ರಕ್ಷಣಾ ಸಚಿವಾಲಯ
azadi ka amrit mahotsav

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನದಡಿಯಲ್ಲಿ 60ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಿದೆ


ಸರ್ಕಾರದ ಪ್ರಮುಖ ಅಭಿಯಾನದಲ್ಲಿ 30000 ಕ್ಕೂ ಹೆಚ್ಚು ಮಹಿಳೆಯರು ಪ್ರಯೋಜನ ಪಡೆದಿದ್ದಾರೆ

Posted On: 23 SEP 2025 4:05PM by PIB Bengaluru

ಪ್ರಧಾನಮಂತ್ರಿ ಅವರು 2025ರ ಸೆಪ್ಟೆಂಬರ್ 17 ರಂದು ಪ್ರಾರಂಭಿಸಿದ ಭಾರತ ಸರ್ಕಾರದ ಪ್ರಮುಖ ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನವನ್ನು ಅನುಷ್ಠಾನಗೊಳಿಸುವಲ್ಲಿ ಉದಯೋನ್ಮುಖ ನಾಯಕತ್ವ ವಹಿಸಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (ಎ.ಎಫ್.ಎಂ.ಸಿ.-AFMC) 60 ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಿದೆ ಮತ್ತು 2025ರ ಸೆಪ್ಟೆಂಬರ್ 23ರ ಹೊತ್ತಿಗೆ ಸೇವಾ ಆಸ್ಪತ್ರೆಗಳ ಮೂಲಕ ಸುಮಾರು 30000 ಮಹಿಳೆಯರು ಅಭಿಯಾನದಿಂದ ಪ್ರಯೋಜನ ಪಡೆದಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ, ಗರ್ಭಕಂಠ ಮತ್ತು ಬಾಯಿಯ ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ತಪಾಸಣೆ, ವಿಶೇಷ ಆರೋಗ್ಯ ತಪಾಸಣೆಗಳನ್ನು ಒದಗಿಸುವ  ವಿವಿಧ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರಸವಪೂರ್ವ ಆರೈಕೆ, ಪೌಷ್ಟಿಕಾಂಶ ಸಮಾಲೋಚನೆ ಮತ್ತು ರೋಗನಿರೋಧಕ ಶಕ್ತಿ ಸೇರಿದಂತೆ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಸರಿಯಾದ ಒತ್ತು ನೀಡಲಾಗುತ್ತಿದೆ.

ಇತರ ಆರೋಗ್ಯ ಉಪಕ್ರಮಗಳಲ್ಲಿ ಮುಟ್ಟಿನ ನೈರ್ಮಲ್ಯದ ಕುರಿತು ಜಾಗೃತಿ ಅಭಿಯಾನಗಳು, ವಿವಿಧ ಸೇವಾ ಕೇಂದ್ರ ಕಚೇರಿಗಳು ಮತ್ತು ಆಡಳಿತ ಅಧಿಕಾರಿಗಳೊಂದಿಗೆ ಶಾಲಾ ಮಕ್ಕಳಿಗೆ ಹದಿಹರೆಯದವರ ಆರೋಗ್ಯ ಮತ್ತು ಪೋಷಣೆಯ ಕುರಿತು ಅಧಿವೇಶನಗಳು ಸೇರಿವೆ. ರಕ್ತದಾನ ಶಿಬಿರಗಳು ಮತ್ತು ಅಂಗಾಂಗ ಹಾಗು ರಕ್ತದಾನದ ಕುರಿತು ಜಾಗೃತಿ ಅಭಿಯಾನಗಳು ಅಭಿಯಾನದ ಅವಿಭಾಜ್ಯ ಅಂಗವಾಗಿವೆ. ನಾಗರಿಕ ಮತ್ತು ರಕ್ಷಣಾ ಆರೋಗ್ಯ ವ್ಯವಸ್ಥೆಗಳ ವಿಶಿಷ್ಟ ಸಮ್ಮಿಲನವು ಆರೋಗ್ಯಕರ ಮಹಿಳೆಯು ಆರೋಗ್ಯಕರ, ಸಬಲೀಕೃತ ಕುಟುಂಬ ಮತ್ತು ಸ್ಥಿತಿಸ್ಥಾಪಕತ್ವವುಳ್ಳ  ರಾಷ್ಟ್ರದ ಮೂಲಾಧಾರ ಎಂಬ  ಸರ್ಕಾರದ ಚಿಂತನಾ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ.

