ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ, 8ನೇ ರಾಷ್ಟ್ರೀಯ ಪೋಷಣಾ ಮಾಹ್ ಉದ್ಘಾಟಿಸಲಿದ್ದಾರೆ ಮತ್ತು ಪಿ.ಎಂ.ಎಂ.ವಿ.ವೈ. ಪ್ರಯೋಜನಗಳನ್ನು ವಿತರಿಸಲಿದ್ದಾರೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಂಗನವಾಡಿ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಅಭಿಯಾನದೊಂದಿಗೆ ಪೋಷಣಾ ಮಾಹ್ ಚಟುವಟಿಕೆಗಳ ಸಂಪೂರ್ಣ ಏಕೀಕರಣವನ್ನು ಖಚಿತಪಡಿಸುತ್ತದೆ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳನ್ನು ಸಜ್ಜುಗೊಳಿಸುತ್ತದೆ
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಛತ್ತೀಸ್‌ಗಢದ ರಾಯ್‌ಪುರದಿಂದ ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನವನ್ನು ಪ್ರತಿನಿಧಿಸಲಿದ್ದಾರೆ, ಆರೋಗ್ಯಕರ, ಸಬಲೀಕರಣಗೊಂಡ ಸಮಾಜದ ಚಿಂತನಾ ದೃಷ್ಟಿಕೋನವನ್ನು ಮುನ್ನಡೆಸಲಿದ್ದಾರೆ
Posted On:
16 SEP 2025 10:31PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (ಸೆಪ್ಟೆಂಬರ್ 17, 2025) ಮಧ್ಯಪ್ರದೇಶದ ಧಾರ್‌ನಲ್ಲಿ ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ ಮತ್ತು 8ನೇ ರಾಷ್ಟ್ರೀಯ ಪೋಷಣಾ ಮಾಹ್‌ಗೆ (ಮಾಸ) ಚಾಲನೆ ನೀಡಲಿದ್ದಾರೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ಅಡಿಯಲ್ಲಿ ನಗದು ಪ್ರಯೋಜನಗಳನ್ನು ಪ್ರಧಾನಮಂತ್ರಿ ಅವರು 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಏಕಕಾಲದಲ್ಲಿ ವಿತರಿಸಲಿದ್ದಾರೆ.

ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನವನ್ನು 2025ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಆಚರಿಸಲಾಗುವುದು, ಆದರೆ 8 ನೇ ರಾಷ್ಟ್ರೀಯ ಪೋಷಣಾ ಮಾಹ್ ಅನ್ನು 2025ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16 ರವರೆಗೆ ದೇಶಾದ್ಯಂತ ಆಚರಿಸಲಾಗುವುದು. ದೇಶಾದ್ಯಂತ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಬೆಂಬಲ ನೀಡಲು ಪಿಎಂಎಂವಿವೈ ಅಡಿಯಲ್ಲಿ ನೋಂದಣಿಗಾಗಿ ವಿಶೇಷ ಆಂದೋಲನವು ಈ ಅಭಿಯಾನದ ಅವಿಭಾಜ್ಯ ಅಂಗವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಅಭಿಯಾನವನ್ನು ಜಾರಿಗೊಳಿಸುತ್ತಿದ್ದು, ಇದು ಆರೋಗ್ಯ ಮತ್ತು ಪೌಷ್ಟಿಕಾಂಶ ಸೇವೆಗಳ ಒಗ್ಗೂಡಿಸುವಿಕೆಗೆ ಸರ್ಕಾರದ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಅಂಗನವಾಡಿ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಅಭಿಯಾನದೊಂದಿಗೆ ಪೋಷಣ್ ಮಾಹ್ ಚಟುವಟಿಕೆಗಳ ಸಂಪೂರ್ಣ ಏಕೀಕರಣವನ್ನು ಖಚಿತಪಡಿಸುತ್ತದೆ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣುಮಕ್ಕಳನ್ನು ಸಜ್ಜುಗೊಳಿಸುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಷ್ಟ್ರದಾದ್ಯಂತ ಆರೋಗ್ಯ ಶಿಬಿರಗಳು ಮತ್ತು ಆರೋಗ್ಯ ಸೌಲಭ್ಯಗಳ ಮೂಲಕ ರೋಗ ತಡೆಗಟ್ಟುವಿಕೆ, ಉತ್ತೇಜಕ ಮತ್ತು ಗುಣಪಡಿಸುವ ಸೇವೆಗಳ ವಿತರಣೆಯನ್ನು ಮುನ್ನಡೆಸುತ್ತದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಛತ್ತೀಸ್‌ಗಢದ ರಾಯ್‌ಪುರದಿಂದ ಸ್ವಸ್ಥ ನಾರಿ, ಸಶಕ್ತ್ ಪರಿವಾರ್ ಅಭಿಯಾನವನ್ನು ಪ್ರತಿನಿಧಿಸಲಿದ್ದಾರೆ, ಇದು ಆರೋಗ್ಯಕರ, ಸಬಲೀಕೃತ ಸಮಾಜದ ಚಿಂತನಾ ದೃಷ್ಟಿಕೋನವನ್ನು ಮುನ್ನಡೆಸಲಿದೆ. ಅವರ ಭೇಟಿಯು ಮಹಿಳಾ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಸಹಾಯ ಗುಂಪುಗಳೊಂದಿಗೆ ಪ್ರಭಾವಶಾಲಿ ಸಂವಾದಗಳನ್ನು ನೋಡಲಿದೆ - ಇದು ರಾಷ್ಟ್ರದ ಪ್ರಗತಿಯ ಪ್ರೇರಕ ಶಕ್ತಿಯಾಗಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಹಾಯಕ ಸಚಿವರು ಮಧ್ಯಪ್ರದೇಶದ ಧಾರ್ ನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನವು ಪ್ರಧಾನ ಮಂತ್ರಿಯವರ ಆರೋಗ್ಯಕರ, ಸಶಕ್ತ ಸಮಾಜದ ಚಿಂತನಾ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ಇದು 2047ರ ವಿಕಸಿತ ಭಾರತ್‌ನ ಆಧಾರಸ್ತಂಭವಾಗಿದೆ. ಮಹಿಳಾ ಕೇಂದ್ರಿತ ರೋಗ ತಡೆಗಟ್ಟುವ ಆರೈಕೆಯ ಮೇಲೆ ಗಮನ ಕೇಂದ್ರೀಕರಿಸಿದ ಇದು, ತಪಾಸಣೆ, ಆರಂಭಿಕ ಪತ್ತೆ ಮತ್ತು ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿಯನ್ನು ಉತ್ತೇಜಿಸುತ್ತದೆ. 8 ನೇ ರಾಷ್ಟ್ರೀಯ ಪೋಷಣ್ ಮಾಹ್ ಬೊಜ್ಜು ಕಡಿಮೆ ಮಾಡಲು ಎಣ್ಣೆ ಮತ್ತು ಸಕ್ಕರೆ ಸೇವನೆಯಲ್ಲಿ ಕಡಿತ, ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಪದ್ಧತಿಗಳು, ದೇಶಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಪೋಷಣೆ ಮತ್ತು ಆರೈಕೆಯಲ್ಲಿ ಪುರುಷರನ್ನು ತೊಡಗಿಸಿಕೊಳ್ಳುವುದು, ಸ್ಥಳೀಯ ಆಹಾರ ಮತ್ತು ಆಹಾರ ವ್ಯವಸ್ಥೆಗಳನ್ನು ಉತ್ತೇಜಿಸುವುದು ಮತ್ತು ಎಲ್ಲವನೂ ಸಂಯೋಜಿಸುವ ಏಕೀಕೃತವಾದ ಕ್ರಮಗಳು ಮತ್ತು ಡಿಜಿಟಲೀಕರಣದ ವಿಷಯಗಳ ಸುತ್ತ ಗಮನ ಕೇಂದ್ರೀಕೃತವಾದ ಚಟುವಟಿಕೆಗಳನ್ನು ನಡೆಸುತ್ತದೆ. ಆರೋಗ್ಯ, ಪೋಷಣೆ ಮತ್ತು ಮಾತೃತ್ವ ಪ್ರಯೋಜನಗಳನ್ನು ಒಗ್ಗೂಡಿಸುವ ಮೂಲಕ, ಈ ಉಪಕ್ರಮವು ಮಹಿಳೆಯರ ಆರೋಗ್ಯವು ಬಲವಾದ ಕುಟುಂಬಗಳು ಮತ್ತು ಬಲವಾದ ರಾಷ್ಟ್ರದ ಅಡಿಪಾಯವನ್ನು ದೃಢಪಡಿಸುತ್ತದೆ.
*****
(Release ID: 2167555)
Visitor Counter : 18