ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡ ಕುಸಿತದಿಂದಾಗಿ ಉಂಟಾದ ಜೀವ ಹಾನಿಗೆ ಪ್ರಧಾನಮಂತ್ರಿ ಸಂತಾಪ


ಪಿ ಎಂ ಎನ್ ಆರ್ ಎಫ್ ನಿಂದ ಪರಿಹಾರ ಘೋಷಣೆ

Posted On: 30 SEP 2025 9:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡವೊಂದು ಕುಸಿದು ಬಿದ್ದು ಸಂಭವಿಸಿದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಅವಘಡದಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶ್ರೀ ಮೋದಿ ಅವರು ಹಾರೈಸಿದ್ದಾರೆ. 

ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಪಿ ಎಂ ಎನ್ ಆರ್‌ ಎಫ್) ನಿಂದ ಮೃತರ ವಾರಸುದಾರರಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ಪ್ರಧಾನಮಂತ್ರಿ ಘೋಷಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:

"ತಮಿಳುನಾಡಿನ ಚೆನ್ನೈನಲ್ಲಿ ಕಟ್ಟಡ ಕುಸಿತ ಸಂಭವಿಸಿ ಉಂಟಾದ ಅವಘಡದಿಂದ ದುಃಖಿತನಾಗಿದ್ದೇನೆ. ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಜನರು ಮತ್ತು ಅವರ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.

ಮೃತರ ವಾರಸುದಾರರಿಗೆ PMNRF ನಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ತಲಾ 50,000 ರೂ. ನೀಡಲಾಗುವುದು: ಪ್ರಧಾನಮಂತ್ರಿ @narendramodi”

“சென்னையில் ஏற்பட்ட கட்டிடம் இடிந்து விழுந்த துயரச் சம்பவம் என்னை மிகுந்த வருத்தமடையச் செய்தது. இந்த கடினமான வேளையில் பாதிக்கப்பட்டவர்கள் மற்றும் அவர்களின் குடும்பத்தினருடன் என் ஆழ்ந்த அனுதாபங்களும் எண்ணங்களும் இணைந்துள்ளன.காயமடைந்தவர்கள் விரைவில் நலம்பெற வேண்டி நான் பிரார்த்திக்கிறேன்.

உயிரிழந்த ஒவ்வொருவரின் குடும்பத்தினருக்கும் பிரதமர் தேசிய நிவாரண நிதியிலிருந்து (PMNRF) ரூ.2 லட்சமும், காயமடைந்தவர்களுக்கு ரூ.50,000மும் நிவாரணமாக வழங்கப்படும்: பிரதமர் @narendramodi”

 

*****


 


(Release ID: 2173472) Visitor Counter : 6