ಭಾರತ ಸರ್ಕಾರದ ಪ್ರಮುಖ ಯೋಜನೆಯು ಸಮಗ್ರ ಮಹಿಳಾ ಮತ್ತು ಕುಟುಂಬ ಆರೋಗ್ಯ ಸಂಪರ್ಕದ ಮಾದರಿಯಾಗಿ ರಾಷ್ಟ್ರವ್ಯಾಪಿ ಅಲೆಗಳನ್ನು ಸೃಷ್ಟಿಸುತ್ತಿದೆ. ಮಹಿಳೆಯರ ಆರೋಗ್ಯಕ್ಕೆ ಎ.ಎಫ್.ಎಂ.ಎಸ್. (AFMS) ಕೊಡುಗೆ - ಸೇವೆಗಳಲ್ಲಿ ಮತ್ತು ಸಮುದಾಯಕ್ಕೆ ಸಂಪರ್ಕ ಕ್ಷೇತ್ರಗಳಲ್ಲಿ  ವೀಕ್ಷಿತ್ ಭಾರತ್ 2047 ರ ಪ್ರಮುಖ ಆಧಾರಸ್ತಂಭವಾಗಿದೆ, ಇದು ಮಿಲಿಟರಿ ಔಷಧ ಮತ್ತು ರಾಷ್ಟ್ರೀಯ ಆರೋಗ್ಯ ಆದ್ಯತೆಗಳ ನಡುವಿನ ಸಂಯೋಜನೆಯನ್ನು ಸಂಕೇತಿಸುತ್ತದೆ.

"ಸರ್ವೇ ಸಂತು ನಿರಾಮಯ" ಎಂಬ ತನ್ನ ಧ್ಯೇಯ ವಾಕ್ಯಕ್ಕೆ ಬದ್ಧವಾಗಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (AFMS) ಈ ಅಭಿಯಾನವನ್ನು ಸಕ್ರಿಯವಾಗಿ ಬೆಂಬಲಿಸುತ್ತಿದ್ದು, ಕಾರ್ಯಕ್ರಮದ ದೃಢವಾದ ಹೆಜ್ಜೆಗುರುತಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಎ.ಎಫ್.ಎಂ.ಎಸ್. ಅಡಿಯಲ್ಲಿರುವ ಸೇವಾ ಆಸ್ಪತ್ರೆಗಳು ವೈದ್ಯರು, ದಾದಿಯರು ಮತ್ತು ತಜ್ಞರ ತಂಡಗಳನ್ನು ಸಜ್ಜುಗೊಳಿಸುವಲ್ಲಿ ಮುಂಚೂಣಿಯಲ್ಲಿವೆ, ಮಿಲಿಟರಿ ಸಿಬ್ಬಂದಿ ಮತ್ತು ಅವರ ಕುಟುಂಬಗಳಲ್ಲಿ ಮಾತ್ರವಲ್ಲದೆ ಜಮ್ಮು ಮತ್ತು ಕಾಶ್ಮೀರ ಹಾಗು ಈಶಾನ್ಯದ ದೂರದ ಪ್ರದೇಶಗಳಲ್ಲಿನ ನಾಗರಿಕ ಸಮುದಾಯಕ್ಕೂ "ಇಡೀ ರಾಷ್ಟ್ರ" ವಿಧಾನಕ್ಕೆ ಅನುಗುಣವಾಗಿ ಅಭಿಯಾನದ ರೋಗ ತಡೆಗಟ್ಟುವಿಕೆ, ಪ್ರಚಾರ ಮತ್ತು ಗುಣಪಡಿಸುವ ಸೇವೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತವೆ.

 

*****


(Release ID: 2170187) Visitor Counter : 5
Read this release in: English , Urdu , Marathi , Hindi