ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಪ್ರತಿ ಕೆ.ಜಿ.ಗೆ 24 ರೂ.ನಂತೆ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುವ ವ್ಯಾನ್‌ಗಳಿಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಸಿರು ನಿಶಾನೆ ತೋರಿದರು
ರೈತರು ಮತ್ತು ಗ್ರಾಹಕರ ಕಲ್ಯಾಣಕ್ಕೆ ಭಾರತ ಸರ್ಕಾರ ಬದ್ಧವಾಗಿದೆ: ಶ್ರೀ ಪ್ರಲ್ಹಾದ್ ಜೋಶಿ
ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಇಂದು ಈರುಳ್ಳಿಯ ಚಿಲ್ಲರೆ ಮಾರಾಟ ಪ್ರಾರಂಭವಾಗಿದೆ
Posted On:
04 SEP 2025 1:20PM by PIB Bengaluru
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಇಲ್ಲಿ ಮಾರಾಟಕ್ಕೆ ನಿಯೋಜಿಸಲಾದ ʻಎನ್‌ಸಿಸಿಎಫ್ʼ, ʻನಾಫೆಡ್ʼ ಮತ್ತು ಕೇಂದ್ರೀಯ ಭಂಡಾರದ ಮೊಬೈಲ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಪ್ರತಿ ಕೆ.ಜಿ.ಗೆ 24 ರೂ.ನಂತೆ ಈರುಳ್ಳಿಯ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ತರಕಾರಿ ಲಭ್ಯವಾಗುವಂತೆ ಮಾಡಲು ಸರ್ಕಾರಿ ಬಫರ್‌ನಿಂದ ಮಾಪನಾಂಕಿತ ಮತ್ತು ಉದ್ದೇಶಿತ ಈರುಳ್ಳಿಯ ಬಿಡುಗಡೆಯ ಪ್ರಾರಂಭವನ್ನು ಗುರುತಿಸಿತು.
ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಭಾರತ ಸರ್ಕಾರದ ಆದ್ಯತೆಯಾಗಿದ್ದು, ಬೆಲೆ ಸ್ಥಿರೀಕರಣ ಕ್ರಮಗಳ ಮೂಲಕ ವಿವಿಧ ಕೈಗೊಂಡ ನೇರ ಮಧ್ಯಸ್ಥಿಕೆಗಳು ಇತ್ತೀಚಿನ ತಿಂಗಳಲ್ಲಿ ಹಣದುಬ್ಬರ ದರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಶ್ರೀ ಜೋಶಿ ಹೇಳಿದರು. ಜುಲೈ 2025ರ ಸಾಮಾನ್ಯ ಚಿಲ್ಲರೆ ಹಣದುಬ್ಬರವು 1.55% ರಷ್ಟಿದ್ದು, ಇದು ಸುಮಾರು ಎಂಟು ವರ್ಷಗಳಲ್ಲಿ ಕನಿಷ್ಠ ಮಟ್ಟವಾಗಿದೆ. ಆಹಾರ ಹಣದುಬ್ಬರದಲ್ಲಿ ಗಣನೀಯ ಇಳಿಕೆಯಿಂದ ಇದು ಸಾಧ್ಯವಾಗಿದೆ. ಬಫರ್‌ನಿಂದ ಈರುಳ್ಳಿಯ ಮಾಪನಾಂಕಿತ ಮತ್ತು ಉದ್ದೇಶಿತ ವಿಲೇವಾರಿಯು ಆಹಾರ ಹಣದುಬ್ಬರವನ್ನು ನಿಯಂತ್ರಿಸುವ ಹಾಗೂ ಸ್ಥಿರ ಬೆಲೆಯನ್ನು ಕಾಪಾಡಿಕೊಳ್ಳುವ ಸರ್ಕಾರದ ಪ್ರಯತ್ನಗಳ ಅವಿಭಾಜ್ಯ ಅಂಗವಾಗಿದೆ.
