ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಬೆಂಗಳೂರಿನಲ್ಲಿ ದಕ್ಷಿಣ ವಕ್ಫ್ ಮಂಡಳಿಗಳೊಂದಿಗೆ ಪ್ರಾದೇಶಿಕ ಸಭೆ ನಡೆಸಲಿದೆ
ವಕ್ಫ್ ಮಂಡಳಿಗಳ ಸಾಮರ್ಥ್ಯ ವರ್ಧನೆ ಮತ್ತು ಉಮೀದ್ ಪೋರ್ಟಲ್‌ನಲ್ಲಿ ಪ್ರಗತಿಯನ್ನು ಪರಿಶೀಲಿಸುವತ್ತ ಗಮನ
Posted On:
05 OCT 2025 5:13PM by PIB Bengaluru
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಕ್ಫ್ ಮಂಡಳಿಗಳೊಂದಿಗೆ 2025ರ ಅಕ್ಟೋಬರ್ 6ರ ಸೋಮವಾರದಂದು ಬೆಂಗಳೂರಿನಲ್ಲಿ ಒಂದು ದಿನದ ಪ್ರಾದೇಶಿಕ ಸಭೆಯನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಈ ರಾಜ್ಯಗಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಭೆಯು ವಕ್ಫ್ ಮಂಡಳಿಗಳನ್ನು ಬಲಪಡಿಸಲು ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ಉಮೀದ್ ಸೆಂಟ್ರಲ್ ಪೋರ್ಟಲ್ ಮೂಲಕ ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುತ್ತದೆ. ಈ ವರ್ಷದ ಏಪ್ರಿಲ್‌ನಲ್ಲಿ ಜಾರಿಗೆ ಬಂದ ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (ಉಮೀದ್) ಕಾಯ್ದೆ, 2025ರ ಅಡಿಯಲ್ಲಿ ಸಚಿವಾಲಯದ ಪ್ರಯತ್ನಗಳ ಭಾಗವಾಗಿದೆ.
2025ರ ಜೂನ್‌ನಲ್ಲಿ ಉಮೀದ್ ಪೋರ್ಟಲ್‌ಅನ್ನು ಪ್ರಾರಂಭಿಸಿದಾಗಿನಿಂದ ದೇಶಾದ್ಯಂತ ವಕ್ಫ್ ಮಂಡಳಿಗಳು ಎಲ್ಲಾ ವಕ್ಫ್ ಆಸ್ತಿ ವಿವರಗಳನ್ನು ಆರು ತಿಂಗಳೊಳಗೆ ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ದತ್ತಾಂಶ ನಮೂದನೆ ಮತ್ತು ಪರಿಶೀಲನೆಯಲ್ಲಿ ಪಾರದರ್ಶಕತೆ, ನಿಖರತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್ ಮೂರು ಹಂತದ ತಯಾರಕ-ಪರೀಕ್ಷ ಕ-ಅನುಮೋದಕ ವ್ಯವಸ್ಥೆಯನ್ನು ಒಳಗೊಂಡಿದೆ.
6.10.2025 ರಂದು ಅಂದರೆ ನಾಳೆ ನಡೆಯಲಿರುವ ಬೆಂಗಳೂರು ಸಭೆಯು ಡೇಟಾ ಅಪ್ಲೋಡ್‌ಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು, ಅನುಷ್ಠಾನದ ಸವಾಲುಗಳು ಯಾವುದಾದರೂ ಇದ್ದರೆ ಅದನ್ನು ಪರಿಹರಿಸಲು ಮತ್ತು ವಕ್ಫ್ ಸಂಸ್ಥೆಗಳನ್ನು ಮತ್ತಷ್ಟು ಸಬಲೀಕರಣಗೊಳಿಸುವ ಕಾರ್ಯತಂತ್ರಗಳನ್ನು ಅನ್ವೇಷಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಸಮನ್ವಯವನ್ನು ಸುಧಾರಿಸಲು ಸಚಿವಾಲಯವು ರಾಜ್ಯ ಅಧಿಕಾರಿಗಳು ಮತ್ತು ವಕ್ಫ್ ಮಂಡಳಿಯ ಪ್ರತಿನಿಧಿಗಳಿಂದ ಪ್ರತಿಕ್ರಿಯೆಯನ್ನು ಪಡೆಯುತ್ತದೆ.
ಭಾರತ ಸರ್ಕಾರ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೂಲಕ, ವಕ್ಫ್ ಆಡಳಿತವನ್ನು ಆಧುನೀಕರಿಸಲು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅನುಕೂಲಕ್ಕಾಗಿ ವಕ್ಫ್ ಆಸ್ತಿಗಳ ಸಂಪೂರ್ಣ ಅಭಿವೃದ್ಧಿ ಸಾಮರ್ಥ್ಯವನ್ನು ಅನಾವರಣಗೊಳಿಸಲು ಬದ್ಧವಾಗಿದೆ.
****
(Release ID: 2175078)
Visitor Counter : 30