉಪಕ್ರಮಗಳು ಉದ್ಯೋಗಾವಕಾಶವನ್ನು ವರ್ಧಿಸಲಿವೆ, ನಾವಿನ್ಯತೆಯನ್ನು ಪೋಷಿಸಲಿವೆ, ಸುಸ್ಥಿರ ಜೀವನೋಪಾಯದ ಸೃಷ್ಟಿಗೆ ಕೊಡುಗೆ ನೀಡುತ್ತವೆ ಎಂದು ಅವರು ವಿವರಿಸಿದರು.
ತಂತ್ರಜ್ಞಾನ, ನಾವಿನ್ಯತೆ ಮತ್ತು ತರಬೇತಿಗೆ ಒತ್ತು ನೀಡುವ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾದ ಐಐಟಿ ಪಾಲಕ್ಕಾಡ್ ನಲ್ಲಿ ಈ ಯೋಜನೆಯ ಅನುಷ್ಠಾನವು ಕೇರಳದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಗಮನಾರ್ಹವಾಗಿ ಬಲಪಡಿಸುವ ನಿರೀಕ್ಷೆಯಿದೆ, ಈ ಮೂಲಕ ಅವರ ಒಟ್ಟಾರೆ ಸಾಮಾಜಿಕ-ಆರ್ಥಿಕ ಉನ್ನತಿಗೆ ಕೊಡುಗೆ ನೀಡಲಿದೆ.
****
(रिलीज़ आईडी: 2176544)
आगंतुक पटल : 33