ʻಎನ್‌ಸಿಸಿಎಫ್ʼ, ʻನಾಫೆಡ್ʼ ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳು ಹಾಗೂ ಮೊಬೈಲ್ ವ್ಯಾನ್‌ಗಳ ಮೂಲಕ; ಜೊತೆಗೆ ʻನಾಫೆಡ್ʼ ಮತ್ತು ʻಎನ್‌ಸಿಸಿಎಫ್ʼನ ವಿತರಣಾ ಪಾಲುದಾರರ ಮೂಲಕ ಚಿಲ್ಲರೆ ಮಾರಾಟದೊಂದಿಗೆ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಈರುಳ್ಳಿಯ ಉದ್ದೇಶಿತ ವಿಲೇವಾರಿಯನ್ನು ಇಂದು ಪ್ರಾರಂಭಿಸಲಾಗುತ್ತಿದೆ. ಈರುಳ್ಳಿ ಬೆಲೆಗಳ ಪ್ರವೃತ್ತಿಗೆ ಅನುಗುಣವಾಗಿ ದೇಶಾದ್ಯಂತ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು, ತೀವ್ರಗೊಳಿಸಲಾಗುವುದು ಮತ್ತು ವೈವಿಧ್ಯಗೊಳಿಸಲಾಗುವುದು. ದೇಶಾದ್ಯಂತ 574 ಕೇಂದ್ರಗಳಿಂದ ವರದಿಯಾದ ಈರುಳ್ಳಿ ಸೇರಿದಂತೆ 38 ಸರಕುಗಳ ದೈನಂದಿನ ಬೆಲೆಗಳ ಮೇಲೆ ಇಲಾಖೆ ನಿಗಾ ಇರಿಸಿದೆ. ದೈನಂದಿನ ಬೆಲೆ ದತ್ತಾಂಶ ಮತ್ತು ತುಲನಾತ್ಮಕ ಪ್ರವೃತ್ತಿಗಳ ಆಧಾರದ ಮೇಲೆ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಬಿಡುಗಡೆ ಮಾಡುವ ಪ್ರಮಾಣ ಮತ್ತು ಸ್ಥಳಗಳ ನಿರ್ಧಾರ ಮಾಡಲಾಗುವುದು.
ಈ ವರ್ಷ 307.71 ಲಕ್ಷ ಟನ್ ಈರುಳ್ಳಿ ಉತ್ಪಾದನೆ ಅಂದಾಜಿಸಲಾಗಿದೆ, ಇದು ಹಿಂದಿನ ವರ್ಷಕ್ಕಿಂತ ಸುಮಾರು 27% ಹೆಚ್ಚಾಗಿದೆ. ಈರುಳ್ಳಿ ರಫ್ತಿನ ಮೇಲೆ ಯಾವುದೇ ಸುಂಕ ಅಥವಾ ನಿರ್ಬಂಧಗಳನ್ನು ವಿಧಿಸಲಾಗಿಲ್ಲ ಮತ್ತು ರಫ್ತು ವೇಗವು ಸ್ಥಿರವಾಗಿದೆ, ಜುಲೈನಲ್ಲಿ 1.06 ಲಕ್ಷ ಟನ್ ಮತ್ತು ಆಗಸ್ಟ್, 2025 ರಲ್ಲಿ 1.09 ಲಕ್ಷ ಟನ್ ರಫ್ತು ಮಾಡಲಾಗಿದೆ.
ಲಭ್ಯತೆ ಮತ್ತು ಬೆಲೆ ಸನ್ನಿವೇಶವನ್ನು ಪರಿಗಣಿಸಿ, ಸರ್ಕಾರವು ʻಎನ್‌ಸಿಸಿಎಫ್ʼ ಮತ್ತು ʻನಾಫೆಡ್ʼ ಮೂಲಕ ಬೆಲೆ ಸ್ಥಿರೀಕರಣ ಬಫರ್ ರೂಪದಲ್ಲಿ 3.00 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಪ್ರಮುಖ ಹಿಂಗಾರು ಈರುಳ್ಳಿ ಉತ್ಪಾದಿಸುವ ಪ್ರದೇಶಗಳಲ್ಲಿನ ರೈತರು/ರೈತ ಒಕ್ಕೂಟಗಳಿಂದ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ ಮತ್ತು ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಈರುಳ್ಳಿಯ ಪಾವತಿಗಳನ್ನು ಮಾಡಲಾಗಿದೆ. ಕಾರ್ಯಾಚರಣೆಯ ಎಲ್ಲಾ ಹಂತಗಳಲ್ಲಿ ತಂತ್ರಜ್ಞಾನ ನಿಯೋಜಿಸುವ ಮೂಲಕ ಈ ವರ್ಷ ಈರುಳ್ಳಿ ಸಂಗ್ರಹಣೆ ಮತ್ತು ವಿಲೇವಾರಿಯ ಮೇಲ್ವಿಚಾರಣೆಗಾಗಿ ಸಮಗ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
