ಹಣಕಾಸು ಸಚಿವಾಲಯ
ಡಿಜಿಜಿಐ ಬೆಳಗಾವಿ ವಲಯ ಘಟಕವು ಸುಮಾರು 145 ಕೋಟಿ ರೂ.ಗಳ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳ ವಿತರಣೆ ಮತ್ತು 43 ಕೋಟಿ ರೂ.ಗಳ ತೆರಿಗೆ ವಂಚನೆಯನ್ನು ಬೆಳಕಿಗೆ ತಂದಿದೆ: ಓರ್ವನ ಬಂಧನ
Posted On:
30 AUG 2025 7:39PM by PIB Bengaluru
ಸುಮಾರು 145 ಕೋಟಿ ರೂ. ಮೌಲ್ಯದ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿ ಅಂದಾಜು 45 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ), ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಾಥಮಿಕ ಶೋಧಗಳ ಪ್ರಕಾರ , ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಸಜ್ಜಿತ ಗುಂಪೊಂದು ನಕಲಿ ಜಿ ಎಸ್ ಟಿ ನೋಂದಣಿಗಳನ್ನು ಸೃಷ್ಟಿಸಿ ನಕಲಿ ಐಟಿಸಿಯನ್ನು ಪಡೆದುಕೊಂಡು ರವಾನಿಸುವ ಚಟುವಟಿಕೆಯಲ್ಲಿ ನಿರತವಾಗಿತ್ತು. ಶೋಧದ ಸಮಯದಲ್ಲಿ ಆರೋಪಿ ಯಿಂದ ಅಧಿಕಾರಿಗಳು ಮೊಬೈಲ್ ಫೋನ್, ನಕಲಿ ದಾಖಲೆಗಳು, ನಕಲಿ ಆಧಾರ್ ಕಾರ್ಡುಗಳು ಮತ್ತು ನಕಲಿ ಸಂಸ್ಥೆಗಳ ಸೈನ್ ಬೋರ್ಡ್ ನ ಛಾಯಾಚಿತ್ರಗಳು ಸೇರಿದಂತೆ ಹಲವಾರು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಇನ್ವಾಯ್ಸ್ ಗಳು ಮತ್ತು ಇ-ವೇ ಬಿಲ್ ಗಳನ್ನು ರಚಿಸಲು ನೈಜ ವ್ಯಾಪಾರ ಕಾರ್ಯಾಚರಣೆಗಳಿಲ್ಲದ ಶೆಲ್ ಕಂಪನಿಗಳನ್ನು ಬಳಕೆ ಮಾಡಿಕೊಂಡಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಹಾಗೇಯೇ ಆರೋಪಿಯ 26 ನಕಲಿ ಜಿ.ಎಸ್.ಟಿ. ಪತ್ರಗಳನ್ನು ಸೃಷ್ಟಿಸಿರುವುದು ತಿಳಿದು ಬಂದಿದೆ.
ಆರೋಪಿಯನ್ನು ಬೆಂಗಳೂರಿನಲ್ಲಿ, 2017ರ ಸಿ ಜಿ ಎಸ್ ಟಿ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಬಂಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಯನ್ನು ಬೆಳಗಾವಿಗೆ ವರ್ಗಾಯಿಸಲು ಟ್ರಾನ್ಸಿಟ್ ರಿಮಾಂಡ್ ಅನ್ನು ಪಡೆದು ಬೆಳಗಾವಿಯ ಗೌರವಾನ್ವಿತ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯದ (ಡಿಜಿಜಿಐ), ಬೆಳಗಾವಿ ವಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತನಿಖೆ ಮುಂದುವರೆದಿದೆ.
*****
(Release ID: 2162359)
Visitor Counter : 24