ಈರುಳ್ಳಿ ಖರೀದಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ರೈತರ ನೈಜತೆ ಮತ್ತು ಅವರ ಭೂ ದಾಖಲೆಗಳನ್ನು ಮಹಾರಾಷ್ಟ್ರ ಸರ್ಕಾರದ ಅಧಿಕೃತ ಪೋರ್ಟಲ್ ʻಇ-ಮಹಾಭೂಮಿʼ ಮೂಲಕ ಪರಿಶೀಲಿಸಲಾಗಿದೆ. ರೈತರಿಗೆ ಅವರ ಆಧಾರ್ ಜೋಡಣೆ ಮಾಡಿದ ಬ್ಯಾಂಕ್ ಖಾತೆಗಳ ಮೂಲಕ ಪಾವತಿಗಳನ್ನು ಮಾಡಲಾಗುತ್ತದೆ. ಈರುಳ್ಳಿ ಪ್ರಮಾಣ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಗ್ರಾಹಕ ವ್ಯವಹಾರಗಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ರಾಷ್ಟ್ರೀಯ ಪರೀಕ್ಷಾ ಭವನದ ಅಧಿಕಾರಿಗಳು ನಿಯಮಿತವಾಗಿ ಶೇಖರಣಾ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಮಳಿಗೆಗಳಿಗೆ ಸಾಗಿಸಲಾದ ಮತ್ತು ಸರಿಯಾಗಿ ಪರಿಶೀಲಿಸಿದ ಪ್ರಮಾಣಗಳಿಗೆ ರೈತರಿಗೆ ಪಾವತಿಗಳನ್ನು ಮಾಡಲಾಗುತ್ತದೆ.
ದೆಹಲಿ ಎನ್ಸಿಆರ್, ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಇಂದಿನಿಂದ ಈರುಳ್ಳಿಯ ಚಿಲ್ಲರೆ ವಿಲೇವಾರಿ ಪ್ರಾರಂಭವಾಗಲಿದೆ. ಇಂದಿನಂತೆ ʻಎನ್‌ಸಿಸಿಎಫ್ʼ, ʻನಾಫೆಡ್ʼ ಮತ್ತು ಕೇಂದ್ರೀಯ ಭಂಡಾರ್ ನಿಯೋಜಿಸಿರುವ ಸ್ಥಿರ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್‌ಗಳ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ:
ಏಜೆನ್ಸಿ
|
ಚಾನೆಲ್ ಗಳು
|
ದೆಹಲಿ-ಎನ್ಸಿಆರ್
|
ಮುಂಬೈ
|
ಅಹ್ಮದಾಬಾದ್
|
ಎನ್‌ಸಿಸಿಎಫ್
|
ಸ್ವಂತ ಸ್ಥಿರ ಮಳಿಗೆಗಳು
|
5
|
-
|
-
|
ವಿತರಣಾ ಪಾಲುದಾರರ ಸ್ಟೇಷನರಿ ಔಟ್ ಲೆಟ್ ಗಳು
|
19
|
1
|
-
|
ಮೊಬೈಲ್ ವ್ಯಾನ್‌ಗಳು
|
5
|
7
|
|
ನಾಫೆಡ್
|
ಸ್ವಂತ ಸ್ಥಿರ ಮಳಿಗೆಗಳು
|
12
|
-
|
-
|
ಮೊಬೈಲ್ ವ್ಯಾನ್‌ಗಳು
|
10
|
10
|
10
|
ಕೇಂದ್ರೀಯ ಭಂಡಾರ್
|
ಸ್ವಂತ ಸ್ಥಿರ ಮಳಿಗೆಗಳು
|
108
|
-
|
-
|
ಮೊಬೈಲ್ ವ್ಯಾನ್‌ಗಳು
|
2
|
-
|
-
|
ರಾಜ್ಯಾದ್ಯಂತ ಬೆಲೆಗಳ ಪರಿಣಾಮಕಾರಿ ನಿರ್ವಹಣೆಗಾಗಿ ಈ ವರ್ಷದ ಬಫರ್ ವಿಲೇವಾರಿ ಪ್ರಕ್ರಿಯೆಯಲ್ಲಿ ಈರುಳ್ಳಿಯ ಚಿಲ್ಲರೆ ವಿಲೇವಾರಿ ಮೇಲೆ ಗಮನ ಹರಿಸಲಾಗಿದೆ. ʻನಾಫೆಡ್ʼ ಮೊದಲ ಬಾರಿಗೆ, ತಮ್ಮ ಅಸ್ತಿತ್ವದಲ್ಲಿರುವ ʻಟ್ರ್ಯಾಕ್ ಮತ್ತು ಟ್ರೇಸ್ʼ ತಂತ್ರಾಂಶದೊಂದಿಗೆ ಪ್ರತ್ಯೇಕ ಬಿಲ್ಲಿಂಗ್ ತಂತ್ರಾಂಶವನ್ನು ನಿಯೋಜಿಸುತ್ತಿದೆ.
ಡಿಜಿಟಲ್ ಬಿಲ್ಲಿಂಗ್ ತಂತ್ರಾಂಶವು ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಿದ್ದು, ಪ್ರವೇಶ ಮತ್ತು ಕಾರ್ಯಾಚರಣೆಯನ್ನು ಸುಲಭಗೊಳಿಸುತ್ತದೆ. ಎಲ್ಲಾ ಮೊಬೈಲ್ ವ್ಯಾನ್‌ಗಳ ಆಪರೇಟರ್‌ಗಳ ಮೊಬೈಲ್ ಫೋನ್‌ಗಳಲ್ಲಿ ತಂತ್ರಾಂಶವನ್ನು ಸ್ಥಾಪಿಸಲಾಗುವುದು,
ಎಸ್‌ಎಂಎಸ್ / ಆಧಾರ್ / ಛಾಯಾಚಿತ್ರದ ಮೂಲಕ ಫಲಾನುಭವಿ ಗುರುತಿನ ಪರಿಶೀಲನೆಗೆ ಇದು ಅನುವು ಮಾಡಿಕೊಡುತ್ತದೆ.
ಸಾಫ್ಟ್ ವೇರ್ ಮತ್ತು ಬಿಲ್ಲಿಂಗ್ ತಂತ್ರಾಂಶವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ:
- ಚಿಲ್ಲರೆ ಮಳಿಗೆ ಮತ್ತು ವ್ಯಾನ್‌ಗಳ ಮಾರಾಟ ಕಾರ್ಯಾಚರಣೆಗಳನ್ನು ಸ್ವಯಂಚಾಲಿತಗೊಳಿಸುತ್ತದೆ
- ಮೊಬೈಲ್ ತಂತ್ರಾಂಶದ ಮೂಲಕ ಸಂಚಾರಿ ವ್ಯಾನ್ ಗ್ರಾಹಕರಿಗೆ ಮಾರಾಟದ ಬಿಲ್‌ಗಳನ್ನು ಸೃಷ್ಟಿಸಿ ಕೊಡಲು ಅನುವುಮಾಡಿಕೊಡುತ್ತದೆ.
- ಪ್ರತಿ ವಹಿವಾಟಿನ ಬಗ್ಗೆ ಫಲಾನುಭವಿಗಳಿಗೆ ʻಎಸ್‌ಎಂಎಸ್ʼ ಅಧಿಸೂಚನೆಗಳನ್ನು ಒದಗಿಸಬಹುದು
- ʻಎಸ್ಎಂಎಸ್ ಮೂಲಕ ಫಲಾನುಭವಿಗಳಿಂದ ಪ್ರತಿಕ್ರಿಯೆ ಸಂಗ್ರಹಿಸಬಹುದು; ಫಲಾನುಭವಿಗಳು / ಗ್ರಾಹಕರು ಎತ್ತಿದ ಎಲ್ಲಾ ಪ್ರಶ್ನೆಗಳು / ಕುಂದುಕೊರತೆಗಳು / ದೂರುಗಳನ್ನು ಪರಿಹರಿಸಲು ಟೋಲ್-ಫ್ರೀ ಸಂಖ್ಯೆಯೊಂದಿಗೆ ಮೀಸಲಾದ ಗ್ರಾಹಕ ಆರೈಕೆಯ ಬಗ್ಗೆ ʻಎಸ್ಎಂಎಸ್ʼ ಮೂಲಕ ಸಂವಹನಕ್ಕೆ ಅವಕಾಶವಿದೆ.
ಡಿಜಿಟಲ್ ಬಿಲ್ಲಿಂಗ್ ತಂತ್ರಾಂಶದ ಡ್ಯಾಶ್ ಬೋರ್ಡ್ನ ಚಿತ್ರ
ಆರ್ಡರ್ ಡ್ಯಾಶ್ ಬೋರ್ಡ್
|
ಬಿಲ್ಲಿಂಗ್ ಡ್ಯಾಶ್ ಬೋರ್ಡ್
|

|

|
ಭಾರತ್ ಬ್ರ್ಯಾಂಡ್ ಗಾಗಿ ಮಾರಾಟ ಡ್ಯಾಶ್ ಬೋರ್ಡ್
|
ಗ್ರಾಹಕರಿಗೆ ʻಎಸ್ಎಂಎಸ್ʼ
|

|

|



*****
(Release ID: 2163696)
Visitor Counter : 2